ನವದೆಹಲಿ: ಒಲಿಂಪಿಕ್ ಕಂಚಿನ ಪದಕ ವಿಜೇತ ಕುಸ್ತಿಪಟು ಬಜರಂಗ್ ಪುನಿಯಾ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. 78ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ದೇಶದ ಜನರಿಗೆ ಶುಭಾಶಯಗಳನ್ನು ತಿಳಿಸಿ ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಫೋಟೋಗೆ ಪರ ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
ಭಜರಂಗ್ ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ, 'ಸ್ವಾತಂತ್ರ್ಯ ದಿನಾಚರಣೆಯ ಮಹಾ ಹಬ್ಬದಂದು ದೇಶದ ಜನರಿಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳು' ಎಂದು ಬರೆದಿದ್ದಾರೆ. ಈ ಶೀರ್ಷಿಕೆಯೊಂದಿಗೆ, ಬಜರಂಗ್ ವಿನೇಶ್ ಫೋಗಟ್ ಅವರ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ವಾಸ್ತವವಾಗಿ, ಈ ಚಿತ್ರವು ಭಾರತದ ಕುಸ್ತಿ ಫೆಡರೇಶನ್‌ನ ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್ ಶರಣ್ ಸಿಂಗ್ ವಿರುದ್ಧ ಬಜರಂಗ್ ಮತ್ತು ವಿನೇಶ್ ಸೇರಿದಂತೆ ಇತರ ಅನೇಕ ಕುಸ್ತಿಪಟುಗಳು ಪ್ರತಿಭಟಿಸಿದ ಸಮಯದ್ದಾಗಿದೆ.
ಏನಿದೆ ಪೋಸ್ಟ್‌ನಲ್ಲಿ: ಈ ಚಿತ್ರದಲ್ಲಿ, ವಿನೇಶ್ ಫೋಗಟ್ ನೆಲದ ಮೇಲೆ ಮಲುಗಿದ್ದರೂ ಪ್ರತಿಭಟನಾ ಸ್ಥಳದಿಂದ ಬಲವಂತವಾಗಿ ಅವರನ್ನು ಕರೆದೊಯ್ಯುಲಾಗುತ್ತಿದೆ. ಈ ವೇಳೆ ಅವರ ಕೈಯಲ್ಲಿದ್ದ ತ್ರಿವರ್ಣ ಧ್ವಜ ಕೂಡ ನೆಲದ ಮೇಲೆ ಬಿದ್ದಿದೆ. ಇದೇ ಕಾರಣಕ್ಕೆ ಸಾಮಾಜಿಕ ಜಾಲತಾಣ ಬಳಕೆದಾರರು ಈ ಚಿತ್ರಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ತ್ರಿವರ್ಣ ಧ್ವಜ ಕೆಳಗೆ ಬಿದ್ದಿರುವಂತಹ ಚಿತ್ರವನ್ನು ಭಜರಂಗ್ ಹಂಚಿಕೊಳ್ಳಬಾರದು ಎಂದು ಪ್ರತಿಕ್ರಿಯೆ ನೀಡುತ್ತಿದ್ದಾರೆ.
आजादी दिवस के महापर्व की सभी देशवासियों को हार्दिक बधाई एवं शुभकामनाएं।#जय_हिन्द 🇮🇳 #IndependenceDay2024 pic.twitter.com/Vp7TScOb6P
— Bajrang Punia 🇮🇳 (@BajrangPunia) August 15, 2024
ವಿನೇಶ್ಗೆ ಬೆಂಬಲ: ಇದಕ್ಕೂ ಮುನ್ನ ಮತ್ತೊಂದು ಪೋಸ್ಟ್‌ನಲ್ಲಿ ವಿನೇಶ್ ಫೋಗಟ್ ಅವರನ್ನು ಬೆಂಬಲಿಸಿ ಪುನಿಯಾ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ. ಸಿಎಎಸ್ ಕೋರ್ಟ್ ವಿನೇಶ್ ಅವರ ಬೆಳ್ಳಿ ಪದಕ್ಕಾಗಿ ಕೋರಿ ಸಲ್ಲಿಸಿದ ಅರ್ಜಿಯನ್ನು ಬುಧವಾರ ತಿರಸ್ಕರಿಸಿದೆ. ಇದರ ಬೆನ್ನಲ್ಲೇ ವಿನೇಶ್ಗೆ ಬೆಂಬಲಿಸಿ ಪುನಿಯಾ ಪೋಸ್ಟ್ ಮಾಡಿದ್ದಾರೆ. ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ, ಪದಕ ಕಿತ್ತುಕೊಂಡರೂ ವಿನೇಶ್ ಫೋಗಟ್ ವಿಶ್ವ ವೇದಿಕೆಯಲ್ಲಿ ವಜ್ರದಂತೆ ಮಿಂಚುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಕತ್ತಲಲ್ಲಿ ನಿಮ್ಮ ಪದಕ ಕಿತ್ತುಕೊಂಡಂತೆ ಕಾಣುತ್ತಿದೆ. ಆದ್ರೂ ನೀವು ಇಂದು ಇಡೀ ಪ್ರಪಂಚದಲ್ಲೇ ವಜ್ರದಂತೆ ಹೊಳೆಯುತ್ತಿದ್ದೀರಿ. ನೀವು ಭಾರತದ ಕೋಹಿನೂರ್ ಎಂದಿರುವ ಪುನಿಯಾ ಪದಕ ಬಯಸುವವರು 15 ರೂಗೆ ಖರೀದಿಸಬಹುದು ಎಂದು ಬರೆದುಕೊಂಡಿದ್ದಾರೆ.
माना पदक छीना गया तुम्हारा इस अंधकार में,
— Bajrang Punia 🇮🇳 (@BajrangPunia) August 14, 2024
हीरे की तरह चमक रही हो आज पूरे संसार में।
विश्व विजेता हिंदुस्तान की आन बान शान
रूस्तम ए हिंद विनेश फौगाट आप देश के कोहिनूर हैं।
पूरे विश्व में विनेश फौगाट विनेश फौगाट हो रही हैं।
जिनको मैडल चाहिए। खरीद लेना 15-15 रू में pic.twitter.com/8P1TwEiTiZ
ಪ್ಯಾರಿಸ್ ಒಲಿಂಪಿಕ್ನಲ್ಲಿ ಮಹಿಳೆಯರ 50ಕೆಜಿ ಕುಸ್ತಿ ಪಂದ್ಯದಲ್ಲಿ ಫೈನಲ್ ತಲುಪಿದ್ದ ವಿನೇಶ್ ಫೋಗಟ್ ಹೆಚ್ಚಿನ ದೇಹದ ತೂಕದಿಂದ ಫೈನಲ್ ಪಂದ್ಯದಿಂದ ಅನರ್ಹಗೊಂಡಿದ್ದರು. ಬಳಿಕ ಬೆಳ್ಳಿ ಪದಕಕ್ಕಾಗಿ ವಿನೇಶ್ ಪ್ಯಾರಿಸ್‌ನ ಕೋರ್ಟ್ ಆಫ್ ಆರ್ಬಿಟ್ರೇಶನ್ ಫಾರ್ ಸ್ಪೋರ್ಟ್ಸ್ (ಸಿಎಎಸ್)ಗೆ ಅರ್ಜಿ ಸಲ್ಲಿಸಿದ್ದರು. ಆದರೇ ವಿನೇಶ್ ಅವರ ಅರ್ಜಿಯನ್ನು ಬುಧವಾರ ಸಿಎಎಸ್ ನ್ಯಾಯಾಲಯ ತಿರಸ್ಕರಿದೆ.
ಇದನ್ನೂ ಓದಿ: 2036ರ ಒಲಿಂಪಿಕ್ಗೆ ಭಾರತ ಆತಿಥ್ಯ ವಹಿಸಲಿದೆ, ಅದಕ್ಕಾಗಿ ಈಗಿನಿಂದಲೇ ತಯಾರಿ: ಪ್ರಧಾನಿ ಮೋದಿ - PM Modi Speech In Red Fort