ETV Bharat / sports

147 ವರ್ಷಗಳ ಟೆಸ್ಟ್​ ಇತಿಹಾಸದಲ್ಲಿ 700 ವಿಕೆಟ್​ ಪಡೆದ ಮೊದಲ ವೇಗಿ ಜೇಮ್ಸ್ ಆ್ಯಂಡರ್​ಸನ್​ - James Anderson record

ಟೆಸ್ಟ್​ ಕ್ರಿಕೆಟ್​ನಲ್ಲಿ 700 ವಿಕೆಟ್​ ಪಡೆಯುವ ಮೂಲಕ ಜೇಮ್ಸ್​ ಆ್ಯಂಡರ್​ಸನ್​ ಇತಿಹಾಸ ನಿರ್ಮಿಸಿದ್ದಾರೆ.

ಜೇಮ್ಸ್ ಆ್ಯಂಡರ್​ಸನ್​
ಜೇಮ್ಸ್ ಆ್ಯಂಡರ್​ಸನ್​
author img

By ETV Bharat Karnataka Team

Published : Mar 9, 2024, 1:48 PM IST

ಧರ್ಮಶಾಲಾ: ಭಾರತ ವಿರುದ್ಧ ಇಲ್ಲಿ ನಡೆಯುತ್ತಿರುವ 5ನೇ ಮತ್ತು ಕೊನೆಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್​ನ ಹಿರಿಯ ವೇಗಿ ಜೇಮ್ಸ್​ ಆ್ಯಂಡರ್​ಸನ್​ ಇತಿಹಾಸ ನಿರ್ಮಿಸಿದ್ದಾರೆ. ಟೆಸ್ಟ್​ನಲ್ಲಿ 700 ವಿಕೆಟ್​ ಪಡೆದ ವಿಶ್ವದ ಮೊದಲ ಮತ್ತು ಮೂರನೇ ವೇಗದ ಬೌಲರ್​ ಎಂಬ ದಾಖಲೆಯನ್ನು ಬರೆದರು.

ಪಂದ್ಯದ ಮೂರನೇ ದಿನದಾಟದ ಮೊದಲ ಅವಧಿಯಲ್ಲಿ 124ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಕುಲ್‌ದೀಪ್ ಯಾದವ್‌ರನ್ನು ಔಟ್​ ಮಾಡುವ ಮೂಲಕ ಆ್ಯಂಡರ್​ಸನ್​ ಈ ಸಾಧನೆ ಮಾಡಿದರು. ಸ್ವಿಂಗ್​ ಮತ್ತು ಬೌನ್ಸಿಗೆ ಹೆಸರುವಾಸಿಯಾದ ಆಂಗ್ಲ ವೇಗಿ 700 ವಿಕೆಟ್​ ಪಡೆದ ವಿಶ್ವದ ಮೂರನೇ ಬೌಲರ್​ ಎಂಬ ಹಿರಿಮೆಗೂ ಪಾತ್ರವಾದರು. ಇದಕ್ಕೂ ಮೊದಲು ದಿಗ್ಗಜ ಸ್ಪಿನ್ನರ್​ಗಳಾದ ಮುತ್ತಯ್ಯ ಮುರಳೀಧರನ್ (800) ಮತ್ತು ಶೇನ್ ವಾರ್ನ್ (708) ಈ ಸಾಧನೆ ಮಾಡಿದವರು.

41 ವರ್ಷ ವಯಸ್ಸಿನ ಆ್ಯಂಡರ್​ಸನ್​ 21 ವರ್ಷಗಳ ಕ್ರಿಕೆಟ್​ ವೃತ್ತಿ ಬದುಕಿನ 187 ಟೆಸ್ಟ್​ ಪಂದ್ಯದಲ್ಲಿ ಈ ವಿಕ್ರಮ ಮೆರೆದರು. ಭಾರತದ ವಿರುದ್ಧದ ಏಳನೇ ಟೆಸ್ಟ್ ಪ್ರವಾಸ ಇದಾಗಿದೆ. ಇಂಗ್ಲೆಂಡ್​ನ ಬಲಗೈ ವೇಗಿ ಭಾರತದ ವಿರುದ್ಧ 148 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಟೆಸ್ಟ್​ ಇತಿಹಾಸದಲ್ಲೇ ಮೊದಲು: 1877 ರಿಂದ ಪ್ರಾರಂಭವಾದ 147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಆ್ಯಂಡರ್​ಸನ್​ 700 ವಿಕೆಟ್ ಪಡೆದ ಮೊದಲ ವೇಗಿಯಾಗಿದ್ದಾರೆ. ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ ಆಂಡರ್ಸನ್ 16 ಓವರ್‌ಗಳಲ್ಲಿ 60 ರನ್​ ನೀಡಿ 2 ವಿಕೆಟ್​​ ಪಡೆದರು. 3.75 ಎಕಾನಮಿ ದರದಲ್ಲಿ ಬೌಲಿಂಗ್​ ಮಾಡಿದರು. ಶುಭಮನ್ ಗಿಲ್ ಮತ್ತು ಕುಲ್ದೀಪ್ ಯಾದವ್ ವಿಕೆಟ್ ಪಡೆದಿದ್ದಾರೆ.

2002ರಲ್ಲಿ ಇಂಗ್ಲೆಂಡ್ ಪರ ಟೆಸ್ಟ್‌ಗೆ ಪದಾರ್ಪಣೆ ಮಾಡಿದ ಆಂಡರ್ಸನ್ 187 ಟೆಸ್ಟ್ ಪಂದ್ಯಗಳಲ್ಲಿ 26.52 ಸರಾಸರಿಯಲ್ಲಿ 700 ವಿಕೆಟ್ ಪಡೆದಿದ್ದಾರೆ. ಅವರ ಇದರಲ್ಲಿ 32 ಬಾರಿ 5 ವಿಕೆಟ್‌ ಗೊಂಚಲು ಪಡೆದರೆ, 3 ಸಲ 10 ವಿಕೆಟ್‌ಗಳನ್ನು ಪಡೆದಿದ್ದಾರೆ. 7/42 ಬೆಸ್ಟ್​ ಇನ್ನಿಂಗ್ಸ್‌ ಆಗಿದೆ.

ಐದು ಪಂದ್ಯಗಳ ಸರಣಿಯಲ್ಲಿ ಆ್ಯಂಡರ್​​ಸನ್​ ಮೊದಲ ಪಂದ್ಯಕ್ಕೆ ಗೈರಾಗಿದ್ದರು. ಇದಾದ ಬಳಿಕ ಅವರು ಸರಣಿಯಲ್ಲಿ ಸ್ಪಿನ್​ ಪಿಚ್​​ಗಳಲ್ಲೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಆಡಿದ 4 ಟೆಸ್ಟ್‌ಗಳಲ್ಲಿ 33.5 ರ ಸರಾಸರಿಯಲ್ಲಿ 10 ವಿಕೆಟ್‌ಗಳನ್ನು ಪಡೆದಿದ್ದಾರೆ. 3/47 ರ ಅತ್ಯುತ್ತಮ ಬೌಲಿಂಗ್ ಆಗಿದೆ.

ಇದನ್ನೂ ಓದಿ: ಇಂಗ್ಲೆಂಡ್​ ವಿರುದ್ಧದ ಅಂತಿಮ ಟೆಸ್ಟ್​​ನಲ್ಲಿ ರೋಹಿತ್​ ಮಿಂಚು: ಹಲವು ದಾಖಲೆಗಳು ಪುಡಿ ಪುಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.