ETV Bharat / sports

ಕೆಕೆಆರ್​ ವಿರುದ್ಧ ಆರ್​ಸಿಬಿಗೆ 1 ರನ್​ ವಿರೋಚಿತ ಸೋಲು: 7ನೇ ಪರಾಜಯ, ಮುಚ್ಚಿದ ಪ್ಲೇಆಫ್​ ಹಾದಿ - IPL 2024

author img

By ETV Bharat Karnataka Team

Published : Apr 21, 2024, 8:00 PM IST

Updated : Apr 21, 2024, 8:12 PM IST

ಕೋಲ್ಕತ್ತಾ ನೈಟ್​ ರೈಡರ್ಸ್​ ವಿರುದ್ಧದ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು 1 ರನ್ನಿಂದ ವಿರೋಚಿತ ಸೋಲು ಕಂಡಿದೆ.

ಕೆಕೆಆರ್​ ವಿರುದ್ಧ ಆರ್​ಸಿಬಿಗೆ 1 ರನ್​ ವೀರೋಚಿತ ಸೋಲು

ಕೋಲ್ಕತ್ತಾ: ಐಪಿಎಲ್​ನಲ್ಲಿ ಮತ್ತೊಂದು ರೋಚಕ ಪಂದ್ಯ ಅಭಿಮಾನಿಗಳನ್ನು ರಂಜಿಸಿತು. ರಾಯಲ್​ ಚಾಲೆಂಜರ್ಸ್​ ಬೆಂಗಳೂರು ವಿರುದ್ಧ ಕೋಲ್ಕತ್ತಾ ನೈಟ್​ ರೈಡರ್ಸ್​ 1 ರನ್ನಿಂದ ಗೆಲುವು ಕಂಡರೆ, ಇನ್ನೇನು ಗೆದ್ದೆವು ಅಂದುಕೊಂಡಿದ್ದ ಆರ್​ಸಿಬಿ ಭಾರೀ ನಿರಾಸೆ ಅನುಭವಿಸಿ ಸತತ 6ನೇ ಸೋಲು ಕಂಡು ಪ್ಲೇ ಆಫ್​ನಿಂದ ಹೊರಬಿತ್ತು.

ಮೊದಲು ಬ್ಯಾಟ್​ ಮಾಡಿದ ಕೆಕೆಆರ್​ 6 ವಿಕೆಟ್​ಗೆ 222 ರನ್​ ದಾಖಲಿಸಿತು. ಈ ಗುರಿ ಬೆನ್ನತ್ತಿದ ಆರ್​ಸಿಬಿ ರಜತ್​ ಪಾಟೀದಾರ್​, ವಿಲ್​ ಜಾಕ್ಸ್​ ಹೋರಾಟದ ನಡುವೆಯೂ ವೀರೋಚಿತ ಸೋಲು ಕಂಡಿತು. ಆಡಿದ 8 ಪಂದ್ಯಗಳಲ್ಲಿ 7 ರಲ್ಲಿ ಸೋಲು ಕಂಡಿತು.

ಆರ್​ಸಿಬಿಯ ನಸೀಬು ಸರಿ ಇಲ್ಲ. ತಂಡದಲ್ಲಿ ತಾಳ ಮೇಳವಿಲ್ಲದ ಬ್ಯಾಟಿಂಗ್​ ಮತ್ತು ಬೌಲಿಂಗ್​. ಇತ್ತ ಗೆಲುವಿನ ಅಂಚಿಗೆ ಬಂದು ಸೋಲುವುದು ತಂಡಕ್ಕೆ ಖಯಾಲಿಯಾಗಿದೆ. ಕೆಕೆಆರ್​ ವಿರುದ್ಧವೂ ತುತ್ತತುದಿಗೆ ಬಂದು ಪಾತಾಳಕ್ಕೆ ಕುಸಿಯಿತು.

ಕೊನೆಯ ಓವರ್​ನಲ್ಲಿ ಕರಣ್​ ಕಮಾಲ್​: ಗೆಲ್ಲಲು ಕೊನೆಯ ಓವರ್​ನಲ್ಲಿ 21 ರನ್​ ಬೇಕಿತ್ತು. ಅಷ್ಟೊತ್ತಿಗಾಗಲೇ ಎಲ್ಲ ಬ್ಯಾಟರ್​ಗಳು ಪೆವಿಲಿಯನ್​ನಲ್ಲಿ ವಿರಮಿಸುತ್ತಿದ್ದರು. ಕ್ರೀಸ್​ನಲ್ಲಿ ಇದ್ದಿದ್ದು, ಸ್ಪಿನ್ನರ್​ ಕರಣ್​ ಶರ್ಮಾ, ಮೊಹಮದ್​ ಸಿರಾಜ್​. ಗೆಲ್ಲುವ ಭರವಸೆ ಆ ಕ್ಷಣಕ್ಕೆ ಇರಲಿಲ್ಲ. ಮಾರಕ ವೇಗಿ ಮಿಚೆಲ್​ ಸ್ಟಾರ್ಕ್​ ಎಸೆದ ಓವರ್​ನಲ್ಲಿ ಅಚ್ಚರಿ ಎಂಬಂತೆ ಮೊದಲ ಎಸೆತದಲ್ಲೇ ಸಿಕ್ಸರ್​ ಬಾರಿಸಿದರು. 2ನೇ ಬೌಲ್​ನಲ್ಲಿ ರನ್​ ಬರಲಿಲ್ಲ. ಮೂರು ಮತ್ತು ನಾಲ್ಕನೇ ಎಸೆತದಲ್ಲಿ ಮತ್ತೆ ಸಿಕ್ಸರ್​ ಬಾರಿಸಿದರು. ಅಲ್ಲಿಗೆ 2 ಎಸೆತದಲ್ಲಿ 3 ರನ್​ ಮಾತ್ರ ಬೇಕಿತ್ತು. ದುರಾದೃಷ್ಟವಶಾತ್​ ಸ್ಟ್ರೇಟ್​ಡ್ರೈವ್​ ಮಾಡುವಾಗ ಮಿಚೆಲ್​ ಕ್ಯಾಚ್​ ಹಿಡಿದು ಪಂದ್ಯವನ್ನು ಮತ್ತಷ್ಟು ರೋಚಕಗೊಳಿಸಿದರು.

ಕೊನೆಯ ಎಸೆತದಲ್ಲಿ 3 ರನ್​ ಬೇಕಿದ್ದಾಗ ಲೂಕಿ ಫರ್ಗ್ಯುಸನ್​ ರನ್​ ವೇಳೆ ವಿಕೆಟ್​ ಕೀಪರ್​ ಸಾಲ್ಟ್​ರ ಚಾಣಾಕ್ಷತನಕ್ಕೆ ಬಲಿಯಾದರು. ಇದರಿಂದ 1 ರನ್​ ಸೋಲು ಎದುರಿಸಬೇಕಾಯಿತು. ಈ ಮೂಲಕ ಐಪಿಎಲ್​ನಲ್ಲಿ ಮೊದಲ ಬಾರಿಗೆ ಆರ್​ಸಿಬಿ 1 ರನ್​ ಸೋಲು ಕಂಡಿತು.

ಇದಕ್ಕೂ ಮೊದಲು ವಿಲ್​ ಜಾಕ್ಸ್​ ಮತ್ತು ರಜತ್​ ಪಾಟೀದಾರ್​ ಭರ್ಜರಿ ಅರ್ಧಶತಕ ಬಾರಿಸಿದರು. ಜಾಕ್ಸ್​ 32 ಎಸೆತದಲ್ಲಿ 55, ಪಾಟೀದಾರ್​ 23 ಎಸೆತದಲ್ಲಿ 52 ರಮ್​​ ಚಚ್ಚಿದರು. ಸುಯಾಸ್​ ಪ್ರಭುದೇಸಾಯಿ, 24, ದಿನೇಶ್​ ಕಾರ್ತಿಕ್​ 25, ಕರಣ್​ ಶರ್ಮಾ 20 ರನ್​ ಗಳಿಸಿದರು. ಆ್ಯಂಡ್ರೆ ರಸೆಲ್​ 3, ಸುನಿಲ್​ ನರೈನ್​, ಹರ್ಷಿತ್​ರಾಣಾ ತಲಾ 2 ವಿಕೆಟ್ ಪಡೆದು ಆರ್​ಸಿಬಿಯನ್ನು ಕಾಡಿದರು.

ಕೆಕೆಆರ್​ ಇನಿಂಗ್ಸ್​: ಐಪಿಎಲ್​ನಲ್ಲಿ ಅತಿ ಕಳೆ ಬೌಲಿಂಗ್​ ಪಡೆಯನ್ನು ಹೊಂದಿರುವ ಆರ್​ಸಿಬಿ, ಕೆಕೆಆರ್​ ವಿರುದ್ಧ ಮತ್ತೆ ಹಿನ್ನಡೆ ಅನುಭವಿಸಿತು. ಫಿಲಿಪ್​ ಸಾಲ್ಟ್​ರ ಸ್ಫೋಟಕ ಬ್ಯಾಟಿಂಗ್​, ನಾಯಕ ಶ್ರೇಯಸ್​ ಅಯ್ಯರ್​ರ ಅಮೂಲ್ಯ ಅರ್ಧಶತಕದ ಬಲದಿಂದ ಕೆಕೆಆರ್​ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ಗೆ 222 ರನ್​ ಗಳಿಸಿತು.

ಕೆಕೆಆರ್​ ತಂಡದ ತವರಾದ ಈಡನ್​​ ಗಾರ್ಡನ್ಸ್​ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ವಿಕೆಟ್ ಕೀಪರ್​ ಸಾಲ್ಟ್​ ಅಬ್ಬರಿಸಿದರು. ಮೊದಲ ಪವರ್​ಪ್ಲೇಯನ್ನು ಬಳಸಿಕೊಂಡ ಬ್ಯಾಟರ್​ 3 ಸಿಕ್ಸರ್​, 7 ಬೌಂಡರಿ ಸಮೇತ 14 ಎಸೆತಗಳಲ್ಲಿ 48 ರನ್​ ಗಳಿಸಿದರು. ಲೂಕಿ ಫರ್ಗ್ಯುಸನ್​ ಬೌಲಿಂಗ್​ನಲ್ಲಿ 6,4,4,6,4,4 ರನ್​ ಬಾರಿಸಿ ಕಿಕ್​ಸ್ಟಾರ್ಟ್​ ನೀಡಿದರು.

ಅಪಾಯಕಾರಿ ಆಗಲಿದ್ದಾರೆಂದು ಭಾವಿಸಿದ್ದ ಸುನಿಲ್​ ನರೈನ್​ 10, ಅಂಗ್​ಕೃಷ್​ ರಘುವಂಶಿ 3, ವೆಂಕಟೇಶ್​ ಅಯ್ಯರ್​ 16 ರನ್​ಗೆ ವಿಕೆಟ್​ ನೀಡಿದರು. ಇದರಿಂದ ತುಸು ಚೇತರಿಸಿಕೊಂಡು ಆರ್​ಸಿಬಿ ಮರು ಹೋರಾಟ ನೀಡಲಿದೆ ಎಂದು ಭಾವಿಸಲಾಗಿತ್ತು. ಆದರೆ, ಬಳಿಕ ಬಂದ ಬ್ಯಾಟರ್​ಗಳು ಮತ್ತೆ ತಂಡದ ಮೇಲೆ ಸವಾರಿ ಮಾಡಿದರು.

ಅಯ್ಯರ್​ ಅರ್ಧಶತಕ: 97 ರನ್​ಗೆ 4 ವಿಕೆಟ್​ ಕಳೆದುಕೊಂಡಿದ್ದಾಗ ಬಂದ ಶ್ರೇಯಸ್​ ಅಯ್ಯರ್​ ಉತ್ತಮ ಇನಿಂಗ್ಸ್​ ಕಟ್ಟಿದರು. 36 ಎಸೆತಗಳಲ್ಲಿ 50 ರನ್​ ಬಾರಿಸಿದರು. ಅಗತ್ಯವಾದ ಸಂದರ್ಭದಲ್ಲಿ ಉತ್ತಮ ಬ್ಯಾಟ್​ ಮಾಡಿ ತಂಡವನ್ನು ಆಧರಿಸಿದರು. ರಿಂಕು ಸಿಂಗ್​ 16 ಎಸೆತಗಳಲ್ಲಿ 24, ಸಿಡಿಲಮರಿ ಆ್ಯಂಡ್ರೆ ರಸೆಲ್​ 27, ರಮಣ್​ದೀಪ್​ ಸಿಂಗ್​ 24 ರನ್​ ಮಾಡಿದರು. ಇದರಿಂದ ತಂಡ ನಿಗದಿತ ಓವರ್​ನಲ್ಲಿ 222 ರನ್​ ಗಳಿಸಿತು.

ಇದನ್ನೂ ಓದಿ: 18 ಎಸೆತ, 5 ಬೌಂಡರಿ, 7 ಸಿಕ್ಸರ್! ಡೆಲ್ಲಿ ಪರ ಜೇಕ್ ಫ್ರೇಸರ್ ಸ್ಫೋಟಕ ಬ್ಯಾಟಿಂಗ್ - Jake Fraser Fastest Fifty

Last Updated : Apr 21, 2024, 8:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.