ETV Bharat / sports

ಕುಸ್ತಿಪಟು ಬಜರಂಗ್​ ಪೂನಿಯಾಗೆ ನೋಟಿಸ್​ ನೀಡಿ ಮತ್ತೆ ಅಮಾನತು ಆದೇಶ ಹೊರಡಿಸಿದ ನಾಡಾ - BAJRANG Punia SUSPESNION - BAJRANG PUNIA SUSPESNION

ತಾರಾ ಕುಸ್ತಿಪಟು ಬಜರಂಗ್​ ಪೂನಿಯಾಗೆ ಅಧಿಕೃತ ನೋಟಿಸ್​ ಜಾರಿ ಮಾಡಿರುವ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ (ನಾಡಾ) ಮತ್ತೆ ಅಮಾನತು ಶಿಕ್ಷೆ ವಿಧಿಸಿದೆ.

ಕುಸ್ತಿಪಟು ಬಜರಂಗ್​ ಪೂನಿಯಾ ಅಮಾನತು
ಕುಸ್ತಿಪಟು ಬಜರಂಗ್​ ಪೂನಿಯಾ ಅಮಾನತು (ETV Bharat)
author img

By PTI

Published : Jun 23, 2024, 6:24 PM IST

ನವದೆಹಲಿ: ಭಾರತೀಯ ಕುಸ್ತಿ ಸಂಸ್ಥೆಯ (ಡಬ್ಲ್ಯೂಎಫ್​ಐ) ಮಾಜಿ ಅಧ್ಯಕ್ಷ ಬ್ರಿಜ್​ ಭೂಷಣ್​ ಸಿಂಗ್​ ವಿರುದ್ಧ ಹೋರಾಟ ನಡೆಸಿದ್ದ, ಒಲಿಂಪಿಕ್ಸ್​ ಕಂಚಿನ ಪದಕ ವಿಜೇತ ಕುಸ್ತಿಪಟು ಬಜರಂಗ್​ ಪೂನಿಯಾರನ್ನು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ (ನಾಡಾ) ಮತ್ತೆ ಅಮಾನತು ಮಾಡಿ ಭಾನುವಾರ ಆದೇಶಿಸಿದೆ.

ಯಾವುದೇ ಎಚ್ಚರಿಕೆ ನೀಡದೇ ಕುಸ್ತಿಪಟು ಬಜರಂಗ್​ ಪೂನಿಯಾರನ್ನು ಅಮಾನತು ಮಾಡಿದ ಕ್ರಮವನ್ನು ಡೋಪಿಂಗ್​ ವಿರೋಧಿ ಶಿಸ್ತು ಸಮಿತಿ (ADDP) ಇತ್ತೀಚಿಗೆ ರದ್ದು ಮಾಡಿತ್ತು. ಇದರ ಬೆನ್ನಲ್ಲೇ, ಕುಸ್ತಿಪಟುವಿಗೆ ಅಧಿಕೃತ ನೋಟಿಸ್​ ಜಾರಿ ಮಾಡಿ ಸಸ್ಪೆಂಡ್​ ಆದೇಶ ಹೊರಡಿಸಿದೆ.

ಮಾರ್ಚ್ 10 ರಂದು ಸೋನೆಪತ್‌ನಲ್ಲಿ ನಡೆದ ಆಯ್ಕೆ ಟ್ರಯಲ್ಸ್‌ನಲ್ಲಿ ಡೋಪ್​ ಪರೀಕ್ಷೆಗೆ ಮೂತ್ರದ ಮಾದರಿಯನ್ನು ನೀಡಲು ನಿರಾಕರಿಸಿದ್ದಕ್ಕಾಗಿ ತಾರಾ ಕುಸ್ತಿಪಟುವನ್ನು ನಾಡಾ ಏಪ್ರಿಲ್ 23 ರಂದು ಅಮಾನತುಗೊಳಿಸಿತ್ತು. ಇದನ್ನು ವಾಡಾ ಕೂಡ ಅಂಗೀಕರಿಸಿತ್ತು. ರಾಷ್ಟ್ರೀಯ ಉದ್ದೀಪನ ನಿರೋಧಕ ನಿಯಮಗಳ ಉಲ್ಲಂಘಿಸಿದ್ದು, ತಾತ್ಕಾಲಿಕವಾಗಿ ಕ್ರೀಡೆಯಿಂದ ಅಮಾನತುಗೊಳಿಸಲಾಗಿದೆ ಎಂದು ಬಜರಂಗ್​ ಪೂನಿಯಾಗೆ ನಾಡಾ ಅಧಿಕಾರಿಗಳು ಔಪಚಾರಿಕ ಸೂಚನೆ ನೀಡಿದ್ದರು. ಇದರ ವಿರುದ್ಧ ಮೇಲ್ಮನವಿ ಸಲ್ಲಿಸಲು ಜುಲೈ 11ರ ವರೆಗೆ ಅವಕಾಶ ನೀಡಲಾಗಿದೆ.

ಬಜರಂಗ್​ ಅವರು ಡೋಪಿಂಗ್​ ಟೆಸ್ಟ್​ನಲ್ಲಿ ಭಾಗವಹಿಸದ ಕಾರಣ ಅವರನ್ನು ಒಲಿಂಪಿಕ್ಸ್​ ಅರ್ಹತಾ ಟ್ರಯಲ್ಸ್​ ಮತ್ತು ಯಾವುದೇ ಪಂದ್ಯಾವಳಿಗಳಲ್ಲಿ ಭಾಗಿಯಾಗದಂತೆ ಅಮಾನತಿನಲ್ಲಿಡಲು ಸೂಚಿಸಲಾಗಿದೆ. ಡೋಪಿಂಗ್​ ಪರೀಕ್ಷೆಯಲ್ಲಿ ಭಾಗವಹಿಸಲು ಸೂಚಿಸಿದ್ದರೂ ಕುಸ್ತಿಪಟು ಗೈರಾಗಿದ್ದರು.

ಬಜರಂಗ್​ ವಾದವೇನು?: ತಾನು ಎಂದಿಗೂ ಡೋಪ್​ ಮಾದರಿಯನ್ನು ನೀಡಲು ನಿರಾಕರಿಸಲಿಲ್ಲ. ತನಗೆ ಕಳುಹಿಸಲಾದ ಮಾದರಿಗಳ ಸಂಗ್ರಹ ಕಿಟ್​ ಅವಧಿ ಮೀರಿವೆ. ಈ ಬಗ್ಗೆ ನಾಡಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇನೆ. ಕಿಟ್​ಗಳನ್ನು ಬದಲಿಸಲು ಸೂಚಿಸಿದರೂ, ಈ ಬಗ್ಗೆ ನಾಡಾ ಪ್ರತಿಕ್ರಿಯೆ ನೀಡಿಲ್ಲ ಎಂದು ತಾರಾ ಕುಸ್ತಿಪಟು ಬಜರಂಗ್​ ಪೂನಿಯಾ ಆರೋಪಿಸಿದ್ದಾರೆ.

ಜೊತೆಗೆ, ನಾಡಾ ಕ್ರಮದ ವಿರುದ್ಧ ಪೂನಿಯಾ ಅವರು ಡೋಪಿಂಗ್​ ವಿರೋಧಿ ಶಿಸ್ತು ಸಮಿತಿಗೆ ದೂರು ಸಲ್ಲಿಸಿದ್ದರು. ಕುಸ್ತಿಪಟುವಿಗೆ ಯಾವುದೇ ಸೂಚನೆ ನೀಡದೇ ಅಮಾನತು ಮಾಡಿದ ನಾಡಾ ಕ್ರಮವನ್ನು ಎಡಿಡಿಇ ರದ್ದು ಮಾಡಿತ್ತು. ಅಮಾನತು ಮಾಡಲು ನಿಖರ ಕಾರಣ ಸೂಚಿಸಿ ಕ್ರೀಡಾಪಟುವಿಗೆ ನೋಟಿಸ್​ ನೀಡದೇ ನಾಡಾ ಲೋಪವೆಸಗಿದೆ. ಹೀಗಾಗಿ ಅಮಾನತು ರದ್ದಾಗಲಿದೆ ಎಂದಿತ್ತು.

ಇದನ್ನೂ ಓದಿ: ಡೋಪಿಂಗ್​ ಟೆಸ್ಟ್​ಗೆ ಒಳಗಾಗದ ಬಜರಂಗ್​ ಪೂನಿಯಾ ಅಮಾನತು: ನಾಡಾ ವಿರುದ್ಧ ಪೈಲ್ವಾನ್​ ಗರಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.