ಮುಂಬೈ(ಮಹಾರಾಷ್ಟ್ರ): ಪ್ಯಾರಿಸ್ ಒಲಿಂಪಿಕ್ಸ್ 2024ರ ಅಧಿಕೃತ ಪ್ರಸಾರ ಮತ್ತು ಡಿಜಿಟಲ್ ಪಾಲುದಾರ ವಯಾಕಾಮ್ 18 ತನ್ನ ಕ್ಯಾಂಪೇನ್ ಫಿಲ್ಮ್ (ಅಭಿಯಾನ ಚಿತ್ರ) 'ದಮ್ ಲಗಾ ಕೆ... ಹೈಶಾ' ಬಿಡುಗಡೆ ಮಾಡಿದೆ. ಇದು ಭಾರತದಲ್ಲಿ 20 ಏಕಕಾಲೀನ ಫೀಡ್‌ಗಳು ಮತ್ತು ಒಲಿಂಪಿಯನ್‌ಗಳ ರೋಸ್ಟರ್‌ನೊಂದಿಗೆ ಅತಿದೊಡ್ಡ ಮತ್ತು ಅತ್ಯಂತ ತಲ್ಲೀನಗೊಳಿಸುವ ಒಲಿಂಪಿಕ್ಸ್ ಪ್ರಸ್ತುತಿ ಎಂದು ಘೋಷಿಸಿದೆ.
ಒಲಿಂಪಿಕ್ಸ್‌ನ ಫಿಲಾಸಪಿಯನ್ನು ಹಿಂದೆಂದೂ ಕಂಡಿರದ್ದಕ್ಕಿಂತ ಭಿನ್ನವಾಗಿ ಕ್ಯಾಂಪೇನ್ ಫಿಲ್ಮ್ ತೋರಿಸಿದೆ. ಭಾರತೀಯ ಮಾರುಕಟ್ಟೆಗೆ ಹಿಂದಿನ ಜಾಗತಿಕ ಕ್ರೀಡಾಕೂಟಗಳು ಬಳಸಿದ ಸಾಂಪ್ರದಾಯಿಕ ಜಾಹೀರಾತು ಟೆಂಪ್ಲೇಟ್‌ನಿಂದ ಹೊರಬಂದು, ಗಂಭೀರವಾಗಿ ಕಾಣುವ ಅಥ್ಲೀಟ್‌ಗಳ ಟ್ರೋಪ್‌ಗಳನ್ನು ತೋರಿಸಿದೆ. ಈ ಚಿತ್ರವು ಒಲಿಂಪಿಕ್ಸ್‌ನ ಉತ್ಸಾಹ ಮತ್ತು ಶಕ್ತಿಯನ್ನು ದೈನಂದಿನ ಭಾರತೀಯ ಜೀವನದೊಂದಿಗೆ ಸಂಯೋಜಿಸುತ್ತದೆ. ಅತ್ಯಂತ ಸಮಗ್ರ ಒಲಿಂಪಿಕ್ಸ್ ಪ್ರಸ್ತುತಿ ಪಡಿಸಲು ಅನೇಕ ಕ್ರೀಡಾ ವಿಭಾಗಗಳಲ್ಲಿ ಮಾಜಿ ಚಾಂಪಿಯನ್ಗಳನ್ನು ತೋರಿಸಲಾಗಿದೆ.
ಮೊದಲ ಬಾರಿಗೆ, ಭಾರತದಲ್ಲಿ ಒಲಿಂಪಿಕ್ಸ್ ಕವರೇಜ್ ಅನ್ನು 20 ಏಕಕಾಲೀನ ಫೀಡ್‌ಗಳಲ್ಲಿ ಪ್ರಸ್ತುತಪಡಿಸಲಾಗುತ್ತದೆ. ಇದು ಒಲಂಪಿಕ್ ಗೇಮ್ಸ್‌ನಲ್ಲಿ ಅಭಿಮಾನಿಗಳು ತಮ್ಮ ಆದ್ಯತೆಯ ಆ್ಯಕ್ಷನ್ ಮತ್ತು ಭಾರತೀಯರ ಪ್ರದರ್ಶನ ನೋಡಲು ಅನುವು ಮಾಡಿಕೊಡುತ್ತದೆ. ಕ್ಯುರೇಟೆಡ್ ಫೀಡ್‌ಗಳು ಇಂಗ್ಲಿಷ್, ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಇಂಡಿಯಾ ಫೀಡ್ ಒಳಗೊಂಡಿರುತ್ತದೆ. ಇದು ವೀಕ್ಷಕರಿಗೆ ಭಾರತೀಯ ತಂಡದ ಎಲ್ಲ ಆಟಗಳನ್ನು ನೆಚ್ಚಿನ ಭಾಷೆಯೊಂದಿಗೆ ನೋಡಲು ಸಹಕಾರಿಯಾಗಿದೆ.
ಹಿಂದೆಂದೂ ನೋಡಿರದಂತೆ ಒಲಿಂಪಿಕ್ಸ್ನಲ್ಲಿ ಈ ಬಾರಿ ಮಹಿಳಾ ಕ್ರೀಡಾಪಟುಗಳ ಪ್ರಯಾಣವನ್ನು ಪ್ರತ್ಯೇಕವಾಗಿ ಸೆರೆಹಿಡಿಯಲಾಗುತ್ತಿದೆ. ಕ್ಯುರೇಟೆಡ್ ಫೀಡ್‌ಗಳು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಜಾಗತಿಕ ಆಕ್ಷನ್ ಫೀಡ್ ಅನ್ನು ಸಹ ಒಳಗೊಂಡಿರುತ್ತವೆ. ಹೀಗಾಗಿ ಪ್ಯಾರಿಸ್ 2024 ರಲ್ಲಿ ವಿಶ್ವದ ಅತ್ಯುತ್ತಮ ಕ್ರೀಡಾಪಟುಗಳನ್ನು ಟ್ರ್ಯಾಕ್ ಮಾಡಲು ವೀಕ್ಷಕರಿಗೆ ಅವಕಾಶ ನೀಡುತ್ತದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
ಉದ್ಘಾಟನಾ ಸಮಾರಂಭದ ಉದ್ದಕ್ಕೂ ಇಂಡಿಯಾ ಫ್ಲೋಟ್ ನಲ್ಲಿ ಮೀಸಲಾದ ಕ್ಯಾಮೆರಾ ಫೀಡ್ ನೊಂದಿಗೆ ಇಮ್ಮರ್ಸಿವ್ ಕವರೇಜ್ ಸುಳಿವು ನೀಡುತ್ತದೆ. ಇದು ವೀಕ್ಷಕರಿಗೆ ಭಾರತೀಯ ತಂಡದ ರಿಂಗ್ ಸೈಡ್ ನೋಟವನ್ನು ನೀಡುತ್ತದೆ. ಇದಲ್ಲದೇ, ವೀಕ್ಷಕರು ಡೊಮೇನ್ ತಜ್ಞರೊಂದಿಗೆ ತಮ್ಮ ಕುಟುಂಬ ಸದಸ್ಯರೊಂದಿಗೆ ನೇರ ಸಂದರ್ಶನಗಳೊಂದಿಗೆ ಭಾರತೀಯರು ಪದಕದ ಪಡೆದ ಕ್ಷಣಗಳ ಪ್ರಸಾರವನ್ನು ಆನಂದಿಸಲು ಸಾಧ್ಯವಾಗುತ್ತದೆ.
ಒಲಿಂಪಿಕ್ ಪದಕ ಪಡೆದ ಭಾರತದ ಮೊದಲ ಮಹಿಳಾ ಕುಸ್ತಿಪಟು ಸಾಕ್ಷಿ ಮಲಿಕ್ (2016 ಬೇಸಿಗೆ ಒಲಿಂಪಿಕ್ಸ್), ಬೀಜಿಂಗ್ನಲ್ಲಿ 2008ರಲ್ಲಿ ಕಂಚಿನ ಪದಕ ವಿಜೇತ ಬಾಕ್ಸರ್ ವಿಜೇಂದರ್ ಸಿಂಗ್ ಅವರೊಂದಿಗೆ ಸೇರಿಕೊಳ್ಳಲಿದ್ದಾರೆ. ನಾಲ್ಕು ಬಾರಿ ಒಲಿಂಪಿಯನ್ ಮತ್ತು ಆರು ಬಾರಿ ಗ್ರ್ಯಾಂಡ್ ಸ್ಲಾಮ್ ವಿಜೇತೆ ಮತ್ತು ಡಬ್ಲ್ಯುಟಿಎ ಶ್ರೇಯಾಂಕದಲ್ಲಿ ನಂಬರ್ ಒನ್ ಸ್ಥಾನ ಪಡೆದ ಮೊದಲ ಭಾರತೀಯ ಮಹಿಳೆ ಸಾನಿಯಾ ಮಿರ್ಜಾ ಕಾಮನ್ವೆಲ್ತ್ ಮತ್ತು ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಸೋಮದೇವ್ ದೇವವರ್ಮನ್ ಜೊತೆಗೂಡಲಿದ್ದಾರೆ.
ವಿಶ್ವದ ನಂ.7 ಲಾಂಗ್ ಜಂಪರ್ ಮತ್ತು ಕಾಮನ್ವೆಲ್ತ್ ಗೇಮ್ಸ್ ಪದಕ ವಿಜೇತ ಮುರಳಿ ಶ್ರೀಶಂಕರ್ ವೀಕ್ಷಕರ ವಿವರಣೆ ನೀಡಲಿದ್ದಾರೆ ಜೊತೆಗೆ ಭಾರತದ ಪುರುಷರ ಹಾಕಿ ತಂಡದ ಮಾಜಿ ನಾಯಕ ವೀರೇನ್ ರಾಸ್ಕ್ವಿನ್ಹಾ, ಕಾಮನ್ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ ಶಟ್ಲರ್ ಪರುಪಳ್ಳಿ ಕಶ್ಯಪ್, ಏಷ್ಯನ್ ಗೇಮ್ಸ್ ಪದಕ ವಿಜೇತ ಮತ್ತು ವಿಶ್ವ ಡಬಲ್ಸ್ ಚಾಂಪಿಯನ್ಶಿಪ್ ಚಿನ್ನದ ಪದಕ ವಿಜೇತ ಸ್ಕ್ವಾಷ್ ಐಕಾನ್ ಸೌರವ್ ಘೋಷಾಲ್ ಮತ್ತು ಎರಡು ಬಾರಿ ಒಲಿಂಪಿಕ್ಸ್ನಲ್ಲಿ ಭಾರತ ಪ್ರತಿನಿಧಿಸಿದ್ದ ಬಿಲ್ಲುಗಾರ ಅತನು ದಾಸ್ ಕೂಡ ವೀಕ್ಷಕ ವಿವರಣೆ ಕೊಡಲಿದ್ದಾರೆ. ಇನ್ನು ಜು.26ರಿಂದ ಪ್ಯಾರಿಸ್ನಲ್ಲಿ ಒಲಿಂಪಿಕ್ಸ್ 2024 ಪ್ರಾರಂಭವಾಗಲಿದೆ.
ಇದನ್ನೂ ಓದಿ; 5 ಒಲಿಂಪಿಕ್ಗಳಲ್ಲಿ 10 ಪದಕ: ವಿಶ್ವದ ಮೊದಲ ಮಹಿಳಾ ಸಾಧಕಿ ರಷ್ಯಾದ ರೈಸಾ ಸ್ಮೆಟಾನಿನಾ - Raisa Smetanina