ETV Bharat / sports

ಕೇವಲ 10 ರನ್​ಗಳಿಗೆ ಆಲೌಟ್​: 5 ಎಸೆತಗಳಲ್ಲಿ ಪಂದ್ಯ ಮುಕ್ತಾಯ; ಭಾರತೀಯ ಬೌಲರ್​ ದಾಳಿಗೆ ಮಂಗೋಲಿಯಾ ಉಡೀಸ್​! - T20 World Cup qualifiers match - T20 WORLD CUP QUALIFIERS MATCH

ಟಿ20 ವಿಶ್ವಕಪ್​ ಅರ್ಹತಾ ಪಂದ್ಯದಲ್ಲಿ ಮಂಗೋಲಿಯ ತಂಡ ಅಲ್ಪಮೊತ್ತಕ್ಕೆ ಆಲೌಟ್​ ಆಗುವ ಮೂಲಕ ಟಿ20 ಇತಿಹಾಸದಲ್ಲಿ ಅತ್ಯಂತ ಕೆಟ್ಟ ದಾಖಲೆ ಬರೆದಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Sports Team

Published : Sep 5, 2024, 3:32 PM IST

ಬಾಂಗಿ (ಮಲೇಷ್ಯಾ): ಟಿ20 ಕ್ರಿಕೆಟ್​ ಇತಿಹಾಸದಲ್ಲೇ ಅತೀ ಕಡಿಮೆ ಮೊತ್ತಕ್ಕೆ ಆಲೌಟ್​ ಆದ ತಂಡ ಎಂಬ ಕೆಟ್ಟ ದಾಖಲೆ ನಿರ್ಮಾಣವಾಗಿದೆ. ಮಲೇಷ್ಯಾದ ಬಾಂಗಿಯಲ್ಲಿ ನಡೆದ ಮುಂಬರು ಟಿ20 ವಿಶ್ವಕಪ್ ಏಷ್ಯಾ ಕ್ವಾಲಿಫೈಯರ್ ಎ 14ನೇ ಪಂದ್ಯದಲ್ಲಿ ಮಂಗೋಲಿಯಾ ತಂಡ ಕೇವಲ 10 ರನ್‌ಗಳಿಂದ ಸರ್ವಪತನ ಕಂಡಿದೆ.

ಸಿಂಗಾಪುರ ವಿರುದ್ದದ ಟಿ20 ಪಂದ್ಯದಲ್ಲಿ ಮಂಗೋಲಿಯಾ ತಂಡ 10 ಓವರ್‌ಗಳಲ್ಲಿ 10 ರನ್ ಗಳಿಸಲಷ್ಟೇ ಯಶಸ್ವಿಯಾಗಿದೆ ಇದಕ್ಕುತ್ತರವಾಗಿ ಸಿಂಗಾಪುರ 5 ಎಸೆತಗಳಲ್ಲಿ ಪಂದ್ಯವನ್ನು ಗೆದ್ದುಕೊಂಡಿತು. ಆದರೆ ಅದು ಕೂಡ ಒಂದು ವಿಕೆಟ್ ಕಳೆದುಕೊಂಡಿತ್ತು.

6 ವಿಕೆಟ್​ ಪಡೆದ ಭಾರತೀಯ ಬೌಲರ್​: ಭಾರತೀಯ ಮೂಲದ 17 ವರ್ಷದ ಬೌಲರ್ ಹರ್ಷ್ ಭಾರದ್ವಾಜ್ ಸಿಂಗಾಪುರ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಇಡೀ ಪಂದ್ಯದಲ್ಲಿ ಪ್ರಾಬಲ್ಯ ಸಾಧಿಸಿರುವ ಅವರು 6 ವಿಕೆಟ್ ಉರುಳಿಸಿ ದಾಖಲೆ ಬರೆದಿದ್ದಾರೆ. ಸಾಮಾನ್ಯವಾಗಿ ಪಂದ್ಯದ ಮೊದಲ ಓವರ್​ನಲ್ಲಿ ವೇಗದ ಬೌಲರ್​ಗಳಿಗೆ ಅವಕಾಶ ನೀಡಲಾಗುತ್ತದೆ. ಆದರೆ, ನಾಯಕ ಮನ್‌ಪ್ರೀತ್ ಸಿಂಗ್ ಲೆಗ್ ಸ್ಪಿನ್ನರ್ ಹರ್ಷ್​ಗೆ ಮೊದಲ ಓವರ್‌ನಲ್ಲೇ ಬೌಲಿಂಗ್​​​ಗೆ ಇಳಿಸಿದರು. ಆರಂಭಿಕ ಓವರ್​ನಲ್ಲೇ ವಿಕೆಟ್​ ಪಡೆಯುವ ಮೂಲಕ ಮಾರಕ ಪ್ರದರ್ಶನ ತೋರಿದರು. ಹರ್ಷ್ 4 ಓವರ್‌ಗಳಲ್ಲಿ 3 ರನ್‌ಗಳನ್ನು ಮಾತ್ರ ಬಿಟ್ಟುಕೊಟ್ಟಿದ್ದಾರೆ.

ಪವರ್‌ಪ್ಲೇ ಮುಕ್ತಾಯಕ್ಕೂ ಮೊದಲೇ ಮಂಗೋಲಿಯಾ 7 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಬಳಿಕ 3 ರನ್​ಗಳಿಗೆ ಸರ್ವಪತನ ಕಂಡಿದೆ.

ಕೆಟ್ಟ ಬ್ಯಾಟಿಂಗ್ ಪ್ರದರ್ಶನ: ಮಂಗೋಲಿಯಾ ತಂಡದ ಪರ ಯಾವುದೇ ಬ್ಯಾಟ್ಸ್‌ಮನ್‌ ಎರಡಂಕಿ ದಾಟಲು ಸಾಧ್ಯವಾಗಲಿಲ್ಲ. ಐವರು ಬ್ಯಾಟ್ಸ್‌ಮನ್‌ಗಳು ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ. ತಂಡದ ಗರಿಷ್ಠ ವೈಯಕ್ತಿಕ ಸ್ಕೋರ್ 2 ರನ್ ಆಗಿದೆ. ಇದರಿಂದಾಗಿ ಇಡೀ ತಂಡ 10 ರನ್‌ಗಳಿಗೆ ಕುಸಿತ ಕಂಡಿತು.

ಇದರೊಂದಿಗೆ ಟಿ-20ಯಲ್ಲಿ ಅತೀ ಕಡಿಮೆ ಸ್ಕೋರ್​ ದಾಖಲಿಸುವ ಮೊದಲ ತಂಡವಾಗಿ ಕೆಟ್ಟ ದಾಖಲೆ ಬರೆಯಿತು. ಇದಕ್ಕೂ ಮೊದಲು ಐಲ್ ಆಫ್ ಮ್ಯಾನ್ ತಂಡ ಕೂಡ 8.4 ಓವರ್‌ಗಳಲ್ಲಿ 10 ರನ್‌ಗಳಿಗೆ ಆಲೌಟ್ ಆಗಿತ್ತು. ಮಂಗೋಲಿಯಾ T20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕಡಿಮೆ ರನ್-ರೇಟ್ ದಾಖಲೆಯನ್ನು ಹೊಂದಿದೆ. ಇದಕ್ಕೂ ಮೊದಲು ಜಪಾನ್ ವಿರುದ್ಧ ನಡೆದ ಪಂದ್ಯದಲ್ಲಿ ಈ ತಂಡ 12 ರನ್‌ಗಳಿಗೆ ಆಲೌಟ್ ಆಗಿತ್ತು.

ಇದನ್ನೂ ಓದಿ: ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ಗೆ ಮೂಹೂರ್ತ ಫಿಕ್ಸ್​: ಯಾವಾಗ, ಎಲ್ಲಿ ನಡೆಯಲಿದೆ ಗೊತ್ತಾ? - World Test Championship Final

ETV Bharat Logo

Copyright © 2025 Ushodaya Enterprises Pvt. Ltd., All Rights Reserved.