ನವದೆಹಲಿ: ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಮ್ಯಾಚ್ ಸೆಪ್ಟೆಂಬರ್ 19 ರಿಂದ 23 ರಂದು ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ. ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ರಿಷಬ್ ಪಂತ್ ಅವರಂತಹ 'ಬಿಗ್ಮ್ಯಾಚರ್'ಗಳು ತಂಡಕ್ಕೆ ವಾಪಸ್ ಆಗಿದ್ದು, ಕಿರಿಯ ಆಟಗಾರರು ಸ್ಥಾನ ತೆರವು ಮಾಡಬೇಕಾಗಿದೆ.
Kris Srikkanth " feel bad for sarfaraz khan.but,this happens,you are doing well but when a big player returns,you have to lose your place.kl rahul is coming,they are keeping the australia series in mind.rahul has performed well overseas & done well in aus"pic.twitter.com/Y5jAqbqJnY
— Sujeet Suman (@sujeetsuman1991) September 10, 2024
ಮೊದಲ ಪಂದ್ಯಕ್ಕೆ ಇನ್ನೂ 7 ದಿನ ಬಾಕಿ ಉಳಿದಿದೆ. ಟೆಸ್ಟ್ ಋತುವಿನ ಮೊದಲ ಸರಣಿಯಲ್ಲಿ ಪ್ಲೇಯಿಂಗ್ 11 ಬಗ್ಗೆ ಚರ್ಚೆಗಳು ನಡೆದಿದ್ದು, ಭಾರತದ ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್ ಅವರು ತಂಡದಲ್ಲಿ ಆಡುವ ಹನ್ನೊಂದು ಜನರನ್ನು ಪಟ್ಟಿ ಮಾಡಿದ್ದಾರೆ. ಅದರಲ್ಲಿ ಭರವಸೆಯ ಆಟಗಾರರಾದ ಸರ್ಫರಾಜ್ ಖಾನ್ ಮತ್ತು ಧ್ರುವ್ ಜುರೆಲ್ ಅವರನ್ನು ಕೈಬಿಡಲಾಗಿದೆ. ಇದಕ್ಕೆ ಅವರು ಕಾರಣಗಳನ್ನೂ ನೀಡಿದ್ದಾರೆ.
ಖಾನ್, ಜುರೆಲ್ಗಿಲ್ಲ ಅವಕಾಶ: ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಕೃಷ್ಣಮಾಚಾರಿ ಶ್ರೀಕಾಂತ್ ಅವರು, ಸರ್ಫರಾಜ್ ಖಾನ್ ಮತ್ತು ಧ್ರುವ್ ಜುರೆಲ್ ಮೊದಲ ಟೆಸ್ಟ್ನಲ್ಲಿ ಆಡುವುದು ಅನುಮಾನವಿದೆ. ಕ್ಲಾಸಿಕ್ ಆಟಗಾರ ಕೆಎಲ್ ರಾಹುಲ್ ಪುನರಾಗಮನ ಪಡೆದಿದ್ದಾರೆ. ಅವರಿಗಾಗಿ ಸರ್ಫರಾಜ್ ಖಾನ್ ಸ್ಥಾನ ಬಿಟ್ಟುಕೊಡಬೇಕಾಗಿದೆ. ಇನ್ನೊಂದೆಡೆ ಜುರೆಲ್ ಜಾಗಕ್ಕೆ ಬಿಗ್ ಹಿಟ್ಟರ್ ರಿಷಭ್ ಪಂತ್ ಬರಲಿದ್ದಾರೆ. ಹೀಗಾಗಿ ಇಬ್ಬರು ಯುವ ಆಟಗಾರರಿಗೆ ತಂಡದಲ್ಲಿ ಸ್ಥಾನ ಸಿಗುವುದು ಕಷ್ಟ ಎಂದು ಹೇಳಿದ್ದಾರೆ.
"ಇದು ಕ್ರಿಕೆಟ್ನಲ್ಲಿ ಸಾಮಾನ್ಯ. ಯಾವುದೇ ಕಿರಿಯ ಆಟಗಾರ ಉತ್ತಮವಾಗಿ ಲಯದಲ್ಲಿದ್ದರೂ ಹಿರಿಯರಿಗಾಗಿ ಸ್ಥಾನ ಬಿಟ್ಟುಕೊಡಬೇಕು. ಕೆಲವೊಮ್ಮೆ ಇದು ಅತಿರೇಕ ಎನ್ನಿಸಿದರೂ, ಅನಿವಾರ್ಯ. ಇಂತಹ ಸಂದಿಗ್ಧತೆ ಬಾಂಗ್ಲಾ ವಿರುದ್ಧದ ಸರಣಿಯಲ್ಲಿ ಸರ್ಫರಾಜ್ ಖಾನ್ ಮತ್ತು ಧ್ರುವ್ ಜುರೆಲ್ ಅವರಿಗೆ ಬಂದಿದೆ ಎಂದು ಹೇಳಿದ್ದಾರೆ.
ಗಾಯಗೊಂಡಿದ್ದ ಕೆಎಲ್ ರಾಹುಲ್ ಫಿಟ್ ಆಗಿ ತಂಡಕ್ಕೆ ಮರಳಿದ್ದಾರೆ. ಕಾರು ದುರಂತದಲ್ಲಿ ಬದುಕುಳಿದು ಬಂದಿರುವ ರಿಷಭ್ ಪಂತ್ ಮತ್ತೆ ಕ್ರಿಕೆಟ್ ಅಂಗಳದಲ್ಲಿ ಮಿಂಚುತ್ತಿರುವುದು ಸಣ್ಣ ಸಾಧನೆಯಲ್ಲ. ಇಬ್ಬರೂ ಪುನರಾಗಮನದ ಸರಣಿಯಲ್ಲಿ ಮಿಂಚಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು.
ಭಾರತ ತಂಡ ಹೀಗಿದೆ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಸರ್ಫರಾಜ್ ಖಾನ್, ರಿಷಬ್ ಪಂತ್ (ವಿಕೆಟ್ ಕೀಪರ್), ಧ್ರುವ ಜುರೆಲ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಜಸ್ಪ್ರೀತ್ ಬುಮ್ರಾ, ಯಶ್ ದಯಾಳ್, ಕುಲದೀಪ್ ಯಾದವ್.
ಇದನ್ನೂ ಓದಿ: ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ಗೆ ಭಾರತ ತಂಡ ಪ್ರಕಟ; ಹೊಸ ಮುಖಗಳಿಗೆ ಅವಕಾಶ - BCCI Announced Indian Squad