ETV Bharat / sports

ಟಿ20 ವಿಶ್ವಕಪ್‌: ಕೆನಡಾ ವಿರುದ್ಧ ಪಾಕಿಸ್ತಾನಕ್ಕೆ 7 ವಿಕೆಟ್​ಗಳ ಭರ್ಜರಿ ಜಯ; ಸೂಪರ್​-8 ಹಂತಕ್ಕೆ ಬರುತ್ತಾ? - Pakistan Defeats Canada

author img

By ANI

Published : Jun 12, 2024, 8:03 AM IST

ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಪಾಕಿಸ್ತಾನ ತಂಡವು ಮೊದಲ ಗೆಲುವು ದಾಖಲಿಸಿದೆ. ಕೆನಡಾ ವಿರುದ್ಧ 7 ವಿಕೆಟ್‌ಗಳ ಜಯ ಗಳಿಸಿದೆ.

pakistan beats canada
ಕೆನಡಾ ವಿರುದ್ಧ ಪಾಕಿಸ್ತಾನಕ್ಕೆ ಜಯ (Photo: IANS)

ನ್ಯೂಯಾರ್ಕ್‌: ಮಂಗಳವಾರ ಇಲ್ಲಿನ ನಸ್ಸೌ ಕೌಂಟಿ ಇಂಟರ್‌ನ್ಯಾಷನಲ್ ಕ್ರಿಕೆಟ್​ ಮೈದಾನದಲ್ಲಿ ಕೆನಡಾ ವಿರುದ್ಧ 7 ವಿಕೆಟ್‌ಗಳ ಜಯ ಸಾಧಿಸಿರುವ ಪಾಕಿಸ್ತಾನ ತಂಡ ಟಿ20 ವಿಶ್ವಕಪ್‌ನ ಸೂಪರ್​-8 ಹಂತಕ್ಕೇರುವ ಕನಸು ಜೀವಂತವಾಗಿರಿಸಿಕೊಂಡಿದೆ. ಟೂರ್ನಿಯ ಮೊದಲೆರಡೂ ಪಂದ್ಯ ಸೋತ ಬಾಬರ್​ ಪಡೆ, ಮೊದಲ ಗೆಲುವಿನ ನಗೆ ಬೀರಿತು.

ಮತ್ತೊಂದು ಅಲ್ಪಮೊತ್ತದ ಗುರಿ ಬೆನ್ನಟ್ಟಿದ ಪಾಕಿಸ್ತಾನವು ಗೆದ್ದು ಎರಡು ಅಂಕ ಗಳಿಸುವಲ್ಲಿ ಯಶಸ್ವಿಯಾಯಿತು. ಮೊಹಮ್ಮದ್ ರಿಜ್ವಾನ್ 53* ರನ್​ ನೆರವಿನಿಂದ ಪಾಕಿಸ್ತಾನವು 17.3 ಓವರ್‌ಗಳಲ್ಲಿ ಕೆನಡಾ ನೀಡಿದ್ದ 107 ರನ್‌ ಗುರಿಯನ್ನು ಬೆನ್ನಟ್ಟಿತು. 7 ವಿಕೆಟ್‌ಗಳ ಗೆಲುವಿನಿಂದ ತಂಡದ ನಿವ್ವಳ ರನ್ ರೇಟ್​​ ಕೂಡ ಸುಧಾರಣೆ ಕಂಡಿದ್ದು, 0.19ಕ್ಕೆ ತಲುಪಿದೆ. ಮತ್ತೊಂದೆಡೆ, ಅಮೆರಿಕ ​ ತಂಡವು 0.63 ರನ್ ದರ ಹೊಂದಿದೆ.

ಪಾಕ್​ ಬ್ಯಾಟಿಂಗ್​: ಕೆನಡಾ ನೀಡಿದ 107 ರನ್ ಗುರಿ ಬೆನ್ನಟ್ಟಿದ ಪಾಕ್​ಗೆ ಉತ್ತಮ ಆರಂಭ ಸಿಗಲಿಲ್ಲ. ಸೈಮ್​ ಅಯೂಬ್ ಕೇವಲ 6 ರನ್​ಗೆ ಔಟಾದರು. ಬಳಿಕ ಒಂದಾದ ನಾಯಕ ಬಾಬರ್ ಅಜಂ (33)​ ಹಾಗೂ ಮೊಹಮದ್​ ರಿಜ್ವಾನ್ 2ನೇ ವಿಕೆಟ್​ಗೆ 63 ರನ್​ ಸೇರಿಸಿದರು. ಈ ಹಂತದಲ್ಲಿ ಬಾಬರ್, ದಿಲ್ಲನ್ ಹೇಲಿಗರ್ ಬೌಲಿಂಗ್​ನಲ್ಲಿ ಶ್ರೇಯಸ್ ಮೊವ್ವಾಗೆ ಕ್ಯಾಚ್​ ನೀಡಿ ಹೊರನಡೆದರು. ಬಳಿಕ ಬಂದ ಫಖಾರ್​ ಜಮಾನ್​ 4 ರನ್​ಗೆ ವಿಕೆಟ್​ ಒಪ್ಪಿಸಿದರು. ಇನ್ನೊಂದೆಡೆ, ಅಜೇಯ ಅರ್ಧಶತಕ ಗಳಿಸಿದ ರಿಜ್ವಾನ್​ (53*), ಉಸ್ಮಾನ್​ ಖಾನ್​ (2) ಜೊತೆಗೂಡಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಇದಕ್ಕೂ ಮುನ್ನ ಟಾಸ್​ ಗೆದ್ದ ಬಾಬರ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಬ್ಯಾಟಿಂಗ್​​ಗಿಳಿದ ಕೆನಡಾ ತಂಡ, ಪಾಕ್​ ವೇಗದ ಬೌಲಿಂಗ್​ ದಾಳಿಗೆ ಸಿಲುಕಿ ರನ್​ ಗಳಿಸಲು ಪರದಾಡಿತು. ಆರಂಭಿಕ ಆಟಗಾರ ಆರೋನ್ ಜಾನ್ಸನ್​ ಅರ್ಧಶತಕದ (52) ಹೊರತುಪಡಿಸಿ ಉಳಿದ ಬ್ಯಾಟರ್​ಗಳು ವಿಫಲರಾದರು.

ನವನೀತ್ ಧಲಿವಾಲ್ 4, ಪರ್ಗತ್ ಸಿಂಗ್ 2, ನಿಕೋಲಸ್ ಕಿರ್ಟನ್ 1, ವಿಕೆಟ್​ ಕೀಪರ್​ ಶ್ರೇಯಸ್ ಮೊವ್ವಾ 2 ರನ್​ಗೆ ವಿಕೆಟ್​ ಒಪ್ಪಿಸಿದರೆ, ರವೀಂದ್ರಪಾಲ್ ಸಿಂಗ್ ಶೂನ್ಯಕ್ಕೆ ಔಟಾದರು. ಕೊನೆಯಲ್ಲಿ ನಾಯಕ ಸಾದ್ ಬಿನ್ ಜಾಫರ್ (10) ಹಾಗೂ ಕಲೀಮ್ ಸನಾ (13) ಮಾತ್ರ ಎರಡಂಕಿ ಮೊತ್ತ ತಲುಪಿದರು. ದಿಲ್ಲನ್ ಹೇಲಿಗರ್ 9 ರನ್​ ಗಳಿಸಿದರು. ಅಂತಿಮವಾಗಿ 20 ಓವರ್​ಗಳಲ್ಲಿ ಕೆನಡಾ 7 ವಿಕೆಟ್​ಗೆ 106 ರನ್​ ಮಾತ್ರ ಗಳಿಸಿತು. ಮೊಹಮ್ಮದ್​ ಅಮಿರ್​ ಹಾಗೂ ಹ್ಯಾರಿಸ್​ ರೌಫ್​ ತಲಾ 2 ವಿಕೆಟ್​ ಕಬಳಿಸಿದರು.

ಐರ್ಲೆಂಡ್ ವಿರುದ್ಧ ಗೆಲುವು ಅನಿವಾರ್ಯ: ಸೂಪರ್ - 8 ಹಂತ ತಲುಪಲು ಪಾಕಿಸ್ತಾನ ತನ್ನ ಅಂತಿಮ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಗೆಲ್ಲಬೇಕಾದ ಅನಿವಾರ್ಯತೆ ಜೊತೆಗೆ, ಇತರ ಫಲಿತಾಂಶಗಳ ಮೇಲೆಯೂ ಅವಲಂಬಿತವಾಗಬೇಕಿದೆ. ಪಾಕ್​ ಸೋತರೆ, ಭಾರತ ಮತ್ತು ಸಹ-ಆತಿಥೇಯ ಯುಎಸ್​​ ತಂಡಗಳು ಎ ಗುಂಪಿನಿಂದ ಸೂಪರ್-8ಗೆ ಅರ್ಹತೆ ಪಡೆಯಲಿವೆ.

ಬಾಬರ್ ತಂಡವು ಅರ್ಹತೆ ಪಡೆಯಬೇಕಾದರೆ, ಅಮೆರಿಕವು ಮುಂಬರುವ ಭಾರತ ಮತ್ತು ಐರ್ಲೆಂಡ್ ವಿರುದ್ಧದ ಎರಡೂ ಪಂದ್ಯಗಳನ್ನು ಸೋಲಬೇಕಿದೆ. ಅಲ್ಲದೆ, ಪಾಕಿಸ್ತಾನವು ಐರ್ಲೆಂಡ್ ವಿರುದ್ಧ ದೊಡ್ಡ ಅಂತರದ ಗೆಲುವು ಕಾಣಬೇಕಿದೆ. ಹೀಗಾದರೆ ಮಾತ್ರ ಯುಎಸ್​ಗಿಂತ ರನ್​ ರೇಟ್​ ಉತ್ತಮಗೊಳ್ಳಲಿದೆ.

ಇದನ್ನೂ ಓದಿ: 2024ರ ಟಿ-20 ವಿಶ್ವಕಪ್​: ಬಾಂಗ್ಲಾದೇಶದ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ರೋಚಕ ಗೆಲುವು - South Africa Victory

ETV Bharat Logo

Copyright © 2024 Ushodaya Enterprises Pvt. Ltd., All Rights Reserved.