ETV Bharat / sports

ಕ್ರಿಕೆಟ್​ ಪಂದ್ಯದ ನಡವೆಯೇ ಬ್ಯಾಟ್​​ನಿಂದ ಹಿಗ್ಗಾಮುಗ್ಗಾ ಹೊಡೆದಾಡಿಕೊಂಡ ಆಟಗಾರರು: ವಿಡಿಯೋ ವೈರಲ್​ - Cricket Players Fight - CRICKET PLAYERS FIGHT

ಕ್ರಿಕೆಟ್​ ಪಂದ್ಯವೊಂದರಲ್ಲಿ ಆಟಗಾರರು ಬ್ಯಾಟ್​ನಿಂದ್​ ಹೊಡೆದಾಡಿಕೊಂಡಿರುವ ಘಟನೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್​ ಆಗಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (Getty Image)
author img

By ETV Bharat Sports Team

Published : Sep 20, 2024, 7:40 PM IST

ಹೈದರಾಬಾದ್​: ಜೆಂಟಲ್​ಮೆನ್ಸ್​ಗಳ ಆಟ ಎಂದೇ ಕರೆಯಲ್ಪಡುವ ಕ್ರಿಕೆಟ್​ನಲ್ಲಿ ಆಗಾಗ ಆಟಗಾರರು ಕಿತ್ತಾಡಿಕೊಳ್ಳುವುದನ್ನು ಹಲವಾರು ಪಂದ್ಯಗಳಲ್ಲಿ ನೋಡಿದ್ದೇವೆ. ಆದರೆ, ಇಲ್ಲೊಂದು ಪಂದ್ಯದಲ್ಲಿ ಇಡೀ ತಂಡದ ಆಟಗಾರರು ಬ್ಯಾಟ್​ನಿಂದ ಹಿಗ್ಗಾಮುಗ್ಗ ಹೊಡೆದಾಡಿಕೊಂಡಿರುವ ಘಟನೆಯೊಂದು ನಡೆದಿದೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಕ್ರಿಕೆಟ್​ ಅಭಿಮಾನಿಗಳನ್ನು ಬೆಚ್ಚಿಬೀಳಿಸಿದೆ.

ವಾಸ್ತವಾಗಿ, ಯುನೈಟೆಡ್​ ಸ್ಟೇಟ್ಸ್​ನಲ್ಲಿ ನಡೆಯುತ್ತಿರುವ MCC ವೀಕ್​ಡೇ ಬ್ಯಾಷ್​ ಲೀಗ್​ನ, ಏರೋವಿಸಾ ಕ್ರಿಕೆಟ್ ಮತ್ತು ರಬಡಾನ್ ಕ್ರಿಕೆಟ್ ಕ್ಲಬ್ ನಡುವಿನ ಪಂದ್ಯದ ವೇಳೆ ಇಬ್ಬರು ಆಟಗಾರರ ನಡುವಿನ ಜಗಳ ವಿಕೋಪಕ್ಕೆ ತಿರುಗಿ ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ.

ಪಂದ್ಯದ ವೇಳೆ ಏರೋವಿಸಾ ಕ್ರಿಕೆಟ್ ತಂಡದ ಬೌಲರ್ ರಬಡಾನ್ ತಂಡದ ಬ್ಯಾಟ್ಸ್‌ಮನ್‌ನನ್ನು ಔಟ್ ಮಾಡಿದ ನಂತರ ಸಂಭ್ರಮಿಸುತ್ತ ಪೆವಿಲಿಯನ್​ಗೆ ಹೋಗುವಂತೆ ಕೈ ಮಾಡಿದ್ದಾರೆ. ಇದರಿಂದ ಕೆರಳಿದ ಬ್ಯಾಟ್ಸ್​ಮನ್ ಬೌಲರ್​ ಜತಗೆ ಜಗಳಕ್ಕಿಳಿದಿದ್ದಾರೆ. ಬಳಿಕ ಕ್ರೀಸ್‌ನಲ್ಲೇ ಇಬ್ಬರೂ ಆಟಗಾರರು ಪರಸ್ಪರ ಬ್ಯಾಟ್​ನಿಂದ ಹೊಡೆದಾಡಿಕೊಳ್ಳಲು ಆರಂಭಿಸಿದ್ದಾರೆ. ಅಷ್ಟರಲ್ಲೇ ಸಹ ಆಟಗಾರರು ಮತ್ತು ಅಂಪೈರ್‌ಗಳು ಜಗಳ ಬಿಡಿಸಿದ್ದಾರೆ. ಸದ್ಯ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕ್ರಿಕೆಟ್ ಮೈದಾನದಲ್ಲಿ ಆಟಗಾರರ ನಡುವೆ ಜಗಳ ಅಥವಾ ಹೊಡೆದಾಟದಂತಹ ಘಟನೆಗಳು ನಡೆಯುವುದು ತೀರ ಅಪರೂಪ. ಆದರೆ, ಕೆಲವೊಮ್ಮೆ ಆಟಗಾರರು ತಾಳ್ಮೆ ಕಳೆದುಕೊಂಡು ಕೈ ಕೈ ಮಿಲಾಯಿಸುವ ಹಂತಕ್ಕೆ ತೆರಳುತ್ತಾರೆ. ಕಳೆದ ವರ್ಷವೂ ಬಾಂಗ್ಲಾದೇಶದಲ್ಲಿ ನಡೆದ ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ ವೇಳೆ ಇದೇ ರೀತಿಯ ಘಟನೆ ನಡೆದಿತ್ತು. ಪಂದ್ಯದಲ್ಲಿ ಅಂಪೈರ್ ನಿರ್ಧಾರದ ನಂತರ ಉಭಯ ತಂಡಗಳ ಆಟಗಾರರು ಹೊಡೆದಾಡಿಕೊಂಡರು. ಅದರ ನಂತರ ಅಂತಿಮ ಸುತ್ತಿನ ಮುಂಚೆಯೇ ಲೀಗ್ ಅನ್ನು ರದ್ದುಗೊಳಿಸಲಾಗಿತ್ತು. ಭಾರತದ ದೇಶೀಯ ಕ್ರಿಕೆಟ್‌ನಲ್ಲಿಯೂ ಇಂತಹ ಅನೇಕ ಪ್ರಕರಣಗಳು ನಡೆದಿವೆ.

ಇದನ್ನೂ ಓದಿ: ಟೆಸ್ಟ್​ನಲ್ಲಿ1,500 ರನ್​ ಪೂರೈಸಿದ ಶುಭಮನ್​ ಗಿಲ್​: ಈ ಮೈಲಿಗಲ್ಲು ತಲುಪಲು ತೆಗೆದುಕೊಂಡ ಇನ್ನಿಂಗ್ಸ್​ ಎಷ್ಟು ಗೊತ್ತಾ? - Shubman Gill

ETV Bharat Logo

Copyright © 2025 Ushodaya Enterprises Pvt. Ltd., All Rights Reserved.