ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಇಂಡಿಯನ್ ಕ್ರಿಕೆಟ್ ಟೀಂನ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್‌ನ 17 ನೇ ಸೀಸನ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿದ್ದಾರೆ. ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡವು ಐಪಿಎಲ್ 2024 ರ ಪ್ಲೇಆಫ್ ತಲುಪಲು ಒಂದು ಹೆಜ್ಜೆಯಷ್ಟೇ ದೂರದಲ್ಲಿದೆ. ಮೇ 18 ರಂದು ಆರ್‌ಸಿಬಿ ತನ್ನ ತವರು ಮೈದಾನದಲ್ಲಿ ಸಿಎಸ್‌ಕೆ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ ಸಿಎಸ್ಕೆಯನ್ನು ದೊಡ್ಡ ಅಂತರದಿಂದ ಸೋಲಿಸಿದರೆ, ಪ್ಲೇ ಆಫ್‌ಗೆ ಪ್ರವೇಶಿಸುವ ಎಲ್ಲ ಸಾಧ್ಯತೆಗಳಿವೆ. ಆದರೆ ಇದು ಸಾಧ್ಯವಾಗುತ್ತಾ ಎಂಬುದನ್ನು ನಾಳೆವರೆಗೂ ಕಾದು ನೋಡಬೇಕಾಗುತ್ತದೆ.
ಇದು ಈ ಬಾರಿಯ ಐಪಿಎಲ್ನಲ್ಲಿ ಕೊಹ್ಲಿ ಇರುವ ತಂಡದ ಕಥೆಯಾಯಿತು. ಏತನ್ಮಧ್ಯೆ ಖಾಸಗಿ ಶೋವೊಂದರಲ್ಲಿ ಮಾತನಾಡುವಾಗ ವಿರಾಟ್ ಕೊಹ್ಲಿ ತಮ್ಮ ಮಗಳ ಬಗ್ಗೆ ಅಚ್ಚರಿಯ ವಿಷಯವನ್ನು ಹೊರಗೆ ಹಾಕಿದ್ದಾರೆ. ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತಮ್ಮ ಮಗಳು ವಾಮಿಕಾ ಅವರ ಬಗ್ಗೆ ಭಾರಿ ಎಚ್ಚರಿಕೆಯ ಹೆಜ್ಜೆಗಳನ್ನು ಇಡುತ್ತಿದ್ದಾರೆ. ಅವರು ಮಾಧ್ಯಮಗಳು ಹಾಗೂ ಸಾರ್ವಜನಿಕವಾಗಿ ದೂರು ಇಟ್ಟಿದ್ದಾರೆ. ಪ್ರಚಾರದಿಂದ ತಮ್ಮ ಮಗಳನ್ನ ದೂರ ಇಟ್ಟು, ಆಕೆಯ ಏಕಾಂತಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳುತ್ತಿದ್ದಾರೆ.
ವಿರಾಟ್, ತಮ್ಮ ಮಗಳು ವಾಮಿಕಾ ಬಗ್ಗೆ ಮಾತನಾಡುತ್ತಾ, 'ನನ್ನ ಮಗಳು ಕ್ರಿಕೆಟ್ ಬಗ್ಗೆ ಸಾಕಷ್ಟು ಆಸಕ್ತಿ ಹೊಂದಿದ್ದಾಳೆ, ಬ್ಯಾಟ್ ನೊಂದಿಗೆ ಆಟ ಆಡುತ್ತಾಳೆ, ಅಷ್ಟೇ ಏಕೆ ಬ್ಯಾಟ್ ಬೀಸುವುದನ್ನು ತುಂಬಾ ಆನಂದಿಸುತ್ತಾಳೆ. ಆದರೆ ಅವಳು ಕ್ರಿಕೆಟಿಗಳಾಗುತ್ತಾಳಾ ಎಂಬ ಬಗ್ಗೆ ನನಗೆ ಖಚಿತತೆ ಇಲ್ಲ. ಅದು ಅಂತಿಮವಾಗಿ ಅವಳದ್ದೇ ಆಯ್ಕೆಯಾಗಿರುತ್ತದೆ. ಈ ವೇಳೆ ವಾಮಿಕಾಗೆ ಏನು ಬೇಕೋ ಅದನ್ನು ಒದಗಿಸುವುದಷ್ಟೇ ನಮ್ಮ ಜವಾಬ್ದಾರಿ ಎಂದು ಕೊಹ್ಲಿ ಸ್ಪಷ್ಟಪಡಿಸಿದ್ದಾರೆ. ವಿರಾಟ್ ಅವರ ಮಗ ಅಕಾಯ್ ಬಗ್ಗೆ ಕೇಳಿದಾಗ, 'ಮಗ ಚೆನ್ನಾಗಿದ್ದಾನೆ ಮತ್ತು ಆರೋಗ್ಯವಾಗಿದ್ದಾನೆ' ಎಂದು ಹೇಳಿದರು.
ವಿರಾಟ್ ಕೊಹ್ಲಿ ಐಪಿಎಲ್ 2024 ರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಆಗಿ ಹೊರ ಹೊಮ್ಮಿದ್ದಾರೆ. ಈ ಋತುವಿನಲ್ಲಿ ವಿರಾಟ್ 13 ಪಂದ್ಯಗಳ 13 ಇನ್ನಿಂಗ್ಸ್‌ಗಳಲ್ಲಿ 1 ಶತಕ ಮತ್ತು 3 ಅರ್ಧಶತಕಗಳೊಂದಿಗೆ 661 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ವಿರಾಟ್ 56 ಬೌಂಡರಿ ಹಾಗೂ 33 ಸಿಕ್ಸರ್ ಬಾರಿಸಿದ್ದಾರೆ. ಇದರೊಂದಿಗೆ ಅವರು ಆರೇಂಜ್ ಕ್ಯಾಪ್( ಕಿತ್ತಳೆ ಬಣ್ಣದ ಟೋಪಿ) ಗೌರವಕ್ಕೂ ಪಾತ್ರರಾಗಿದ್ದಾರೆ.
ಇದನ್ನು ಓದಿ: ಕುಸಿದು ಬಿದ್ದ ಬಾಲಕ, ನಡು ರಸ್ತೆಯಲ್ಲೇ ಸಿಪಿಆರ್ ಮೂಲಕ ಮಗುವಿಗೆ ಮತ್ತೊಂದು ಜನ್ಮಕೊಟ್ಟ ವೈದ್ಯೆ! - CPR To Boy On The Road