ETV Bharat / sports

ಮೊಹಮ್ಮದ್​ ಶಮಿ ಟೀಂ ಇಂಡಿಯಾಗೆ ಕಮ್​ಬ್ಯಾಕ್ ಯಾವಾಗ?, ಜಯ್​ ಶಾ ಹೇಳಿದ್ದೇನು? - Mohammed Shami - MOHAMMED SHAMI

ಭಾರತದ ವೇಗದ ಬೌಲರ್​ ಮೊಹಮ್ಮದ್​ ಶಮಿ ಯಾವಾಗ ತಂಡ ಸೇರಿಕೊಳ್ಳಲಿದ್ದಾರೆ ಎಂಬುದರ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ತಿಳಿಸಿದ್ದಾರೆ.

ಮೊಹಮ್ಮದ್​ ಶಮಿ ಮತ್ತು ಜಯ್​ ಶಾ
ಮೊಹಮ್ಮದ್​ ಶಮಿ ಮತ್ತು ಜಯ್​ ಶಾ (ANI)
author img

By ETV Bharat Sports Team

Published : Aug 19, 2024, 6:06 PM IST

ನವದೆಹಲಿ: 2023ರ ಏಕದಿನ ವಿಶ್ವಕಪ್​ ಫೈನಲ್​ ಪಂದ್ಯದ ಬಳಿಕ ಟೀಂ ಇಂಡಿಯಾದಿಂದ ಹೊರಗುಳಿದಿರುವ ಭಾರತದ ಸ್ಟಾರ್ ವೇಗದ ಬೌಲರ್ ಮೊಹಮ್ಮದ್ ಶಮಿ ಈ ವರ್ಷದ ಕೊನೆಯಲ್ಲಿ​​ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ (ಬಿಸಿಸಿಐ)ನ ಕಾರ್ಯದರ್ಶಿ ಜಯ್​ ಶಾ ಮಾಹಿತಿ ನೀಡಿದ್ದಾರೆ.

ಈ ಕುರಿತು ಮಾಧ್ಯಮವೊಂದರ ಜೊತೆ ಮಾತನಾಡಿರುವ ಅವರು, ಬಲಗೈ ವೇಗದ ಬೌಲರ್ ಮೊಹಮ್ಮದ್ ಶಮಿ ವರ್ಷದ ಕೊನೆಯಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಬಾರ್ಡರ್​-ಗವಾಸ್ಕರ್​ ಟ್ರೋಫಿ ಮೂಲಕ ತಂಡವನ್ನು ಸೇರಿಕೊಳ್ಳಲಿದ್ದಾರೆ. ಈ ಮಹತ್ವದ ಟ್ರೋಫಿಗಾಗಿ ನಮ್ಮ ತಂಡವೂ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುತ್ತಿದೆ. ಮುಂದಿನ ಮಹತ್ವದ ಪಂದ್ಯಗಳಿಗಾಗಿ ಜಸ್ಪ್ರೀತ್ ಬುಮ್ರಾ ಅವರಿಗೂ ಕೆಲ ಸಮಯ ವಿಶ್ರಾಂತಿ ನೀಡಲಾಗಿದೆ. ಮೊಹಮ್ಮದ್ ಶಮಿ ಕೂಡ ಫಿಟ್ ಆಗಲಿದ್ದಾರೆ. ಈ ಬಾರಿ ಬಾರ್ಡರ್​-ಗವಾಸ್ಕರ್​ ಟ್ರೋಫಿಗಾಗಿ ಅನುಭವಿ ಆಟಗಾರನ್ನೊಳಗೊಂಡ ಬಲಿಷ್ಠ ತಂಡ ಆಸ್ಟ್ರೇಲಿಯಾಗೆ ಪ್ರಯಾಣಿಸಲಿದೆ ಎಂದು ತಿಳಿಸಿದ್ದಾರೆ.

ಬಿಸಿಸಿಐ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಇತ್ತೀಚೆಗೆ, ಶಮಿ ಬಾಂಗ್ಲಾದೇಶ ಟೆಸ್ಟ್ ಸರಣಿಗಾಗಿ ತಂಡವನ್ನು ಕೂಡಿಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಿದ್ದರು, ಆದರೆ ಬಂಗಾಳ ಕ್ರಿಕೆಟ್ ಸಂಸ್ಥೆ (ಸಿಎಬಿ) ಅಧ್ಯಕ್ಷ ಸ್ನೇಹಶಿಶ್ ಗಂಗೂಲಿ ಪ್ರಕಾರ, 'ಶಮಿ ಭಾರತ ತಂಡಕ್ಕೆ ಕಂಬ್ಯಾಕ್​ ಮಾಡಬೇಕಾದರೆ ಅದಕ್ಕೂ ಮುನ್ನ ತಮ್ಮ ಫಿಟ್​ನೆಸ್​​ ಸಾಬೀತುಪಡಿಸಬೇಕಿದೆ. ಇದಕ್ಕಾಗಿ ಅವರು ರಣಜಿ ಟ್ರೋಫಿ ಆಡಬೇಕಾಗುತ್ತದೆ ಎಂದು ಹೇಳಿದ್ದಾರೆ.

ಇದರ ಬೆನ್ನಲ್ಲೇ ನ್ಯೂಜಿಲೆಂಡ್​ ವಿರುದ್ಧ ಅಕ್ಟೋಬರ್​ ತಿಂಗಳಲ್ಲಿ ನಡೆಯಲಿರುವ ಸರಣಿಗೂ ಮುನ್ನ ಶಮಿ ರಣಜಿಯಲ್ಲಿ ಆಡಲಿದ್ದಾರೆ ಎಂದು ವರದಿಗಳಾಗಿವೆ. ಅ.11ರಿಂದ ಆರಂಭವಾಗಲಿರುವ ಈ ಟೂರ್ನಿಯಲ್ಲಿ ಶಮಿ ಅವರು ಪಶ್ಚಿಮ ಬಂಗಾಳ ತಂಡವನ್ನು ಪ್ರತಿನಿಧಿಸಲಿದ್ದಾರೆ. ಇದರ ಬಳಿಕವಷ್ಟೇ ಅವರಿಗೆ ಭಾರತ ಭಾರತ ತಂಡದಲ್ಲಿ ಸ್ಥಾನ ದೊರೆಯಲಿದೆ ಎಂದು ಹೇಳಲಾಗಿದೆ.

ಕಳೆದ ವರ್ಷ ನಡೆದ ವಿಶ್ವಕಪ್​ನಲ್ಲಿ ಭಾರತದ ಪರ ಅತಿಹೆಚ್ಚು ವಿಕೆಟ್​ ಪಡೆದಿದ್ದ ಶಮಿ ಫೈನಲ್​ ಪಂದ್ಯದ ಬಳಿಕ ಹಿಮ್ಮಡಿ ನೋವಿನ ಗಾಯದ ಸಮಸ್ಯೆಗೆ ತುತ್ತಾಗಿ ಶಸ್ತ್ರಚಿಕಿತ್ಸಗೆ ಒಳಪಟ್ಟಿದ್ದರು. ನಂತರ ಗಾಯದಿಂದ ಚೇತರಿಸಿಕೊಳ್ಳಲು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ಯ ಪುನಶ್ಚೇತನ ಶಿಬಿರಕ್ಕೆ ಸೇರಿಕೊಂಡಿದ್ದರು. ಇದೀಗ ಅವರ ಚೇತರಿಸಿಕೊಂಡಿದ್ದು ನೆಟ್​ನಲ್ಲಿ ಬೌಲಿಂಗ್​ ಅಭ್ಯಾಸದಲ್ಲಿ ತೊಡಗಿದ್ದಾರೆ.

ಇದನ್ನೂ ಓದಿ: ಡೈಮಂಡ್​ ಲೀಗ್ ಮೇಲೆ ಕಣ್ಣಿಟ್ಟ ನೀರಜ್​ ಚೋಪ್ರಾ: ತರಬೇತಿಗಾಗಿ ಸ್ವಿಟ್ಜರ್ಲೆಂಡ್​ ತಲುಪಿದ ಅಥ್ಲೀಟ್​ - Neeraj Chopra

ETV Bharat Logo

Copyright © 2024 Ushodaya Enterprises Pvt. Ltd., All Rights Reserved.