ETV Bharat / sports

ನಾರ್ವೆ ಚೆಸ್​: ವಿಶ್ವ ನಂ 1 ಬಳಿಕ ನಂ 2 ಆಟಗಾರನಿಗೂ ಸೋಲುಣಿಸಿದ ಗ್ರ್ಯಾಂಡ್​​ಮಾಸ್ಟರ್ ಪ್ರಗ್ನಾನಂದ - Praggnanandhaa Defeats Caruana

author img

By ANI

Published : Jun 2, 2024, 9:48 AM IST

ಯುವ ಚೆಸ್ ಗ್ರ್ಯಾಂಡ್​​ಮಾಸ್ಟರ್​​ ಆರ್.ಪ್ರಗ್ನಾನಂದ ನಾರ್ವೆ ಚೆಸ್ ಟೂರ್ನಿಯಲ್ಲಿ ಮತ್ತೊಂದು ಅದ್ಭುತ ಜಯ ದಾಖಲಿಸಿದ್ದಾರೆ.

Pragananadhaa
ಆರ್.ಪ್ರಗ್ನಾನಂದ, ಫ್ಯಾಬಿಯಾನೊ ಕರುವಾನಾ (Source: X Site - FIDE chess)

ಸ್ಟಾವಂಜರ್ (ನಾರ್ವೆ): ಭಾರತದ ಯುವ ಚೆಸ್ ಗ್ರ್ಯಾಂಡ್​​ಮಾಸ್ಟರ್​​ ಆರ್.ಪ್ರಗ್ನಾನಂದ ಅವರು ನಾರ್ವೆ ಚೆಸ್ ಟೂರ್ನಿಯಲ್ಲಿ ತಮ್ಮ ಪ್ರಾಬಲ್ಯ ಮುಂದುವರೆಸಿದ್ದಾರೆ. ಶನಿವಾರ ರಾತ್ರಿ ಕ್ಲಾಸಿಕಲ್​​ ಚೆಸ್​​​ ಐದನೇ ಸುತ್ತಿನಲ್ಲಿ ವಿಶ್ವದ ಎರಡನೇ ಶ್ರೇಯಾಂಕದ ಆಟಗಾರ ಫ್ಯಾಬಿಯಾನೊ ಕರುವಾನಾ ಅವರನ್ನು ಸೋಲಿಸಿದ್ದಾರೆ. ಈ ಗೆಲುವಿನೊಂದಿಗೆ ಪ್ರಗ್ನಾನಂದ ಮೊದಲ ಬಾರಿಗೆ ಕ್ಲಾಸಿಕ್ ಚೆಸ್‌ನಲ್ಲಿ ವಿಶ್ವದ ನಂಬರ್ 1 ಆಟಗಾರ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸೆನ್ ಮತ್ತು ವಿಶ್ವದ ಎರಡನೇ ಶ್ರೇಯಾಂಕದ ಫಾಬಿಯಾನೊ ಕರುವಾನಾ ಇಬ್ಬರನ್ನೂ ಸೋಲಿಸಿದಂತಾಗಿದೆ.

ನಾರ್ವೆ ಚೆಸ್ ಟೂರ್ನಿಯಲ್ಲಿನ ಅದ್ಭುತ ಪ್ರದರ್ಶನದಿಂದ ಪ್ರಗ್ನಾನಂದ ಅವರು ಅಂತಾರಾಷ್ಟ್ರೀಯ ಚೆಸ್ ಫೆಡರೇಶನ್ (FIDE) ವಿಶ್ವ ಶ್ರೇಯಾಂಕದಲ್ಲಿ ಟಾಪ್​ 10ರೊಳಗೆ ಸ್ಥಾನ ಪಡೆದಿದ್ದಾರೆ. ''ಪ್ರಗ್​ ಈಸ್ ಬ್ಯಾಕ್​. ಯುವ ಆಟಗಾರ ಚೆಸ್​​​​ ಜಗತ್ತನ್ನು ಮತ್ತೊಮ್ಮೆ ದಂಗುಬಡಿಸಿದ್ದಾರೆ. ಮೂರನೇ ಸುತ್ತಿನಲ್ಲಿ ವಿಶ್ವದ ನಂಬರ್​ 1 ಆಟಗಾರನನ್ನು ಮಣಿಸಿದ್ದ ಅವರು, ಇದೀಗ 5ನೇ ಸುತ್ತಿನ ಆಟದಲ್ಲಿ ಜಗತ್ತಿನ 2ನೇ ಶ್ರೇಯಾಂಕದ ಆಟಗಾರನಿಗೆ ಸೋಲುಣಿಸಿದ್ದಾರೆ. ಈ ಮೂಲಕ ಮೊದಲ ಬಾರಿಗೆ ಕ್ಲಾಸಿಕಲ್​ ಚೆಸ್​ನಲ್ಲಿ ಈ ಇಬ್ಬರೂ ದಿಗ್ಗಜರ ವಿರುದ್ಧ ಗೆದ್ದಿದ್ದಾರೆ. ಪ್ರಗ್ನಾನಂದಗೆ ಇದೊಂದು ಅದ್ಭುತ ಟೂರ್ನಿ'' ಎಂದು ನಾರ್ವೆ​ ಚೆಸ್​ ಎಕ್ಸ್​ ಖಾತೆಯಲ್ಲಿ ಕೊಂಡಾಡಿದೆ.

18ರ ಹರೆಯದ ಪ್ರಗ್ನಾನಂದ ಅವರು ಮೂರನೇ ಸುತ್ತಿನಲ್ಲಿ ಕಾರ್ಲ್‌ಸನ್​ಗೆ ಆಘಾತ ನೀಡಿದ್ದರು. ಬಿಳಿ ಕಾಯಿಗಳೊಂದಿಗೆ ಆಡಿದ್ದ ಕಳೆದ ವರ್ಷದ FIDE ಚೆಸ್ ವಿಶ್ವಕಪ್‌ನ ರನ್ನರ್‌ಅಪ್‌, ಕಾರ್ಲ್‌ಸೆನ್ ವಿರುದ್ಧ ಕೆಲ ಬುದ್ಧಿವಂತಿಕೆಯ ನಡೆಯಿಂದ ಗಮನ ಸೆಳೆದಿದ್ದರು. ಪ್ರಗ್ನಾನಂದ ತಮ್ಮ ಉದಯೋನ್ಮುಖ ವೃತ್ತಿಜೀವನದಲ್ಲಿ ಈ ಹಿಂದೆಯೂ ಕೂಡ ಕ್ಷಿಪ್ರ ಮತ್ತು ಬ್ಲಿಟ್ಜ್ ಚೆಸ್ ಆಟಗಳಲ್ಲಿ ಕಾರ್ಲ್‌ಸೆನ್ ವಿರುದ್ಧ ಕೆಲ ಗೆಲುವುಗಳನ್ನು ಸಾಧಿಸಿದ್ದಾರೆ.

5 ಬಾರಿಯ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸೆನ್ ವಿರುದ್ಧ ತಮ್ಮ ಮೊದಲ ಶಾಸ್ತ್ರೀಯ (ಕ್ಲಾಸಿಕಲ್​) ಗೆಲುವು ದಾಖಲಿಸಿದ ಕೇವಲ ಒಂದು ದಿನದ ಬಳಿಕ ಭಾರತದ ಸ್ಟಾರ್ ಪ್ರಗ್ನಾನಂದ ಅವರು ಗುರುವಾರ 4ನೇ ಸುತ್ತಿನಲ್ಲಿ ಅಮೆರಿಕದ ಹಿಕರು ನಕಮುರಾ ವಿರುದ್ಧ ಸೋತಿದ್ದರು. ಪ್ರಗ್ನಾನಂದ ವಿರುದ್ಧ ನಕಮುರಾ ಅದ್ಭುತ ಆಟ ಪ್ರದರ್ಶಿಸಿದರು. ದೋಷರಹಿತವಾಗಿ ಆಡಿದ ನಕಮುರಾ ಜಯದೊಂದಿಗೆ ಒಟ್ಟಾರೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಮತ್ತೊಂದೆಡೆ, ನಾರ್ವೆ ಚೆಸ್ ಮಹಿಳಾ ಪಂದ್ಯಾವಳಿಯಲ್ಲಿ ಪ್ರಗ್ನಾನಂದ ಅವರ ಸಹೋದರಿ ವೈಶಾಲಿ, ದಂತಕಥೆ ಪಿಯಾ ಕ್ರಾಮ್ಲಿಂಗ್ ಅವರನ್ನು ಸೋಲಿಸುವ ಮೂಲಕ ತಮ್ಮ ಪ್ರಾಬಲ್ಯ ಮುಂದುವರೆಸಿದ್ದಾರೆ. ತಮ್ಮ ಮುನ್ನಡೆಯನ್ನು ಒಟ್ಟು 8.5 ಪಾಯಿಂಟ್‌ಗಳಿಗೆ ವಿಸ್ತರಿಸಿಕೊಂಡಿದ್ದಾರೆ. ಭಾರತೀಯ ಮಹಿಳಾ ಚೆಸ್ ಗ್ರ್ಯಾಂಡ್‌ಮಾಸ್ಟರ್ ಹಂಪಿ ಅವರು ಅನ್ನಾ ಮುಝಿಚುಕ್ ವಿರುದ್ಧ ಕ್ಲಾಸಿಕಲ್​​ ಆಟದ 4ನೇ ಸುತ್ತಿನಲ್ಲಿ ಸೋತಿದ್ದಾರೆ. ಮತ್ತೊಂದು ರೋಚಕ ಆಟದಲ್ಲಿ ಜು ವೆಂಜುನ್ ಪಂದ್ಯಾವಳಿಯ 4ನೇ ಆರ್ಮಗೆಡನ್ ಟೈಬ್ರೇಕ್‌ನಲ್ಲಿ ತನ್ನದೇ ದೇಶದ ಲೀ ಟೆಂಗ್ಜಿ ವಿರುದ್ಧ ಜಯ ಗಳಿಸಿದರು.

ಸ್ಥಳೀಯ ಹೀರೋ ಮ್ಯಾಗ್ನಸ್ ಕಾರ್ಲ್‌ಸೆನ್ ಫ್ಯಾಬಿಯಾನೊ ಕರುವಾನಾ ವಿರುದ್ಧ ಅಲ್ಪ ಅಂತರದ ಜಯ ದಾಖಲಿಸಿ ಮೂರು ಅಂಕ ಗಳಿಸಿದರು. ಕಾರ್ಲ್‌ಸೆನ್‌ನೊಂದಿಗಿನ ರೇಟಿಂಗ್ ಅಂತರವನ್ನು ಕೇವಲ ನಾಲ್ಕು ಪಾಯಿಂಟ್‌ಗಳಿಗೆ ತಗ್ಗಿಸಲು ಕರುವಾನಾಗೆ ಸುವರ್ಣ ಅವಕಾಶವಿತ್ತು. ಆದರೆ ಆಟವು ಆರಂಭದಲ್ಲಿ ಶಾಂತವಾಗಿದ್ದರೂ ಕೊನೆಯಲ್ಲಿ ನಾಟಕೀಯ ತಿರುವು ಪಡೆದುಕೊಂಡಿತು. ಅಂತಿಮ ಹಂತದಲ್ಲಿನ ಪ್ರಮಾದದಿಂದಾಗಿ ಕರುವಾನಾ ಹಿನ್ನಡೆ ಅನುಭವಿಸಿದರು.

ಈ ನಡುವೆ ಅಲಿರೆಜಾ ಫಿರೌಜಾ ಅವರು ಹಾಲಿ ವಿಶ್ವ ಚಾಂಪಿಯನ್ ಡಿಂಗ್ ಲಿರೆನ್​ಗೆ ಸೋಲುಣಿಸಿ ಮೂರು ನಿರ್ಣಾಯಕ ಅಂಕಗಳನ್ನು ಗಳಿಸಿದರು.

ಇದನ್ನೂ ಓದಿ: ವಿಶ್ವ ನಂ. 1 ಮ್ಯಾಗ್ನಸ್ ಕಾರ್ಲ್‌ಸೆನ್​ ಮಣಿಸಿದ ಭಾರತದ ಗ್ರ್ಯಾಂಡ್‌ಮಾಸ್ಟರ್ ಪ್ರಗ್ನಾನಂದ - Praggnanandhaa Beats Carlsen

ETV Bharat Logo

Copyright © 2024 Ushodaya Enterprises Pvt. Ltd., All Rights Reserved.