ಬೆಂಗಳೂರು: ಅಸೋಸಿಯೇಷನ್ ಆಫ್ ಕ್ರಿಕೆಟ್ ಅಂಪೈರ್ಸ್ ಕರ್ನಾಟಕದ (ACUK) ನೂತನ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ನೇಮಕ ಮಾಡಲಾಗಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಆವರಣದಲ್ಲಿ ನಡೆದ 50ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ನೂತನ ಕಾರ್ಯಕಾರಿ ಸಮಿತಿಗಾಗಿ ಚುನಾವಣೆ ನಡೆಯಿತು.
2024-26ರ ಅವಧಿಯ ನೂತನ ಕಾರ್ಯಕಾರಿ ಸಮಿತಿಗಾಗಿ ನಡೆದ ಚುನಾವಣೆಯಲ್ಲಿ ಆರ್.ವಿ.ಪ್ರಧಾನ್ ಕುಮಾರ್ ಅರಸ್ (ಅಧ್ಯಕ್ಷ), ಬಿ.ಎಸ್.ರಘೋತ್ತಮ್ (ಉಪಾಧ್ಯಕ್ಷ), ಜೆ.ನಾಗರಾಜ್ (ಕಾರ್ಯದರ್ಶಿ), ಎಂ.ಆರ್.ಯೋಗನರಸಿಂಹ (ಜಂಟಿ ಕಾರ್ಯದರ್ಶಿ) ಹಾಗೂ ಜೆ.ರಾಹುಲ್ ರಾಜ್ (ಖಜಾಂಚಿ) ಸ್ಥಾನಕ್ಕೆ ನೇಮಕಗೊಂಡರು. ಮತ್ತು ಎಂ.ಎಸ್.ಸುಹಾಸ್, ಮಿಥುನ್.ಎಸ್.ಪಾಟೀಲ್, ಎಂ.ಆರ್.ರವೀಂದ್ರನಾಥ್ ಹಾಗೂ ಎನ್.ಶಶಿಧರ್ ಕಾರ್ಯಕಾರಿ ಸಮಿತಿ ಸದಸ್ಯರಾಗಿ ನೇಮಕವಾಗಿದ್ದಾರೆ.
ಚುನಾವಣೆಯಲ್ಲಿ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. 1974ರಲ್ಲಿ ದಿಗ್ಗಜ ಸ್ಪಿನ್ನರ್ ಎರ್ರಪಳ್ಳಿ ಪ್ರಸನ್ನ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ತಂಡ ತನ್ನ ಚೊಚ್ಚಲ ರಣಜಿ ಟ್ರೋಫಿ ಗೆದ್ದ ನೆನಪಿಗಾಗಿ ಅಸೋಸಿಯೇಷನ್ ಆಫ್ ಕ್ರಿಕೆಟ್ ಅಂಪೈರ್ಸ್ ಕರ್ನಾಟಕ (ಎಸಿಯುಕೆ) ಸ್ಥಾಪಿಸಲಾಯಿತು.
ಹಿರಿಯ ಟೆಸ್ಟ್ ಅಂಪೈರ್‌ಗಳು, ಕ್ರಿಕೆಟ್ ದಿಗ್ಗಜರನ್ನೊಳಗೊಂಡಿರುವ ಅಸೋಸಿಯೇಷನ್ ಆಫ್ ಕ್ರಿಕೆಟ್ ಅಂಪೈರ್ಸ್ ಕರ್ನಾಟಕ, ಅಂಪೈರಿಂಗ್ ಕುರಿತ ತಾಂತ್ರಿಕ ಜ್ಞಾನದ ಪರಸ್ಪರ ಹಂಚಿಕೆ ಮತ್ತು ಮಹತ್ವಾಕಾಂಕ್ಷಿ, ಯುವ ಮತ್ತು ಪ್ರತಿಭಾವಂತ ಅಂಪೈರ್‌ಗಳನ್ನು ಅಭಿವೃದ್ಧಿಪಡಿಸುವ ಧ್ಯೇಯ ಹೊಂದಿದೆ. ದೇಶದ ಅತ್ಯುತ್ತಮ ಅಂಪೈರ್ಸ್ ಅಸೋಸಿಯೇಷನ್‌ಗಳಲ್ಲಿ ಒಂದಾಗಿರುವ ಎಸಿಯುಕೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ಯಾನೆಲ್'ಗಾಗಿ ಅಂಪೈರ್‌ಗಳನ್ನ ರೂಪಿಸುತ್ತಿದೆ.
ಇದನ್ನೂ ಓದಿ: ತಂದೆಯಂತೆಯೇ ಮಗ; ಟೀಂ ಇಂಡಿಯಾ ಪರ ಆಡಿದ ಅಪ್ಪ- ಮಕ್ಕಳಿವರು! - Father And Son In Cricket