ETV Bharat / sports

ಭಾರತ - ನ್ಯೂಜಿಲೆಂಡ್​ ಟೆಸ್ಟ್​: ಟಾಸ್​ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್​ ಆಯ್ಕೆ; ಹೀಗಿರಲಿದೆ ಬೆಂಗಳೂರು ಹವಾಮಾನ

ಭಾರತ ಮತ್ತು ನ್ಯೂಜಿಲೆಂಡ್​ ನಡುವಿನ ಮೊದಲ ಟೆಸ್ಟ್​ ಪಂದ್ಯ ಇಂದು ನಡೆಯುತ್ತಿದೆ. ಭಾರತ ಎರಡು ಬದಲಾವಣೆಗಳೊಂದಿಗೆ ಕಣಕ್ಕಿಳಿದಿದೆ.

ರಿಷಭ್​ ಪಂತ್​ ಮತ್ತು ರೋಹಿತ್​ ಶರ್ಮಾ
ರಿಷಭ್​ ಪಂತ್​ ಮತ್ತು ರೋಹಿತ್​ ಶರ್ಮಾ (AFP)
author img

By ETV Bharat Sports Team

Published : Oct 17, 2024, 9:34 AM IST

Updated : Oct 17, 2024, 9:51 AM IST

ಹೈದರಾಬಾದ್​: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 3 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಬೆಂಗಳೂರಿನ ಎಮ್​. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭವಾಗಿದೆ. ಇದರಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು.

ಮೊದಲ ಪಂದ್ಯದಲ್ಲಿ ಭಾರತ ಪ್ಲೇಯಿಂಗ್​ 11ರಲ್ಲಿ ಎರಡು ಬದಲಾವಣೆಗಳೊಂದಿಗೆ ಕಣಕ್ಕಿಳಿದಿದೆ. ಇದರಲ್ಲಿ ಶುಭಮನ್ ಗಿಲ್ ಮತ್ತು ಆಕಾಶ್ ದೀಪ್ ಬದಲಿಗೆ ಸರ್ಫರಾಜ್ ಖಾನ್ ಮತ್ತು ಕುಲ್ದೀಪ್ ಯಾದವ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಪಂದ್ಯದ ಮೊದಲ ದಿನ ಅಂದರೆ ಬುಧವಾರ (ನಿನ್ನೆ) ನಿರಂತರ ಮಳೆಯಿಂದಾಗಿ ಟಾಸ್​ ಮಾಡದೇ ಪಂದ್ಯ ರದ್ದುಗೊಳಿಸಲಾಗಿತ್ತು. ಈ ಕಾರಣಕ್ಕೆ ಇಂದು 98 ಓವರ್​ಗಳ ಪಂದ್ಯವನ್ನು ನಡೆಸಲಾಗುತ್ತಿದೆ.

ಹವಾಮಾನ ವರದಿ: ಇಂದು ಬೆಂಗಳೂರಿನಲ್ಲಿ ಬೆಳಗ್ಗೆ 11 ಗಂಟೆಯವರೆಗೆ ಯಾವುದೇ ಮಳೆಯ ಮುನ್ಸೂಚನೆಯಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ನಂತರ ಮಳೆಯ ಮಟ್ಟವು ಶೇಕಡಾ 45-50ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. ಹವಾಮಾನ ಇಲಾಖೆ ಪ್ರಕಾರ ಬೆ.11:00 AM ನಿಂದ 12:00ವರೆಗೆ ಅಂದರೆ ಒಂದು ಗಂಟೆ ಕಾಲ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ನೀಡಿದೆ. ಸಂಜೆ 5:00 ಗಂಟೆಗೆ ಮಳೆಯ ಮುನ್ಸೂಚನೆ ನೀಡಲಾಗಿದೆ.

ತಂಡಗಳು-ಭಾರತ: ರೋಹಿತ್ ಶರ್ಮಾ (ನಾ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸರ್ಫರಾಜ್ ಖಾನ್, ರಿಷಬ್ ಪಂತ್ (ವಿ.ಕೀ), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.

ನ್ಯೂಜಿಲೆಂಡ್​: ಟಾಮ್ ಲ್ಯಾಥಮ್ (ನಾ), ಡೆವೊನ್ ಕಾನ್ವೇ, ವಿಲ್ ಯಂಗ್, ರಚಿನ್ ರವೀಂದ್ರ, ಡೇರಿಲ್ ಮಿಚೆಲ್, ಟಾಮ್ ಬ್ಲಂಡೆಲ್ (ವಿ.ಕೀ), ಗ್ಲೆನ್ ಫಿಲಿಪ್ಸ್, ಮ್ಯಾಟ್ ಹೆನ್ರಿ, ಟಿಮ್ ಸೌಥಿ, ಅಜಾಜ್ ಪಟೇಲ್, ವಿಲಿಯಂ ಒರೂರ್ಕೆ

ಇದನ್ನೂ ಓದಿ: ಭಾರತ vs ನ್ಯೂಜಿಲ್ಯಾಂಡ್​ ಟೆಸ್ಟ್‌ಗೆ ಮಳೆ ಅಡ್ಡಿ; ಮೊದಲ ದಿನದಾಟ ಟಾಸ್ ಇಲ್ಲದೆ ರದ್ದು

Last Updated : Oct 17, 2024, 9:51 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.