ದೇವನಹಳ್ಳಿ (ಬೆಂಗಳೂರು) : ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ ಬೂದಿಗೆರೆ ಗ್ರಾಮದ ಹೊಸ ಬೈಪಾಸ್ ರಸ್ತೆಯ ಸರ್ಕಾರಿ ಹಾಸ್ಟೆಲ್ ಸಮೀಪ ಇಂದು ಹಿಟ್ ಅಂಡ್ ರನ್ಗೆ ಇಬ್ಬರು ವೃದ್ಧರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಗೊಂಡ ಇಬ್ಬರು ವೃದ್ಧರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ವರ್ಗಾವಣೆ ಮಾಡಲಾಗಿದೆ. ರಸ್ತೆ ಕಾಮಗಾರಿಗೆ ಸಂಬಂಧಿಸಿದ ಲಾರಿಯೇ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಘಟನೆಯ ನಂತರ ಸ್ಥಳದಿಂದ ಚಾಲಕ ಪರಾರಿ ಆಗಿದ್ದಾನೆ ಎಂದು ಗ್ರಾಮಸ್ಥರು ತಿಳಿಸಿದರು.
ಬೂದಿಗೆರೆ ಗ್ರಾಮದ ಹೊಸ ಬೈಪಾಸ್ ರಸ್ತೆಯ ಹಾಸ್ಟೆಲ್ ಸಮೀಪದ ವೃತ್ತದಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿವೆ. ಈ ಬಗ್ಗೆ KRDCL ಅಧಿಕಾರಿಗಳು ಮತ್ತು ರಸ್ತೆ ಕಾಮಗಾರಿ ಕಂಟ್ರಾಕ್ಟರ್ ಕ್ರಮ ಕೈಗೊಳ್ಳುತ್ತಿಲ್ಲವೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮಸ್ಥರ ಆಕ್ರೋಶಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆ ಮೂರ್ನಾಲ್ಕು ಕಿಲೋ ಮೀಟರ್ವರೆಗೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಹೀಗಾಗಿ, ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣ ಆಯಿತು.
ಸಾರಿಗೆ ನಿಯಮ ಉಲ್ಲಂಘಿಸಿ ರಸ್ತೆ ಕಾಮಗಾರಿಯ ವಾಹನಗಳ ಸಂಚಾರ : ಬೂದಿಗೆರೆ ಕ್ರಾಸ್ನಿಂದ ಏರ್ಪೋರ್ಟ್ವರೆಗೂ ನಡೆಸುತ್ತಿರುವ ಕಾಮಗಾರಿಗೆ ಬಳಸುತ್ತಿರುವ ವಾಹನಗಳು ಬಹುತೇಕ ಸಾರಿಗೆ ನಿಯಮಗಳನ್ನು ಉಲ್ಲಂಘಿಸಿ ಸಂಚಾರ ಮಾಡುತ್ತಿವೆ. ಈ ಬಗ್ಗೆ ಯಾವೊಬ್ಬ ಸಾರಿಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ.
ಇದನ್ನೂ ಓದಿ : ಕಾಮಾಕ್ಷಿಪಾಳ್ಯ ಹಿಟ್ ಅಂಡ್ ರನ್ ಪ್ರಕರಣ: ಕಾರು ಚಾಲಕನ ಬಂಧನ - HIT AND RUN CASE ACCUSED ARRESTED