ETV Bharat / sports

ದುಬೈ, ಲಂಡನ್​​ ಅಲ್ಲ, ಈ ನಗರದಲ್ಲಿ ನಡೆಯಲಿದೆಯೇ IPL ಮೆಗಾ ಹರಾಜು? - IPL 2025 MEGA AUCTION

ಈ ಬಾರಿಯ ಐಪಿಎಲ್​ ಮೆಗಾ ಹರಾಜು ಪ್ರಕ್ರಿಯೆ ಎಲ್ಲಿ ಮತ್ತು ಯಾವಾಗ ನಡೆಯುತ್ತದೆ ಎಂಬ ಕುರಿತ ಬಿಗ್ ​ಅಪ್ಡೇಟ್ ಹೊರಬಿದ್ದಿದೆ.

ಐಪಿಎಲ್​ ಮೆಗಾ ಹರಾಜು
ಐಪಿಎಲ್​ ಮೆಗಾ ಹರಾಜು (ಸಂಗ್ರಹ ಚಿತ್ರ) (IANS)
author img

By ETV Bharat Sports Team

Published : Oct 25, 2024, 5:53 PM IST

IPL 2025 Mega Auction Place And Date: 2025ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)​ ಆರಂಭಕ್ಕೂ ಮುನ್ನವೇ ಭಾರಿ ಕುತೂಹಲ ಕೆರಳಿಸಿದೆ. ಐಪಿಎಲ್​ ಆಟಗಾರರ ಮೆಗಾ ಹರಾಜು ಇದಕ್ಕೆ ಕಾರಣ. ಅದರಲ್ಲೂ ರೋಹಿತ್​ ಶರ್ಮಾ, ಹಾರ್ದಿಕ್​ ಪಾಂಡ್ಯ, ರಿಷಭ್​ ಪಂತ್​ರಂತಹ ಹಲವು ಸ್ಟಾರ್​ ಕ್ರಿಕೆಟರ್​ಗಳು ಹರಾಜಿನಲ್ಲಿದ್ದಾರೆ ಎಂದು ಈಗಾಗಲೇ ವರದಿಯಾಗಿದೆ.

ಮತ್ತೊಂದೆಡೆ ಮೆಗಾ ಹರಾಜಿಗೂ ಮೊದಲು, ಎಲ್ಲ ಫ್ರಾಂಚೈಸಿಗಳು ತಾವು ಉಳಿಸಿಕೊಂಡಿರುವ ಮತ್ತು ಬಿಡುಗಡೆಗೊಳಿಸಿದ ಆಟಗಾರರ ಪಟ್ಟಿಯನ್ನು ಸಿದ್ಧಪಡಿಸುವಲ್ಲಿ ನಿರತವಾಗಿವೆ. ಅಕ್ಟೋಬರ್ 31ರೊಳಗೆ ರಿಟೈನ್​ ಆಟಗಾರರ ಪಟ್ಟಿ ಬಿಡುಗಡೆ ಮಾಡಬೇಕು ಎಂದು ಬಿಸಿಸಿಐ ಈಗಾಗಲೇ ತಿಳಿಸಿದೆ. ಇದರ ನಡುವೆ ಈ ಬಾರಿ ಮೆಗಾ ಹರಾಜು ಯಾವಾಗ ಮತ್ತು ಎಲ್ಲಿ ನಡೆಯಲಿದೆ ಎಂದು ಬಹಿರಂಗಗೊಂಡಿದೆ. ಕಳೆದ ಬಾರಿಯ ಹರಾಜು ಪ್ರಕ್ರಿಯೆ ದುಬೈನಲ್ಲಿ ನಡೆದಿತ್ತು. ಆದರೆ ಈ ಬಾರಿ ಸ್ಥಳ ಬದಲಾಯಿಸಲಾಗುತ್ತಿದೆ ಎಂದು ವರದಿ ಹೇಳಿದೆ.

ಐಪಿಎಲ್​ ಮೆಗಾ ಹರಾಜು
ಐಪಿಎಲ್​ ಮೆಗಾ ಹರಾಜು (ಸಂಗ್ರಹ ಚಿತ್ರ) (IANS)

ಹೌದು, ಕ್ರಿಕ್‌ಬಜ್ ವರದಿಯ ಪ್ರಕಾರ, ಈ ಬಾರಿ ಹರಾಜು ಪ್ರಕ್ರಿಯೆಯನ್ನು ಸೌದಿ ಅರೇಬಿಯಾದ ರಾಜಧಾನಿ ರಿಯಾದ್​ ಅಥವಾ ಜೆಡ್ಡಾದಲ್ಲಿ ನಡೆಸಲು ಚಿಂತನೆ ನಡೆಸಲಾಗಿದೆ. ಈ ಎರಡು ನಗರಗಳ ಪೈಕಿ ರಿಯಾದ್ ಹೆಸರು ಮುಂಚೂಣಿಯಲ್ಲಿದ್ದು, ಕೆಲವೇ ದಿನಗಳಲ್ಲಿ ಬಿಸಿಸಿಐ ಇದಕ್ಕೆ ಒಪ್ಪಿಗೆ ನೀಡುವ ಸಾಧ್ಯತೆ ಇದೆ.

ಇದನ್ನೂ ಓದಿ: 60 ವರ್ಷಗಳ ನಂತರ ಭಾರತದ ಹಳೆಯ ಪ್ಲಾನ್ ಅನುಸರಿಸಿ ಟೆಸ್ಟ್​​ನಲ್ಲಿ ಸಕ್ಸಸ್​ ಆದ ಪಾಕಿಸ್ತಾನ!

ಬಿಸಿಸಿಐ ಅಧಿಕಾರಿಗಳು ಈಗಾಗಲೇ ಎರಡೂ ನಗರಗಳಿಗೆ ಭೇಟಿ ನೀಡಿದ್ದು ಮೆಗಾ ಹರಾಜು ಈವೆಂಟ್‌ ನಡೆಸಲು ರಿಯಾದ್​ ಹೆಚ್ಚು ಆದ್ಯತೆಯ ಸ್ಥಳವೆಂದು ಪರಿಗಣಿಸಿದ್ದಾರೆ ಎಂದು ವರದಿಯಾಗಿದೆ. ಅಲ್ಲದೇ ಹರಾಜು ನವೆಂಬರ್ 24 ಮತ್ತು 25ರಂದು ನಡೆಯಲಿದೆ ಎಂದೂ ತಿಳಿಸಿದೆ. ಆದರೆ ಇದರ ಬಗ್ಗೆ ಬಿಸಿಸಿಐ ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲ.

ಬಿಸಿಸಿಐ ಈ ಹಿಂದೆ ಲಂಡನ್, ದುಬೈ, ಸಿಂಗಾಪುರ್ ಮತ್ತು ಆಸ್ಟ್ರೇಲಿಯಾಗಳ ಪೈಕಿ ಯಾವುದಾದರೂ ಒಂದು ನಗರದಲ್ಲಿ ಹರಾಜು ನಡೆಸಲು ಚಿಂತನೆ ನಡೆಸಿತ್ತು. ಆದರೆ, ಈಗ ಈ ನಾಲ್ಕು ನಗರಗಳನ್ನು ಪಟ್ಟಿಯಿಂದ ತೆಗೆದುಹಾಕಿದೆ.

ಕ್ರಿಕ್​ಬಜ್​ ಪ್ರಕಾರ, ಬಿಸಿಸಿಐ ಹರಾಜು ಸಮಯವನ್ನು ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ ನಡೆಸಲು ಬಯಸುತ್ತದೆ. ಆದರೆ ಈ ನಾಲ್ಕು ನಗರಗಳ ಸಮಯ ಮತ್ತು ಭಾರತದ ಸಮಯದ ನಡುವೆ ಬಹಳ ವ್ಯತ್ಯಾಸವಿದೆ. ಇದರಿಂದಾಗಿ ಪ್ರಸಾರಕರಿಗೂ ನಷ್ಟ ಸಂಭವಿಸುವ ಸಾಧ್ಯತೆ ಇರುವ ಕಾರಣ ಈ ನಾಲ್ಕು ನಗರಗಳನ್ನು ಪಟ್ಟಿಯಿಂದ ತೆಗೆದುಹಾಕಿದೆ ಎಂದು ತಿಳಿಸಿದೆ.

ಇದನ್ನೂ ಓದಿ: ಕೇವಲ 1ರನ್​ ಅಂತರದಲ್ಲಿ 8 ವಿಕೆಟ್​ ಕಳೆದುಕೊಂಡ ಆಸ್ಟ್ರೇಲಿಯಾ 53ಕ್ಕೆ ಆಲೌಟ್!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.