ETV Bharat / sports

ಈ ಬಾರಿಯ ಟಿ-20 ವಿಶ್ವಕಪ್​ನಲ್ಲಿ ಮೊದಲ ಹ್ಯಾಟ್ರಿಕ್​ ದಾಖಲೆ ಬರೆದ ಆಸೀಸ್​ ವೇಗಿ! - First Hat Trick at T20 World Cup

author img

By PTI

Published : Jun 21, 2024, 1:56 PM IST

Updated : Jun 21, 2024, 2:15 PM IST

T20 ವಿಶ್ವಕಪ್ 2024 ಸೀಸನ್​ನಲ್ಲಿ ಮೊದಲ ಹ್ಯಾಟ್ರಿಕ್ ದಾಖಲಾಗಿದೆ. ಆಸ್ಟ್ರೇಲಿಯಾದ ಸ್ಟಾರ್ ವೇಗಿ ಪ್ಯಾಟ್ ಕಮಿನ್ಸ್ ಬಾಂಗ್ಲಾದೇಶದ ವಿರುದ್ಧ ಈ ಸಾಧನೆ ಮಾಡಿದ್ದಾರೆ.

PAT CUMMINS  HAT TRICK RECORD  AUSTRALIA WON THE MATCH  T20 WORLD CUP 2024
v ಮೊದಲ ಹ್ಯಾಟ್ರಿಕ್​ ದಾಖಲೆ ಬರೆದ ಆಸೀಸ್​ ವೇಗಿ! (AP)

ನಾರ್ತ್ ಸೌಂಡ್ (ಆಂಟಿಗುವಾ): ​ಇಲ್ಲಿನ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಆಸ್ಟ್ರೇಲಿಯಾ ಭರ್ಜರಿ ಗೆಲುವು ಸಾಧಿಸಿದೆ. ಈ ಟಿ20 ವಿಶ್ವಕಪ್‌ನ ಪಂದ್ಯದಲ್ಲಿ ಕಮ್ಮಿನ್ಸ್​ ತಮ್ಮ ಬೌಲಿಂಗ್‌ನಿಂದ ಸಂಚಲನ ಮೂಡಿಸಿದ್ದಾರೆ. ಸೂಪರ್-8 ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಪಡೆದು ಅಬ್ಬರದ ಪ್ರದರ್ಶನ ನೀಡಿದ್ದಾರೆ.

ಬಾಂಗ್ಲಾದೇಶದ ಬ್ಯಾಟ್ಸ್‌ಮನ್‌ಗಳಾದ ಮೊಹಮ್ಮದುಲ್ಲಾ, ಮಹೇದಿ ಹಸನ್ ಮತ್ತು ತೌಹಿದ್ ಹೃದಯ್ ಅವರನ್ನು ಸತತ ಎಸೆತಗಳಲ್ಲಿ ಔಟ್ ಮಾಡಿ ಹ್ಯಾಟ್ಟಿಕ್​ ಸಾಧನೆ ಮಾಡಿದರು. ಪ್ರಸಕ್ತ ವಿಶ್ವಕಪ್‌ನಲ್ಲಿ ಇದು ಮೊದಲ ಹ್ಯಾಟ್ರಿಕ್ ಆಗಿದ್ದು, ಟಿ-20 ವಿಶ್ವಕಪ್​ನಲ್ಲಿ ಈ ದಾಖಲೆ ಬರೆದ ಏಳನೇ ಬೌಲರ್​ ಆಗಿ ಹೊರಹೊಮ್ಮಿದ್ದಾರೆ ಕಮ್ಮಿನ್ಸ್​. ಕಮ್ಮಿನ್ಸ್ ಆಸೀಸ್ ಪರ ಹ್ಯಾಟ್ರಿಕ್ ವಿಕೆಟ್ ಪಡೆದ ಎರಡನೇ ಬೌಲರ್ ಎನಿಸಿಕೊಂಡಿದ್ದಾರೆ. 2007 ರಲ್ಲಿ, ಬ್ರೆಟ್ಲಿ ಬಾಂಗ್ಲಾದೇಶದ ವಿರುದ್ಧವೇ ಹ್ಯಾಟ್ರಿಕ್ ವಿಕೆಟ್​ ಪಡೆದ ಮೊದಲ ಬೌಲರ್​ ಆಗಿರುವುದು ಗಮನಾರ್ಹ.

ಟಾಸ್ ಸೋತ ಬಾಂಗ್ಲಾದೇಶ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 140 ರನ್ ಗಳಿಸಿತು. ನಾಯಕ ಶಾಂಟೊ (41) ಮತ್ತು ತೌಹಿದ್ (40) ಭರ್ಜರಿ ಬ್ಯಾಟಿಂಗ್​ ಮಾಡಿ ಉತ್ತಮ ತಳಪಾಯ ಹಾಕಿಕೊಟ್ಟಿದ್ದರು. ಆದರೆ, ಇವರಿಬ್ಬರನ್ನು ಹೊರತು ಪಡಿಸಿ ಉಳಿದವರು ಉತ್ತಮ ಪ್ರದರ್ಶನ ನೀಡದ ಕಾರಣ ಬಾಂಗ್ಲಾ ಸಾಧಾರಣ ಸ್ಕೋರ್​ಗೆ ಕುಸಿಯಿತು. ಕಮ್ಮಿನ್ಸ್ (3/29) ಜೊತೆಗೆ ಆಡಮ್ ಝಂಪಾ (2/24) ಎದುರಾಳಿ ತಂಡವನ್ನು ಕಟ್ಟಿಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಮ್ಯಾಕ್ಸ್‌ವೆಲ್, ಸ್ಟೊಯಿನಿಸ್ ಮತ್ತು ಮಿಚೆಲ್ ಸ್ಟಾರ್ಕ್ ತಲಾ ಒಂದೊಂದು ವಿಕೆಟ್ ಪಡೆದರು.

ಗುರಿ ಭೇದಿಸುವಲ್ಲಿ ಆಸೀಸ್ ಆಕ್ರಮಣಕಾರಿ ಆಟವಾಡಿತು. ಆಸ್ಟ್ರೇಲಿಯಾ 11.2 ಓವರ್‌ಗಳಲ್ಲಿ 2 ವಿಕೆಟ್​ಗಳ ನಷ್ಟಕ್ಕೆ 100 ರನ್​ಗಳನ್ನು ಕಲೆ ಹಾಕಿತ್ತು. ಡೇವಿಡ್ ವಾರ್ನರ್ (55*) ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ (14*) ಕ್ರೀಸ್‌ನಲ್ಲಿದ್ದರು. ಮಳೆಯಿಂದಾಗಿ ಪಂದ್ಯಕ್ಕೆ ಅಡ್ಡಿಯಾಯಿತು. ಧಾರಾಕಾರ ಮಳೆ ಸುರಿದ ಪರಿಣಾಮ ಡಿಎಲ್​ಎಸ್​ ರೂಲ್​ ಅಳವಡಿಕೆಯಾಯಿತು. ಹೀಗಾಗಿ ಅಂಪೈರ್‌ಗಳು ಆಸೀಸ್ ತಂಡವನ್ನು ವಿಜೇತರೆಂದು ಘೋಷಿಸಿದರು. ಡಕ್ವರ್ತ್ ಲೂಯಿಸ್ ವಿಧಾನದ ಪ್ರಕಾರ ಬಾಂಗ್ಲಾದೇಶ ವಿರುದ್ಧ ಆಸೀಸ್ 28 ರನ್​ಗಳ ಜಯ ಸಾಧಿಸಿತು.

  • T20 ವಿಶ್ವಕಪ್​ ನಲ್ಲಿ ಹ್ಯಾಟ್ರಿಕ್ ಕಬಳಿಸಿದ ಬೌಲರ್​ಗಳು
  1. ಬ್ರೆಟ್ ಲೀ (ಆಸ್ಟ್ರೇಲಿಯಾ) vs ಬಾಂಗ್ಲಾದೇಶ, ಕೇಪ್ ಟೌನ್, 2007
  2. ಕರ್ಟಿಸ್ ಕ್ಯಾಂಫರ್ (ಐರ್ಲೆಂಡ್​) vs ನೆದರ್ಲೆಂಡ್​ ​, ಅಬುಧಾಬಿ, 2021
  3. ವನಿಂದು ಹಸರಂಗ (ಶ್ರೀಲಂಕಾ) vs ದಕ್ಷಿಣ ಆಫ್ರಿಕಾ, ಶಾರ್ಜಾ, 2021
  4. ಕಗಿಸೊ ರಬಾಡ (ದಕ್ಷಿಣ ಆಫ್ರಿಕಾ) vs ಇಂಗ್ಲೆಂಡ್​, ಶಾರ್ಜಾ, 2021
  5. ಕಾರ್ತಿಕ್ ಮೇಯಪ್ಪನ್ (ಯುಎಇ) vs ಶ್ರೀಲಂಕಾ, ಗೀಲಾಂಗ್​, 2022
  6. ಜೋಶುವಾ ಲಿಟಲ್ (ಐರ್ಲೆಂಡ್​) vs ನ್ಯೂಜಿಲೆಂಡ್​, ಅಡಿಲೇಡ್, 2022
  7. ಪ್ಯಾಟ್ ಕಮ್ಮಿನ್ಸ್ (ಆಸ್ಟ್ರೇಲಿಯಾ) vs ಬಾಂಗ್ಲಾದೇಶ, ಆಂಟಿಗುವಾ, 2024
  • T20I ಗಳಲ್ಲಿ ಹ್ಯಾಟ್ರಿಕ್‌ ಪಡೆದ ಆಸ್ಟ್ರೇಲಿಯಾ ಬೌಲರ್‌ಗಳು
  1. ಬಾಂಗ್ಲಾದೇಶ ವಿರುದ್ಧ ಬ್ರೆಟ್ ಲೀ, ಕೇಪ್ ಟೌನ್, 2007
  2. ದಕ್ಷಿಣ ಆಫ್ರಿಕಾ ವಿರುದ್ಧ ಆಷ್ಟನ್ ಅಗರ್, ಜೋಹಾನ್ಸ್‌ಬರ್ಗ್, 2020
  3. ಬಾಂಗ್ಲಾದೇಶ ವಿರುದ್ಧ ನಾಥನ್ ಎಲ್ಲಿಸ್, ಮೀರ್ಪುರ್, 2021
  4. ಬಾಂಗ್ಲಾದೇಶ ವಿರುದ್ಧ ಪ್ಯಾಟ್ ಕಮ್ಮಿನ್ಸ್, ಆಂಟಿಗುವಾ, 2024

ಓದಿ: ಕಮಿನ್ಸ್ ಹ್ಯಾಟ್ರಿಕ್​, ವಾರ್ನರ್​ ಅಬ್ಬರ: ಬಾಂಗ್ಲಾದೇಶಕ್ಕೆ ಸೋಲುಣಿಸಿದ ಕಾಂಗರೂ ಪಡೆ - Australia Defeats Bangladesh

Last Updated : Jun 21, 2024, 2:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.