ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಪುರುಷರ ಜಾವೆಲಿನ್ ಥ್ರೋನಲ್ಲಿ ಬೆಳ್ಳಿ ಪದಕ ಗೆದ್ದ ಚಿನ್ನದ ಹುಡುಗ ನೀರಜ್ ಚೋಪ್ರಾ ಅವರನ್ನು ಪ್ರಧಾನಿ ಮೋದಿ "ಅತ್ಯುತ್ತಮ ಸಾಧನೆ" ಎಂದು ಶ್ಲಾಘಿಸಿದ್ದಾರೆ.
26ರ ಹರೆಯದ ಚೋಪ್ರಾ ಅವರು 89.45 ಮೀಟರ್ ದೂರು ಜಾವೆಲಿನ್ ಎಸೆದು ಚಿನ್ನದ ಪದಕ ಗೆಲ್ಲುವಲ್ಲಿ ವಿಫಲವಾದರು. ಆದರೆ ಪಾಕಿಸ್ತಾನದ ಆಟಗಾರ ಅರ್ಷದ್ ನದೀಮ್ 92.97 ಮೀಟರ್ ದೂರ ಎಸೆಯುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಬೆಳ್ಳಿ ಪದಕ ಗೆಲ್ಲುವ ಮೂಲಕ ಸತತ ಎರಡು ಒಲಿಂಪಿಕ್ ಪದಕಗಳನ್ನು ಗೆದ್ದ ಮೊದಲ ಭಾರತೀಯ ಟ್ರ್ಯಾಕ್ ಹಾಗೂ ಫೀಲ್ಡ್ ಅಥ್ಲೀಟ್ ಎನ್ನುವ ಹೆಗ್ಗಳಿಕೆಗೆ ನೀರಜ್ ಚೋಪ್ರಾ ಪಾತ್ರರಾಗಿದ್ದಾರೆ.
Neeraj Chopra is excellence personified! Time and again he’s shown his brilliance. India is elated that he comes back with yet another Olympic success. Congratulations to him on winning the Silver. He will continue to motivate countless upcoming athletes to pursue their dreams… pic.twitter.com/XIjfeDDSeb
— Narendra Modi (@narendramodi) August 8, 2024
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, "ನೀರಜ್ ಚೋಪ್ರಾ ಅವರು ಶ್ರೇಷ್ಠ ವ್ಯಕ್ತಿಯಾಗಿದ್ದಾರೆ. ಅವರು ಮತ್ತೊಮ್ಮೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಚೋಪ್ರಾ ಮತ್ತೊಂದು ಒಲಿಂಪಿಕ್ ಯಶಸಸ್ಸಿನೊಂದಿಗೆ ಮರಳುತ್ತಿರುವುದರ ಬಗ್ಗೆ ಭಾರತ ಹರ್ಷ ವ್ಯಕ್ತಪಡಿಸುತ್ತದೆ. ಬೆಳ್ಳಿಯನ್ನು ಗೆದ್ದಿದ್ದಕ್ಕಾಗಿ ಅವರಿಗೆ ಅಭಿನಂದನೆಗಳು. ನೀರಜ್ ಚೋಪ್ರಾ ಅವರು, ನಮ್ಮ ದೇಶ ಹೆಮ್ಮೆ ಪಡುವಂತೆ ತಮ್ಮ ಕನಸುಗಳನ್ನು ಈಡೇರಿಸಿಕೊಳ್ಳಲು ಪ್ರಯತ್ನಿಸುವ ಮುಂಬರುವ ಅಸಂಖ್ಯಾತ ಕ್ರೀಡಾಪಟುಗಳಿಗೆ ಪ್ರೇರೇಪಣೆಯಾಗಿರುತ್ತಾರೆ." ಎಂದು ಹೇಳಿದ್ದಾರೆ.
ಗೃಹ ಸಚಿವ ಅಮಿತ್ ಶಾ ಅವರು ಕೂಡ, ದೇಶ ಹೆಮ್ಮೆ ಪಡುವಂತೆ ಮಾಡಿದ ಅವರ ಸಾಧನೆಯನ್ನು ಪ್ರಶಂಸಿಸುವ ಮೂಲಕ ನೀರಜ್ ಚೋಪ್ರಾ ಅವರನ್ನು ಅಭಿನಂದಿಸಿದ್ದಾರೆ. ಎಕ್ಸ್ ಪೋಸ್ಟ್ನಲ್ಲಿ "ಅದ್ಭುತವಾದ ನೀರಜ್ ಚೋಪ್ರಾ ವರು ದೇಶಕ್ಕೆ ಕೀರ್ತಿ ತಂದಿದ್ದಾರೆ. ಉತ್ತಮ ಪ್ರದರ್ಶನ ನೀಡಿದ್ದೀರಿ ಚಾಂಪಿಯನ್. #ParisOlympics2024 ರಲ್ಲಿ ಬೆಳ್ಳಿ ಗೆದ್ದಿದ್ದಕ್ಕಾಗಿ ಅಭಿನಂದನೆಗಳು. ಭಾರತೀಯ ಕ್ರೀಡಾ ಇತಿಹಾಸದಲ್ಲಿ ಅದ್ಭುತವಾದ ದಾಖಲೆ ಬರೆಯುವ ಮೂಲಕ ನೀವು ತ್ರಿವರ್ಣ ಧ್ವಜದ ಗೌರವವನ್ನು ಹೆಚ್ಚಿಸಿದ್ದೀರಿ. ನಿಮ್ಮ ಗಮನಾರ್ಹವಾದ ಸಾಧನೆಗೆ ಇಡೀ ದೇಶವೇ ಖುಷಿ ಪಡುತ್ತದೆ." ಎಂದು ಬರೆದಿದ್ದಾರೆ.
What a moment for Bharat!
— Dr Mansukh Mandaviya (@mansukhmandviya) August 8, 2024
A Silver Medal for @Neeraj_chopra1. He has won his 2nd consecutive Olympic medal!
This incredible achievement is historic—no individual in independent Bharat has ever done it before in athletics. #Cheer4Bharat pic.twitter.com/kse90CBAEy
ಕೇಂದ್ರ ಯುವ ವ್ಯವಹಾರಗಳು ಹಾಗೂ ಕ್ರೀಡಾ ಸಚಿವ ಮುನ್ಸುಖ್ ಮಾಂಡವಿಯಾ ಅವರೂ 26 ವರ್ಷದ ಚೋಪ್ರಾ ಅವರ ಸಾಧನೆಯನ್ನು ಹೊಗಳಿದ್ದಾರೆ. ಎಕ್ಸ್ ಪೋಸ್ಟ್ನಲ್ಲಿ, "ಭಾರತಕ್ಕೆ ಎಂಥಾ ಕ್ಷಣ! ನೀರಜ್ ಚೋಪ್ರಾ ಬೆಳ್ಳಿ ಪದಕ ಗೆದ್ದಿದ್ದಾರೆ. ಸತತ ಎರಡನೇ ಬಾರಿಗೆ ಅವರು ಒಲಿಂಪಿಕ್ ಪದಕ ಗೆದ್ದಿದ್ದಾರೆ. ಈ ನಂಬಲಸಾಧ್ಯವಾದ ಸಾಧನೆ ಐತಿಹಾಸಿಕವಾಗಿದೆ. ಸ್ವತಂತ್ರ ಭಾರತದ ಯಾವುದೇ ವ್ಯಕ್ತಿ ಅಥ್ಲೆಟಿಕ್ಸ್ನಲ್ಲಿ ಈ ಸಾಧನೆಯನ್ನು ಹಿಂದೆಂದೂ ಮಾಡಿಲ್ಲ" ಎಂದು ಬಣ್ಣಿಸಿದ್ದಾರೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, "ವೈಭವಯುತ ಬೆಳ್ಳಿ. ನೀರಜ್ ಚೋಪ್ರಾ ಅವರೇ ನಿಮಗೆ ಹೃತ್ಪೂರ್ವಕ ಅಭಿನಂದನೆಗಳು. 140 ಕೋಟಿ ಭಾರತೀಯರು ನಿಮ್ಮ ಬಗ್ಗೆ ಹೆಮ್ಮೆ ಪಡುತ್ತಾರೆ. ಜೈ ಹಿಂದ್" ಎಂದು ಎಕ್ಸ್ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಮೊದಲ ಪ್ರಯತ್ನದಲ್ಲಿ ಫೌಲ್ ಥ್ರೋ ಎಸೆದ ನೀರಜ್ ಚೋಪ್ರಾ ಎರಡನೇ ಎಸೆತದಲ್ಲಿ ಅತ್ಯುತ್ತಮ ಪದರ್ಶನ ತೋರಿದರು. ಆದರೆ ಕೊನೆಯ ಮೂರು ಪ್ರಯತ್ನಗಳು ಫೌಲ್ ಆಗಿದ್ದವು. ಅರ್ಹತಾ ಸುತ್ತಿನಲ್ಲಿ 89.34 ಮೀಟರ್ ಎಸೆತದೊಂದಿಗೆ ಪ್ರಬಲ ಪ್ರದರ್ಶನ ನೀಡಿದರೂ, ನಾಲ್ಕು ಫೌಲ್ ಥ್ರೋಗಳು ಚಿನ್ನದಿಂದ ವಂಚಿತವಾಗುವಂತೆ ಮಾಡಿತು.