ಹೈದರಾಬಾದ್: ಮುಲ್ತಾನ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ ಇನಿಂಗ್ಸ್ ಮತ್ತು 47 ರನ್‌ಗಳಿಂದ ಹೀನಾಯ ಸೋಲನುಭವಿಸಿದೆ. ಈ ಮೂಲಕ ಕೆಟ್ಟ ದಾಖಲೆಯೊಂದನ್ನು ಬರೆದಿದೆ. 147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೆ 550ಕ್ಕೂ ಅಧಿಕ ರನ್ಗಳಿ ಸೋಲು ಕಂಡ ಮೊದಲ ತಂಡ ಎಂಬ ಕೆಟ್ಟ ದಾಖಲೆಯನ್ನು ಪಾಕಿಸ್ತಾನ ನಿರ್ಮಿಸಿದೆ.
ತವರು ನೆಲದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಇನ್ನಿಂಗ್ಸ್ ಸಮೇತ 47 ರನ್‌ಗಳಿಂದ ಹೀನಾಯ ಸೋಲನುಭವಿಸಿದೆ. ಪಾಕಿಸ್ತಾನದ ಮುಲ್ತಾನ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಪಾಕ್ ಮೊದಲ ಇನ್ನಿಂಗ್ಸ್ನಲ್ಲೆ 556/10 ರನ್‌ಗಳ ಕಲೆ ಹಾಕಿತ್ತು. ಶಫೀಖ್ (102), ಶಾನ್ ಮಸೂದ್ (151), ಅಘಾ ಸಲ್ಮಾನ್ (104) ಅವರ ಶತಕದ ನೆರವಿನಿಂದ ಪಾಕ್ಗೆ ಈ ಬೃಹತ್ ಸ್ಕೋರ್ ಕೆಲ ಹಾಕಲು ಸಾಧ್ಯವಾಯಿತು.
🚨 HISTORY CREATED IN MULTAN. 🚨
— Mufaddal Vohra (@mufaddal_vohra) October 11, 2024
- Pakistan becomes the first team to lose a Test match by an innings even after scoring 500-plus in the first inning. pic.twitter.com/TYNo67rYOW
ಇದಕ್ಕುತ್ತರವಾಗಿ ಇಂಗ್ಲೆಂಡ್ ಕೂಡ 7 ವಿಕೆಟ್ ಕಳೆದುಕೊಂಡು 823 ರನ್‌ಗಳ ದೊಡ್ಡ ಮೊತ್ತವನ್ನೇ ಪೇರಿಸಿ ಡಿಕ್ಲೇರ್ ಘೋಷಿಸಿತು. ಈ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ ಆಂಗ್ಲರು 267 ರನ್‌ಗಳ ಮುನ್ನನಡೆ ಸಾಧಿಸಿದ್ದರು.
ಎರಡನೇ ಇನ್ನಿಂಗ್ಸ್ಗೆ ಬ್ಯಾಟಿಂಗ್ಗೆ ಬಂದ ಪಾಕ್ 220 ರನ್ಗಳಿಗೆ ಸರ್ವಪತನ ಕಂಡು ಹೀನಾಯ ಸೋಲನುಭವಿಸಿದೆ. ಇದರೊಂದಿಗೆ ತನ್ನ ಹೆಸರಿಗೆ ಕೆಟ್ಟ ದಾಖಲೆಯೊಂದನ್ನು ಸೇರಿಸಿಕೊಂಡಿದೆ. 147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ತಂಡವೊಂದು ಮೊದಲ ಇನ್ನಿಂಗ್ಸ್‌ನಲ್ಲಿ 500ಕ್ಕೂ ಹೆಚ್ಚು ರನ್ ಗಳಿಸಿದ ನಂತರವೂ ಇನ್ನಿಂಗ್ಸ್‌ನಿಂದ ಟೆಸ್ಟ್ ಪಂದ್ಯವನ್ನು ಸೋತಿರುವುದು ಇದೇ ಮೊದಲು.
THE HISTORIC MOMENT....!!!!
— Mufaddal Vohra (@mufaddal_vohra) October 11, 2024
- England becomes the first team to win a Test match by an innings after conceding more than 500 runs in the first innings. 🤯👏pic.twitter.com/7Irp3QMI6z
ರೂಟ್-ಬ್ರೂಕ್ ಆಟಕ್ಕೆ ಪಾಕ್ ತತ್ತರ: ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಪರ ಜೋ ರೂಟ್ ಮತ್ತು ಹ್ಯಾರಿ ಬ್ರೂಕ್ ಸಿಡಿಲಬ್ಬರದ ಬ್ಯಟಿಂಗ್ ಪ್ರದರ್ಶನ ತೋರಿದರು. ಜೋ ರೂಟ್ 262ರನ್ ಸಿಡಿಸಿ ದ್ವಿಶತಕ ಪೂರೈಸಿದರೂ. ಮತ್ತೊಂದೆಡೆ ಹ್ಯಾರಿ ಬ್ರೂಕ್ 317ರನ್ನೊಂದಿಗೆ ತ್ರಿಶತಕ ಸಿಡಿಸಿದರು. ಇದರೊಂದಿಗೆ ಇಂಗ್ಲೆಂಡ್ ಪರ ವೇಗದ ತ್ರಿಶತಕ ಸಿಡಿಸಿದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಅಲ್ಲದೇ ಇಂಗ್ಲೆಂಡ್ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ 454 ರನ್‌ಗಳ ದಾಖಲೆಯ ಜೊತೆಯಾಟವನ್ನು ಆಡಿದ ಮೊದಲ ಜೋಡಿ ಎಂಬ ಹೆಗ್ಗಳಿಕೆಗೆ ರೂಟ್, ಬ್ರೂಕ್ ಪಾತ್ರರಾಗಿದ್ದಾರೆ.
ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ 1-0 ಮುನ್ನಡೆ ಸಾಧಿಸಿದೆ. ಉಭಯ ತಂಡಗಳ ನಡುವಿನ ಎರಡನೇ ಟೆಸ್ಟ್ ಪಂದ್ಯ ಇದೀ ಮೈದಾನದಲ್ಲಿ ಅಕ್ಟೋಬರ್ 15 ರಂದು ಆರಂಭವಾಗಲಿದೆ.
ಇದನ್ನೂ ಓದಿ: ಅನ್ನದಾತ ರತನ್ ಟಾಟಾ: ಟಾಟಾ ಸಂಸ್ಥೆಯಿಂದ ಬದುಕು ಕಟ್ಟಿಕೊಂಡ ಹಲವು ಕ್ರಿಕೆಟಿಗರು