ETV Bharat / sports

ಡಿಆರ್‌ಎಸ್ ಕೋಣೆಯೊಳಗೆ ಕ್ಯಾಮೆರಾ ಮತ್ತು ಮೈಕ್ರೊಫೋನ್‌ ಅಳವಡಿಸಿ: ವಾನ್​-ಹಾಕ್ಸಿನ್​ ಮಧ್ಯೆ ಬಿಸಿ ಬಿಸಿ ಚರ್ಚೆ - ಡಿಆರ್‌ಎಸ್ ವಿವಾದ

India vs England 5th Test: ಭಾರತ ಮತ್ತು ಇಂಗ್ಲೆಂಡ್ ನಡುವೆ 5 ಟೆಸ್ಟ್ ಪಂದ್ಯಗಳ ಸರಣಿ ನಡೆಯುತ್ತಿದೆ. ಈ ಸರಣಿಯ ಕೊನೆಯ ಪಂದ್ಯ ಮಾರ್ಚ್ 7 ರಿಂದ ಧರ್ಮಶಾಲಾದಲ್ಲಿ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ಡಿಆರ್‌ಎಸ್ ಚರ್ಚೆಯ ಬಗ್ಗೆ ವಾನ್ ಮತ್ತು ಹಾಕಿನ್ಸ್ ನಡುವೆ ಬಿಸಿ ಬಿಸಿ ಚರ್ಚೆ ನಡೆದಿದೆ.

Michael Vaughan  paul hawkins  DRS controversy  ಡಿಆರ್‌ಎಸ್ ವಿವಾದ  ವಾನ್ ಮತ್ತು ಹಾಕಿನ್ಸ್ ನಡುವೆ ಚರ್ಚೆ
ಡಿಆರ್‌ಎಸ್ ಕೋಣೆಯೊಳಗೆ ಕ್ಯಾಮೆರಾ ಮತ್ತು ಮೈಕ್ರೊಫೋನ್‌ ಅಳವಡಿಸಿ
author img

By ETV Bharat Karnataka Team

Published : Mar 2, 2024, 7:42 PM IST

ನವದೆಹಲಿ: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಕೊನೆಯ ಪಂದ್ಯವು ಮಾರ್ಚ್ 7 ರಿಂದ ಧರ್ಮಶಾಲಾದ HPCA ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಮೈಕೆಲ್ ವಾನ್ ಮತ್ತು ಹಾಕ್​-ಐ ನಿರ್ಮಾಪಕ ಪೌಲ್ ಹಾಕಿನ್ಸ್ ನಡುವೆ ಡಿಆರ್‌ಎಸ್ ಕುರಿತು ತೀವ್ರ ಚರ್ಚೆ ನಡೆದಿದೆ.

ಡಿಆರ್‌ಎಸ್‌ನಲ್ಲಿ ಪಾರದರ್ಶಕತೆ ಪ್ರತಿಪಾದಿಸಿದ ಮೈಕೆಲ್ ವಾನ್, ಲಖನೌ ತಂಡಕ್ಕೆ ಲ್ಯಾನ್ಸ್ ಕ್ಲುಸೆನರ್ ಸಹಾಯಕ ಕೋಚ್​ ಆಗಿ ನೇಮಕ ಇರಿಸಬೇಕು. ಈ ರೀತಿ ಮಾಡುವುದರಿಂದ ನೀವು ಹೇಗೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂಬುದನ್ನು ಅಭಿಮಾನಿಗಳು ನೋಡಬಹುದು ಎಂಬ ಸಲಹೆ ನೀಡಿದಾಗ ವಿವಾದವು ಮತ್ತಷ್ಟು ಸ್ಫೋಟಗೊಂಡಿತು. ರಾಂಚಿ ಟೆಸ್ಟ್‌ನಲ್ಲಿ ಜೋ ರೂಟ್‌ ವಿವಾದಾತ್ಮಕ ಔಟಾದ ನಂತರ ಮೈಕೆಲ್ ವಾನ್ ಕಡೆಯಿಂದ ಈ ಹೇಳಿಕೆ ಹೊರಬಿದ್ದಿದೆ. ಹಾಕಿನ್ಸ್ ಅವರು ವಾನ್ ಅವರ ಪ್ರಸ್ತಾಪವನ್ನು ತಕ್ಷಣವೇ ವಿರೋಧಿಸಿದರು, ಅದನ್ನು 'ಅಶಿಕ್ಷಿತ' ಎಂದು ತಳ್ಳಿಹಾಕಿದರು.

ಹಾಕಿನ್ಸ್‌ ಅವರ ಟೀಕೆಗಳಿಂದ ಹಿಂಜರಿಯದೆ, ವಾನ್ ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆ X ಮೂಲಕ ಪೋಸ್ಟ್‌ವೊಂದನ್ನು ಹರಿಯಬಿಟ್ಟರು. DRS ಕಾರ್ಯಾಚರಣೆಗಳಲ್ಲಿ ಪಾರದರ್ಶಕತೆಗಾಗಿ ತನ್ನ ಕರೆಯನ್ನು ಪುನರುಚ್ಚರಿಸಿದರು. ಮುಂಬರುವ ಧರ್ಮಶಾಲಾ ಟೆಸ್ಟ್ ಪಂದ್ಯದಲ್ಲಿ ಡಿಆರ್‌ಎಸ್ ಸಂಪೂರ್ಣವಾಗಿ ಕಾರ್ಯನಿರ್ವಹಿಸಲಿದೆ ಎಂದು ಭರವಸೆ ವ್ಯಕ್ತಪಡಿಸಿದ ಅವರು, ಡಿಆರ್‌ಎಸ್‌ನಲ್ಲಿ ತೆಗೆದುಕೊಂಡ ಎಲ್ಲಾ ನಿರ್ಧಾರಗಳನ್ನು ಅಭಿಮಾನಿಗಳಿಗೆ ತೋರಿಸಬೇಕಾದ ಅಗತ್ಯವನ್ನು ಒತ್ತಿ ಹೇಳಿದರು.

ಇದು ತುಂಬಾ ಸರಳವಾಗಿದೆ. ಸಂಪೂರ್ಣ ಪಾರದರ್ಶಕತೆಗಾಗಿ ದಯವಿಟ್ಟು ಎಲ್ಲಾ ನಿರ್ಧಾರಗಳನ್ನು ತೋರಿಸಿ. ನಿಮ್ಮ ಕಾರ್ಯಾಚರಣೆಯು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅಭಿಮಾನಿಗಳಿಗೆ ತೋರಿಸಿ. ನಾನು ಕೇಳಿದ್ದು ಇಷ್ಟೇ. ಭಾರತದಲ್ಲಿ ಮುಂದಿನ ಟೆಸ್ಟ್‌ ಅನ್ನು ನೋಡಲು ಕಾಯುತ್ತಿದ್ದೇನೆ ಎಂದು ವಾನ್​ ಹೇಳಿದ್ದಾರೆ.

ಹಾಕ್-ಐ ಎನ್ನುವುದು ಕಂಪ್ಯೂಟರ್ ದೃಷ್ಟಿ ವ್ಯವಸ್ಥೆಯಾಗಿದ್ದು, ಕ್ರಿಕೆಟ್, ಟೆನಿಸ್, ಫುಟ್‌ಬಾಲ್, ಬ್ಯಾಡ್ಮಿಂಟನ್ ಸೇರಿದಂತೆ ಹಲವು ಕ್ರೀಡೆಗಳಲ್ಲಿ ಚೆಂಡಿನ ಪಥವನ್ನು ಪತ್ತೆಹಚ್ಚಲು ಬಳಸಲಾಗುತ್ತದೆ. ಬೌಲರ್‌ನಿಂದ ವಿಕೆಟ್‌ಕೀಪರ್‌ವರೆಗೆ ಚೆಂಡಿನ ಸಂಪೂರ್ಣ ಚಲನೆಯನ್ನು ಟ್ರ್ಯಾಕ್ ಮಾಡಲು ಮತ್ತು LBW ನಿರ್ಧಾರಗಳಲ್ಲಿ ಹಾಕ್-ಐ ಅನ್ನು ಬಳಸಲಾಗುತ್ತದೆ.

ಏನಿದು ಘಟನೆ: ರಾಂಚಿ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಜೋ ರೂಟ್ ಔಟಾದ ಬಗ್ಗೆ ವಿವಾದ ಹುಟ್ಟಿಕೊಂಡಿತು. ಮೂರನೇ ದಿನ ರವಿಚಂದ್ರನ್ ಅಶ್ವಿನ್ ಎಸೆತದಲ್ಲಿ ಅವರಿಗೆ ಎಲ್​ಬಿಡಬ್ಲ್ಯೂ ನೀಡಲಾಯಿತು. ಈ ಕುರಿತು ವಿವಾದ ಎದ್ದಿತ್ತು. ಕಾಮೆಂಟ್ ಮಾಡುವಾಗ, ಮಾಜಿ ಇಂಗ್ಲಿಷ್ ಕ್ಯಾಪ್ಟನ್ ಮೈಕೆಲ್ ವಾನ್, DRS ಕೋಣೆಯಲ್ಲಿ ಕ್ಯಾಮೆರಾಗಳು ಮತ್ತು ಮೈಕ್ರೊಫೋನ್​ಗಳನ್ನು ಇಡಲು ಸಲಹೆ ನೀಡಿದರು. ಇದನ್ನು ಪಾಲ್ ಹಾಕಿನ್ಸ್ ಅವರು 'ಅಶಿಕ್ಷಿತ' ಎಂದು ಕರೆದರು. ಈ ಬಗ್ಗೆ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಕೂಡ ಪ್ರಶ್ನೆ ಎತ್ತಿದ್ದರು. ರಾಂಚಿ ಟೆಸ್ಟ್‌ನಲ್ಲಿ ಜೋ ರೂಟ್ ಎರಡನೇ ಇನ್ನಿಂಗ್ಸ್‌ನಲ್ಲಿ 11 ರನ್ ಗಳಿಸಿ ಔಟಾಗಿದ್ದರು.

ರಾಂಚಿ ಟೆಸ್ಟ್‌ನಲ್ಲಿ ಭಾರತ ತಂಡವು 5 ವಿಕೆಟ್‌ಗಳಿಂದ ಇಂಗ್ಲೆಂಡ್ ಅನ್ನು ಸೋಲಿಸಿತ್ತು. ಈ ಗೆಲುವಿನೊಂದಿಗೆ ಟೀಂ ಇಂಡಿಯಾ 5 ಪಂದ್ಯಗಳ ಸರಣಿಯಲ್ಲಿ 3-1 ಮುನ್ನಡೆ ಸಾಧಿಸಿದೆ. ಸರಣಿಯ ಕೊನೆಯ ಪಂದ್ಯ ಮಾರ್ಚ್ 7 ರಿಂದ ಧರ್ಮಶಾಲಾ ಮೈದಾನದಲ್ಲಿ ನಡೆಯಲಿದೆ.

ಓದಿ: ಲಖನೌ ತಂಡಕ್ಕೆ ಲ್ಯಾನ್ಸ್ ಕ್ಲುಸೆನರ್ ಸಹಾಯಕ ಕೋಚ್​ ಆಗಿ ನೇಮಕ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.