ETV Bharat / sports

ನಾರ್ವೆ ಚೆಸ್​ ಟೂರ್ನಿ: ಭಾರತದ ಗ್ರ್ಯಾಂಡ್​ ಮಾಸ್ಟರ್​ ಪ್ರಗ್ನಾನಂದ್​, ಕೊನೇರು ಹಂಪಿಗೆ ಸೋಲು - Norway Chess - NORWAY CHESS

ನಾರ್ವೆ ಚೆಸ್​ ಟೂರ್ನಿಯಲ್ಲಿ ಭಾರತದ ಗ್ರ್ಯಾಂಡ್​ ಮಾಸ್ಟರ್​ಗಳಾದ ಆರ್​ ಪ್ರಗ್ನಾನಂದ್​, ಕೊನೇರು ಹಂಪಿ ಸೋಲು ಕಂಡರು.

ನಾರ್ವೆ ಚೆಸ್​ ಟೂರ್ನಿ
ನಾರ್ವೆ ಚೆಸ್​ ಟೂರ್ನಿ (ETV Bharat)
author img

By ETV Bharat Karnataka Team

Published : May 29, 2024, 8:08 PM IST

ನಾರ್ವೆ: ಪ್ರತಿಷ್ಠಿತ ನಾರ್ವೆ ಚೆಸ್‌ನ ಟೂರ್ನಿಯ 2ನೇ ಸುತ್ತಿನಲ್ಲೂ ಘಟಾನುಘಟಿಗಳು ಡ್ರಾಗೆ ತೃಪ್ತಿಪಟ್ಟರು. ಭಾರತದ ಗ್ರ್ಯಾಂಡ್ ಮಾಸ್ಟರ್​​ ಪ್ರಗ್ನಾನಂದ್, ಕೊನೇರು ಹಂಪಿ ಸೋಲು ಅನುಭವಿಸಿದರು. ವಿಶ್ವನಂಬರ್​ 1 ಆಟಗಾರ ಮ್ಯಾಗ್ನಸ್​​ ಕಾರ್ಲ್​ಸನ್​, ಅಲಿರೆಜಾ ಫಿರೋಜ್ಜಾ ಮತ್ತು ಚೀನಾದ ಡಿಂಗ್ ಲಿರೆನ್ ಅವರು ಡ್ರಾ ಮಾಡಿಕೊಂಡರೂ ಬಳಿಕ ಟ್ರೈ ಬೇಕರ್​ನಲ್ಲಿ ಗೆಲುವು ಪಡೆದರು.

ವಿಶ್ವ ಚಾಂಪಿಯನ್ ಗ್ರ್ಯಾಂಡ್​ ಮಾಸ್ಟರ್​ ಡಿಂಗ್ ಲಿರೆನ್ ವಿರುದ್ಧ ಎರಡು ಬಾರಿ ಗೆದ್ದಿರುವ ಭಾರತದ ಚದುರಂಗ ಚತುರ ಆರ್​.ಪ್ರಗ್ನಾನಂದ ಟೂರ್ನಿಯಲ್ಲಿ ಸೋಲು ಕಂಡರು. ಎರಡನೇ ಸುತ್ತಿನಲ್ಲಿ ಉತ್ತಮ ಆರಂಭದ ಹೊರತಾಗಿಯೂ ಅವರು ಚಾಂಪಿಯನ್​ ಆಟಗಾರನ ಮುಂದೆ ಗೆಲ್ಲಲು ಸಾಧ್ಯವಾಗಲಿಲ್ಲ. ಇದು ಇಬ್ಬರ ನಡುವಿನ ಪಂದ್ಯಗಳಲ್ಲಿ ಮೊದಲ ಡ್ರಾ ಆಗಿದೆ. ಪಂದ್ಯ ಡ್ರಾ ಆದ್ದರಿಂದ ಟ್ರೈ ಬ್ರೇಕರ್​ ಮೊರೆ ಹೋಗಲಾಯಿತು. ಇದರಲ್ಲಿ ಚುರುಕಿನ ಆಟವಾಡಿದ ಡಿಂಗ್ ಲಿರೆನ್ ಪ್ರಗ್ನಾನಂದ್​ ಎದುರು 1.5 ಅಂಕಗಳಿಂದಿಗೆ ಗೆಲುವು ಸಾಧಿಸಿದರು.

ಡ್ರಾ ಕಂಡ ಮ್ಯಾಗ್ನಸ್ ಕಾರ್ಲ್‌ಸನ್: ದಿನದ ಇನ್ನೊಂದು ಬಹು ನಿರೀಕ್ಷಿತ ಪಂದ್ಯದಲ್ಲಿ ವಿಶ್ವದ ನಂಬರ್​ 1 ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್ ಮತ್ತು ಹಿಕರು ನಕಮುರಾ ನಡುವಿನ ಪಂದ್ಯ ನಿಕಟ ಪೈಪೋಟಿಯಿಂದ ಕೂಡಿತ್ತು. ಕ್ಲಾಸಿಕಲ್ ಆಟದವು ಕೊನೆಗೆ ಡ್ರಾದಲ್ಲಿ ಕೊನೆಗೊಂಡಿತು. ಒತ್ತಡದಲ್ಲೂ ತನ್ನ ಅಸಾಧಾರಣ ಕೌಶಲ್ಯ ಪ್ರದರ್ಶಿಸಿದ ಕಾರ್ಲ್‌ಸನ್ ಕೊನೆಯಲ್ಲಿ ನಕಮುರಾ ವಿರುದ್ಧ ಟ್ರೈ ಬೇಕರ್​ನಲ್ಲಿ ವಿಜಯ ಸಾಧಿಸಿದರು. ಈ ಮೂಲಕ ಅವರು ಆರ್ಮಗೆಡ್ಡಾನ್ ದಾಖಲೆಯ ಪಟ್ಟಿಗೆ ಸೇರಿದರು. ಪಂದ್ಯಾವಳಿಯ ಅಂಕಪಟ್ಟಿಯಲ್ಲಿ ಅವರು 3 ಪಾಯಿಂಟ್‌ ಗಳಿಸಿದರು.

ಇನ್ನೊಂದೆಡೆ ಅಲಿರೆಜಾ ಫಿರೋಜ್ಜಾ ಮತ್ತು ಫ್ಯಾಬಿಯಾನೊ ಕರುವಾನಾ ನಡುವಿನ ಪಂದ್ಯವೂ ಪೈಪೋಟಿಯ ಬಳಿಕ ಡ್ರಾ ಕಂಡಿತು. ಟ್ರೈ ಬ್ರೇಕರ್​ನಲ್ಲಿ ಫಿರೋಟ್ಜಾ ಅವರು ಅಸಾಧಾರಣ ಚಲನೆಗಳ ಮೂಲಕ ಫ್ಯಾಬಿಯಾನೊ ವಿರುದ್ಧ ವಿಜಯ ಕಂಡರು. ಕೊನೆಯಲ್ಲಿ ಅವರು 1.5 ಅಂಕಗಳನ್ನು ಗಳಿಸಿದರು.

ಮಹಿಳಾ ವಿಭಾಗದ ವಿವರ: ಮಹಿಳಾ ವಿಭಾಗದಲ್ಲೂ ಭಾರತಕ್ಕೆ ಆಘಾತ ಎದುರಾಯಿತು. ಮಹತ್ವದ ಚೆಸ್​ ಟೂರ್ನಿಯಲ್ಲಿ ಬದ್ಧವೈರಿಗಳಾಗಿದ್ದ ಗ್ರ್ಯಾಂಡ್​ ಮಾಸ್ಟರ್​ ವೈಶಾಲಿ ಅವರು ಹಿರಿಯ ಚೆಸ್​​ ಆಟಗಾರ್ತಿ ಕೊನೇರು ಹಂಪಿ ವಿರುದ್ಧ ಗೆಲುವು ಸಾಧಿಸಿದರು. ಭಾರತ ನಂಬರ್​ 2 ಆಟಗಾರ್ತಿ ವೈಶಾಲಿ ಅವರು, ನಂಬರ್​ 1 ಆಟಗಾರ್ತಿ ಕೊನೇರು ಹಂಪಿ ವಿರುದ್ಧ ಗೆಲುವು ಸಾಧಿಸಿ ಮುಂದಿನ ಹಂತಕ್ಕೆ ತೆರಳಿದರು. ಈ ಮೂಲಕ ಹಂಪಿ ವಿರುದ್ಧ ತಮ್ಮ ಮೊದಲ ಗೆಲುವು ದಾಖಲಿಸಿದರು.

ಜು ವೆಂಜುನ್ ಮತ್ತು ಅನ್ನಾ ಮುಝಿಚುಕ್ ವಿರುದ್ಧ ಲೀ ಟಿಂಗ್ಜಿ ಮತ್ತು ಪಿಯಾ ಕ್ರಾಮ್ಲಿಂಗ್ ನಡುವಿನ ಪಂದ್ಯವೂ ತೀವ್ರ ಪೈಪೋಟಿಯ ನಡುವೆಯೂ ಡ್ರಾದಲ್ಲಿ ಕೊನೆಗೊಂಡಿತು. ಬಳಿಕದ ಟ್ರೈ ಬ್ರೇಕರ್​ನಲ್ಲಿ ಜು ವೆಂಜುನ್ ಮತ್ತು ಅನ್ನಾ ಮುಝಿಚುಕ್ ವಿಜಯಶಾಲಿಯಾದರು.

ಇದನ್ನೂ ಓದಿ: '2 ತಿಂಗಳು ಇದನ್ನು ಮಾಡೇ ಇರಲಿಲ್ಲ': ಕಾರು ಅಪಘಾತದ ನೋವಿನ ದಿನಗಳ ನೆನೆದ ರಿಷಭ್​​ ಪಂತ್​ - RISHABH PANT

ETV Bharat Logo

Copyright © 2024 Ushodaya Enterprises Pvt. Ltd., All Rights Reserved.