ETV Bharat / sports

ವಿಶ್ವದ 4ನೇ ಶ್ರೇಯಾಂಕದ ಶಟ್ಲರ್​ ಮಣಿಸಿದ ಭಾರತದ ಲಕ್ಷ್ಯ ಸೇನ್​: ಪ್ರೀ ಕ್ವಾರ್ಟ್​ರ್​ ಫೈನಲ್​ಗೆ ಲಗ್ಗೆ - Paris olympics 2024 - PARIS OLYMPICS 2024

ಭಾರತದ ಲಕ್ಷ್ಯ ಸೇನ್ ಒಲಿಂಪಿಕ್ಸ್​ ಬ್ಯಾಡ್ಮಿಂಟನ್​ ಪಂದ್ಯದಲ್ಲಿ ಇಂಡೋನೇಷ್ಯಾ ವಿರುದ್ಧ ಗೆಲುವು ಸಾಧಿಸಿ ಕ್ವಾರ್ಟರ್​ ಫೈನಲ್​ಗೆ ಲಗ್ಗೆ ಇಟ್ಟಿದ್ದಾರೆ.

ಲಕ್ಷ್ಯ ಸೇನ್
ಲಕ್ಷ್ಯ ಸೇನ್ (AFP)
author img

By ETV Bharat Sports Team

Published : Jul 31, 2024, 3:29 PM IST

Updated : Jul 31, 2024, 5:34 PM IST

ಪ್ಯಾರಿಸ್​ (ಫ್ರಾನ್ಸ್​): ಭಾರತದ ಸ್ಟಾರ್​ ಶಟ್ಲರ್​​ ಲಕ್ಷ್ಯ ಸೇನ್​ ಇಂಡೋನೇಷ್ಯಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ. ಇದರೊಂದಿಗೆ ಪ್ರೀ ಕ್ವಾರ್ಟರ್​ ಫೈನಲ್​ಗೂ ಅರ್ಹತೆ ಪಡೆದಿದ್ದಾರೆ.

ಬುಧವಾರ ನಡೆದ ಪ್ಯಾರಿಸ್​ ಒಲಿಂಪಿಕ್ಸ್​ನ ಪುರುಷರ ಸಿಂಗಲ್ಸ್​ ಬ್ಯಾಡ್ಮಿಂಟನ್​ ಪಂದ್ಯದಲ್ಲಿ ವಿಶ್ವದ 4ನೇ ಶ್ರೇಯಾಂಕದ ಜೊನಾಟನ್​ ಕ್ರಿಸ್ಟಿ ವಿರುದ್ಧ ನೇರ ಸೆಟ್​ಗಳಿಂದ ಗೆಲುವು ಸಾಧಿಸಿದರು. 51 ನಿಮಿಷಗಳ ಕಾಲ ನಡೆದ ಈ ಪಂದ್ಯದಲ್ಲಿ ಲಕ್ಷ್ಯ ಮತ್ತು ಕ್ರಿಸ್ಟಿ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಆದರೂ, ಭಾರತದ ಶಟ್ಲರ್​ ಎದುರಾಳಿ ಮೇಲೆ ಮುನ್ನಡೆ ಸಾಧಿಸುತ್ತಲೇ ಸಾಗಿದರು. ಮೊದಲ ಸುತ್ತಿನಲ್ಲಿ ಬಲಿಷ್ಠ ಶಟ್ಲರ್​ ಅನ್ನು 21-18 ಅಂತರದಿಂದ ಬಗ್ಗು ಬಡಿದು ಗೆಲುವು ಸಾಧಿಸಿದರು. ಈ ಸೆಟ್​ ಗೆಲ್ಲಲು ಲಕ್ಷ್ಯ ಸೇನ್​ 28 ನಿಮಿಷಗಳನ್ನು ತೆಗೆದುಕೊಂಡರು. ಎರಡನೇ ಸುತ್ತಿನಲ್ಲೂ ಅದೇ ಆಟವನ್ನು ಮುಂದುವರೆಸಿದ ಲಕ್ಷ್ಯ, 21-12 ಅಂತದರಿಂದ 23 ನಿಮಿಷಗಳಲ್ಲಿ ಕ್ರಿಸ್ಟಿಯನ್ನು ಸೋಲಿಸಿ ಗೆಲುವು ತಮ್ಮದಾಗಿಸಿಕೊಂಡರು.

ಚೊಚ್ಚಲ ಒಲಿಪಿಂಕ್ಸ್​ ಆಡುತ್ತಿರುವ ಲಕ್ಷ್ಯ ಸೇನ್​ ಅವರ ಮೊದಲ ಪಂದ್ಯ ಡ್ರಾನಲ್ಲಿ ಕೊನೆಗೊಂಡಿತ್ತು. ಪ್ರತಿಸ್ಪರ್ಧಿ ಕೆವಿನ್ ಕಾರ್ಡೆನ್ ಎಡ ಮೊಣಕೈ ಗಾಯದಿಂದ ಆಟದಿಂದ ಹೊರಬಿದ್ದ ಕಾರಣ ಪಂದ್ಯವನ್ನು ಡ್ರಾನಲ್ಲಿ ಮುಕ್ತಾಯ ಗೊಳಿಸಲಾಯಿತು.

ಇದಾದ ಬಳಿಕ ಪುರುಷರ ಎಲ್​ ಗುಂಪಿನ ಪಂದ್ಯದಲ್ಲಿ ಬೆಲ್ಜಿಯಂನ ಜೂಲಿಯನ್​ ಕ್ಯಾರೇಜ್​ ಅವರನ್ನು 2-0 ಅಂತರದಿಂದ ಮಣಿಸಿದ್ದರು. ಇದರಲ್ಲಿ ಭಾರತದ ವಿಶ್ವದ 18ನೇ ಶ್ರೇಯಾಂಕದ ಆಟಗಾರ ಲಕ್ಷ್ಯ ಸೇನ್ ಅವರು 43 ನಿಮಿಷಗಳಲ್ಲಿ 21-19, 21-14 ಅಂತರದ ನೇರ ಸೆಟ್​ಗಳಿಂದ ವಿಶ್ವದ 52 ನೇ ಶ್ರೇಯಾಂಕಿತ ಕ್ಯಾರೇಜ್​ ಅವರನ್ನು ಸೋಲಿಸಿದ್ದರು. ಸದ್ಯ ಲಕ್ಷ್ಯ ಸೇನ್​ ವಿಶ್ವ ರ್‍ಯಾಂಕಿಂಗ್​​ನಲ್ಲಿ 22ನೇ ಸ್ಥಾನದಲ್ಲಿದ್ದಾರೆ.

ಇದಕ್ಕೂ ಮೊದಲು ನಡೆದ ಮಹಿಳೆಯರ ವೈಯಕ್ತಿಕ ಪೂಲ್​ ಎಂ ಬ್ಯಾಡ್ಮಿಂಟನ್​ ಪಂದ್ಯದಲ್ಲಿ ಪಿ.ವಿ ಸಿಂಧು ಎರಡನೇ ಗೆಲುವು ಸಾಧಿಸಿದ್ದಾರೆ. ಇಸ್ಟೋನಿಯಾ ವಿರುದ್ಧದ ಪಂದ್ಯದಲ್ಲಿ ಕ್ರಿಸ್ಟಿನ್ ಕುಬಾ ಅವರನ್ನು ನೇರ ಸೆಟ್​ಗಳಿಂದ ಮಣಿಸಿದ ಸಿಂಧು 16ನೇ ಸುತ್ತಿಗೆ ಅರ್ಹತೆ ಪಡೆದಿದ್ದಾರೆ. ಪಂದ್ಯದಲ್ಲಿ ಮೊದಲ ಸೆಟ್ ಅನ್ನು 21-5 ಅಂತರದಿಂದ ಗೆದ್ದುಕೊಂಡ ಸಿಂಧು, ನಂತರ ಎರಡನೇ ಸುತ್ತಿನ್ನು 21-10 ಅಂತರದಿಂದ ಗೆದ್ದುಕೊಂಡರು. ಇದರೊಂದಿಗೆ ಪ್ಯಾರಿಸ್ ಒಲಿಂಪಿಕ್​​ನಲ್ಲಿ ಸತತ ಎರಡನೇ ಗೆಲುವು ಸಾಧಿಸಿದರು.

ಇದನ್ನೂ ಓದಿ: ಬ್ಯಾಡ್ಮಿಂಟನ್​: ಪಿ.ವಿ ಸಿಂಧುಗೆ ಮತ್ತೊಂದು ಗೆಲುವು; ಪ್ರೀ ಕ್ವಾಲಿಫೈಯರ್​ಗೆ ಎಂಟ್ರಿ - Paris olympics 2024

Last Updated : Jul 31, 2024, 5:34 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.