ಪ್ಯಾರಿಸ್(ಫ್ರಾನ್ಸ್): ಭಾರತದ ಕುಸ್ತಿಪಟು ಅಮನ್ ಸೆಹ್ರಾವತ್ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿಂದು ಅದ್ಭುತ ಪ್ರದರ್ಶನ ತೋರಿದರು. ಪುರುಷರ 57 ಕೆ.ಜಿ ಕುಸ್ತಿಯಲ್ಲಿ ಅವರು ಸೆಮಿಫೈನಲ್ ಪ್ರವೇಶಿಸಿದರು. ಈ ಮೂಲಕ ಪದಕ ಖಚಿತಪಡಿಸಿಕೊಳ್ಳಲು ಇನ್ನೊಂದೇ ಹೆಜ್ಜೆ ಬಾಕಿ ಇದೆ.
ಫ್ರೀಸ್ಟೈಲ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಮನ್ 2022ರ ವಿಶ್ವ ಚಾಂಪಿಯನ್ ಅಲ್ಬೇನಿಯಾದ ಝೆಲಿಂಖಾನ್ ಅಬಕರೋವ್ ಅವರನ್ನು 12-0 ಅಂತರದಿಂದ ಸೋಲಿಸಿದರು. ಇದಕ್ಕೂ ಮುನ್ನ, ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ವಿಶ್ವ ಚಾಂಪಿಯನ್ ಅಬಕರೋವ್ ಅವರನ್ನು ಸೋಲಿಸಿ ಅಚ್ಚರಿಗೊಳಿಸಿದ್ದರು.
ಏಷ್ಯನ್ ಚಾಂಪಿಯನ್‌ಶಿಪ್ ವಿಜೇತ ಅಮನ್ ಸೆಹ್ರಾವತ್ ಈ ಪಂದ್ಯದ ಎರಡನೇ ಸುತ್ತಿನ ಮೊದಲ ನಿಮಿಷದಲ್ಲೇ ಅಬಕರೋವ್ ಅವರನ್ನು ಮಣಿಸಿದರು. ಎರಡನೇ ಸುತ್ತಿನಲ್ಲಿ 2:04 ನಿಮಿಷಗಳು ಬಾಕಿ ಇರುವಾಗ 9 ಅಂಕ ಗಳಿಸಿದರು. ಇದರೊಂದಿಗೆ 12-0ರಿಂದ ಪಂದ್ಯ ಗೆದ್ದುಕೊಂಡರು.
ಇಂದೇ ಸೆಮಿಫೈನಲ್: ಅಮನ್ ಸೆಹ್ರಾವತ್ ಸೆಮಿಫೈನಲ್ ಹಣಾಹಣಿ ಇಂದು ರಾತ್ರಿ ಭಾರತೀಯ ಕಾಲಮಾನ 9:45ಕ್ಕೆ ನಡೆಯಲಿದೆ. ಈ ಪಂದ್ಯದಲ್ಲಿ ಅವರು ರಿಯೊ ಒಲಿಂಪಿಕ್ಸ್ 2016ರ ಬೆಳ್ಳಿ ಪದಕ ವಿಜೇತ ಜಪಾನ್‌ನ ಅಗ್ರ ಶ್ರೇಯಾಂಕದ ರೇ ಹಿಗುಚಿ ಅವರನ್ನು ಎದುರಿಸಲಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಕುಸ್ತಿ ಪದಕ ಖಚಿತಪಡಿಸಿಕೊಳ್ಳಲು ಅಮನ್ ಅವರಿಗೆ ಈಗ ಕೇವಲ ಒಂದು ಗೆಲುವಷ್ಟೇ ಬೇಕಿದೆ.
ಇದನ್ನೂ ಓದಿ: ವಿನೇಶ್ ಫೋಗಟ್ಗೆ ಬೆಳ್ಳಿ ಪದಕ ವಿಜೇತರ ಗೌರವ, ಸೌಲಭ್ಯ ನೀಡಲಾಗುವುದು: ಹರಿಯಾಣ ಸಿಎಂ ಘೋಷಣೆ - Vinesh Phogat