ETV Bharat / sports

ಮಹಿಳಾ ಏಷ್ಯಾಕಪ್​ 2024: ರಿಚಾ, ಕೌರ್​ ಬ್ಯಾಟಿಂಗ್​ ಅಬ್ಬರಕ್ಕೆ ಮಣಿದ ಯುಎಇ - IND Beat UAE - IND BEAT UAE

ಏಷ್ಯಾಕಪ್​ ಪಂದ್ಯದಲ್ಲಿಂದು ಯುಎಇ ವಿರುದ್ಧ ಭಾರತದ ವನಿತೆಯರ ತಂಡ ಭರ್ಜರಿ ಗೆಲುವು ಸಾಧಿಸಿದೆ.

ಟೀಂ ಇಂಡಿಯಾ
ಟೀಂ ಇಂಡಿಯಾ (ETV Bharat)
author img

By PTI

Published : Jul 21, 2024, 5:45 PM IST

Updated : Jul 21, 2024, 7:10 PM IST

ದಂಬುಲ್ಲಾ (ಶ್ರೀಲಂಕಾ): ಇಲ್ಲಿನ ರಂಗಿ ದಂಬುಲ್ಲಾ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಮಹಿಳಾ ಏಷ್ಯಾಕಪ್​ 'ಎ' ಗುಂಪಿನ 5ನೇ ಪಂದ್ಯದಲ್ಲಿ ಯುಎಇ ವಿರುದ್ಧ ಟೀಂ ಇಂಡಿಯಾ 78 ರನ್‌ಗಳಿಂದ ಭರ್ಜರಿ ಗೆಲವು ಸಾಧಿಸಿದೆ. ಈ ಗೆಲುವಿನೊಂದಿಗೆ ಸೆಮಿಫೈನಲ್​ಗೂ ಪ್ರವೇಶ ಪಡೆದಿದೆ.

ಟಾಸ್​ ಸೋತು ಮೊದಲು ಬ್ಯಾಟ್​ ಮಾಡಿದ್ದ ಹಾಲಿ ಚಾಂಪಿಯನ್ ಭಾರತದ ವನಿತೆಯರು, ಯುಎಇ ಬೌಲರ್‌ಗಳ ಸವಾರಿ ಮಾಡಿ T20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಮೊದಲ ಬಾರಿಗೆ 201 ರನ್ ಸಿಡಿಸುವ ಮೂಲಕ ದಾಖಲೆ ಬರೆದರು. ಬ್ಯಾಟಿಂಗ್​ ಮಾತ್ರವಲ್ಲದೇ ಬೌಲಿಂಗ್​ನಲ್ಲೂ ಉತ್ತಮ ಪ್ರದರ್ಶನ ತೋರಿ ಯುಎಇ ತಂಡವನ್ನು ಕೇವಲ 123ರನ್​ಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಯಿತು. ಈ ಮೂಲಕ ಟೂರ್ನಿಯಲ್ಲಿ ಸತತ ಎರಡನೇ ಜಯ ಗಳಿಸಿದರು.

ಭಾರತದ ಪರ ನಾಯಕಿ ಹರ್ಮನ್​ ಪ್ರೀತ್​ ಕೌರ್​ ಭರ್ಜರಿ ಬ್ಯಾಟ್​ ಬೀಸಿ ಅರ್ಧಶತಕ ಪೂರೈಸಿದರು. 47 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್​ ನೊಂದಿಗೆ 66ರನ್​ಗಳನ್ನು ಕಲೆಹಾಕಿ ತಂಡದ ಹೈಸ್ಕೋರರ್​ ಎನಿಸಿಕೊಂಡರು. ಮತ್ತೊಂದೆಡೆ ರಿಚಾ ಘೋಷ್​ ಕೂಡ ಬಿರುಸಿನ ಬ್ಯಾಟಿಂಗ್​ ನೆರವಿನಿಂದ ಅರ್ಧಶತಕ ಸಿಡಿಸಿದರು. 29 ಎಸೆತಗಳನ್ನು ಎದುರಿಸಿದ ಘೋಷ್​ 12 ಬೌಂಡರಿ 1 ಸಿಕ್ಸರ್​ ಸಮೇತ 64 ರನ್ ಚಚ್ಚಿದರು. ಉಳಿದಂತೆ ಶೆಫಾಲಿ ವರ್ಮಾ (37), ಸ್ಮೃತಿ ಮಂಧಾನ (13), ರೋಡ್ರಿಗಾಸ್​ ತಂಡಕ್ಕೆ ರನ್​ ಕೊಡುಗೆ ನೀಡಿದರು. (66) ಅವರ ಆಕರ್ಷಕ ಅರ್ಧ ಶತಕದ ಬ್ಯಾಟಿಂಗ್​ ನೆರವಿನಿಂದ ನಿಗದಿತ 20 ಓವರ್​ಗೆ 5 ವಿಕೆಟ್​ ಕಳೆದುಕೊಂಡು 201 ರನ್​ಗಳ ಬೃಹತ್​ ಮೊತ್ತವನ್ನು ಕಲೆ ಹಾಕಿತ್ತು.

ಭಾರತ ನೀಡಿದ್ದ ಬೃಹತ್​ ಗುರಿಯನ್ನು ಬೆನ್ನತ್ತಿದ ಯುಎಇ ತಂಡದ ಪರ ಇಶಾ ರೋಹಿತ್​ ಒಝಾ (38), ಕವಿಶಾ (40) ಹೊರತುಪಡಿಸಿ ಉಳಿದ ಬ್ಯಾಟರ್​ಗಳು ಎರಡಂಕಿ ದಾಟಲು ಸಾಧ್ಯವಾಗಲಿಲ್ಲ. ಭಾರತದ ಪರ ದೀಪ್ತಿ ಶರ್ಮಾ 2 ವಿಕೆಟ್​ ಪಡೆದು ಮಿಂಚಿದರೆ, ರೇಣುಕಾ, ತನುಜಾ, ಪೂಜಾ, ರಾಧಾ ಯಾದವ್​ ತಲಾ ಒಂದು ವಿಕೆಟ್​ ಉರುಳಿಸಿದರು.

ಸೆಮಿಫೈನಲ್‌ಗೆ ಟೀಂ ಇಂಡಿಯಾ: ಹಾಲಿ ಚಾಂಪಿಯನ್ ಭಾರತವು 2024ರ ಮಹಿಳಾ ಏಷ್ಯಾ ಕಪ್‌ನಲ್ಲಿ ಯುಎಇಯನ್ನು ಸೋಲಿಸುವ ಮೂಲಕ ಸೆಮಿಫೈನಲ್ ಪ್ರವೇಶಿಸಿದೆ. ಆದಾಗ್ಯೂ, ಭಾರತ ತನ್ನ ಮುಂದಿನ ಗುಂಪಿನ ಪಂದ್ಯವನ್ನು ನೇಪಾಳ ವಿರುದ್ಧ ಜುಲೈ 23 ರಂದು ಆಡಬೇಕಾಗಿದೆ. ಮಹಿಳಾ ಏಷ್ಯಾಕಪ್‌ನಲ್ಲಿ ಭಾರತ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದೆ. ಇದುವರೆಗೆ 9 ಬಾರಿ ಈ ಏಷ್ಯಾಕಪ್​ ಟೂರ್ನಿ ನಡೆದಿದ್ದು, ಈ ಪೈಕಿ ಭಾರತ 8 ಬಾರಿ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಬಾಂಗ್ಲಾದೇಶ 2018ರಲ್ಲಿ ಒಮ್ಮೆ ಮಾತ್ರ ಟ್ರೋಫಿ ಗೆದ್ದಿದೆ.

ಇದನ್ನೂ ಓದಿ: ವ್ಹೀಲ್​ಚೇರ್‌ನಲ್ಲಿ ಪಂದ್ಯ ವೀಕ್ಷಿಸಲು ಬಂದ ದಿವ್ಯಾಂಗ ಬಾಲಕಿಗೆ ಮೊಬೈಲ್ ಗಿಫ್ಟ್​ ಕೊಟ್ಟ ಮಂಧಾನ - Mandhana Meets Specially Abled Fan

Last Updated : Jul 21, 2024, 7:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.