ETV Bharat / sports

ಫಿನಿಶರ್ ಪಾತ್ರಕ್ಕೆ ಸಿದ್ಧವಾಗಿರಲು ಆರ್‌ಸಿಬಿ ಮ್ಯಾನೇಜ್‌ಮೆಂಟ್ ನನಗೆ ಹೇಳಿತ್ತು: ಮಹಿಪಾಲ್ ಲೊಮ್ರೋರ್ - Mahipal Lomror - MAHIPAL LOMROR

ಇಂಪ್ಯಾಕ್ಟ್ ಆಟಗಾರನಾಗಿ ಕಣಕ್ಕಿಳಿದು ಪಂದ್ಯದ ಗತಿ ಬದಲಾಯಿಸಿದ ಆರ್​ಸಿಬಿಯ ಹೊಸ ಫಿನಿಶರ್​ ಮಹಿಪಾಲ್ ಲೊಮ್ರೋರ್ ತಮಗೆ ಮ್ಯಾನೇಜ್‌ಮೆಂಟ್ ಹೇಳಿದ್ದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಮಹಿಪಾಲ್ ಲೊಮ್ರೋರ್
ಮಹಿಪಾಲ್ ಲೊಮ್ರೋರ್
author img

By ETV Bharat Karnataka Team

Published : Mar 26, 2024, 3:20 PM IST

ಬೆಂಗಳೂರು : ಚೇಸಿಂಗ್ ವೇಳೆ ನನ್ನನ್ನು ಫಿನಿಶರ್ ಆಗಿ ಬಳಸಿಕೊಳ್ಳಲಾಗುವುದು ಪಂದ್ಯಕ್ಕೂ ಹಿಂದಿನ ದಿನ ರಾತ್ರಿ ಟೀಮ್ ಮ್ಯಾನೇಜ್‌ಮೆಂಟ್ ನನಗೆ ಹೇಳಿತ್ತು. ಹಾಗಾಗಿ ಅದಕ್ಕೆ ತಕ್ಕಂತೆ ನಾನು ತಯಾರಿ ಆರಂಭಿಸಿದ್ದೆ ಎಂದು ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿಯ ಇಂಪ್ಯಾಕ್ಟ್ ಆಟಗಾರನಾಗಿ ಕಣಕ್ಕಿಳಿದಿದ್ದ ಮಹಿಪಾಲ್ ಲೊಮ್ರೋರ್ ಬಹಿರಂಗಪಡಿಸಿದ್ದಾರೆ.

17ನೇ ಐಪಿಎಲ್ ಋತುವಿನಲ್ಲಿ ಸೋಮವಾರ ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಆರ್‌ಸಿಬಿಯ ಮೊದಲ ಹೋಮ್ ಗೇಮ್‌ನಲ್ಲಿ ದಿನೇಶ್ ಕಾರ್ತಿಕ್ ಜೊತೆಗೂಡಿ ಕೇವಲ 8 ಎಸೆತಗಳಲ್ಲಿ ಅಜೇಯ 17 ರನ್ ಗಳನ್ನು ಮಹಿಪಾಲ್ ಬಾರಿಸುವ ಮೂಲಕ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಪಂದ್ಯದ ಬಳಿಕ ಮಾತನಾಡಿದ ಮಹಿಪಾಲ್​, ಫಿನಿಶರ್​ ಪಾತ್ರಕ್ಕಾಗಿ ನಾನು ತಯಾರಿ ನಡೆಸಬೇಕೆಂದು ಟೀಮ್ ಮ್ಯಾನೇಜ್‌ಮೆಂಟ್ ಬಯಸಿತ್ತು. ಈ ಬಗ್ಗೆ ನನಗೆ ಮುಂಚಿತವಾಗಿಯೇ ತಿಳಿಸಲಾಗಿತ್ತು. ಯಾಕೆಂದರೆ ನಾವು ಉತ್ತಮ, ಬಲವಾದ ಬ್ಯಾಟಿಂಗ್ ಲೈನ್ ಅಪ್ ಹೊಂದಿದ್ದೇವೆ. ಹಾಗಾಗಿ ತಂಡವು ನನ್ನನ್ನು ಬಳಸಬಹುದಾದ ಕ್ರಮಾಂಕ ಇದಾಗಿದೆ. ಮೊದಲ ದಿನದಿಂದಲೇ ಅದರ ಬಗ್ಗೆ ಮ್ಯಾನೇಜ್‌ಮೆಂಟ್ ಸ್ಪಷ್ಟವಾಗಿದೆ. ನಾನು ಕೂಡ ಅದಕ್ಕಾಗಿ ತಯಾರಿ ನಡೆಸುತ್ತಿದ್ದೇನೆ ಎಂದು ಅವರು ಹೇಳಿದರು.

ಇಂಪ್ಯಾಕ್ಟ್ ಪ್ಲೇಯರ್ ಆಗಿ ತನ್ನ ಪಾತ್ರದ ಬಗ್ಗೆ ಮತ್ತಷ್ಟು ಮಾತನಾಡುತ್ತಾ, ''ಇಂಪ್ಯಾಕ್ಟ್ ಪ್ಲೇಯರ್ ನಿಯಮ ಇರುವುದರಿಂದ ನಮಗೆ ಯಾವುದೇ ಸಮಯದಲ್ಲಿ ಕರೆ ಬರಬಹುದು. ನಾವು ಸಿದ್ಧರಿರಬೇಕಾಗುತ್ತದೆ. ಆಟದ ಮೇಲೆ ಪ್ರಭಾವ ಬೀರಬೇಕು. ಪಂದ್ಯಕ್ಕೂ ಹಿಂದಿನ ರಾತ್ರಿ ಈ ಬಗ್ಗೆ ಮ್ಯಾನೇಜ್‌ಮೆಂಟ್ 'ನಾವು ಚೇಸ್ ಮಾಡಬೇಕಾದಲ್ಲಿ ನಿನ್ನನ್ನ ಕೆಳಕ್ರಮಾಂಕದಲ್ಲಿ ಬಳಸಿಕೊಳ್ಳಬಹುದು, ಸಿದ್ಧವಾಗಿರು' ಎಂದು ಸೂಚಿಸಿತ್ತು. ಹಾಗಾಗಿ ಮಾನಸಿಕವಾಗಿ ನಾನು ಸಿದ್ಧನಾಗಿದ್ದೆ ಮತ್ತು ಆ ಪಾತ್ರ ನಿರ್ವಹಿಸಿದೆ'' ಎಂದು ಲೋಮ್ರೋರ್ ತಿಳಿಸಿದರು.

ಕಳೆದ ಕೆಲವು ವರ್ಷಗಳಲ್ಲಿ ನಾನು ನಿರ್ವಹಿಸಿದ ಪಾತ್ರವು ನನಗೆ ಬ್ಯಾಟ್ ಮಾಡಲು ಹೆಚ್ಚಿನ ಎಸೆತಗಳನ್ನು ನೀಡುತ್ತಿತ್ತು. ಆದರೆ, ಈಗ ಇಂಪ್ಯಾಕ್ಟ್ ಆಟಗಾರನಾಗಿ ಅಥವಾ ಕೆಳ ಕ್ರಮಾಂಕದಲ್ಲಿ ಆಡುವಾಗ ಹೆಚ್ಚಿನ ಎಸೆತಗಳು ಸಿಗುವುದಿಲ್ಲ. ಆದ್ದರಿಂದ ನನ್ನ ಸಿದ್ಧತೆಗಳು ಎಷ್ಟರಮಟ್ಟಿಗೆ ಎಂದರೆ ನಾನು ನೆಟ್ಸ್‌ಗೆ ಹೋದಾಗ ಅಥವಾ ತರಬೇತಿ ಪಡೆಯುವಾಗ ಮೊದಲ ಎಸೆತದಿಂದಲೇ ಬೌಂಡರಿ ಬಾರಿಸಲು ಪ್ರಯತ್ನಿಸುತ್ತಿದ್ದೇನೆ ಎಂದಿದ್ದಾರೆ.

ಪಂಜಾಬ್ ವಿರುದ್ಧ 177 ರನ್‌ಗಳ ಗುರಿ ಬೆನ್ನಟ್ಟಿದ ಬೆಂಗಳೂರು ತಂಡ 17ನೇ ಓವರ್‌ನಲ್ಲಿ 6 ವಿಕೆಟ್‌ಗೆ 130 ರನ್‌ಗಳಿದ್ದಾಗ, ಮಹಿಪಾಲ್ ತಮ್ಮ ಮೊದಲ ಎಸೆತವನ್ನು ಫ್ಲಿಕ್ ಮೂಲಕ ಬೌಂಡರಿಗಟ್ಟಿದ್ದರು. ಅರ್ಷದೀಪ್ ಸಿಂಗ್ ಅವರ ಮುಂದಿನ ಓವರ್‌ನಲ್ಲಿ ಓವರ್ ಲಾಂಗ್ - ಆನ್‌ಗೆ
ಬೃಹತ್ ಸಿಕ್ಸ್ ಬಾರಿಸಿ ಉಪಯುಕ್ತ ಕೊಡುಗೆ ನೀಡಿದರು. ಕಾರ್ತಿಕ್ ಮತ್ತು ಮಹಿಪಾಲ್ ಜೋಡಿ ಕೇವಲ 18 ಎಸೆತಗಳಲ್ಲಿ 48 ರನ್ ಸೇರಿಸುವ ಮೂಲಕ ಆರ್‌ಸಿಬಿ 4 ಎಸೆತಗಳು ಬಾಕಿ ಇರುವಂತೆಯೇ ಗುರಿ ತಲುಪಿತು.

ದಿನೇಶ್ ಕಾರ್ತಿಕ್ ಅವರೊಂದಿಗಿನ ಜೊತೆಯಾಟದ ಕುರಿತು ''ಅವರೊಂದಿಗೆ ಬ್ಯಾಟಿಂಗ್ ಮಾಡುವುದನ್ನ ನಿಜವಾಗಿಯೂ ಸುಲಭಗೊಳಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಯಾಕೆಂದರೆ ಅವರು ಐಪಿಎಲ್‌ನಲ್ಲಿ 15-17 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಸುದೀರ್ಘ ಅವಧಿಯಿಂದ ತಮ್ಮ ಯೋಜನೆಗಳನ್ನು ಉತ್ತಮವಾಗಿ ಕಾರ್ಯಗತಗೊಳಿಸಿದ್ದಾರೆ. ನಿನ್ನೆಯ ಪಂದ್ಯದಲ್ಲಿ ಜೊತೆಯಾಟದ ನಡುವೆ ನನಗೆ ತಾಳ್ಮೆ ಕಳೆದುಕೊಳ್ಳದಂತೆ, ಶಾಂತವಾಗಿರಲು ಮತ್ತು ಮುಂದಿನ ಚೆಂಡಿನ ಮೇಲೆ ಕೇಂದ್ರೀಕರಿಸಲು'' ಹೇಳುತ್ತಿದ್ದರು. ಇಂತಹ ಸಣ್ಣ ಸಣ್ಣ ಮಾತುಕತೆಗಳು ಯಾವಾಗಲೂ ಸಹಾಯ ಮಾಡುತ್ತದೆ ಎಂದು ಮಹಿಪಾಲ್ ತಿಳಿಸಿದರು.

ಮುಂದಿನ ಪಂದ್ಯ : ಮಾರ್ಚ್ 29 ರಂದು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ತನ್ನ ಮುಂದಿನ‌ ಪಂದ್ಯದಲ್ಲಿ ಆರ್‌ಸಿಬಿ ತಂಡ ಕೆಕೆಆರ್ ಅನ್ನು ಎದುರಿಸಲಿದೆ.

ಇದನ್ನೂ ಓದಿ : ಕಿಂಗ್ಸ್​ ಮಣಿಸಿದ 'ಕಿಂಗ್'​: ಕೊಹ್ಲಿ ಅಬ್ಬರಕ್ಕೆ ಶರಣಾದ ಪಂಜಾಬ್, ಗೆಲುವಿನ ಖಾತೆ ತೆರೆದ ಆರ್​ಸಿಬಿ - RCB Victory

ETV Bharat Logo

Copyright © 2025 Ushodaya Enterprises Pvt. Ltd., All Rights Reserved.