ETV Bharat / sports

LSG VS KKR: ಲಕ್ನೋ ವಿರುದ್ಧ 98 ರನ್‌ಗಳಿಂದ ಗೆದ್ದ ಕೋಲ್ಕತ್ತಾ; ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನ - KKR Beat LSG - KKR BEAT LSG

ನಿನ್ನೆ ನಡೆದ IPL ಪಂದ್ಯದಲ್ಲಿ ಲಕ್ನೋ ವಿರುದ್ದ ಕೆಕೆಆರ್​ ತಂಡ ಗೆಲುವು ಸಾಧಿಸಿದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಕೆಕೆಆರ್​ ಆಲ್ರೌಂಡರ್​​ ಆಟಕ್ಕೆ ಮಣಿದ ಲಕ್ನೋ: ಅಗ್ರಸ್ಥಾನಕ್ಕೆ ಲಗ್ಗೆ ಇಟ್ಟ ಅಯ್ಯರ್​ ಪಡೆ
ಕೆಕೆಆರ್​ ಆಲ್ರೌಂಡರ್​​ ಆಟಕ್ಕೆ ಮಣಿದ ಲಕ್ನೋ: ಅಗ್ರಸ್ಥಾನಕ್ಕೆ ಲಗ್ಗೆ ಇಟ್ಟ ಅಯ್ಯರ್​ ಪಡೆ (AP)
author img

By PTI

Published : May 6, 2024, 7:23 AM IST

ಲಕ್ನೋ: ಭಾನುವಾರ ರಾತ್ರಿ ನಡೆದ ಐಪಿಎಲ್​ನ 54ನೇ ಪಂದ್ಯದಲ್ಲಿ ಲಕ್ನೋ ಸೂಪರ್​ ಜೈಂಟ್ಸ್​ ವಿರುದ್ದ ಕೋಲ್ಕತ್ತಾ ನೈಟ್​ ರೈಡರ್ಸ್ ಸರ್ವಾಂಗೀಣ ಪ್ರದರ್ಶನ ತೋರಿ ವಿಜಯ ಪತಾಕೆ ಹಾರಿಸಿದೆ. ಇದರೊಂದಿಗೆ ಟೂರ್ನಿಯಲ್ಲಿ 8ನೇ ಗೆಲುವು ಸಾಧಿಸಿದ್ದು, ಪಾಯಿಂಟ್ ಪಟ್ಟಿಯಲ್ಲಿ ರಾಜಸ್ಥಾನ್​ ರಾಯಲ್ಸ್​ ಅನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದೆ. ಇದೇ ವೇಳೆ ಪ್ಲೇ ಆಫ್​ ಸ್ಥಾನವನ್ನೂ ಬಹುತೇಕ ಖಚಿತಪಡಿಸಿಕೊಂಡಿದೆ. ಮತ್ತೊಂದೆಡೆ, ಲಕ್ನೋ ಒಂದು ಸ್ಥಾನ ಕುಸಿದು ಐದನೇ ಸ್ಥಾನದಲ್ಲಿದೆ.

ಲಕ್ನೋದ ಏಕನಾ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಕೋಲ್ಕತ್ತಾ ನೀಡಿದ್ದ 236 ರನ್‌ಗಳ ಬೃಹತ್​ ಗುರಿ ಬೆನ್ನತ್ತಿದ ಲಕ್ನೋ 16.1 ಓವರ್‌ಗಳಲ್ಲಿ 137 ರನ್‌ಗಳಿಗೆ ಸರ್ವಪತನ ಕಂಡಿತು. ಲಕ್ನೋ ಪರ ಮಾರ್ಕಸ್ ಸ್ಟೋನಿಸ್ (36) ಹೈ ಸ್ಕೋರರ್​ ಎನಿಸಿಕೊಂಡರು. ನಾಯಕ ಕೆ.ಎಲ್.ರಾಹುಲ್ 25 ರನ್ ಗಳಿಸಿದರು. ಈ ಇಬ್ಬರ ಹೊರತಾಗಿ ಯಾವೊಬ್ಬ ಬ್ಯಾಟರ್ ಕೂಡಾ 20 ರನ್‌ಗಳಿಸಲು ಸಾಧ್ಯವಾಗದೆ ತಂಡ 98 ರನ್​ಗಳಿಂದ ಸೋಲೊಪ್ಪಿಕೊಂಡಿತು.

ಕೋಲ್ಕತ್ತಾ ಪರ ವರುಣ್ ಚಕ್ರವರ್ತಿ ಮತ್ತು ಹರ್ಷಿತ್ ರಾಣಾ ತಲಾ 3 ವಿಕೆಟ್ ಪಡೆದರೆ, ಆಂಡ್ರೆ ರಸೆಲ್ 2 ವಿಕೆಟ್​ ಕಬಳಿಸಿದರು.

ಮೊದಲ ಇನ್ನಿಂಗ್ಸ್​: ಇದಕ್ಕೂ ಮೊದಲು ಟಾಸ್​ ಸೋತು ಬ್ಯಾಟಿಂಗ್ ಮಾಡಿದ ಕೆಕೆಆರ್​ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ ಬೃಹತ್​ ಮೊತ್ತ ಪೇರಿಸಿತು. ಆರಂಭಿಕ ಬ್ಯಾಟರ್​ಗಳಾದ ಫಿಲ್​ ಸಾಲ್ಟ್​ ಮತ್ತು ನರೈನ್ ಜೋಡಿ ಪವರ್​ ಪ್ಲೇನಲ್ಲಿ ಮತ್ತೊಮ್ಮೆ ಅಬ್ಬರಿಸಿದರು. ಈ ಇಬ್ಬರು ಮೊದಲ ವಿಕೆಟ್​ಗೆ 61 ರನ್​ಗಳ ಜೊತೆಯಾಟವಾಡಿದರು. ಬಿರುಸಿನ ಬ್ಯಾಟ್​ ಮಾಡಿದ್ದ ಸಾಲ್ಟ್​ 32 ರನ್​ಗಳಿಸಿ ನಿರ್ಗಮಿಸಿದರೆ, ನರೈನ್ 39 ಎಸೆತಗಳಲ್ಲಿ 81 ರನ್​ ಸಿಡಿಸಿ ನಿರ್ಗಮಿಸಿದರು.

ಉಳಿದಂತೆ, ರಸೆಲ್​ (12), ರಘುವಂಶಿ (32), ಶ್ರೇಯಸ್​​ ಅಯ್ಯರ್​ (23), ರಮಣ್​ದೀಪ್​ ಸಿಂಗ್​ (25) ರನ್​ಗಳ ಕೊಡುಗೆ ನೀಡಿ ತಂಡದ್​ ಸ್ಕೋರ್​ 235ರ ಗಡಿ ತಲುಪಲು ನೆರವಾದರು. ಲಕ್ನೋ ಪರ ನವೀನ್​ ಉಲ್​​ ಹಕ್​, 3, ಯಶ್​​ ಠಾಕೂರ್​, ಬಿಷ್ಣೋಯಿ, ಯಧುವೀರ್​ ಸಿಂಗ್​ ತಲಾ ಒಂದು ವಿಕೆಟ್​ ಪಡೆದರು.

ಇದನ್ನೂ ಓದಿ: ಅಕ್ಟೋಬರ್​ 3 ರಿಂದ ಮಹಿಳಾ ಟಿ20 ವಿಶ್ವಕಪ್​ ಹಂಗಾಮ: ಭಾರತದ ಪಂದ್ಯಗಳು ಹೀಗಿವೆ - WOMEN T20 WORLD CUP

ETV Bharat Logo

Copyright © 2025 Ushodaya Enterprises Pvt. Ltd., All Rights Reserved.