ETV Bharat / sports

ಕೆಕೆಆರ್​ನ 'ದ್ರೋಣ' ಚಂದ್ರಕಾಂತ್​ ಪಂಡಿತ್: ಶಿಸ್ತಿನ ಸಿಪಾಯಿಗೆ ಒಲಿದ ಐಪಿಎಲ್​ ಕಿರೀಟ - chandrakant pandit

ಕೆಕೆಆರ್​ ತಂಡ ಐಪಿಎಲ್​ ಚಾಂಪಿಯನ್​ ಆಗಿದ್ದು, ಅದರ ಹಿಂದೆ ಗುರು ದ್ರೋಣರಂತೆ ನಿಂತಿದ್ದು ಕೋಚ್ ಚಂದ್ರಕಾಂತ್​ ಪಂಡಿತ್. ಈ ಶಿಸ್ತಿನ ಸಿಪಾಯಿಯ ಸಾಧನೆಯ ಶಿಖರಕ್ಕೆ ಐಪಿಎಲ್​ ಟ್ರೋಫಿ ಸೇರಿಕೊಂಡಿದೆ.

ಕೆಕೆಆರ್​ ತಂಡದ ಕೋಚ್​ ಚಂದ್ರಕಾಂತ್​ ಪಂಡಿತ್
ಕೆಕೆಆರ್​ ತಂಡದ ಕೋಚ್​ ಚಂದ್ರಕಾಂತ್​ ಪಂಡಿತ್ (IANS Photos)
author img

By ETV Bharat Karnataka Team

Published : May 27, 2024, 5:10 PM IST

ಹೈದರಾಬಾದ್: ಕೋಲ್ಕತ್ತಾ ನೈಟ್​ ರೈಡರ್ಸ್​ ಐಪಿಎಲ್​​ ಚಾಂಪಿಯನ್​ ಆಗಲು ಮೆಂಟರ್​ ಗೌತಮ್​ ಗಂಭೀರ್​ ಎಷ್ಟು ಶ್ರಮ ವಹಿಸಿದ್ದಾರೋ, ಅಷ್ಟೇ ತಂಡದ ಕೋಚ್​ ಆಗಿರುವ ಚಂದ್ರಕಾಂತ್​ ಪಂಡಿತ್​ ಅವರ ಶ್ರಮವೂ ಇದೆ. ಭಾರತ ತಂಡದ ಮಾಜಿ ವಿಕೆಟ್​ ಕೀಪರ್​ ಆಗಿರುವ ಪಂಡಿತ್​ ಅವರು ದೇಶೀಯ ತರಬೇತುದಾರರಲ್ಲಿ ಮುಂಚೂಣಿಯಲ್ಲಿದ್ದಾರೆ.

62ರ ಪ್ರಾಯದ ಕೋಚ್​, ರಣಜಿಯಲ್ಲಿ ಮುಂಬೈ, ವಿದರ್ಭ, ಮಧ್ಯಪ್ರದೇಶ ತಂಡವನ್ನು ತಮ್ಮ ಮಾರ್ಗದರ್ಶನದಲ್ಲಿ ಚಾಂಪಿಯನ್​ ಮಾಡಿದ್ದರು. ಇದೀಗ ಆ ಯಶಸ್ಸಿನ ಸಾಲಿಗೆ ಐಪಿಎಲ್​ ಕಿರೀಟ ಬಂದು ಸೇರಿದೆ. ಇದು ಭಾರತದ ಯಾವುದೇ ತರಬೇತುದಾರ ಮಾಡದ ಸಾಧನೆಯಾಗಿದೆ.

ಕೋಚ್​ ಪಂಡಿತ್ ಅವರು ತರಬೇತುದಾರರಾಗಿ ಅತ್ಯುತ್ತಮ ವೃತ್ತಿಜೀವನ ಹೊಂದಿದ್ದಾರೆ. ಅವರು ಮುಂಬೈಗೆ 2003 ಮತ್ತು 2004 ರಲ್ಲಿ ಸತತ ಎರಡು ರಣಜಿ ಟ್ರೋಫಿ ಜಯಗಳಿಸಲು ಮಾರ್ಗದರ್ಶನ ನೀಡಿದ್ದರು. ನಂತರ ವಿದರ್ಭ ಮತ್ತು ಮಧ್ಯಪ್ರದೇಶವನ್ನು ರಣಜಿ ಟ್ರೋಫಿ ಗೆಲ್ಲುವಂತೆ ಮಾಡಿದ್ದರು.

ಕ್ರಿಕೆಟ್ ವಲಯದಲ್ಲಿ ಚಂದು ಎಂದೇ ಜನಪ್ರಿಯವಾಗಿರುವ ಪಂಡಿತ್, ಟಿ-20 ಲೀಗ್​ನಲ್ಲಿ ತಂಡವನ್ನು ಮುನ್ನಡೆಸಬಲ್ಲರಾ ಎಂದು ಹಲವರು ಪ್ರಶ್ನಿಸಿದ್ದರು. ಆದರೆ, ಕೆಕೆಆರ್​ ತಂಡದ ಗುರು ದ್ರೋಣರು ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ. ಪಂಡಿತ್ ಅವರು ತಮ್ಮದೇ ಆದ ಕೋಚಿಂಗ್ ವೈಶಿಷ್ಟ್ಯವನ್ನು ಹೊಂದಿದ್ದಾರೆ. ಸೂಕ್ಷ್ಮತೆ ಮತ್ತು ಕಠಿಣ ನಿರ್ಧಾರಗಳು ಅವರಲ್ಲಿ ಸಮ್ಮಿಳಿತವಾಗಿವೆ. ಇವು ಕೊನೆಯಲ್ಲಿ ಫಲ ನೀಡುತ್ತವೆ.

ಪಂಡಿತ್​ ಸಾಧನೆಗೆ ಗುಣಗಾನ: ಕೆಕೆಆರ್ ತಂಡದ ಮಾಜಿ ಆಲ್‌ರೌಂಡರ್ ಡೇವಿಡ್ ವೈಸ್ ಅವರು, ಚಂದ್ರಕಾಂತ್ ಪಂಡಿತ್ ಅವರ ಕೋಚಿಂಗ್ ಶೈಲಿಯನ್ನು ಹಾಡಿ ಹೊಗಳಿದ್ದಾರೆ. ಕಟ್ಟುನಿಟ್ಟಿನ ಶಿಸ್ತು, ಕಠಿಣ ನಿರ್ಧಾರಗಳು ತಂಡದ ಆಟಗಾರರನ್ನು ಕಾಡಿದರೂ, ಫಲ ಮಾತ್ರ ಕಟ್ಟಿಟ್ಟಬುತ್ತಿ ಎಂದಿದ್ದಾರೆ.

ಹಿರಿಯ ಕ್ರೀಡಾ ಪತ್ರಕರ್ತ ಮಕರಂದ್ ವೈಂಗಾಂಕರ್ ಈಟಿವಿ ಭಾರತ್‌ ಜೊತೆ ಮಾತನಾಡಿ, "ಚಂದು ಪಂಡಿತ್ ಅವರಲ್ಲಿನ ತಂತ್ರಗಳನ್ನು ಮೊದಲು ಗುರುತಿಸಿದ್ದು ಅಶೋಕ್ ಮಂಕಡ್ ಅವರು. ಚಂದು ಪಂಡಿತ್ 19 ವರ್ಷದವರಾಗಿದ್ದಾಗ, ಮಫತ್‌ಲಾಲ್ ಕ್ಲಬ್ ತಂಡವನ್ನು ಮುನ್ನಡೆಸಲು ಸೂಚಿಸಿದ್ದರು. ಪಂಡಿತ್ ಕೋಚ್​ ಆಗಿ ಐದು ರಣಜಿ ಟ್ರೋಫಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಭಾರತದಲ್ಲಿ ಯಾವುದೇ ತರಬೇತುದಾರರು ಇಷ್ಟು ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳನ್ನು ಗೆದ್ದಿಲ್ಲ ಎಂದು ಅವರು ತಿಳಿಸಿದರು.

ಇನ್ನೊಬ್ಬ ಕ್ರಿಕೆಟ್ ತರಬೇತುದಾರ ವಿಲಾಸ್ ಗೋಡ್ಬೋಲೆ ಅವರು ಪಂಡಿತ್​ರನ್ನು "ಟಾಸ್ಕ್ ಮಾಸ್ಟರ್" ಎಂದು ಬಣ್ಣಿಸಿದ್ದಾರೆ. ಎದುರಾಳಿಯ ಬಲ ಮತ್ತು ದೌರ್ಬಲ್ಯವನ್ನು ಲೆಕ್ಕ ಹಾಕಿ ಅದಕ್ಕೆ ಅನುಗುಣವಾಗಿ ತಂತ್ರ ರೂಪಿಸುತ್ತಾರೆ. ಅವರು ಅತ್ಯಂತ ಶಿಸ್ತಿನ ಪಾಲಕರು ಎಂದಿದ್ದಾರೆ.

ಚಂದ್ರಕಾಂತ್ ಪಂಡಿತ್ ಅವರು ಕೆಕೆಆರ್ ಮುಖ್ಯ ಕೋಚ್ ಆಗಿದ್ದರೂ, 2023ರ ಋತುವಿನಲ್ಲಿ ತಂಡ 7ನೇ ಸ್ಥಾನಿಯಾಗಿತ್ತು. ಒಂದೇ ವರ್ಷದಲ್ಲಿ ತಂಡವನ್ನು ಬಲಿಷ್ಠಗೊಳಿಸಿದ ಅವರು, 2024 ರ ಋತುವಿನಲ್ಲಿ ತಂಡವನ್ನು ಚಾಂಪಿಯನ್​ ಮಾಡಿದ್ದಾರೆ.

ಇದನ್ನೂ ಓದಿ: ಐಪಿಎಲ್​ ಚಾಂಪಿಯನ್ಸ್​ಗೆ ₹20 ಕೋಟಿ ಬಹುಮಾನ: ವಿರಾಟ್​ಗೆ ಆರೆಂಜ್​ ಕ್ಯಾಪ್​: ಯಾರಿಗೆಲ್ಲ ಪ್ರಶಸ್ತಿ? - IPL 2024 Award Winners

ETV Bharat Logo

Copyright © 2024 Ushodaya Enterprises Pvt. Ltd., All Rights Reserved.