ETV Bharat / sports

ಪ್ಯಾರಿಸ್​ ಒಲಿಂಪಿಕ್​ 10ನೇ ದಿನ​: ಭಾರತದ ಪಂದ್ಯಗಳ ವೇಳಾಪಟ್ಟಿ - paris olympics 2024 - PARIS OLYMPICS 2024

5 August India Olympics Schedule: ಪ್ಯಾರಿಸ್ ಒಲಿಂಪಿಕ್ಸ್ 2024ರ 10ನೇ ದಿನದ ಭಾರತದ ಸ್ಫರ್ಧೆಗಳು ಮತ್ತು ಸಮಯದ ವೇಳಾಪಟ್ಟಿ ವಿವರ ಇಲ್ಲಿದೆ.

ಪ್ಯಾರಿಸ್​ ಒಲಿಂಪಿಕ್ಸ್ 10ನೇ ದಿನ ವೇಳಾಪಟ್ಟಿ
ಪ್ಯಾರಿಸ್​ ಒಲಿಂಪಿಕ್ಸ್ 10ನೇ ದಿನ ವೇಳಾಪಟ್ಟಿ (ETV Bharat)
author img

By ETV Bharat Sports Team

Published : Aug 5, 2024, 5:30 AM IST

ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ 2024ರ 9ನೇ ದಿನವು ಭಾರತದ ಇಬ್ಬರು ಪದಕ ಸ್ಪರ್ಧಿಗಳಾದ ಲೊವ್ಲಿನಾ ಬೊರ್ಗೊಹೈನ್ (ಬಾಕ್ಸಿಂಗ್) ಮತ್ತು ಲಕ್ಷ್ಯ ಸೇನ್ (ಬ್ಯಾಡ್ಮಿಂಟನ್) ತಮ್ಮ ಸೆಮಿಫೈನಲ್​ ಪಂದ್ಯಗಳಲ್ಲಿ ಸೋಲನು ಕಂಡು ನಿರಾಸೆ ಅನುಭವಿಸಿದ್ದರು. ಆದರೇ ಭಾರತ ಹಾಕಿ ತಂಡ ಪೆನಾಲ್ಟಿ ಶೂಟೌಟ್​ನಲ್ಲಿ ಗ್ರೇಟ್ ಬ್ರಿಟನ್ ತಂಡವನ್ನು ಮಣಿಸಿ ಸೆಮಿಫೈನಲ್ ಪ್ರವೇಶಿಸಿತು. ಹಾಗಾದರೆ 10ನೇ ದಿನವಾದ ಇಂದು ಭಾರತದ ಕ್ರೀಡಾಪಟುಗಳು ಭಾಗವಹಿಸುತ್ತಿರುವ ಕ್ರೀಡೆಗಳ ಸಂಪೂರ್ಣ ವೇಳಾ ಪಟ್ಟಿ ಇಲ್ಲಿದೆ.

ಆಗಸ್ಟ್ 5 ಭಾರತೀಯ ಕ್ರೀಡಾಪಟುಗಳ ಸ್ಪರ್ಧೆಗಳು

ಶೂಟಿಂಗ್ - ಸ್ಕೀಟ್ ಮಿಶ್ರ ಅರ್ಹತಾ ಸ್ಪರ್ಧೆಯಲ್ಲಿ ಭಾರತದ ಅನಂತ್ ಜೀತ್ ಸಿಂಗ್ ನರುಕಾ ಮತ್ತು ಮಹೇಶ್ವರಿ ಚೌಹಾಣ್ ಕಾಣಿಸಿಕೊಳ್ಳಲಿದ್ದಾರೆ. ಒಟ್ಟು 15 ದೇಶಗಳ ತಂಡಗಳು ಈ ಕೂಟದಲ್ಲಿ ಭಾಗವಹಿಸಲಿವೆ.

ಸ್ಕೀಟ್ ಮಿಶ್ರ ತಂಡ ಅರ್ಹತೆ ಪಂದ್ಯ - ಮಧ್ಯಾಹ್ನ 12:30ಕ್ಕೆ

ಟೇಬಲ್ ಟೆನಿಸ್ - ಟೇಬಲ್ ಟೆನ್ನಿಸ್ ಸ್ಪರ್ಧೆಯಲ್ಲಿ ಭಾರತೀಯ ಕ್ರೀಡಾಪಟುಗಳಾದ ಅರ್ಚನಾ ಕಾಮತ್, ಮನಿಕಾ ಬಾತ್ರಾ ಮತ್ತು ಶ್ರೀಜಾ ಅಕುಲಾ ಕಾಣಿಸಿಕೊಳ್ಳಲಿದ್ದಾರೆ. ಭಾರತ ತಂಡವು ಮಹಿಳಾ ತಂಡ ಈವೆಂಟ್‌ನ 16ನೇ ಸುತ್ತಿನಲ್ಲಿ ರೊಮೇನಿಯಾ ತಂಡದೊಂದಿಗೆ ಸೆಣಸಲಿದೆ.

16ನೇ ಸುತ್ತಿನ ಮಹಿಳಾ ತಂಡ ಟೆಬಲ್​ ಟೆನ್ನಿಸ್​ - ಮಧ್ಯಾಹ್ನ 1:30ಕ್ಕೆ

ಅಥ್ಲೆಟಿಕ್ಸ್ - ಭಾರತದ ಮಹಿಳಾ ಅಥ್ಲೀಟ್ ಕಿರಣ್ ಪಹಲ್ ಮಹಿಳೆಯರ 400 ಮೀಟರ್ ರೌಂಡ್ 1 ರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೆ, ಪುರುಷರ 3000 ಮೀಟರ್ ಸ್ಟೀಪಲ್‌ಚೇಸ್ 1ನೇ ಸುತ್ತುನಲ್ಲಿ ಅವಿನಾಶ್ ಮುಕುಂದ್ ಸೇಬಲ್​ ಕೂಡ ಸ್ಪರ್ಧಿಸಲಿದ್ದಾರೆ.

ಮಹಿಳೆಯರ 400 ಮೀ ಇನೇ ಸುತ್ತು - ಮಧ್ಯಾಹ್ನ 3:25ಕ್ಕೆ

ಪುರುಷರ 3000ಮೀ ಸ್ಟೀಪಲ್‌ಚೇಸ್ 1ನೇ ಸುತ್ತು - ರಾತ್ರಿ 10:34ಕ್ಕೆ

ಬ್ಯಾಡ್ಮಿಂಟನ್ - ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ಈವೆಂಟ್‌ನ ಕಂಚಿನ ಪದಕ ಪಂದ್ಯದಲ್ಲಿ ಭಾರತದ ಸ್ಟಾರ್​ ಷಟ್ಲರ್​ ಲಕ್ಷ್ಯ ಸೇನ್​ ಕಾಣಿಸಿಕೊಳ್ಳಲಿದ್ದಾರೆ. ಈ ಪಂದ್ಯದಲ್ಲಿ ಅವರು ಮಲೇಷ್ಯಾದ ಲಿ ಜಿ ಜಿಯಾ ಅವರೊಂದಿಗೆ ಆಡಲಿದ್ದಾರೆ. ಈ ಕೂಟದ ಸೆಮಿಫೈನಲ್‌ನಲ್ಲಿ ನಿನ್ನೆ ಲಕ್ಷ್ಯ ಅವರು ಡೆನ್ಮಾರ್ಕ್‌ನ ವಿಕ್ಟರ್ ಅಕ್ಸೆಲ್ಸೆನ್ ಅವರ ವಿರುದ್ದ 2-0 ಅಂತರದಿಂದ ಸೋಲನುಭವಿಸಿ ಚಿನ್ನದ ಪದಕ ರೇಸ್‌ನಿಂದ ಹೊರಬಿದ್ದಿದ್ದರು.

ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ಕಂಚಿನ ಪದಕ ಪಂದ್ಯ (ಲಕ್ಷ್ಯ ಸೇನ್) - ಸಂಜೆ 6ಕ್ಕೆ

ಸೈಲಿಂಗ್ - ಒಲಿಂಪಿಕ್ಸ್‌ನ 10ನೇ ದಿನ, ಪುರುಷರ ಸೈಲಿಂಗ್ ಸ್ಪರ್ಧೆಯಲ್ಲಿ ಭಾರತದ ಅಥ್ಲೀಟ್ ವಿಷ್ಣು ಸರವಣನ್ ಭಾರತದ ಪರವಾಗಿ ಕಾಣಿಸಿಕೊಳ್ಳಲಿದ್ದಾರೆ. ಇದರೊಂದಿಗೆ ಮಹಿಳೆಯರ ನೌಕಾಯಾನ ಸ್ಪರ್ಧೆಯಲ್ಲಿ ನೇತ್ರಾ ಕುಮನನ್ ತಮ್ಮ ಕೈಚಳಕ ತೋರಲಿದ್ದಾರೆ. ರೇಸ್ 7 ಮತ್ತು ರೇಸ್ 8ರಲ್ಲಿ ಇಬ್ಬರೂ ಭಾಗವಹಿಸಲಿದ್ದಾರೆ.

  • ಪುರುಷರ ಸೈಲಿಂಗ್ ಡಿಂಗಿ ರೇಸ್ 9 ಮತ್ತು ರೇಸ್ 10 (ವಿಷ್ಣು ಸರವಣನ್) - ಮಧ್ಯಾಹ್ನ 3:35ಕ್ಕೆ
  • ಮಹಿಳೆಯರ ಸೈಲಿಂಗ್ ಡಿಂಗಿ ರೇಸ್ 9 ಮತ್ತು 10 (ನೇತ್ರಾ ಕುಮನನ್) - ಸಂಜೆ 6:10ಕ್ಕೆ

ಇದನ್ನೂ ಓದಿ: ಅಥ್ಲೆಟಿಕ್ಸ್​ನಲ್ಲಿ ಭಾರತಕ್ಕೆ ನಿರಾಸೆ: ಒಲಿಂಪಿಕ್​​ನಿಂದ ಪಾರುಲ್ ಚೌಧರಿ, ಜೆಸ್ವಿನ್ ಆಲ್ಡ್ರಿನ್ ಔಟ್ - paris olympics 2024

ETV Bharat Logo

Copyright © 2025 Ushodaya Enterprises Pvt. Ltd., All Rights Reserved.