ETV Bharat / sports

ಎಫ್‌ಐಎಚ್ ಹಾಕಿ ಮಹಿಳಾ ವಿಶ್ವಕಪ್ 2024: ಸೆಮಿಫೈನಲ್​ಗೆ ಭಾರತ ತಂಡದ ಲಗ್ಗೆ - ನ್ಯೂಜಿಲೆಂಡ್

ಮಸ್ಕತ್​ನಲ್ಲಿ ನಡೆದ ಎಫ್‌ಐಎಚ್ ಹಾಕಿ 5 ಮಹಿಳಾ ವಿಶ್ವಕಪ್ 2024ರ ಕ್ವಾರ್ಟರ್​​ ಫೈನಲ್‌ ಪಂದ್ಯದಲ್ಲಿ 11-1 ಗೋಲುಗಳ ಅಂತರದಿಂದ ಭಾರತ ತಂಡವು ನ್ಯೂಜಿಲ್ಯಾಂಡ್​​ ತಂಡವನ್ನು ಮಣಿಸಿದೆ.

indian-womens-hockey-team-topples-new-zealand-to-face-south-africa-in-semis
ಎಫ್‌ಐಎಚ್ ಹಾಕಿ ಮಹಿಳಾ ವಿಶ್ವಕಪ್ 2024: ಸೆಮಿಫೈನಲ್​ಗೆ ಭಾರತ ತಂಡ ಲಗ್ಗೆ
author img

By ETV Bharat Karnataka Team

Published : Jan 26, 2024, 8:21 PM IST

ಮಸ್ಕತ್ (ಓಮನ್): ಎಫ್‌ಐಎಚ್ ಹಾಕಿ5 ಮಹಿಳಾ ವಿಶ್ವಕಪ್ 2024ರ (FIH Hockey5s Women’s World Cup 2024) ಸೆಮಿಫೈನಲ್​ಗೆ ಭಾರತೀಯ ಮಹಿಳಾ ತಂಡವು ಲಗ್ಗೆ ಇಟ್ಟಿದೆ. ಕ್ವಾರ್ಟರ್​​ ಫೈನಲ್‌ ಪಂದ್ಯದಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ 11-1 ಗೋಲುಗಳ ಅಂತರದಿಂದ ಟೀಂ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಭಾರತ ಎದುರಿಸಲಿದೆ.

  • Semi-Finals here we come! 🎯

    Republic Day's pride soaring 11X higher as Indian Women's Team clinches a smashing victory in the FIH Hockey 5s World Cup Quarter-finals, Oman 2024!🏑

    Full-time:

    India 🇮🇳 11 - New Zealand 🇳🇿 1

    Goal Scorers:

    2' 25' 29' Deepika Soreng
    9' 22' 26'… pic.twitter.com/ARLKPgmJZY

    — Hockey India (@TheHockeyIndia) January 26, 2024 " class="align-text-top noRightClick twitterSection" data=" ">

ಮಸ್ಕತ್​ನಲ್ಲಿ ನಡೆದ ಕ್ವಾರ್ಟರ್​​ ಫೈನಲ್‌ ಪಂದ್ಯದಲ್ಲಿ ಆರಂಭದ ಎರಡನೇ ನಿಮಿಷಯಲ್ಲಿ ನ್ಯೂಜಿಲೆಂಡ್​ನ ಒರಿವಾ ಹೆಪಿ ಗೋಲು ಬಾರಿಸುವ ಮೂಲಕ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಆದರೆ, ನಂತರದಲ್ಲಿ ಭಾರತೀಯ ತಂಡವು ಪಂದ್ಯದ ಸಂಪೂರ್ಣ ಪ್ರಾಬಲ್ಯ ಸಾಧಿಸಿತು. ಒರಿವಾ ಹೆಪಿ ಗೋಲು ಬಾರಿಸಿದ 15ನೇ ಸೆಕೆಂಡುಗಳಲ್ಲಿ ದೀಪಿಕಾ ಸೊರೆಂಗ್ ಗೋಲು ಗಳಿಸುವ ಮೂಲಕ ಟೀಂ ಇಂಡಿಯಾ 1-1ರ ಸಮಬಲ ಸಾಧಿಸಿತು.

ಮತ್ತೆ ಅಲ್ಲಿಂದ ಭಾರತೀಯ ಮಹಿಳೆಯರು ನ್ಯೂಜಿಲ್ಯಾಂಡ್​ ತಂಡಕ್ಕೆ ಗೋಲು ಗಳಿಸುವ ಅವಕಾಶವನ್ನೇ ನೀಡಲಿಲ್ಲ. ರುತಾಜಾ ದಾದಾಸೊ ಪಿಸಲ್ (9ನೇ ನಿಮಿಷಕ್ಕೆ), ಮುಮ್ತಾಜ್ ಖಾನ್ (10ನೇ, 11ನೇ ನಿಮಿಷಕ್ಕೆ) ಸತತ ಗೋಲುಗಳನ್ನು ಬಾರಿಸಿದರು. ಇದರ ಬೆನ್ನಲ್ಲೇ ಮರಿಯಾನಾ ಕುಜುರ್ ಸಹ ಮೇಲಿಂದ ಮೇಲೆ ಎರಡು ಗೋಲುಗಳನ್ನು (13ನೇ, 14ನೇ ನಿಮಿಷಕ್ಕೆ) ಗಳಿಸುವ ಮೂಲಕ ಎದುರಾಳಿ ತಂಡವನ್ನು ಮತ್ತುಷ್ಟು ಒತ್ತಡಕ್ಕೆ ಸಿಲುಕಿಸಿದರು. ಇದರಿಂದ ಪಂದ್ಯದ ಮೊದಲಾರ್ಧವನ್ನು 6-1 ಅಂತರದ ಭರ್ಜರಿ ಮುನ್ನಡೆಯೊಂದಿಗೆ ಭಾರತ ಮುಗಿಸಿತು.

ನಂತರದಲ್ಲೂ ಭಾರತೀಯ ಮಹಿಳೆಯರು ಪಂದ್ಯದ ಮೇಲೆ ತಮ್ಮ ನಿಯಂತ್ರಣವನ್ನು ಮುಂದುವರೆಸಿದರು. ಅಲ್ಲದೇ, ಎದುರಾಳಿ ತಂಡಕ್ಕೆ ಗೋಲು ಗಳಿಸುವ ಸಣ್ಣ ಅವಕಾಶವನ್ನೂ ಕೊಡಲಿಲ್ಲ. ಬೃಹತ್ ಆರು ಗೋಲುಗಳ ಮುನ್ನಡೆ ಸಾಧಿಸಿದ್ದ ಭಾರತಕ್ಕೆ ರುತಾಜಾ ದಾದಾಸೊ ಪಿಸಲ್ ತಮ್ಮ ಎರಡನೇ ಗೋಲು (22ನೇ ನಿಮಿಷಕ್ಕೆ) ಬಾರಿಸಿ ಮತ್ತಷ್ಟು ಹಿಡಿತ ಸಾಧಿಸುವಲ್ಲಿ ನೆರವಾದರು. ದೀಪಿಕಾ ಸೊರೆಂಗ್​ ಸಹ ತಮ್ಮ ಎರಡನೇ ಗೋಲು (25ನೇ ನಿಮಿಷಕ್ಕೆ) ತಂದುಕೊಟ್ಟರು.

ನಂತರ ರುತಾಜಾ ದಾದಾಸೊ ಪಿಸಲ್ ತಮ್ಮ ಖಾತೆಗೆ ಇನ್ನೆರಡು ಗೋಲುಗಳನ್ನು (26ನೇ, 28ನೇ ನಿಮಿಷಕ್ಕೆ) ಸೇರಿಸಿದರು. ನಂತರ 29ನೇ ನಿಮಿಷಕ್ಕೆ ದೀಪಿಕಾ ಸೊರೆಂಗ್ ಮತ್ತೊಂದು ಗೋಲು ಬಾರಿಸುವ ಮೂಲಕ ಭಾರತಕ್ಕೆ 11-1 ಅಂತರದಿಂದ ಗೆಲುವು ತಂದುಕೊಟ್ಟರು. ಇಂದು ರಾತ್ರಿ 11 ಗಂಟೆಗೆ ನಡೆಯುವ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿವೆ.

ಇದನ್ನೂ ಓದಿ: ಆಸ್ಟ್ರೇಲಿಯನ್ ಓಪನ್​ನಿಂದ ನೊವಾಕ್ ಜೊಕೊವಿಕ್ ಔಟ್​: ಫೈನಲ್ ತಲುಪಿದ ಜನ್ನಿಕ್ ಸಿನ್ನರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.