ಪ್ಯಾರಿಸ್: ಸರ್ಬಿಯಾದ ಸ್ಟಾರ್ ಟೆನಿಸ್ಸಿಗ ನೊವಾಕ್ ಜೊಕೊವಿಕ್ ಪ್ಯಾರಿಸ್ ಒಲಿಂಪಿಕ್ನಲ್ಲಿ ಚಿನ್ನದ ಸಾಧನೆ ಮಾಡಿದ್ದಾರೆ. ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕಠಿಣ ಪ್ರತಿಸ್ಪರ್ಧಿ 21 ರ ಹರೆಯದ ಕಾರ್ಲೊಸ್ ಅಲ್ಕರಾಜ್ರನ್ನು 7-6,7-6 ನೇರ ಸೆಟ್ಗಳಿಂದ ಸೋಲಿಸಿದರು. ಈ ಮೂಲಕ ಎರಡು ಬಾರಿ ವಿಂಬಲ್ಡನ್ ಸೋಲಿಗೆ ಮುಯ್ಯಿ ತೀರಿಸಿಕೊಂಡರು.
ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಅಲ್ಕರಾಜ್ ಮತ್ತು ನೊವಾಕ್ ನಡುವಿನ ಪಂದ್ಯ ಯಾವುದೇ ಗ್ರಾನ್ಸ್ಲ್ಯಾಮ್ ಟೂರ್ನಿಗೂ ಕಡಿಮೆ ಇರಲಿಲ್ಲ. ಚಿನ್ನದ ಪದಕಕ್ಕಾಗಿ ನಡೆದ ಹೋರಾಟದಲ್ಲಿ 24 ಗ್ರಾನ್ಸ್ಲ್ಯಾಮ್ ಟೂರ್ನಿಗಳ ಒಡೆಯ ಜೊಕೊವಿಕ್ ಜಯ ಸಾಧಿಸಿದರು. ಈ ಮೂಲಕ ತಮ್ಮ ವೃತ್ತಿಬದುಕಿನಲ್ಲಿ ಮೊದಲ ಒಲಿಂಪಿಕ್ ಚಿನ್ನದ ಪದಕ ಕೊರಳಿಗೇರಿಸಿಕೊಂಡರು.
The ultimate title!
— Paris 2024 (@Paris2024) August 4, 2024
He has achieved his quest for gold—Novak Djokovic is the Olympic champion 🥇
-
Le titre ultime !
Il a réussi sa conquête de l'or, Novak Djokovic est champion Olympique 🥇#Paris2024 pic.twitter.com/R3DiVXH6BE
ಜಿದ್ದಾಜಿದ್ದಿನ ಹೋರಾಟ: ಟೆನಿಸ್ ಲೋಕದ ಹೊಸ ಸೂಪರ್ಸ್ಟಾರ್ ಆಗಿ ಗುರುತಿಸಿಕೊಂಡಿರುವ ಅಲ್ಕರಾಜ್ ತಮ್ಮ ಮೊದಲ ಒಲಿಂಪಿಕ್ನಲ್ಲಿ ರಜತಕ್ಕೆ ಸಮಾಧಾನಪಡಬೇಕಾಯಿತು. ಇಬ್ಬರ ನಡುವಿನ ಜಿದ್ದಾಜಿದ್ದಿನ ಹೋರಾಟದಲ್ಲಿ ನೊವಾಕ್ ತಮ್ಮ ಅನುಭವವನ್ನು ಪ್ರದರ್ಶಿಸಿದರು. ಎರಡೂ ಸೆಟ್ಗಳಲ್ಲಿ ಇಬ್ಬರೂ ಒಂದೂ ಸರ್ವ್ ಬಿಟ್ಟುಕೊಡಲಿಲ್ಲ. ಇದರಿಂದ ಎರಡೂ ಸೆಟ್ಗಳು ಟ್ರೈಬ್ರೇಕರ್ನಿಂದ ಫಲಿತಾಂಶ ಬಂದಿತು. ಟ್ರೈಬ್ರೇಕರ್ನಲ್ಲಿ ಎಡವಿದ ಅಲ್ಕರಾಜ್ ಸೋಲು ಕಾಣುವಂತಾಯಿತು.
ನೊವಾಕ್ಗಿದು ಮೊದಲ ಒಲಿಂಪಿಕ್ ಚಿನ್ನ: ಟೆನಿಸ್ ಲೋಕದ ಅನಭಿಷಿಕ್ತ ದೊರೆಯಾಗಿರುವ ನೊವಾಕ್ ಜೊಕೊವಿಕ್ ಈವರೆಗೆ 24 ಗ್ರಾನ್ಸ್ಲ್ಯಾಮ್ಗಳನ್ನು ಗೆದ್ದುಕೊಂಡಿದ್ದಾರೆ. ಕಳೆದ ಆಸ್ಟ್ರೇಲಿಯಾ ಟೂರ್ನಿಯ ವೇಳೆ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿದ್ದರು. ಬಳಿಕ ವಿಂಬಲ್ಡನ್ ಟೂರ್ನಿ ಫೈನಲ್ನಲ್ಲಿ ಇದೇ 21 ರ ಹರೆಯದ ಕಾರ್ಲೊಸ್ ಅಲ್ಕರಾಜ್ ವಿರುದ್ಧ ಸೋಲು ಕಂಡು ನಿರಾಸೆ ಅನುಭವಿಸಿದ್ದರು. ಸರ್ಬಿಯಾದ ಆಟಗಾರ ಟೆನಿಸ್ ಟೂರ್ನಿಗಳಲ್ಲಿ ಸಾಲು ಸಾಲು ಪ್ರಶಸ್ತಿಗಳನ್ನು ಗೆದ್ದಿದ್ದರೂ, ಒಲಿಂಪಿಕ್ಸ್ನಲ್ಲಿ ಚಿನ್ನ ಗೆದ್ದಿರಲಿಲ್ಲ. ಇದೇ ಮೊದಲ ಬಾರಿಗೆ ಅವರು ಚಿನ್ನದ ಹಾರಕ್ಕೆ ಕೊರಳೊಡ್ಡಿದ್ದಾರೆ.
ಇದನ್ನೂ ಓದಿ: ಅಥ್ಲೆಟಿಕ್ಸ್ನಲ್ಲಿ ಭಾರತಕ್ಕೆ ನಿರಾಸೆ: ಒಲಿಂಪಿಕ್ನಿಂದ ಪಾರುಲ್ ಚೌಧರಿ, ಜೆಸ್ವಿನ್ ಆಲ್ಡ್ರಿನ್ ಔಟ್ - paris olympics 2024