ETV Bharat / sports

ಗೆದ್ದ ಹೈದರಾಬಾದ್, ಬಿದ್ದ ಮುಂಬೈ: ಹಾರ್ದಿಕ್‌ ತಂಡಕ್ಕೆ ಪ್ಲೇ ಆಫ್​ ಬಾಗಿಲು ಬಂದ್ - Mumbai Indians

ಐಪಿಎಲ್​ 17ನೇ ಆವೃತ್ತಿಯ​ ​ಪ್ಲೇ ಆಫ್​ನಿಂದ ಮುಂಬೈ ಇಂಡಿಯನ್ಸ್​ ತಂಡ ಅಧಿಕೃತವಾಗಿ ಹೊರಬಿದ್ದಿದೆ.

ಹಾರ್ದಿಕ್ ಪಾಂಡ್ಯ
ಹಾರ್ದಿಕ್ ಪಾಂಡ್ಯ (ETV Bharat)
author img

By PTI

Published : May 9, 2024, 8:22 AM IST

Updated : May 9, 2024, 10:21 AM IST

ಹೈದರಾಬಾದ್​: 5 ಬಾರಿಯ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ಐಪಿಎಲ್​ 2024ರ 17ನೇ ಆವೃತ್ತಿಯ ಪ್ಲೇ ಆಫ್​ ರೇಸ್​ನಿಂದ ಅಧಿಕೃತವಾಗಿ ಹೊರಬಿದ್ದ ಮೊದಲ ತಂಡವಾಗಿದೆ. ನಿನ್ನೆ(ಬುಧವಾರ) ನಡೆದ ಟೂರ್ನಿಯ 57ನೇ ಪಂದ್ಯದಲ್ಲಿ ಲಕ್ನೋ ಸೂಪರ್​ ಜೈಂಟ್ಸ್​ ವಿರುದ್ಧ ಸನ್‌ರೈಸರ್ಸ್​ ಗೆಲುವು ಸಾಧಿಸುತ್ತಿದ್ದಂತೆ ಮುಂಬೈ ಪ್ಲೇ ಆಫ್​ ಕನಸು ಭಗ್ನಗೊಂಡಿತು.

ಈ ಬಾರಿ ಟ್ರೋಫಿ ಗೆಲ್ಲುವ ನೆಚ್ಚಿನ ತಂಡಗಳ ಪೈಕಿ ಒಂದೆನಿಸಿಕೊಂಡಿದ್ದ ಮುಂಬೈ ಟೂರ್ನಿಯುದ್ದಕ್ಕೂ ಕಳಪೆ ಪ್ರದರ್ಶನ ತೋರಿತ್ತು. ಹಾರ್ದಿಕ್​ ಪಾಂಡ್ಯ ನೇತೃತ್ವದ ಈ ತಂಡ ಇದುವರೆಗೂ ಆಡಿರುವ 12 ಪಂದ್ಯಗಳ ಪೈಕಿ ಕೇವಲ 4ರಲ್ಲಿ ಗೆದ್ದು 8 ಪಂದ್ಯಗಳಲ್ಲಿ ಪರಾಭವಗೊಂಡಿದೆ. ತನ್ನ ಕೊನೆಯ ಎರಡು ಲೀಗ್​ ಪಂದ್ಯಗಳಲ್ಲಿ ಕೆಕೆಆರ್​ ಮತ್ತು ಲಕ್ನೋ ತಂಡಗಳನ್ನು ಎದುರಿಸಲಿದೆ. ಈ ಎರಡೂ ಪಂದ್ಯಗಳನ್ನು ಗೆದ್ದರೂ ತಂಡದ ಬಳಿ ಕೇವಲ 12 ಅಂಕ ಮಾತ್ರ ಇರುತ್ತದೆ. ಹಾಗಾಗಿ ಇದರಿಂದ ಯಾವುದೇ ಲಾಭವಾಗದು.

ಐಪಿಎಲ್​ ಆರಂಭಕ್ಕೂ ಮುನ್ನ ರೋಹಿತ್​ ಶರ್ಮಾ ಬದಲಿಗೆ ಹಾರ್ದಿಕ್​ ಪಾಂಡ್ಯರನ್ನು ಗುಜರಾತ್​ನಿಂದ ವಾಪಸ್​ ಕರೆತಂದು ಫ್ರಾಂಚೈಸಿ ನಾಯಕತ್ವ ಪಟ್ಟ ಕೊಟ್ಟಿತ್ತು. ಆದರೆ ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ತೋರಲು ಮುಂಬೈಗೆ ಸಾಧ್ಯವಾಗಲಿಲ್ಲ. ತಂಡ ಹ್ಯಾಟ್ರಿಕ್​ ಸೋಲು ಅನುಭವಿಸಿತು. ಅದಾದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್​ ಮತ್ತು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ವಿರುದ್ದ ಸತತ ಎರಡು ಪಂದ್ಯ ಗೆದ್ದು ಗೆಲುವಿನ ಟ್ರ್ಯಾಕ್​ಗೆ ಮರಳಿದಂತೆ ತೋರಿತಾದರೂ ಮುಂದಿನ ಪಂದ್ಯದಲ್ಲಿ ಸಿಎಸ್​ಕೆ ವಿರುದ್ದ ಸೋತು ನಂತರದ ಪಂದ್ಯದಲ್ಲಿ ಪಂಜಾಬ್​ ವಿರುದ್ಧ ಗೆಲುವು ಸಾಧಿಸಿತ್ತು. ಇದಾದ ನಂತರ ಸತತ ನಾಲ್ಕೂ ಪಂದ್ಯಗಳಲ್ಲಿ ತಂಡ ಗೆಲುವನ್ನೇ ಮೆರೆತು ಅಂಕಪಟ್ಟಿಯಲ್ಲಿ 9ನೇ ಸ್ಥಾನ ತಲುಪಿ ಪ್ಲೇ ಆಫ್​ ಕನಸು ಕೈಚೆಲ್ಲಿದೆ.

ಟಿ20 ನಂ1 ಬ್ಯಾಟರ್​ ಸೂರ್ಯಕುಮಾರ್​ ಯಾದವ್​, ಯಾರ್ಕರ್ ಸ್ಪೆಷಲಿಸ್ಟ್ ಬುಮ್ರಾ ಸೇರಿದಂತೆ ಅನೇಕ ಅನುಭವಿ ಆಟಗಾರರನ್ನು ತಂಡ ಹೊಂದಿದ್ದರೂ ಹಿನ್ನಡೆ ಅನುಭವಿಸಿರುವುದು ಅಭಿಮಾನಿಗಳಲ್ಲಿ ಬೇಸರ ತರಿಸಿದೆ.

ಉಳಿದ ತಂಡಗಳ ಪ್ಲೇ ಆಫ್ ಲೆಕ್ಕಾಚಾರ: ಐಪಿಎಲ್​ ಅಂತಿಮ ಘಟಕ್ಕೆ ತಲುಪಿದ್ದರೂ ಇಲ್ಲಿಯವರೆಗೂ ಯಾವುದೇ ತಂಡ ಪ್ಲೇಆಫ್‌ಗೆ ಅರ್ಹತೆ ಪಡೆದಿಲ್ಲ. ಪ್ರಸ್ತುತ ಅಂಕಪಟ್ಟಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮೊದಲ ಸ್ಥಾನದಲ್ಲಿದ್ದು, ರಾಜಸ್ಥಾನ ರಾಯಲ್ಸ್ (ಆರ್‌ಆರ್) ಎರಡನೇ ಸ್ಥಾನದಲ್ಲಿದೆ. ಉಭಯ ತಂಡಗಳು ಈವರೆಗೂ 11 ಪಂದ್ಯಗಳನ್ನು ಆಡಿದ್ದು, ಅವುಗಳಲ್ಲಿ ತಲಾ 8ರಲ್ಲಿ ಗೆದ್ದು 16 ಅಂಕಗಳೊಂದಿಗೆ ಸಮಬಲ ಸಾಧಿಸಿವೆ. ಈ ಎರಡೂ ತಂಡಗಳು ತಮ್ಮ ಮುಂದಿನ ಪಂದ್ಯದಲ್ಲಿ ಗೆದ್ದದ್ದೇ ಆದಲ್ಲಿ ಪ್ಲೇಆಫ್‌ಗೆ ಕ್ವಾಲಿಫೈ ಆಗಲಿವೆ. ಹೈದರಾಬಾದ್​ 14 ಅಂಕಗಳೊಂದಿಗೆ 3ನೇ ಸ್ಥಾನಕ್ಕೆ ತಲುಪಿದೆ.

ಚೆನ್ನೈ 12 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ನಂತರ, ದೆಹಲಿ ಕ್ಯಾಪಿಟಲ್ಸ್ (ಡಿಸಿ) ಮತ್ತು ಲಕ್ನೋ ಸೂಪರ್ ಜೈಂಟ್ಸ್ (ಎಲ್ಎಸ್‌ಜಿ) ಕ್ರಮವಾಗಿ ಐದು ಮತ್ತು ಆರನೇ ಸ್ಥಾನಗಳಲ್ಲಿವೆ. ಎರಡೂ ತಂಡಗಳೂ ತಲಾ 12 ಅಂಕಗಳನ್ನು ಹೊಂದಿವೆ.

ಇದರಲ್ಲಿ ಆರ್​ಸಿಬಿ, ಗುಜರಾತ್, ಪಂಜಾಬ್, ಪ್ಲೇ ಆಫ್‌ ಹಾದಿ ಸುಗಮವಲ್ಲದಿದ್ದರೂ ಈ ತಂಡಗಳು ಪ್ಲೇಆಫ್‌ ರೇಸ್​ನಿಂದ ಇನ್ನೂ ಅಧಿಕೃತವಾಗಿ ಹೊರಬಿದ್ದಿಲ್ಲ.

ಇದನ್ನೂ ಓದಿ: 3 ವರ್ಷಗಳ ಬಳಿಕ ಸ್ವದೇಶದಲ್ಲಿ ವಿಶ್ವ ಚಾಂಪಿಯನ್ ನೀರಜ್ ಚೋಪ್ರಾ ಕಣಕ್ಕೆ - Neeraj Chopra

Last Updated : May 9, 2024, 10:21 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.