ETV Bharat / sports

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಅಂಕಪಟ್ಟಿಯಲ್ಲಿ ಪಾತಾಳಕ್ಕೆ ಕುಸಿದ ಪಾಕಿಸ್ತಾನ: ಭಾರತ ಎಷ್ಟನೇ ಸ್ಥಾನದಲ್ಲಿದೆ ಗೊತ್ತಾ? - WTC POINTS TABLE

ಇಂಗ್ಲೆಂಡ್​ ವಿರುದ್ಧ ನಡೆಯುತ್ತಿರುವ 3 ಪಂದ್ಯಗಳ ಟೆಸ್ಟ್​ ಸರಣಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಹೀನಾಯ ಸೋಲನುಭವಿಸಿದೆ. ಇದರೊಂದಿಗೆ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಅಂಕಪಟ್ಟಿಯಲ್ಲೂ ಕುಸಿತ ಕಂಡಿದೆ.

ಪಾಕಿಸ್ತಾನ ಕ್ರಿಕೆಟ್​ ತಂಡ
ಪಾಕಿಸ್ತಾನ ಕ್ರಿಕೆಟ್​ ತಂಡ (AP)
author img

By ETV Bharat Sports Team

Published : Oct 11, 2024, 6:42 PM IST

WTC Points Table: ಇಂಗ್ಲೆಂಡ್ ವಿರುದ್ಧದ ತವರಿನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಹೀನಾಯವಾಗಿ ಸೋಲನ್ನು ಕಂಡಿರುವ ಪಾಕಿಸ್ತಾನ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಅಂಕಪಟ್ಟಿಯಲ್ಲೂ ಪಾತಾಳಕ್ಕೆ ಕುಸಿದಿದೆ. ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಪಂದ್ಯಕ್ಕೂ ಮೊದಲ 19.05 ಶೇಕಡಾ ಅಂಕದೊಂದಿಗೆ ಎಂಟನೇ ಸ್ಥಾನದಲ್ಲಿದ್ದ ಪಾಕಿಸ್ತಾನ ಇದೀಗ 16.67 ಶೇಕಡಾ ಅಂಕದೊಂದಿಗೆ ಒಂಬತ್ತನೇ ಸ್ಥಾನಕ್ಕೆ ಕುಸಿದಿದೆ.

ನಾಲ್ಕನೇ ಸ್ಥಾನದಲ್ಲಿ ಇಂಗ್ಲೆಂಡ್: ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಇಂಗ್ಲೆಂಡ್​ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್‌ ಅಂಕಪಟ್ಟಿಯಲ್ಲಿ ಯಾವುದೇ ಬದಲವಾಣೆಯಾಗದೇ ನಾಲ್ಕನೇ ಸ್ಥಾನದಲ್ಲೇ ಮುಂದುವರೆದಿದೆ. ಶೇಕಡ ಅಂಕದಲ್ಲಿ ಸ್ವಲ್ಪ ಬದಲಾವಣೆಯಾಗಿದ್ದ ಶೇ.42.19ರಿಂದ 45.59ಕ್ಕೆ ಏರಿಕೆಯಾಗಿದೆ.

2023-25 ಡಬ್ಲ್ಯೂಟಿಸಿ ​​ಋತುವಿನಲ್ಲಿ, ಪಾಕಿಸ್ತಾನ ತಂಡವು ಒಟ್ಟು 8 ಪಂದ್ಯಗಳನ್ನು ಆಡಿದ್ದು ಇವುಗಳಲ್ಲಿ ಕೇವಲ ಎರಡರಲ್ಲಿ ಮಾತ್ರ ಗೆದ್ದಿದೆ. ಉಳಿದ ಆರು ಟೆಸ್ಟ್‌ ಪಂದ್ಯಗಳಲ್ಲಿ ಸೋಲನುಭವಿಸಿದೆ. ಮತ್ತೊಂದೆಡೆ, ಇಂಗ್ಲೆಂಡ್ ಈ ಋತುವಿನಲ್ಲಿ ಒಟ್ಟು 17ಪಂದ್ಯಗಳನ್ನು ಆಡಿದೆ. ಇದು ಇತರೆ ಯಾವುದೇ ತಂಡಗಳಿಗಿಂತ ಹೆಚ್ಚು ಟೆಸ್ಟ್ ಪಂದ್ಯಗಳಾಗಿದೆ. ಇದರಲ್ಲಿ ಒಂಬತ್ತುರಲ್ಲಿ ಗೆಲುವು ಸಾಧಿಸಿದೆ. ಇನ್ನುಳಿದ 7 ಪಂದ್ಯಗಳಲ್ಲಿ ಸೋಲನುಭವಿಸಿದ್ದ ಒಂದು ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. ಇಂಗ್ಲೆಂಡ್​ ಫೈನಲ್ ಪ್ರವೇಶಿಸಲು ಉಳಿದ ನಾಲ್ಕು ಪಂದ್ಯಗಳನ್ನು ಗೆಲ್ಲಲೇಬೇಕಿದೆ.

ಭಾರತಕ್ಕೆ ಎಷ್ಟನೇ ಸ್ಥಾನ: ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಅಂಕಪಟ್ಟಿಯಲ್ಲಿ ಭಾರತ ಸಧ್ಯ ಅಗ್ರಸ್ಥಾನದಲ್ಲಿದೆ. ಇದೂವರೆಗೆ 11 ಪಂದ್ಯಗಳನ್ನು ಆಡಿರುವ ಭಾರತ 8 ಪಂದ್ಯಗಳನ್ನು ಗೆದ್ದುಕೊಂಡಿದೆ ಮತ್ತು 2ರಲ್ಲಿ ಸೋಲನುಭವಿಸಿ 74.24 ಶೇಕಡಾವಾರು ಅಂಕವನ್ನು ಹೊಂದಿದೆ. ನಂತರ ಆಸ್ಟ್ರೇಲಿಯಾ (62.50) ಮತ್ತು ಶ್ರೀಲಂಕಾ (55.56) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. ವಿಶ್ವ ಟೆಸ್ಟ್​ ಚಾಂಪಿಯನ್ಸ್​ ಫೈನಲ್​ಗೆ ಅಗ್ರ ಎರುಡು ತಂಡಗಳು ಮಾತ್ರ ಪ್ರವೇಶ ಪಡೆಯಲಿವೆ.

ಭಾರತವು ಮುಂದಿನ 8 ಪಂದ್ಯಗಳಲ್ಲಿ 3ರಲ್ಲಿ ಗೆದ್ದರೆ ಮತ್ತು ಆಸೀಸ್ ಏಳು ಪಂದ್ಯಗಳಲ್ಲಿ 4 ಗೆದ್ದರೆ, ಎರಡೂ ತಂಡಗಳು ಮತ್ತೊಮ್ಮೆ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​​ ಫೈನಲ್​ಗೆ ಪ್ರವೇಶ ಪಡೆಯಲಿವೆ. ಮುಂದಿನ ವರ್ಷ ಜೂನ್​ ತಿಂಗಳಲ್ಲಿ ಕ್ರಿಕೆಟ್​ ಕಾಶಿ ಎಂದೇ ಖ್ಯಾತಿ ಪಡೆದಿರುವ ಲಾರ್ಡ್ಸ್​ ಮೈದಾನದಲ್ಲಿ ವಿಶ್ವ ಟೆಸ್ಟ್​ ಚಾಂಪಿಯನಶಿಪ್​ನ ಫೈನಲ್​ ಪಂದ್ಯ ನಡೆಯಲಿದೆ.

ಇದನ್ನೂ ಓದಿ: ಲೆಗ್​ ಸ್ಪಿನ್ನರ್​ ಆಗಿದ್ದ ಹಾರ್ದಿಕ್​ ಪಾಂಡ್ಯ ವೇಗದ ಬೌಲರ್​ ಆಗಿದ್ದು ಹೇಗೆ ಗೊತ್ತಾ: ಆ ಒಂದು ಘಟನೆಯಿಂದ ಬದಲಾಯ್ತು ಅದೃಷ್ಟ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.