ನವದೆಹಲಿ: ಭಾರತದ ಸ್ಟಾರ್ ಜಾವೆಲಿನ್ ಎಸೆತೆಗಾರ ನೀರಜ್ ಚೋಪ್ರಾ ಡೈಮೆಂಡ್ ಲೀಗ್ನಲ್ಲಿ ಮತ್ತೊಮ್ಮೆ ಟ್ರೋಫಿ ಗೆಲ್ಲುವಲ್ಲಿ ವಿಫಲರಾಗಿದ್ದಾರೆ. ಶನಿವಾರ ಬ್ರಸೆಲ್ಸ್‌ನಲ್ಲಿ ನಡೆದ ಡೈಮಂಡ್ ಲೀಗ್ ಫೈನಲ್ ಪಂದ್ಯದಲ್ಲಿ ನೀರಜ್ ಚೋಪ್ರಾ ಕೇವಲ 1 ಸೆಂ.ಮೀ ಹಿನ್ನಡೆಯಿಂದ ಎರಡನೇ ಸ್ಥಾನಕ್ಕೆ ತಲುಪಿ ಟ್ರೋಫಿಯನ್ನು ಕೈಚೆಲ್ಲಿದರು. ಈ ಅಂತಿಮ ಹಣಾಹಣಿಯಲ್ಲಿ 87.86 ಮೀಟರ್ ದೂರಕ್ಕೆ ಭರ್ಚಿ ಎಸೆದು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟರೇ, ಗ್ರೆನೇಡಿಯನ್ ಜಾವೆಲಿನ್ ಎಸೆತಗಾರ ಆಂಡರ್ಸನ್ ಪೀಟರ್ಸ್ 87.87 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ಡೈಮಂಡ್ ಲೀಗ್‌ನ ವಿಜೇತರಾಗಿ ಹೊರಹೊಮ್ಮಿದರು.
ಈ ಹಿಂದೆ ಕೂಡ ಡೈಮಂಡ್ ಲೀಗ್ನಲ್ಲಿ ಎರಡನೇ ಸ್ಥಾನವನ್ನು ಪಡೆದಿದ್ದ ನೀರಜ್ ಈ ಬಾರಿಯೂ ಅದೇ ಸ್ಥಾನದಲ್ಲಿ ಮುಂದುವರೆದರು. ಆದರೆ ಈ ಲೀಗ್ನಲ್ಲಿ ಹಿನ್ನಡೆ ಅನುಭವಿಸಲು ಕಾರಣ ಏನೆಂದು ಚೋಪ್ರಾ ಬಹಿರಂಗಪಡಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿರುವ ಅಥ್ಲೀಟ್, ಎಡಗೈ ಗಾಯದ ನಡುವೆಯೆ ಟೂರ್ನಿಯಲ್ಲಿ ಭಾಗವಹಿಸಿರುವುದಾಗಿ ಹೇಳಿಕೊಂಡಿದ್ದಾರೆ.
As the 2024 season ends, I look back on everything I’ve learned through the year - about improvement, setbacks, mentality and more.
— Neeraj Chopra (@Neeraj_chopra1) September 15, 2024
On Monday, I injured myself in practice and x-rays showed that I had fractured the fourth metacarpal in my left hand. It was another painful… pic.twitter.com/H8nRkUkaNM
ತಮ್ಮ ಎಕ್ಸ್ ಖಾತೆಯಲ್ಲಿ, "ಸೋಮವಾರ, ಅಭ್ಯಾಸದ ವೇಳೆ ಗಾಯಕ್ಕೆ ತುತ್ತಾಗಿದ್ದೇನೆ. ನನ್ನ ಎಡಗೈನ ನಾಲ್ಕನೇ ಮೆಟಾಕಾರ್ಪಲ್ ಮೂಳೆ ಮುರಿದಿರುವುದು ಎಕ್ಸ್-ರೇನಲ್ಲಿ ಬೆಳಕಿಗೆ ಬಂದಿದೆ. ಇದು ನನಗೆ ಮತ್ತೊಂದು ನೋವಿನ ಸವಾಲಾಗಿತ್ತಾದರೂ ನನ್ನ ತಂಡದ ಸಿಬ್ಬಂದಿಯಿಂದ ಈ ಟೂರ್ನಿಯಲ್ಲಿ ಭಾಗವಹಿಸಲು ಸಾಧ್ಯವಾಯಿತು. ಇದು ವರ್ಷದ ಕೊನೆಯ ಸ್ಪರ್ಧೆಯಾಗಿದ್ದು ಮತ್ತು ನನ್ನ ಈ ಸೀಸನ್ ಅನ್ನು ಈ ಟ್ರ್ಯಾಕ್‌ನಲ್ಲಿ ಕೊನೆಗೊಳಿಸುತ್ತಿದ್ದೇನೆ. ಈ ವರ್ಷ ಸ್ವತಃ ನಾನು ಇಟ್ಟುಕೊಂಡಿದ್ದ ನಿರೀಕ್ಷೆಗಳನ್ನು ತಲುಪಲು ಸಾಧ್ಯವಾಗಲಿಲ್ಲ".
"ಆದರೂ ಈ ಋತುವಿನಲ್ಲಿ ಬಹಳಷ್ಟು ಪಾಠ ಕಲಿತುಕೊಂಡಿದ್ದೇನೆ. ಸಂಪೂರ್ಣವಾಗಿ ಚೇತರಿಸಿಕೊಂಡು ಟ್ರ್ಯಾಕ್ಗೆ ಹಿಂತಿರುಗುತ್ತೇನೆ. ನಿಮ್ಮ ಈ ಪ್ರೋತ್ಸಾಹಕ್ಕಾಗಿ ಎಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. 2024 ನನ್ನನ್ನು ಉತ್ತಮ ಕ್ರೀಡಾಪಟು ಮತ್ತು ವ್ಯಕ್ತಿಯನ್ನಾಗಿ ಮಾಡಿದೆ. 2025ರಲ್ಲಿ ಮತ್ತೆ ನಿಮ್ಮನ್ನು ಭೇಟಿ ಮಾಡುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಡೈಮೆಂಡ್ ಲೀಗ್ನಲ್ಲಿ ಪ್ರಶಸ್ತಿ ಗೆಲ್ಲಲು ವಿಫಲವಾದ ನೀರಜ್ ಚೋಪ್ರಾ: ಅದಕ್ಕೆ ಕಾರಣ ಇದೇ ನೋಡಿ - Neeraj Chopra