ETV Bharat / sports

ಒಲಿಂಪಿಕ್ ಗೇಮ್ಸ್ 2024: ಐಒಸಿ ಸದಸ್ಯರಾಗಿ ನೀತಾ ಅಂಬಾನಿ ಮರು ಆಯ್ಕೆ - Nita Ambani - NITA AMBANI

ರಿಲಯನ್ಸ್ ಫೌಂಡೇಶನ್ ಸಂಸ್ಥಾಪಕಿ ನೀತಾ ಅಂಬಾನಿ ಅವರು ಐಒಸಿ ಸದಸ್ಯೆಯಾಗಿ ಮರು ಆಯ್ಕೆಯಾಗಿದ್ದಾರೆ.

Nita Ambani
ನೀತಾ ಅಂಬಾನಿ (ANI)
author img

By ANI

Published : Jul 24, 2024, 11:01 PM IST

ಪ್ಯಾರಿಸ್ [ಫ್ರಾನ್ಸ್]: ಈ ವಾರಾಂತ್ಯದಲ್ಲಿ ಪ್ರಾರಂಭವಾಗಲಿರುವ ಪ್ಯಾರಿಸ್ 2024ರ ಒಲಿಂಪಿಕ್​ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ಮೊದಲು, ರಿಲಯನ್ಸ್ ಫೌಂಡೇಶನ್‌ನ ಸಂಸ್ಥಾಪಕಿ ನೀತಾ ಅಂಬಾನಿ ಅವರನ್ನು ಐಒಸಿ ಸದಸ್ಯೆಯಾಗಿ ಅವಿರೋಧವಾಗಿ ಮರು ಆಯ್ಕೆ ಮಾಡಲಾಗಿದೆ ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಬುಧವಾರ ಪ್ರಕಟಿಸಿದೆ.

ಪ್ರಸ್ತುತ ಪ್ಯಾರಿಸ್‌ನಲ್ಲಿ ನಡೆಯುತ್ತಿರುವ 142 ನೇ ಐಒಸಿ ಅಧಿವೇಶನದಲ್ಲಿ ನೀತಾ ಅಂಬಾನಿ ಅವರು ಶೇಕಡಾ 100 ರಷ್ಟು ಮತಗಳೊಂದಿಗೆ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

''ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಸದಸ್ಯರಾಗಿ ಮರು ಆಯ್ಕೆಯಾಗಿರುವುದು ನನಗೆ ಸಿಕ್ಕ ದೊಡ್ಡ ಗೌರವವಾಗಿದೆ. ನನ್ನ ಮೇಲೆ ಇಟ್ಟ ನಂಬಿಕೆ ಹಾಗೂ ವಿಶ್ವಾಸಕ್ಕೆ ಐಒಸಿ ಅಧ್ಯಕ್ಷ ಬ್ಯಾಚ್ ಮತ್ತು ನನ್ನ ಎಲ್ಲ ಸಹೋದ್ಯೋಗಿಗಳಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಈ ಮರುಚುನಾವಣೆಯು ಕೇವಲ ವೈಯಕ್ತಿಕ ಮೈಲಿಗಲ್ಲು ಮಾತ್ರವಲ್ಲದೇ ಜಾಗತಿಕ ಕ್ರೀಡಾ ಕ್ಷೇತ್ರದಲ್ಲಿ ಭಾರತದ ಬೆಳೆಯುತ್ತಿರುವ ಪ್ರಭಾವದ ಗುರುತಿಸುವಿಕೆಯಾಗಿದೆ. ನಾನು ಸಂತೋಷ ಮತ್ತು ಹೆಮ್ಮೆಯ ಕ್ಷಣವನ್ನು ಪ್ರತಿಯೊಬ್ಬ ಭಾರತೀಯನೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಭಾರತವೂ ಸೇರಿದಂತೆ ವಿಶ್ವದಾದ್ಯಂತ ಒಲಿಂಪಿಕ್ ಸಂಭ್ರಮ ಹೆಚ್ಚಿಸಲು ಬಯಸುತ್ತೇನೆ'' ಎಂದಿದ್ದಾರೆ.

2016ರಲ್ಲಿ ರಿಯೊ ಡಿ ಜನೈರೊ ಒಲಿಂಪಿಕ್ಸ್‌ನಲ್ಲಿ ನೀತಾ ಅಂಬಾನಿ ಅವರು ಸದಸ್ಯೆಯಾಗಿ ಆಯ್ಕೆಯಾಗಿದ್ದರು. IOCಗೆ ಸೇರಿದ ಭಾರತದ ಮೊದಲ ಮಹಿಳೆ ಅವರಾಗಿದ್ದಾರೆ. ನೀತಾ ಅವರ ಮುಂದಾಳತ್ವದಲ್ಲಿ ಐಒಸಿ ವಾರ್ಷಿಕ ಸಭೆಯ ಮುಂದಾಳತ್ವವನ್ನು ಭಾರತ ಕಳೆದ ವರ್ಷ ಪಡೆದುಕೊಂಡಿತ್ತು.

ರಿಲಯನ್ಸ್ ಫೌಂಡೇಶನ್‌ನ ಸಂಸ್ಥಾಪಕಿ ಮತ್ತು ಅಧ್ಯಕ್ಷರಾಗಿ, ನೀತಾ ಅಂಬಾನಿ ಲಕ್ಷಾಂತರ ಭಾರತೀಯರನ್ನು ಸಂಪನ್ಮೂಲಗಳು ಮತ್ತು ಅವಕಾಶಗಳೊಂದಿಗೆ ಸಬಲೀಕರಣಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಅವರು ಕ್ರೀಡೆ, ಶಿಕ್ಷಣ, ಆರೋಗ್ಯ, ಕಲೆ ಮತ್ತು ಸಂಸ್ಕೃತಿಯಾದ್ಯಂತ ವಿವಿಧ ಉಪಕ್ರಮಗಳನ್ನು ನಡೆಸುತ್ತಿದ್ದಾರೆ. ಇವೆಲ್ಲವೂ ದೇಶಾದ್ಯಂತ ಜನರ ಜೀವನವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.

ರಿಲಯನ್ಸ್ ಫೌಂಡೇಶನ್ ತನ್ನ ಕಾರ್ಯಕ್ರಮಗಳೊಂದಿಗೆ ತಳಮಟ್ಟದಿಂದ ಗಣ್ಯರವರೆಗಿನ ತನ್ನ ಕಾರ್ಯಕ್ರಮಗಳೊಂದಿಗೆ ಭಾರತದ ಕ್ರೀಡಾ ಬೆಳವಣಿಗೆಯನ್ನು ಚಾಲನೆ ಮಾಡುವಲ್ಲಿ ಮುಂಚೂಣಿಯಲ್ಲಿದೆ. ಅದರ ಪ್ರಾರಂಭದಿಂದಲೂ ಭಾರತದಲ್ಲಿ 22.9 ದಶಲಕ್ಷಕ್ಕೂ ಹೆಚ್ಚು ಮಕ್ಕಳು ಮತ್ತು ಯುವಕರನ್ನು ತಲುಪಿದೆ. ಒಲಿಂಪಿಕ್ ಗೇಮ್ಸ್ ಪ್ಯಾರಿಸ್ 2024 ಈ ವರ್ಷ ಜುಲೈ 26 ರಿಂದ ಆಗಸ್ಟ್ 11 ರವರೆಗೆ ಫ್ರಾನ್ಸ್‌ನ ರಾಜಧಾನಿಯಲ್ಲಿ ನಡೆಯಲಿದೆ.

ಇದನ್ನೂ ಓದಿ : ಆಡಿದ್ದು 25 ಒಲಿಂಪಿಕ್​, ಪದಕ ಮಾತ್ರ 0: ಈ ರಾಷ್ಟ್ರಗಳಿಗೆ ಮೆಡಲ್​​ ಮರೀಚಿಕೆ! - Paris Olympic 2024

ETV Bharat Logo

Copyright © 2025 Ushodaya Enterprises Pvt. Ltd., All Rights Reserved.