ಪ್ಯಾರಿಸ್ (ಫ್ರಾನ್ಸ್): ಸ್ವೀಡನ್‌ನ ಸ್ಟಾರ್ ಪೋಲ್ವಾಲ್ಟರ್, ಮೊಂಡೋ ಡುಪ್ಲಾಂಟಿಸ್ ಅವರು 9ನೇ ಬಾರಿಗೆ ವಿಶ್ವದಾಖಲೆ ಬರೆದಿದ್ದಾರೆ. ಸೋಮವಾರ ನಡೆದ ಪ್ಯಾರಿಸ್ ಒಲಿಂಪಿಕ್ಸ್‌ನ ಪೋಲ್ ವಾಲ್ಟ್ ಸ್ಪರ್ಧೆಯಲ್ಲಿ ಅವರು 6.25 ಮೀಟರ್ ಎತ್ತರಕ್ಕೆ ಹಾರುವ ಮೂಲಕ ಚಿನ್ನದ ಪದಕವನ್ನು ಗೆದ್ದುಕೊಂಡರು. ಜತೆಗೆ ವಿಶ್ವ ದಾಖಲೆಯನ್ನು ನಿರ್ಮಿಸಿದರು.
HE DID IT!
— ً ً (@washedszns) August 5, 2024
ARMAND MONDO DUPLANTIS just cleared 6.25m!
- New Olympic Record
- New World Record
- New Personal Best Record
- New Season's Best Record
CONGRATULATIONS, DUPLANTIS. GOAT.
2X OLYMPIC GOLD MEDALIST pic.twitter.com/ehMuq5HXd6
2020 ಟೋಕಿಯೋ ಒಲಿಂಪಿಕ್ಸ್ನಿಂದ ಪ್ರಾರಂಭವಾದ ಮೊಂಡೋ ಅವರ ದಾಖಲೆ ಸರಣಿ ಇಂದಿಗೂ ಮುಂದುವರಿದಿದೆ. ಇದೀಗ ಒಂಬತ್ತನೇ ಬಾರಿಗೆ ಎತ್ತರದ ಹಾರುವಿಕೆಯಿಂದ ಗಮನಾರ್ಹ ಸಾಧನೆಯನ್ನು ಮಾಡಿದ್ದಾರೆ. ಜತೆಗೆ ಮೊಂಡೋ ಅವರ ಸತತ ಎರಡನೇ ಬಾರಿಗೆ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಇದೇ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಅಮೆರಿಕದ ಸ್ಯಾಮ್ ಕೆಂಡ್ರಿಕ್ಸ್ ಬೆಳ್ಳಿ ಪದಕ ಗೆದ್ದರೆ, ಗ್ರೀಸ್‌ನ ಎಮ್ಯಾನೌಲಿ ಕರಾಲಿಸ್ ಕಂಚಿನ ಪದಕ ಪಡೆದರು.
9 world records (currently 6.25m), 2 time Olympic champion, 2 time world champion outdoor and 2 time indoor, 3 time European champion and 3 time diamond league champion. Armand “Mondo” Duplantis is one of the greatest athletes of all time pic.twitter.com/bcoG2FgEsB
— m⁷ 아포방포 (@blushingk00) August 5, 2024
ಮೊಂಡೋ ಕಳೆದ ಒಲಿಂಪಿಕ್ಸ್ ಈವೆಂಟ್‌ನಲ್ಲಿ 6.10 ಮೀಟರ್‌ಗಳ ಎತ್ತರ ಜಿಗಿತದೊಂದಿಗೆ ಚಿನ್ನದ ಪದಕವನ್ನು ಗೆದ್ದಿದ್ದರು, ಆದರೆ, ಅವರು ವಿಶ್ವ ದಾಖಲೆಯನ್ನು ರಚಿಸುವ ಗುರಿಯೊಂದಿಗೆ ಪೋಲ್ವಾಲ್ಟರ್ ಬಾರ್ನ ಎತ್ತರವನ್ನು ಹೆಚ್ಚಿಸಲು ನಿರ್ಧರಿಸಿದರು. ಈ ಪಂದ್ಯದಲ್ಲಿ ಮೊದಲ ಪ್ರಯತ್ನದಲ್ಲಿ ಗುರಿ ತಲುಪಲು ಅವರಿಗೆ ಸಾಧ್ಯವಾಗಲಿಲ್ಲ. ಇದಾದ ನಂತರ 100 ಮೀಟರ್ಸ್ ಪದಕ ಪ್ರದಾನ ಸಮಾರಂಭ ನಡೆಯುತ್ತಿದ್ದಂತೆ ಆಟಕ್ಕೆ ಬ್ರೇಕ್ ಬಿದ್ದಿತ್ತು. ಬಳಿಕ 24 ವರ್ಷ ವಯಸ್ಸಿನ ಮೊಂಡೋ ಅವರಿಗೆ ಎರಡನೇ ಪ್ರಯತ್ನದಲ್ಲೂ ಯಶಸ್ಸಯ ಸಿಗಲಿಲ್ಲ. ಆದರೆ ಮೂರನೇ ಮತ್ತು ಕೊನೆಯ ಪ್ರಯತ್ನದಲ್ಲಿ 6.25 ಮೀಟರ್ ಎತ್ತರಕ್ಕೆ ಹಾರುವ ಮೂಲಕ ಗುರಿಯನ್ನು ತಲುಪಿದರು ಜತೆಗೆ ವಿಶ್ವದಾಖಲೆ ಕೂಡಾ ನಿರ್ಮಿಸಿದರು.
ಇದನ್ನೂ ಓದಿ: 3 ಸಾವಿರ ಮೀಟರ್ ಸ್ಟೀಪಲ್‌ಚೇಸ್ ಈವೆಂಟ್‌ನಲ್ಲಿ ಫೈನಲ್ ತಲುಪಿದ ಅವಿನಾಶ್ ಸೇಬಲ್ ವಿಶೇಷ ದಾಖಲೆ! - paris olympics 2024