ಪ್ಯಾರಿಸ್: ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಅಥ್ಲೀಟ್‌ಗಳು ಮತ್ತೆರಡು ಪದಕ ಸಾಧನೆ ಮಾಡಿದ್ದಾರೆ. ಭಾನುವಾರ ನಡೆದ ಪಂದ್ಯಗಳಲ್ಲಿ ಹೈ ಜಂಪ್ ಟಿ47 ವಿಭಾಗದಲ್ಲಿ ನಿಶದ್ ಕುಮಾರ್ ಬೆಳ್ಳಿ ಗೆದ್ದರೆ, 200 ಮೀಟರ್ ಟಿ35 ವಿಭಾಗದಲ್ಲಿ ಪ್ರೀತಿ ಪಾಲ್ ಕಂಚಿನ ಪದಕಕ್ಕೆ ಕೊರಳೊಡ್ಡಿದರು.
ಪ್ರೀತಿ ಪಾಲ್ ಇದರೊಂದಿಗೆ ಒಂದೇ ಪ್ಯಾರಾಲಿಂಪಿಕ್ಸ್‌ನಲ್ಲಿ 2 ಪದಕ ಗೆದ್ದ ದೇಶದ ಮೊದಲ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ ಎಂಬ ಐತಿಹಾಸಿಕ ಸಾಧನೆಯನ್ನೂ ಮಾಡಿದ್ದಾರೆ. ಶುಕ್ರವಾರವಷ್ಟೇ ಪ್ರೀತಿ 100 ಮೀಟರ್ ಟಿ35 ವಿಭಾಗದಲ್ಲಿ ಕಂಚು ಗೆದ್ದಿದ್ದರು. ಅಷ್ಟೇ ಅಲ್ಲದೇ, ಒಂದೇ ಪ್ಯಾರಾಲಿಂಪಿಕ್ಸ್‌ನಲ್ಲಿ 2 ಪದಕ ಗೆದ್ದ ಭಾರತದ 2ನೇ ಮಹಿಳಾ ಅಥ್ಲೀಟ್ ಎಂಬ ಶ್ರೇಯವೂ ಇವರಿಗೆ ಸಲ್ಲುತ್ತದೆ. ಶೂಟರ್ ಅವನಿ ಲೇಖರಾ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಮತ್ತು ಕಂಚಿನ ಪದಕ ಗೆಲ್ಲುವ ಮೂಲಕ ಒಂದೇ ಪ್ಯಾರಾಲಿಂಪಿಕ್ಸ್‌ನಲ್ಲಿ 2 ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಅಥ್ಲೀಟ್ ಎಂದೆನಿಸಿಕೊಂಡಿದ್ದರು.
ನಿಶದ್ ಕುಮಾರ್ ಕಳೆದ ಬಾರಿಯ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲೂ ಇದೇ ವಿಭಾಗದಲ್ಲಿ ಬೆಳ್ಳಿ ಜಯಿಸಿದ್ದು, ಇದರ ಅವರ ಸತತ ಎರಡನೇ ಪದಕ ಸಾಧನೆ ಎಂಬುದು ಗಮನಾರ್ಹ.
ನಿನ್ನೆಯ ಪಂದ್ಯದಲ್ಲಿ ಪ್ರೀತಿ 200 ಮೀಟರ್ ಟಿ35 ವಿಭಾಗದಲ್ಲಿ 30.01 ಸೆಕೆಂಡ್‌ಗಳಲ್ಲಿ ವೈಯಕ್ತಿಕ ಅತ್ಯುತ್ತಮ ಸಾಧನೆಯೊಂದಿಗೆ ಕಂಚು ಜಯಿಸಿದರು. ಹೈ ಜಂಪರ್ ನಿಶದ್ ಕುಮಾರ್ 2.04 ಮೀಟರ್ ಅತ್ಯುತ್ತಮ ಪ್ರಯತ್ನದೊಂದಿಗೆ ಬೆಳ್ಳಿ ಗೆದ್ದರು.
Congratulations to Preethi Pal on winning bronze medal in Women's 200m - T35 event of the Paris Paralympics. After her 100m bronze, this is her second medal in the Paris Paralympics, an exceptional achievement. Both para-athletics medals for India have been won by her. India is…
— President of India (@rashtrapatibhvn) September 1, 2024
ರಾಷ್ಟ್ರಪತಿ, ಪ್ರಧಾನಿ ಅಭಿನಂದನೆ: ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ 'ಎಕ್ಸ್' ಮೂಲಕ ಪ್ರತಿಕ್ರಿಯಿಸಿ, ಪ್ರೀತಿ ಪಾಲ್ ಸಾಧನೆಯನ್ನು ಅಭಿನಂದಿಸಿದ್ದಾರೆ. ದ್ರೌಪದಿ ಮುರ್ಮು ಎಕ್ಸ್‌ನಲ್ಲಿ, ಅಭಿನಂದನೆಗಳು, 'ಪ್ರೀತಿ ಪಾಲ್ ಸಾಧನೆಗೆ ದೇಶ ಹೆಮ್ಮೆಪಡುತ್ತದೆ' ಎಂದರೆ, ಪ್ರಧಾನಿ ಮೋದಿ, 'ಪ್ಯಾರಾಲಿಂಪಿಕ್ಸ್-2024ರಲ್ಲಿ ಎರಡು ಪದಕ ಗೆಲ್ಲುವ ಮೂಲಕ ಪ್ರೀತಿ ಪಾಲ್ ಐತಿಹಾಸಿಕ ಸಾಧನೆ ಪ್ರದರ್ಶಿಸಿದ್ದಾರೆ. ಭಾರತೀಯರಿಗೆ ಅವರು ಸ್ಫೂರ್ತಿ. ಆಕೆಯ ಪರಿಶ್ರಮ ಅದ್ವಿತೀಯ' ಎಂದು ಅಭಿನಂದಿಸಿದ್ದಾರೆ.
A historic achievement by Preeti Pal, as she wins her second medal in the same edition of the #Paralympics2024 with a Bronze in the Women’s 200m T35 event! She is an inspiration for the people of India. Her dedication is truly remarkable. #Cheer4Bharat pic.twitter.com/4q3IPJDUII
— Narendra Modi (@narendramodi) September 1, 2024
ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024: ಪದಕ ಪಟ್ಟಿ
ಸ್ಥಾನ | ದೇಶ | ಚಿನ್ನ | ಬೆಳ್ಳಿ | ಕಂಚು | ಒಟ್ಟು |
27 | ಭಾರತ | 1 | 2 | 4 | 7 |
1 | ಚೀನಾ | 30 | 26 | 11 | 67 |
2 | ಗ್ರೇಟ್ ಬ್ರಿಟನ್ | 23 | 12 | 8 | 43 |
3 | ಅಮೆರಿಕ | 8 | 10 | 8 | 26 |
4 | ಬ್ರಿಜಿಲ್ | 8 | 4 | 14 | 26 |
5 | ಫ್ರಾನ್ಸ್ | 6 | 9 | 10 | 25 |