ETV Bharat / sports

ದ್ವಿಶತ​ಕದ ಸನಿಹ ಜೈಸ್ವಾಲ್​: ಮೊದಲ ದಿನದಾಟದ ಅಂತ್ಯಕ್ಕೆ 336 ರನ್​ಗಳಿಸಿದ ಭಾರತ - England Cricket

ಭಾರತ ಮತ್ತು ಇಂಗ್ಲೆಂಡ್​ ನುಡುವಿನ ಎರಡನೇ ಟೆಸ್ಟ್​ ಪಂದ್ಯದ ಮೊದಲ ದಿನದಾಟ ಮುಕ್ತಾಯವಾಗಿದೆ.

ದ್ವಿಶತ​ಕ ಸಮೀಪಕ್ಕೆ ಜೈಸ್ವಾಲ್
ದ್ವಿಶತ​ಕ ಸಮೀಪಕ್ಕೆ ಜೈಸ್ವಾಲ್
author img

By ETV Bharat Karnataka Team

Published : Feb 2, 2024, 8:11 PM IST

ವಿಶಾಖಪಟ್ಟಣ: ಇಂಗ್ಲೆಂಡ್ ವಿರುದ್ಧ ಎರಡನೇ ಟೆಸ್ಟ್​ ಪಂದ್ಯದ ಮೊದಲ ದಿನದಾಟ ಮುಕ್ತಾಯಗೊಂಡಿದೆ. ಭಾರತ 6 ವಿಕೆಟ್ ನಷ್ಟಕ್ಕೆ 336 ರನ್ ಕಲೆಹಾಕಿದೆ. ಯಶಸ್ವಿ ಜೈಸ್ವಾಲ್ 179 ರನ್ ಗಳಿಸಿ ಅಜೇಯರಾಗಿ ಉಳಿದಿದ್ದು, ಮತ್ತೊಂದೆಡೆ ಅಶ್ವಿನ್ ಕೂಡ ಅಜೇಯರಾಗಿ ಎರಡನೇ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

ವಿಶಾಖಪಟ್ಟಣದ ವೈ ಎಸ್​ ರಾಜಶೇಖರ್​ ರೆಡ್ಡಿ ಮೈದಾನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ನಾಯಕ ರೋಹಿತ್ ಶರ್ಮಾ ಮತ್ತು ಜೈಸ್ವಾಲ್​ ಜೊತೆಗೂಡಿ ಮೊದಲ ವಿಕೆಟ್‌ಗೆ 40 ರನ್‌ಗಳ ಜೊತೆಯಾಟ ಆಡಿದರು. ಈ ವೇಳೆ, 14 ರನ್​ಗಳಿಸಿದ್ದ ರೋಹಿತ್​ ಔಟಾಗಿ ಪೆವಿಲಿಯನ್​ ಸೇರುವ ಮೂಲಕ ಭಾರತ ಆರಂಭಿಕ ಆಘಾತ ಎದುರಿಸಿತು. ಬಳಿಕ ಕ್ರೀಸ್​ಗಿಳಿದ ಶುಭ್‌ಮನ್ ಗಿಲ್ (34), ಶ್ರೇಯಸ್ ಅಯ್ಯರ್ (27), ರಜತ್ ಪಾಟಿದಾರ್ (32), ಅಕ್ಷರ್ ಪಟೇಲ್ (27) ಮತ್ತು ಕೆಎಸ್ ಭರತ್ (17) ಕೂಡ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ಉಳಿಯದೇ ಪೆವಿಲಿಯನ್​ ಸೇರಿದರು. ಇಂದಿನ ಪಂದ್ಯದಲ್ಲಿ ಜೈಸ್ವಾಲ್ ಹೊರತುಪಡಿಸಿ ಭಾರತದ ಯಾವೊಬ್ಬ ಬ್ಯಾಟರ್​ ಅರ್ಧಶತಕ ಗಳಿಸಲು ಸಾಧ್ಯವಾಗಿಲ್ಲ. ​ಕ್ರೀಸ್​ನಲ್ಲಿ ನೆಲೆಯೂರಿ ನಿಂತಿರುವ ಜೈಸ್ವಾಲ್​ ಆಂಗ್ಲ ಬೌಲರ್​ಗಳನ್ನು ಬೆವರಿಳಿಸಿದ್ದಾರೆ. 257 ಎಸೆತಗಳನ್ನು ಎದುರಿಸಿ 179 ರನ್ ಗಳಿಸಿ ದ್ವಿಶತಕದ ಸನಿಹಕ್ಕೆ ಬಂದು ನಿಂತಿದ್ದಾರೆ.

ಇಂಗ್ಲೆಂಡ್ ಪರ ಮೊದಲ ದಿನ ಶೋಯೆಬ್ ಬಶೀರ್ ಮತ್ತು ರೆಹಾನ್ ಅಹ್ಮದ್ ತಲಾ 2 ವಿಕೆಟ್ ಪಡೆದರೆ, ಟಾಮ್ ಹಾರ್ಟ್ಲಿ ಮತ್ತು ಜೇಮ್ಸ್ ಆಂಡರ್ಸನ್ ತಲಾ ಒಂದು ವಿಕೆಟ್ ಪಡೆದರು. ಭಾರತ ತಂಡ ಮೂರು ಬದಲಾವಣೆಗಳೊಂದಿಗೆ ಪಂದ್ಯವನ್ನು ಆಡುತ್ತಿದೆ. ಕುಲದೀಪ್ ಯಾದವ್ ತಂಡಕ್ಕೆ ಮರಳಿದ್ದಾರೆ. ಜತೆಗೆ ರಜತ್ ಪಾಟಿದಾರ್ ಟೆಸ್ಟ್​ಗೆ ಪದಾರ್ಪಣೆ ಮಾಡಿದ್ದು, ಮುಖೇಶ್ ಕುಮಾರ್ ಕೂಡ ಪ್ಲೇಯಿಂಗ್ ಇಲೆವೆನ್​ನಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇಂಗ್ಲೆಂಡ್​ನ ಬೌಲರ್​ ಶೋಯೆಬ್ ಬಶೀರ್ ಅವರದ್ದು ಚೊಚ್ಚಲ ಟೆಸ್ಟ್​ ಪಂದ್ಯವಾಗಿದೆ.

ಹೈದರಾಬಾದ್‌ನಲ್ಲಿ ನಡೆದ ಸರಣಿಯ ಮೊದಲ ಪಂದ್ಯದಲ್ಲಿ ಭಾರತ 28 ರನ್‌ಗಳಿಂದ ಇಂಗ್ಲೆಂಡ್​ ವಿರುದ್ಧ ಸೋಲು ಅನುಭವಿಸಬೇಕಾಯಿತು. ಇಂತಹ ಪರಿಸ್ಥಿತಿಯಲ್ಲಿ ಟೀಂ ಇಂಡಿಯಾ ಈ ಪಂದ್ಯವನ್ನು ಗೆದ್ದು ಟೆಸ್ಟ್​ ಸರಣಿಯಲ್ಲಿ ಸಮಬಲ ಸಾಧಿಸಲು ಸಕಲ ಯೋಜನೆಗಳನ್ನು ರೂಪಿಸಿಕೊಂಡಿದೆ.

ಇದನ್ನೂ ಓದಿ: ಇಂಗ್ಲೆಂಡ್‌ vs ಭಾರತ 2ನೇ ಟೆಸ್ಟ್‌: ಶತಕ ಸಿಡಿಸಿದ ಯಶಸ್ವಿ ಜೈಸ್ವಾಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.