ಪ್ಯಾರಿಸ್: ಇತ್ತೀಚೆಗಷ್ಟೇ ಫ್ರೆಂಚ್ ಓಪನ್ಸ್ ಗೆದ್ದಿದ್ದ ಕಾರ್ಲೋಸ್ ಅಲ್ಕರಾಜ್ ಮತ್ತು ಇಗಾ ಸ್ವಿಯಾಟೆಕ್ ಅವರು ಇಲ್ಲಿನ ರೊಲ್ಯಾಂಡೊ ಗ್ಯಾರೋಸ್‌ನಲ್ಲಿ ನಡೆದ ಪುರುಷರ ಸಿಂಗಲ್ಸ್ ಟೆನಿಸ್ ಸ್ಪರ್ಧೆಯಲ್ಲಿ ನೇರ ಸೆಟ್‌ಗಳಿಂದ ಗೆಲುವು ಸಾಧಿಸಿ ಒಲಿಂಪಿಕ್ಸ್‌ನಲ್ಲಿ ಶುಭಾರಂಭ ಮಾಡಿದರು.
Vamooooos!!! 🇪🇸
— Carlos Alcaraz (@carlosalcaraz) July 27, 2024
📸 Getty pic.twitter.com/fRPdtatvlB
ಸ್ವಿಯಾಟೆಕ್ ಮತ್ತು ಅಲ್ಕರಾಜ್ ಅವರಂತೆ ನೊವಾಕ್ ಜೊಕೊವಿಕ್ ಕೂಡ ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿದ್ದು, ಇಂದು ಎರಡನೇ ಸುತ್ತಿನಲ್ಲಿ ರಾಫೆಲ್ ನಡಾಲ್ರೊಂದಿಗೆ ಸೆಣಸಲಿದ್ದಾರೆ. ಆದಾಗ್ಯೂ, ನಡಾಲ್, ಅಲ್ಕರಾಜ್ ಜೊತೆಗೆ ಪುರುಷರ ಡಬಲ್ಸ್ ಪಂದ್ಯದಲ್ಲೂ ಗೆಲುವು ಸಾಧಿಸಿದರು. ಸ್ಪೇನ್ ಜೋಡಿ ಆರನೇ ಶ್ರೇಯಾಂಕದ ಅರ್ಜೆಂಟೀನಾದ ಮ್ಯಾಕ್ಸಿಮೊ ಗೊನ್ಜಾಲೆಜ್ ಮತ್ತು ಆಂಡ್ರೆಸ್ ಮೊಲ್ಟೆನಿ ಅವರನ್ನು 7-6 (4), 6-4 ಸೆಟ್‌ಗಳಿಂದ ಸೋಲಿಸಿತು. ಫೈನಲ್ ಪಂದ್ಯದಲ್ಲಿ ಏಂಜೆಲಿಕ್ ಕೆರ್ಬರ್ 7-5, 6-3ರಲ್ಲಿ ನವೋಮಿ ಒಸಾಕಾ ಅವರನ್ನು ಮಣಿಸಿದರು. ಇವರಿಬ್ಬರೂ ಈ ಹಿಂದೆ ವಿಶ್ವದ ನಂಬರ್ ಒನ್ ಆಟಗಾರರಾಗಿದ್ದರು.
ನಡಾಲ್ ತಮ್ಮ 22 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳಲ್ಲಿ 14 ಬಾರಿ ಫ್ರೆಂಚ್ ಓಪನ್ ಗೆದ್ದಿದ್ದು, ಒಲಿಂಪಿಕ್ಸ್‌ನಲ್ಲಿ ಎರಡು ಚಿನ್ನದ ಪದಕ ಗೆದ್ದಿದ್ದಾರೆ.
Novak Djoković won the first round at the Olympics.
— Based Serbia (@SerbiaBased) July 27, 2024
🇷🇸☦️#Paris2024 pic.twitter.com/vf8cVrNT9u
ಉಳಿದಂತೆ, ಏಳು ವಾರಗಳ ಹಿಂದೆ ರೋಲ್ಯಾಂಡ್ ಗ್ಯಾರೋಸ್‌ನಲ್ಲಿ ನಾಲ್ಕನೇ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದ ವಿಶ್ವದ ನಂ1 ಆಟಗಾರ್ತಿ ಪೋಲೆಂಡ್‌ನ ಸ್ವಿಯಾಟೆಕ್ ಮಹಿಳಾ ಸಿಂಗಲ್ಸ್ ಪಂದ್ಯದಲ್ಲಿ ರೊಮೇನಿಯಾದ ಐರಿನಾ ಕೆಮೆಲಿಯಾ ಬೇಗು ಅವರನ್ನು 6-2, 7-5 ಸೆಟ್‌ಗಳಿಂದ ಸೋಲಿಸಿದರು. ಪುರುಷರ ಸಿಂಗಲ್ಸ್ನಲ್ಲಿ ಹಾಲಿ ಫ್ರೆಂಚ್ ಓಪನ್ ಹಾಗೂ ವಿಂಬಲ್ಡನ್ ಚಾಂಪಿಯನ್ ಅಲ್ಕರಾಜ್ 6-3, 6-1 ಸೆಟ್‌ಗಳಿಂದ ಲೆಬನಾನ್‌ನ ಹೈಡಿ ಹಬೀಬ್ ಅವರನ್ನು ಸೋಲಿಸಿದರು.
ಒಲಿಂಪಿಕ್ಸ್‌ನಲ್ಲಿ ಅಗ್ರ ಶ್ರೇಯಾಂಕದ ಸರ್ಬಿಯಾದ ಜೊಕೊವಿಕ್ ಅವರು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ವಿರುದ್ಧ 6-0, 6-1 ರಿಂದ ಸುಲಭ ಗೆಲುವು ಕಂಡರು. ಜೂನ್‌ನಲ್ಲಿ ನಡೆದ ಫ್ರೆಂಚ್ ಓಪನ್ ಮತ್ತು ಎರಡು ವಾರಗಳ ಹಿಂದೆ ವಿಂಬಲ್ಡನ್‌ನಲ್ಲಿ ರನ್ನರ್ ಅಪ್ ಆಗಿದ್ದ ಇಟಲಿಯ ಜಾಸ್ಮಿನ್ ಪಾವೊಲಿನಿ, ರೊಮೇನಿಯಾದ ಅನಾ ಬೊಗ್ಡಾನ್ ಅವರನ್ನು 7-5, 6-3 ಸೆಟ್‌ಗಳಿಂದ ಸೋಲಿಸಿ ಪ್ಯಾರಿಸ್ ಒಲಿಂಪಿಕ್ ಗೇಮ್ಸ್‌ನಲ್ಲಿ ಗೆದ್ದ ಮೊದಲ ಟೆನಿಸ್ ಆಟಗಾರ್ತಿ ಎನಿಸಿಕೊಂಡರು.
ಆದರೆ, 17ನೇ ಶ್ರೇಯಾಂಕದ ಕ್ಯಾರೊಲಿನ್ ಗಾರ್ಸಿಯಾ ರೊಮೇನಿಯಾದ ಜಾಕ್ವೆಲಿನ್ ಆದಿನಾ ಕ್ರಿಸ್ಟಿಯನ್ ವಿರುದ್ಧ 5-7, 6-3, 6-4 ಸೆಟ್‌ಗಳಿಂದ ಸೋಲನುಭವಿಸಿದ್ದಾರೆ.
ಇದನ್ನೂ ಓದಿ: ಸೂಪರ್ ಸಿಂಧು! ಪ್ಯಾರಿಸ್ ಒಲಿಂಪಿಕ್ಸ್ ಬ್ಯಾಡ್ಮಿಂಟನ್‌ನಲ್ಲಿ ಪಿ.ವಿ.ಸಿಂಧು ಶುಭಾರಂಭ - P V Sindhu