ETV Bharat / sports

ಐಪಿಎಲ್ 2024: ಜಿಯೋ ಸಿನಿಮಾದಲ್ಲಿ 12 ಭಾಷೆಗಳಲ್ಲಿ ವೀಕ್ಷಕ ವಿವರಣೆ, ಹೀಗಿದೆ ದಿಗ್ಗಜರ ಪಟ್ಟಿ - IPL 2024

17ನೇ ಆವೃತ್ತಿಯ ಐಪಿಎಲ್​ ಜಿಯೋ ಸಿನಿಮಾದಲ್ಲಿ ನೇರಪ್ರಸಾರವಾಗಲಿದೆ. 12 ಭಾಷೆಗಳಲ್ಲಿ ಕ್ರಿಕೆಟ್​ ವೀಕ್ಷಕ ವಿವರಣೆ ಲಭ್ಯವಿದೆ. ಮಾಜಿ ಕ್ರಿಕೆಟಿಗರು ಸೇರಿದಂತೆ ದಿಗ್ಗಜರು ಕ್ರಿಕೆಟ್​ನ ರಸದೌತಣ ನೀಡಲಿದ್ದಾರೆ.

ಐಪಿಎಲ್ 2024
ಐಪಿಎಲ್ 2024
author img

By ETV Bharat Karnataka Team

Published : Mar 20, 2024, 3:56 PM IST

ಬೆಂಗಳೂರು: ಮನರಂಜನೆಯ ಮಹಾಪೂರ ಹರಿಸುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್​) ಇದೇ ಮಾರ್ಚ್​ 22 ರಿಂದ ಆರಂಭವಾಗಲಿದ್ದು, ಜಿಯೋ ಸಿನಿಮಾದಲ್ಲಿ ನೇರಪ್ರಸಾರವಾಗಲಿದೆ. ಇದಕ್ಕಾಗಿ ತನ್ನ ಕ್ರಿಕೆಟ್ ತಜ್ಞರ ಸಮಿತಿಯಲ್ಲಿರುವ ಕಾಮೆಂಟರ್​ಗಳ ಪಟ್ಟಿಯನ್ನ ಜಿಯೋ ಸಿನೆಮಾ ಅನಾವರಣ ಮಾಡಿದೆ.

ವಿಶ್ವದ ಖ್ಯಾತ ಟಿ-20 ಕ್ರಿಕೆಟ್ ಲೀಗ್ ಎನಿಸಿರುವ ಐಪಿಎಲ್ ಕನ್ನಡ, ಇಂಗ್ಲಿಷ್, ಹಿಂದಿ, ಮರಾಠಿ, ಗುಜರಾತಿ, ಭೋಜ್​​ಪುರಿ, ಪಂಜಾಬಿ, ಬಂಗಾಳಿ, ತಮಿಳು, ತೆಲುಗು, ಮಲಯಾಳಂ ಸೇರಿದಂತೆ 12 ಭಾಷೆಗಳಲ್ಲಿ ಜಿಯೋ ಸಿನೆಮಾದಲ್ಲಿ ಉಚಿತವಾಗಿ ಪ್ರಸಾರವಾಗಲಿದೆ.

ಈ ಬಾರಿ ಜಿಯೋ ಸಿನಿಮಾದಲ್ಲಿ ಹೊಸದಾಗಿ ಪರಿಚಯಿಸಲಾಗಿರುವ ಹರಿಯಾನ್ವಿ ಭಾಷೆಯ ಕಾಮೆಂಟರಿಯನ್ನು ಭಾರತದ ಮಾಜಿ ಕ್ರಿಕೆಟರ್​​ ವೀರೇಂದ್ರ ಸೆಹ್ವಾಗ್​ ಮುನ್ನಡೆಸಲಿದ್ದಾರೆ. ಅಜಯ್ ಜಡೇಜಾ ಗುಜರಾತಿ ಭಾಷೆಯಲ್ಲಿ ಪದಾರ್ಪಣೆ ಮಾಡಲಿದ್ದಾರೆ. ಇನ್ನು ಮಾಜಿ ಆಸೀಸ್ ಕ್ರಿಕೆಟಿಗ ಶೇನ್ ವ್ಯಾಟ್ಸನ್ ಮತ್ತು ನ್ಯೂಜಿಲೆಂಡ್ ಮಾಜಿ ಕೋಚ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಕ್ರಿಕೆಟ್ ನಿರ್ದೇಶಕ ಮೈಕ್ ಹೆಸ್ಸನ್ ಸಹ ಜಿಯೋ ಸಿನಿಮಾದ ವೀಕ್ಷಕ ವಿವರಣೆಗಾರರ ಪಟ್ಟಿಯಲ್ಲಿದ್ದಾರೆ.

''ಕಳೆದ ಐಪಿಎಲ್ ಲೀಗ್‌ನಲ್ಲಿ ಜಿಯೋ ಸಿನಿಮಾದ ಪ್ರಸ್ತುತಿಗೆ ವೀಕ್ಷಕರು, ಜಾಹೀರಾತುದಾರರು ಮತ್ತು ಕ್ರಿಕೆಟ್ ಅಭಿಮಾನಿಗಳಿಂದ ನಾವು ಪಡೆದ ಪ್ರತಿಕ್ರಿಯೆ ಹೃದಯಸ್ಪರ್ಶಿಯಾಗಿದೆ. ಈ ಬಾರಿ ಮತ್ತಷ್ಟು ಆಯ್ಕೆಗಳನ್ನ ನೀಡಲಾಗುತ್ತಿದೆ. ವೀರೇಂದ್ರ ಸೆಹ್ವಾಗ್ ಅವರಂಥಹ ದಿಗ್ಗಜ ಕ್ರಿಕೆಟಿಗರನ್ನ ಹರಿಯಾನ್ವಿ ಕಾಮೆಂಟರಿಗೆ ಪರಿಚಯಿಸುತ್ತಿದ್ದೇವೆ'' ಎಂದು ವಯಾಕಾಮ್18ನ ಕ್ರೀಡಾ ಮುಖ್ಯಸ್ಥ ಸಿದ್ಧಾರ್ಥ್ ಶರ್ಮಾ ಹೇಳಿದರು.

ಕಾಮೆಂಟರಿ ಪ್ಯಾನೆಲ್ ಹೀಗಿದೆ:

ಕನ್ನಡ: ಎಸ್.ಅರವಿಂದ್, ಅಮಿತ್ ವರ್ಮಾ, ವೇದಾ ಕೃಷ್ಣಮೂರ್ತಿ, ಎಚ್​.ಎಸ್ ಶರತ್, ಭರತ್ ಚಿಪ್ಲಿ, ಸುಜಯ್ ಶಾಸ್ತ್ರಿ, ರಾಘವೇಂದ್ರ ರಾಜ್, ಸುಮಂತ್ ಭಟ್, ರೀನಾ ಡಿಸೋಜಾ, ಕೆ ಶ್ರೀನಿವಾಸ್ ಮೂರ್ತಿ, ವಿ.ಕೌಶಿಕ್, ಅಂಕಿತಾ ಅಮರ್.

ಇಂಗ್ಲಿಷ್: ಕ್ರಿಸ್ ಗೇಲ್, ಎಬಿ ಡಿವಿಲಿಯರ್ಸ್, ಶೇನ್ ವ್ಯಾಟ್ಸನ್, ಇಯಾನ್ ಮಾರ್ಗನ್, ಬ್ರೆಟ್ ಲೀ, ಮೈಕ್ ಹೆಸ್ಸನ್, ಅನಿಲ್ ಕುಂಬ್ಳೆ, ರಾಬಿನ್ ಉತ್ತಪ್ಪ, ಗ್ರೇಮ್ ಸ್ಮಿತ್, ಸ್ಕಾಟ್ ಸ್ಟೈರಿಸ್, ಸಂಜನಾ ಗ್ಯಾನೆಸನ್, ಸುಹೈಲ್ ಚಂದೋಕ್.

ಹಿಂದಿ: ಜಹೀರ್ ಖಾನ್, ಸುರೇಶ್ ರೈನಾ, ಪಾರ್ಥಿವ್ ಪಟೇಲ್, ಆರ್​​.ಪಿ. ಸಿಂಗ್, ಪ್ರಗ್ಯಾನ್ ಓಜಾ, ಆಕಾಶ್ ಚೋಪ್ರಾ, ನಿಖಿಲ್ ಚೋಪ್ರಾ, ಸಬಾ ಕರೀಮ್, ಅನಂತ್ ತ್ಯಾಗಿ, ರಿಧಿಮಾ ಪಾಠಕ್.

ಮರಾಠಿ: ಕೇದಾರ್ ಜಾಧವ್, ಧವಳ್ ಕುಲಕರ್ಣಿ, ಕಿರಣ್ ಮೋರೆ, ಸಿದ್ದೇಶ್ ಲಾಡ್, ಪ್ರಸನ್ನ ಸಂತ್, ಚೈತನ್ಯ ಸಂತ್, ಕುನಾಲ್ ಡೇಟ್

ಗುಜರಾತಿ: ಅಜಯ್ ಜಡೇಜಾ, ಮನ್ಪ್ರೀತ್ ಜುನೇಜಾ, ರಾಕೇಶ್ ಪಟೇಲ್, ಭಾರ್ಗವ್ ಭಟ್, ಶೆಲ್ಡನ್ ಜಾಕ್ಸನ್, ಅತುಲ್ ಬೆಡಾಡೆ, ರಾಜ್ ಅಸಿಮ್.

ಭೋಜ್​ಪುರಿ: ಮೊಹಮ್ಮದ್ ಸೈಫ್, ಶಿವಂ ಸಿಂಗ್, ಸತ್ಯ ಪ್ರಕಾಶ್, ಗುಲಾಮ್ ಹುಸೇನ್, ಸೌರಭ್ ಕುಮಾರ್, ವಿಶಾಲ್ ಆದಿತ್ಯ ಸಿಂಗ್, ಶಾಲಿನಿ ಸಿಂಗ್, ಸುಮಿತ್ ಕುಮಾರ್, ಅಶುತೋಷ್ ಅಮನ್, ರವಿ ಕಿಶನ್ಸ್.

ಬಂಗಾಳಿ: ಜೂಲನ್ ಗೋಸ್ವಾಮಿ, ಸುಭೋಮೋಯ್ ದಾಸ್, ಶ್ರೀವತ್ಸ್ ಗೋಸ್ವಾಮಿ, ಅನುಸ್ತುಪ್ ಮಜುಂದಾರ್, ಸಂಜೀವ್ ಮುಖರ್ಜಿ, ಸರದಿಂಡು ಮುಖರ್ಜಿ, ಅನಿಂದ್ಯಾ ಸೇನ್ ಗುಪ್ತಾ, ದೇಬಿ ಸಹಾ.

ಹರಿಯಾನ್ವಿ: ವೀರೇಂದ್ರ ಸೆಹ್ವಾಗ್, ಮನ್ವಿಂದರ್ ಬಿಸ್ಲಾ, ಸೋನು ಶರ್ಮಾ, ರಾಜ್ ಕಿಸ್ನಾ, ರವೀನ್ ಕುಂಡು, ಪ್ರೀತಿ ದಹಿಯಾ.

ಮಲಯಾಳಂ: ಸಚಿನ್ ಬೇಬಿ, ರೋಹನ್ ಪ್ರೇಮ್, ರೈಫಿ ಗೊಮೆಜ್, ಸೋನಿ ಚೆರುವತ್ತೂರ್, ಮನು ಕೃಷ್ಣನ್, ವಿ.ಎ.ಜಗದೀಶ್, ಎಂ.ಡಿ.ನಿದೀಶ್, ಅಜು ಜಾನ್ ಥಾಮಸ್, ರೇಣು ಜೋಸೆಫ್, ಬಿನೋಯ್.

ತಮಿಳು: ಅಭಿನವ್ ಮುಕುಂದ್, ರಾವ್ ಶ್ರೀಧರ್, ಸುಧೀರ್ ಶ್ರೀನಿವಾಸನ್, ಭಗವತಿ ಪ್ರಸಾದ್, ವಿದ್ಯುತ್ ಶಿವರಾಮಕೃಷ್ಣನ್, ಬಾಬಾ ಅಪ್ರಜಿತ್, ಬಾಬಾ ಇಂದ್ರಜಿತ್, ಅನಿರುದ್ಧ ಶ್ರೀಕಾಂತ್, ಕೆ.ಬಿ. ಅರುಣ್ ಕಾರ್ತಿಕ್, ಸಮೀನಾ ಅನ್ವರ್, ಅಶ್ವಥ್ ಬೊಬೊ.

ತೆಲುಗು: ಹನುಮ ವಿಹಾರಿ, ವೆಂಕಟಪತಿ ರಾಜು, ಅಕ್ಷತ್ ರೆಡ್ಡಿ, ಆಶಿಶ್ ರೆಡ್ಡಿ, ಸಂದೀಪ್ ಬವನಕ, ಕಲ್ಯಾಣ್ ಕೊಲ್ಲರಾಪು, ಆರ್.ಜೆ.ಹೇಮಂತ್, ಪ್ರತ್ಯೂಷಾ, ಆರ್.ಜೆ.ಕೌಶಿಕ್, ಸುನೀತಾ ಆನಂದ್.

ಪಂಜಾಬಿ: ಸರಣ್​ದೀಪ್ ಸಿಂಗ್, ರಾಹುಲ್ ಶರ್ಮಾ, ವಿರ್​ವಿ ಸಿಂಗ್, ರೀತಿಂದರ್ ಸಿಂಗ್ ಸೋಧಿ, ಚೇತನ್ ಶರ್ಮಾ, ಸುನಿಲ್ ತನೇಜಾ, ಗುರ್ಜಿತ್ ಸಿಂಗ್, ಬಲರಾಜ್ ಸಿಯಾಲ್.

ಇದನ್ನೂ ಓದಿ: IPL 2024: ಸಂಪೂರ್ಣ ಗುಣವಾಗದ ಸೂರ್ಯಕುಮಾರ್​, ಆರಂಭಿಕ ಪಂದ್ಯಗಳಿಗೆ ಅನುಮಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.