ನವದೆಹಲಿ: 17 ವರ್ಷಗಳ ಹಿಂದೆ ಇದೇ ದಿನದಂದು ಟೀಂ ಇಂಡಿಯಾ, ಕ್ರಿಕೆಟ್ನಲ್ಲಿ ಹೊಸ ಇತಿಹಾಸವೊಂದನ್ನು ಸೃಷ್ಟಿಸಿತ್ತು. ಬರೋಬ್ಬರಿ 24 ವರ್ಷಗಳ ಬಳಿಕ ಈ ದಿನದಂದ ಟೀಂ ಇಂಡಿಯಾ ಎರಡನೇ ಬಾರಿಗೆ ಚಾಂಪಿಯನ್ ಪಟ್ಟಕೇರಿತ್ತು.
✅ @virendersehwag
— ICC (@ICC) September 14, 2018
❌ @YasArafat12
✅ @harbhajan_singh
❌ @mdk_gul
✅ @robbieuthappa
❌ @SAfridiOfficial#OnThisDay in 2007 India v Pakistan at #WT20 finished in a tie… and India won the bowl-out! pic.twitter.com/sN2dZMyLN2
ಹೌದು, 2007ರಲ್ಲಿ ಈ ದಿನ ಭಾರತ ಕ್ರಿಕೆಟ್ ತಂಡ ಐಸಿಸಿ ಟಿ20 ವಿಶ್ವಕಪ್ ಮೊದಲ ಋತುವಿನಲ್ಲೇ ಎಂಎಸ್ ಧೋನಿ ನಾಯಕತ್ವದಲ್ಲಿ ವಿಶ್ವಕಪ್ ಗೆದ್ದುಕೊಂಡಿತ್ತು. ಫೈನಲ್ ಪಂದ್ಯದಲ್ಲಿ ಮೆನ್ ಇನ್ ಬ್ಲೂ ಪಾಕಿಸ್ತಾನವನ್ನು ಸೋಲಿಸಿ 24 ವರ್ಷಗಳ ಬಳಿಕ ಎರಡನೇ ವಿಶ್ವಕಪ್ ಗೆದ್ದುಕೊಂಡಿತ್ತು. ಮತ್ತೊಂದು ವಿಶೇಷವೆಂದರೆ ಧೋನಿ ಅವರ ನಾಯಕತ್ವದಲ್ಲಿ ಭಾರತ ಚೊಚ್ಚಲ ಚಾಂಪಿಯನ್ ಪಟ್ಟ ಅಲಂಕರಿಸಿಕೊಂಡಿತ್ತು. ಆದರೆ ಇದಕ್ಕೂ ಮುನ್ನ ವಿಶ್ವಕಪ್ ವಿಜೇತ ತಂಡವನ್ನು ಘೋಷಿಸಲು ಬೌಲ್ ಔಟ್ ಓವರ್ (ಬೌಲಿಂಗ್ ಮೂಲಕ ವಿಕೆಟ್ ಉರುಳಿಸುವುದು) ನಡೆಸಲಾಗಿತ್ತು. ರೋಚಕತೆಯಿಂದ ಕೂಡಿದ ಈ ಪಂದ್ಯದಲ್ಲಿ ಪಾಕಿಸ್ತಾನ ಅಗ್ರ ಬೌಲರ್ಗಳು ಹಿನ್ನಡೆ ಅನುಭವಿಸಿದ್ದರು.
ಹೀಗಿತ್ತು ಬೌಲ್ ಔಟ್ ಓವರ್: ಭಾರತ ಬೌಲ್ ಔಟ್ನಲ್ಲಿ ಪಾಕಿಸ್ತಾನವನ್ನು ಅದ್ಭುತವಾಗಿ ಮಣಿಸಿತ್ತು. ಭಾರತದ ಪರ ಮೊದಲು ಬೌಲಿಂಗ್ ಮಾಡಿದ್ದ ವೀರೇಂದ್ರ ಸೆಹ್ವಾಗ್ ಬೌಲ್ ಔಟ್ ಮಾಡಿ ಮೊದಲ ಅಂಕವನ್ನು ಕಲೆಹಾಕಿದ್ದರು. ಬಳಿಕ ಪಾಕ್ ಪರ ಯಾಸಿರ್ ಅರಾಫತ್ ಮೊದಲ ಬೌಲಿಂಗ್ ಅವಕಾಶ ಪಡೆದುಕೊಂಡು ಬೌಲ್ಔಟ್ ಮಾಡುವಲ್ಲಿ ವಿಫಲರಾದರು. ಇದಾದ ಬಳಿಕ ಮತ್ತೊಮ್ಮೆ ಭಾರತದ ಸರದಿ ಬಂದಿದ್ದು, ಈ ಬಾರಿ ಸ್ಪಿನ್ನರ್ ಹರ್ಭಜನ್ ಸಿಂಗ್ ಸುಲಭವಾಗಿ ಸ್ಟಂಪ್ ಉರುಳಿಸಿ ಎರಡನೇ ಅಂಕಗಳಿಸಿದರು. ಆದರೆ ಎದುರಾಳಿ ತಂಡದ ವೇಗದ ಬೌಲರ್ ಉಮರ್ ಗುಲ್ ಕೂಡ ಅಂಕಗಳಿಸುವಲ್ಲಿ ವಿಫಲರಾದರು.
ರಾಬಿನ್ ಉತ್ತಪ್ಪ ಭಾರತದ ಪರ ಮೂರನೇ ಕ್ರಮಾಂಕದಲ್ಲಿ ವಿಕೆಟ್ ಪಡೆದರೇ, ಆಲ್ರೌಂಡರ್ ಶಾಹಿದ್ ಅಫ್ರಿದಿ ಕೂಡ ಬೌಲ್ ಔಟ್ ಮಾಡಲು ಸಾಧ್ಯವಾಗಲಿಲ್ಲ. ಈ ಮೂಲಕ ಭಾರತ ತಂಡ ಪಾಕಿಸ್ತಾನವನ್ನು ಬೌಲ್ ಔಟ್ ನಲ್ಲಿ ಸೋಲಿಸಿ ಚೊಚ್ಚಲ ಟಿ20 ವಿಶ್ವಕಪ್ ಗೆದ್ದುಕೊಂಡು ಇತಿಹಾಸ ಸೃಷ್ಟಿಸಿತು.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಭಾರತ 20 ಓವರ್‌ಗಳಲ್ಲಿ 141 ರನ್ ಗಳಿಸಿತು. ರಾಬಿನ್ ಉತ್ತಪ್ಪ ತಂಡಕ್ಕೆ 50 ರನ್ ಗಳ ಮಹತ್ವದ ಇನಿಂಗ್ಸ್ ಆಡಿದರು. ಇದಕ್ಕೆ ಉತ್ತರವಾಗಿ ಪಾಕಿಸ್ತಾನ ಕೂಡ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 141 ರನ್ ಗಳಿಸಿತು. ಪಾಕಿಸ್ತಾನ ಪರ ಮಿಸ್ಬಾ ಉಲ್ ಹಕ್ 53 ರನ್ ಗಳಿಸಿ ಟಾಪ್ ಸ್ಕೋರರ್ ಎನಿಸಿಕೊಂಡಿದ್ದರು.