ETV Bharat / sports

ಐಪಿಎಲ್​ ಫೈನಲ್​ಗೆ ಲಗ್ಗೆ ಇಟ್ಟ ಕೆಕೆಆರ್​: ಸೋತರೂ ಹೈದರಾಬಾದ್​ಗೆ ಇದೆ ಇನ್ನೊಂದು ಚಾನ್ಸ್​ - KKR vs SRH match - KKR VS SRH MATCH

ಸನ್​ರೈಸರ್ಸ್​ ಹೈದರಾಬಾದ್ ಸೋಲಿಸಿ ಫೈನಲ್​ಗೆ ಮೊದಲ ತಂಡವಾಗಿ ಲಗ್ಗೆ ಇಟ್ಟ ಕೋಲ್ಕತ್ತಾ ನೈಟ್​ ರೈಡರ್ಸ್​.

​ಗೆ ಮೊದಲ ತಂಡವಾಗಿ ಲಗ್ಗೆ ಇಟ್ಟ ಕೋಲ್ಕತ್ತಾ ನೈಟ್​ ರೈಡರ್ಸ್​
​ಗೆ ಮೊದಲ ತಂಡವಾಗಿ ಲಗ್ಗೆ ಇಟ್ಟ ಕೋಲ್ಕತ್ತಾ ನೈಟ್​ ರೈಡರ್ಸ್​ (ETV Bharat)
author img

By ETV Bharat Karnataka Team

Published : May 21, 2024, 10:54 PM IST

Updated : May 21, 2024, 11:04 PM IST

ಅಹಮದಾಬಾದ್: ಟೂರ್ನಿಯ ಬಲಿಷ್ಠ ತಂಡವಾಗಿರುವ ಕೋಲ್ಕತ್ತಾ ನೈಟ್​ ರೈಡರ್ಸ್​, ನಿರೀಕ್ಷೆಯಂತೆ ಫೈನಲ್​ ತಲುಪಿದೆ. ಮೊದಲ ಕ್ವಾಲಿಫೈಯರ್​ನಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ತಂಡವನ್ನು 8 ವಿಕೆಟ್​ಗಳಿಂದ ಸೋಲಿಸುವ ಮೂಲಕ ಪ್ರಶಸ್ತಿ ಸುತ್ತು ಪ್ರವೇಶಿಸಿದೆ.

ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿರುವ ಕೆಕೆಆರ್​, ಮೊದಲ ಕ್ವಾಲಿಫೈಯರ್​ನಲ್ಲೂ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಆಟವಾಡಿತು. ಹೈದರಾಬಾದ್​ ನೀಡಿದ್ದ 159 ರನ್​ಗಳ ಸಾಧಾರಣ ಗುರಿಯನ್ನು ಶ್ರೇಯಸ್​ ಅಯ್ಯರ್​ ಪಡೆ 13.4 ಓವರ್​ಗಳಲ್ಲಿ 164 ಮುಟ್ಟಿ ಫೈನಲ್​ ಟಿಕೆಟ್​ ಖಾತ್ರಿ ಪಡಿಸಿಕೊಂಡಿತು.

ವೆಂಕಟೇಶ್​ ಅಯ್ಯರ್​ ಮತ್ತು ನಾಯಕ ಶ್ರೇಯಸ್​ ಅಯ್ಯರ್​ ಭರ್ಜರಿ ಬ್ಯಾಟಿಂಗ್​ ಮುಂದೆ ಹೈದರಾಬಾದ್​ ಬೌಲಿಂಗ್​ ಪಡೆ ಧೂಳೀಪಟವಾಯಿತು. ವೆಂಕಟೇಶ್​ 28 ಎಸೆತಗಳಲ್ಲಿ 51, ಶ್ರೇಯಸ್​ 24 ಎಸೆತಗಳಲ್ಲಿ 58 ರನ್​ ಗಳಿಸಿ ಔಟಾಗದೇ ಉಳಿದರು. ಆರಂಭಿಕರಾದ ರಹಮಾನುಲ್ಲಾ ಗುರ್ಬಾಜ್​ 23, ಸುನಿಲ್​ ನರೈನ್​ 21 ರನ್​ ಮಾಡಿದರು.

ಸನ್​ಗಿದೆ ಮತ್ತೊಂದು ಚಾನ್ಸ್​: ಮೊದಲ ಕ್ವಾಲಿಫೈಯರ್​ನಲ್ಲಿ ಸೋತರೂ ಸನ್​ರೈಸರ್ಸ್​ ಹೈದರಾಬಾದ್​ಗೆ ಇನ್ನೊಂದು ಅವಕಾಶವಿದೆ. ಎರಡನೇ ಕ್ವಾಲಿಫೈಯರ್​ನಲ್ಲಿ ಎಲಿಮಿನೇಟರ್​ ಪಂದ್ಯದಲ್ಲಿ ಗೆದ್ದ ತಂಡದ ಆಡಲಿದೆ. ಅಲ್ಲಿ ಗೆದ್ದವರು ನೇರವಾಗಿ ಫೈನಲ್​ಗೆ ಪ್ರ್ರವೇಶಿಸಲಿದ್ದಾರೆ.

ಇದನ್ನೂ ಓದಿ: 'ದೇವರ ಪ್ಲಾನ್ ಬೇಬಿ'​: ಯಶ್​ ದಯಾಳ್ ಅದ್ಭುತ ಬೌಲಿಂಗ್​ಗೆ ರಿಂಕು ಸಿಂಗ್ ಸೆಲ್ಯೂಟ್​ - Rinku Singh Post on Yash Dayal

Last Updated : May 21, 2024, 11:04 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.