ನವದೆಹಲಿ: ಐಪಿಎಲ್ 2024ರ 36ನೇ ಪಂದ್ಯ ಇಂದು ಮಧ್ಯಾಹ್ನ ಕೆಕೆಆರ್ ಮತ್ತು ಆರ್‌ಸಿಬಿ ನಡುವೆ ನಡೆಯಲಿದೆ. ಪ್ರಸಕ್ತ ಋತುವಿನಲ್ಲಿ ಸತತ ಸೋಲು ಅನುಭವಿಸಿರುವ ಆರ್‌ಸಿಬಿ ತಂಡಕ್ಕೆ ಕೋಲ್ಕತ್ತಾ ಕಠಿಣ ಸವಾಲಾಗುವ ಸಾಧ್ಯತೆ ಇದೆ. ಆರ್‌ಸಿಬಿ ಅತ್ಯಂತ ನಿಷ್ಠಾವಂತ ಮತ್ತು ದೊಡ್ಡ ಅಭಿಮಾನಿ ಬಳಗ ಹೊಂದಿದ್ದು ತಂಡ ಅಭಿಮಾನಿಗಳನ್ನು ಪದೇ ಪದೇ ನಿರಾಶೆಗೊಳಿಸುತ್ತಿದೆ.
ಆರ್‌ಸಿಬಿ ಇಲ್ಲಿಯವರೆಗೆ 7 ಪಂದ್ಯಗಳನ್ನಾಡಿದ್ದು, ಈ ಪೈಕಿ ಕೇವಲ ಒಂದು ಪಂದ್ಯ ಗೆದ್ದು 6ರಲ್ಲಿ ಸೋತಿದೆ. ಪಂಜಾಬ್ ವಿರುದ್ಧದ ಎರಡನೇ ಪಂದ್ಯದಲ್ಲಿ ಬೆಂಗಳೂರು ಗೆದ್ದಿತ್ತು. ಕೋಲ್ಕತ್ತಾ ನೈಟ್ ರೈಡರ್ಸ್ ಆಡಿರುವ 6 ಪಂದ್ಯಗಳಲ್ಲಿ 4 ಗೆದ್ದಿದೆ. ಎರಡು ಪಂದ್ಯಗಳಲ್ಲಿ ಸೋತಿದೆ. ಪಾಯಿಂಟ್ ಪಟ್ಟಿಯಲ್ಲಿ ಕೋಲ್ಕತ್ತಾ ಮೂರನೇ ಸ್ಥಾನದಲ್ಲಿದ್ದರೆ, ಬೆಂಗಳೂರು ಹತ್ತನೇ ಸ್ಥಾನದಲ್ಲಿದೆ.
ಆರ್‌ಸಿಬಿ ದೌರ್ಬಲ್ಯ: ಆರ್‌ಸಿಬಿ ತಂಡದ ಬೌಲಿಂಗ್ ನಿರಾಶಾದಾಯಕವಾಗಿದೆ. ಇನ್ನು, ವಿರಾಟ್ ಕೊಹ್ಲಿಯನ್ನು ಬಿಟ್ಟರೆ ಬ್ಯಾಟರ್‌ಗಳೂ ಕೂಡ ಉತ್ತಮ ಪ್ರದರ್ಶನ ನೀಡುತ್ತಿಲ್ಲ. ತಂಡವು ಕೊಹ್ಲಿ ಬಲದ ಮೇಲೆ ಮಾತ್ರ ಆಡುತ್ತಿದೆ ಎಂದು ತೋರುತ್ತದೆ. ಬೌಲಿಂಗ್ ಮಾತ್ರವಲ್ಲದೆ ಬ್ಯಾಟರ್‌ಗಳೂ ಕೂಡ ವಿಶೇಷ ಪ್ರದರ್ಶನ ನೀಡುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಬೇಕಿದೆ.
ಕೆಕೆಆರ್ ಬಲ: ಕೋಲ್ಕತ್ತಾ ಅದ್ಭುತ ಪ್ರದರ್ಶನ ನೀಡುತ್ತಿದೆ. ಸುನಿಲ್ ನರೈನ್ ರಾಜಸ್ಥಾನ ವಿರುದ್ಧವೂ ಶತಕ ಬಾರಿಸಿ ತಂಡಕ್ಕೆ ಉತ್ತಮ ಆರಂಭ ನೀಡಿದ್ದರು. ಬೌಲಿಂಗ್‌ನಲ್ಲಿ ಹರ್ಷಿತ್ ರಾಣಾ ಮತ್ತು ನರೈನ್ ಅವರ ಪ್ರದರ್ಶನ ಉತ್ತಮವಾಗಿದೆ. ತಂಡಕ್ಕೆ ಒಬ್ಬ ಅಥವಾ ಇನ್ನೊಬ್ಬ ಆಟಗಾರನ ಅಗತ್ಯವಿರುವಾಗ ಅವರು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.
ಕೆಕೆಆರ್ ವಿರುದ್ಧ 19 ಬಾರಿ ಆರ್‌ಸಿಬಿ ಮೇಲುಗೈ: ಉಭಯ ತಂಡಗಳ ನಡುವೆ ನಡೆದ ಐಪಿಎಲ್ ಪಂದ್ಯಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೆಕೆಆರ್ ವಿರುದ್ಧ ಮೇಲುಗೈ ಸಾಧಿಸಿದೆ. ಇತ್ತಂಡಗಳ ನಡುವೆ ನಡೆದ 33 ಪಂದ್ಯಗಳಲ್ಲಿ ಆರ್‌ಸಿಬಿ 19 ಮತ್ತು ಕೋಲ್ಕತ್ತಾ 13ರಲ್ಲಿ ಜಯ ಸಾಧಿಸಿದೆ. ಎರಡು ತಂಡಗಳ ನಡುವೆ ಈಡನ್ ಗಾರ್ಡನ್‌ನಲ್ಲಿ ಒಟ್ಟು 11 ಪಂದ್ಯಗಳು ನಡೆದಿದ್ದು, ಇದರಲ್ಲಿ ಕೋಲ್ಕತ್ತಾ 7 ಪಂದ್ಯಗಳನ್ನು ಗೆದ್ದಿದೆ ಮತ್ತು ಆರ್‌ಸಿಬಿ 4 ಪಂದ್ಯಗಳನ್ನು ಜಯಗಳಿಸಿದೆ.
ಇಂದಿನ ಪಂದ್ಯ 2: ಪಂಜಾಬ್ ಕಿಂಗ್ಸ್ Vs ಗುಜರಾತ್ ಟೈಟಾನ್ಸ್: ಐಪಿಎಲ್‌ನ 37ನೇ ಪಂದ್ಯದಲ್ಲಿ ಇಂದು ಪಂಜಾಬ್ ಕಿಂಗ್ಸ್ ತಂಡ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯ ಪಂಜಾಬ್‌ನ ಮಹಾರಾಜ ಯದ್ವೇಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ರಾತ್ರಿ 7:30ಕ್ಕೆ ಆರಂಭವಾಗಲಿದೆ. ಪಂಜಾಬ್ ತಂಡ ತನ್ನ ತವರು ಮೈದಾನದ ಲಾಭ ಪಡೆಯಲು ಉತ್ಸುಕವಾಗಿದೆ. ಆದರೆ, ಗುಜರಾತ್ ಕಳೆದ ಪಂದ್ಯದಲ್ಲಿ ಅನುಭವಿಸಿದ ಸೋಲು ಮರೆತು ಇಂದಿನ ಪಂದ್ಯದಲ್ಲಿ ಗೆಲುವು ದಾಖಲಿಸಲು ತಂತ್ರ ಹೆಣೆದಂತೆ ಕಾಣಿಸುತ್ತಿದೆ.
ಈ ಋತುವಿನಲ್ಲಿ PBKS & GT ಪ್ರದರ್ಶನ: ಪಿಬಿಕೆಎಸ್ ಮತ್ತು ಜಿಟಿ ಪ್ರದರ್ಶನ ಏರಿಳಿತಗಳಿಂದ ಕೂಡಿದೆ. ಜಿಟಿ 7 ಪಂದ್ಯಗಳಲ್ಲಿ 3ರಲ್ಲಿ ಗೆಲುವು ಸಾಧಿಸಿದೆ. ಇದರೊಂದಿಗೆ ಶುಭಮನ್ ಗಿಲ್ ಬಳಗ 4 ಪಂದ್ಯಗಳಲ್ಲಿ ಸೋಲು ಕಂಡಿದೆ. ಸದ್ಯ ಅಂಕಪಟ್ಟಿಯಲ್ಲಿ ಜಿಟಿ 6 ಅಂಕಗಳೊಂದಿಗೆ 8ನೇ ಸ್ಥಾನದಲ್ಲಿ ಮುಂದುವರಿದಿದೆ. ಪಿಬಿಕೆಎಸ್ 7 ಪಂದ್ಯಗಳಲ್ಲಿ 5 ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದು 2 ಪಂದ್ಯಗಳಲ್ಲಿ ಮಾತ್ರ ಗೆದ್ದಿದೆ. ಪಂಜಾಬ್ 4 ಅಂಕಗಳೊಂದಿಗೆ 9ನೇ ಸ್ಥಾನದಲ್ಲಿ ಮುಂದುವರಿದಿದೆ.
ಪಂಜಾಬ್ ಮತ್ತು ಗುಜರಾತ್ ನಡುವೆ ಇದುವರೆಗೆ ಒಟ್ಟು 4 ಪಂದ್ಯಗಳು ನಡೆದಿವೆ. ಎರಡೂ ತಂಡಗಳು 2-2 ಪಂದ್ಯಗಳನ್ನು ಗೆದ್ದು, 2-2 ಪಂದ್ಯಗಳಲ್ಲಿ ಸೋತಿವೆ. ಇತ್ತಂಡಗಳ ನಡುವೆ ಸಮಾನ ಸ್ಪರ್ಧೆ ಏರ್ಪಟ್ಟಿದೆ. ಈಗ ಮುಲ್ಲನ್‌ಪುರದಲ್ಲಿ ಎರಡು ತಂಡಗಳು ಜಯ ಗಳಿಸುವ ಉತ್ಸಾಹದಲ್ಲಿವೆ.
ಪಿಚ್ ವರದಿ: ಪಂಜಾಬ್‌ನ ಹೊಸ ಕ್ರೀಡಾಂಗಣ ಮುಲ್ಲನ್‌ಪುರದಲ್ಲಿ ಹೆಚ್ಚಿನ ಪಂದ್ಯಗಳು ನಡೆದಿಲ್ಲ. ಈ ಪಿಚ್‌ನಲ್ಲಿ ಇದುವರೆಗೆ ಆಡಿದ ಪಂದ್ಯಗಳ ಸಂಖ್ಯೆಯನ್ನು ನಿರ್ಣಯಿಸಿದರೆ, ಇಲ್ಲಿನ ಪಿಚ್ ಸಾಕಷ್ಟು ವೇಗವಾಗಿದೆ ಎಂದು ತೋರುತ್ತಿದೆ. ಈ ಮೈದಾನದಲ್ಲಿ ಹೊಸ ಬಾಲ್ನೊಂದಿಗೆ, ವೇಗದ ಬೌಲರ್‌ಗಳು ಉತ್ತಮ ಸ್ವಿಂಗ್ ಮತ್ತು ಬೌನ್ಸ್ ಪಡೆಯುತ್ತಾರೆ ಮತ್ತು ವಿಕೆಟ್‌ಗಳನ್ನು ಪಡೆಯುವುದನ್ನು ಕಾಣಬಹುದು. ಕೆಲವೊಮ್ಮೆ ಇಲ್ಲಿನ ಬೌನ್ಸ್ ಬೌಲರ್‌ಗಳ ಶತ್ರು ಮತ್ತು ಬ್ಯಾಟ್ಸ್‌ಮನ್‌ಗಳಿಗೆ ಪ್ಲಸ್ ಆಗುತ್ತದೆ. ಟಾಸ್ ಗೆದ್ದ ನಂತರ ನಾಯಕನು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಬಹುದು.
ಪಂಜಾಬ್ ಕಿಂಗ್ಸ್ ಬಲಾಬಲ: ಗಾಯದ ಸಮಸ್ಯೆಯಿಂದ ಶಿಖರ್ ಧವನ್ ಪ್ಲೇಯಿಂಗ್ 11ನಿಂದ ಹೊರಗುಳಿದಿದ್ದಾರೆ. ಅಗ್ರ ಕ್ರಮಾಂಕದ ಬ್ಯಾಟರ್‌ಗಳಾದ ಜಾನಿ ಬೈರ್‌ಸ್ಟೋವ್ ಮತ್ತು ಪ್ರಭಾಸಿಮ್ರಾನ್ ಸಿಂಗ್ ಕಳಪೆ ಫಾರ್ಮ್‌ನಿಂದಾಗಿ ತಂಡಕ್ಕೆ ಉತ್ತಮ ಆರಂಭ ನೀಡಲು ಸಾಧ್ಯವಾಗುತ್ತಿಲ್ಲ. ಆದರೆ, ಯುವ ಬ್ಯಾಟರ್‌ಗಳಾದ ಶಶಾಂಕ್ ಸಿಂಗ್ ಮತ್ತು ಅಶುತೋಷ್ ಶರ್ಮಾ ಅವರ ರನ್ ಗಳಿಕೆ ತಂಡದ ಶಕ್ತಿ. ಬೌಲಿಂಗ್‌ನಲ್ಲಿ ಅರ್ಷದೀಪ್ ಸಿಂಗ್, ಕಗಿಸೊ ರಬಾಡ, ಹರ್ಷಲ್ ಪಟೇಲ್ ಮತ್ತು ಹರ್‌ಪ್ರೀತ್ ಬರಾರಾ ತಂಡದ ಶಕ್ತಿಯಾಗಿ ಉಳಿದಿದ್ದಾರೆ. ಪ್ಲೇಯಿಂಗ್-11ರಲ್ಲಿ ಉತ್ತಮ ಆಲ್ರೌಂಡರ್ಗಳು ಇಲ್ಲದಿರುವುದು ತಂಡದ ದೌರ್ಬಲ್ಯ.
ಗುಜರಾತ್ ಟೈಟಾನ್ಸ್: ಸಾಮರ್ಥ್ಯ, ದೌರ್ಬಲ್ಯಗಳೇನು?: ಅಗ್ರ ಕ್ರಮಾಂಕದ ಜೊತೆಗೆ ಶುಭಮಾನ್ ಗಿಲ್ ಉತ್ತಮ ಆರಂಭ ನೀಡಲು ಸಾಧ್ಯವಾಗದಿದ್ದರೆ, ನಂತರ ಬರುವ ಬ್ಯಾಟ್ಸ್‌ಮನ್‌ಗಳು ಒತ್ತಡದಲ್ಲಿ ಚದುರಿಹೋಗುತ್ತಾರೆ. ಕಳೆದ ಪಂದ್ಯದಲ್ಲೂ ತಂಡ 89 ರನ್‌ಗಳಿಗೆ ಆಲೌಟ್ ಆಗಿತ್ತು. ಇಂತಹ ಪರಿಸ್ಥಿತಿಯಲ್ಲಿ ತಂಡದ ಬ್ಯಾಟರ್‌ಗಳು ತುಸು ದುರ್ಬಲರಾಗಿ ಕಾಣುತ್ತಾರೆ. ಬೌಲಿಂಗ್‌ನಲ್ಲಿ ರಶೀದ್ ಖಾನ್ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಮೋಹಿತ್ ಶರ್ಮಾ ಹೊರತುಪಡಿಸಿ ಯಾವುದೇ ಬೌಲರ್‌ಗೆ ಕೊನೆಯ ಓವರ್‌ಗಳಲ್ಲಿ ರನ್‌ಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ತಂಡದ ಬೌಲಿಂಗ್ ವಿಭಾಗ ಕೂಡ ಸ್ವಲ್ಪ ದುರ್ಬಲವಾಗಿ ಕಾಣುತ್ತಿದೆ. ತಂಡದಲ್ಲಿ ದೊಡ್ಡ ಆಲ್ರೌಂಡರ್ಗಳ ಕೊರತೆಯೂ ಸ್ಪಷ್ಟವಾಗಿ ಗೋಚರಿಸುತ್ತಿದೆ. ತಂಡದ ನಾಯಕ ಗಿಲ್ ತಂಡದ ಶಕ್ತಿ ಎನ್ನಬಹುದು.
ಎರಡು ತಂಡಗಳ ಸಂಭಾವ್ಯ ಆಟಗಾರರು- ಪಂಜಾಬ್ ಕಿಂಗ್ಸ್: ಜಾನಿ ಬೈರ್‌ಸ್ಟೋವ್, ಅಥರ್ವ ತಾಯೆದ್, ಪ್ರಭ್‌ಸಿಮ್ರಾನ್ ಸಿಂಗ್, ಸ್ಯಾಮ್ ಕರ್ರಾನ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಶಶಾಂಕ್ ಸಿಂಗ್, ಹರ್‌ಪ್ರೀತ್ ಬ್ರಾರ್, ಹರ್ಷಲ್ ಪಟೇಲ್, ಅರ್ಶ್‌ದೀಪ್ ಸಿಂಗ್, ಕಗಿಸೊ ರಬಾಡ.
ಗುಜರಾತ್ ಟೈಟಾನ್ಸ್: ಶುಭಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ವಿಜಯ್ ಶಂಕರ್, ಅಭಿನವ್ ಮನೋಹರ್, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ರಾಹುಲ್ ತೆವಾಟಿಯಾ, ರಶೀದ್ ಖಾನ್, ಉಮೇಶ್ ಯಾದವ್, ಸ್ಪೆನ್ಸರ್ ಜಾನ್ಸನ್, ನೂರ್ ಅಹ್ಮದ್, ಮೋಹಿತ್ ಶರ್ಮಾ.