ETV Bharat / sports

ಲಂಚ್​ ಬ್ರೇಕ್ ಬಳಿಕ ಕುಸಿಯುತ್ತಿರುವ ಭಾರತ​: ಗಿಲ್, ಪಂತ​ ಭರ್ಜರಿ ಆಟ, ನಿರಾಸೆ ಮೂಡಿಸಿದ ಸರ್ಫರಾಜ್ ಖಾನ್ - INDIA VS NEW ZEALAND

India vs NZ ಲಂಚ್​ ಬ್ರೇಕ್​ ಬಳಿಕ ಸರ್ಫರಾಜ್ ಖಾನ್ ಮತ್ತು ಜಡೇಜಾ ನಿರಾಸೆ ಮೂಡಿದ್ದಾರೆ. ಭಾರತ ತಂಡ 50 ಓವರ್​ಗಳಿಗೆ 7 ವಿಕೆಟ್​ಗಳು ಕಳೆದುಕೊಂಡು 221 ರನ್​ಗಳನ್ನು ಕಲೆ ಹಾಕಿದೆ.

INDIA VS NEW ZEALAND THIRD TEST  INDIA VS NEW ZEALAND MATCH UPDATE  INDIA VS NEW ZEALAND SCORE
ಲಂಚ್​ ಬ್ರೇಕ್ ಬಳಿಕ ಕುಸಿಯುತ್ತಿರುವ ಭಾರತ (IANS)
author img

By ETV Bharat Sports Team

Published : Nov 2, 2024, 1:31 PM IST

India vs New Zealand: ಲಂಚ್​ ಬ್ರೇಕ್​ಗೂ ಮುನ್ನ ನ್ಯೂಜಿಲೆಂಡ್ ವಿರುದ್ಧದ ಮೂರನೇ ಟೆಸ್ಟ್‌ನಲ್ಲಿ ಭಾರತ ಉತ್ತಮ ಪ್ರದರ್ಶನ ನೀಡುತ್ತಿತ್ತು. ಆದರೆ, ಎರಡನೇ ದಿನದ ಭೋಜನ ವಿರಾಮದ ನಂತರ ಟೀಂ ಇಂಡಿಯಾ 50 ಓವರ್​ಗಳಿಗೆ 7 ವಿಕೆಟ್ ಕಳೆದುಕೊಂಡು 221 ರನ್ ಗಳಿಸಿ ಮುಂದೆ ಸಾಗುತ್ತಿದೆ.

ಶುಭಮನ್ ಗಿಲ್ (87*) ಶತಕದ ಸನಿಹದಲ್ಲಿದ್ದಾರೆ. 14 ರನ್​ ಗಳಿಸಿದ್ದ ರವೀಂದ್ರ ಜಡೇಜಾ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಬ್ಯಾಟಿಂಗ್​ ಕಾಯದೇ ಔಟಾಗಿದ್ದಾರೆ. ಇವರ ಹಿಂದೆಯೇ ಬಂದ ಸರ್ಫರಾಜ್ ಖಾನ್ ಸಹ ಡಕೌಟ್​ ಆಗಿದ್ದಾರೆ. ಸದ್ಯ ಭಾರತ ಇನ್ನೂ ಕೆಲ ರನ್‌ಗಳ ಹಿನ್ನಡೆಯಲ್ಲಿದೆ. ಇಂದು ಭೋಜನ ವಿರಾಮದ ಮುನ್ನ ಭಾರತ ಪಂತ್​ ಅವರ ವಿಕೆಟ್​ ಕಳೆದುಕೊಂಡಿದ್ದು, ಇದಕ್ಕೂ ಮುನ್ನ ನ್ಯೂಜಿಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 235 ರನ್‌ಗಳಿಗೆ ಆಲೌಟ್ ಆಗಿದ್ದು ಗೊತ್ತೇ ಇದೆ.

ರಿಷಭ್​ ಪಂತ್ (60: 59 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್) ಕಳೆದ ದಿನ ಭಾರತ ತಂಡ ನಾಲ್ಕು ವಿಕೆಟ್​ಗಳ ನಷ್ಟಕ್ಕೆ 86 ರನ್​ಗಳನ್ನು ಕಲೆ ಹಾಕಿತ್ತು. ಇಂದು ಇನ್ನಿಂಗ್ಸ್​ ಆರಂಭಿಸಿದ ರಿಷಭ್​​ ಪಂತ್​ ಮತ್ತು ಗಿಲ್​ ತಂಡವನ್ನು ಮುನ್ನಡೆಸಿದರು. ಏಕದಿನ ಪಂದ್ಯದಂತೆ ಆಡಿದ ಪಂತ್ ಎದುರಾಳಿ ಬೌಲರ್​ಗಳ ವಿರುದ್ಧ ಭರ್ಜರಿ ಬ್ಯಾಟಿಂಗ್​ ಪ್ರದರ್ಶಿಸಿದರು. ಅವರು ಗಿಲ್ ಜೊತೆ ಐದನೇ ವಿಕೆಟ್‌ಗೆ 94 ರನ್​ಗಳನ್ನು ಕಲೆ ಹಾಕಿದ್ದರು.

ಇವರಿಬ್ಬರೂ ಅಲ್ಪಾವಧಿಯಲ್ಲಿ ತಂಡದ ಸ್ಕೋರ್​ ಏರಿಸುವಲ್ಲಿ ಸಫಲರಾದರು. ನ್ಯೂಜಿಲೆಂಡ್ ಫೀಲ್ಡರ್‌ಗಳು ಎರಡು ಕ್ಯಾಚ್‌ಗಳನ್ನು ಕೈಬಿಟ್ಟಿದ್ದರು. ಇದರ ಲಾಭ ಪಡೆದ ಪಂತ್ ಮತ್ತು ಗಿಲ್ ಅರ್ಧಶತಕ ಪೂರೈಸಿದರು.

ಸೋಧಿ ಎಸೆದ ಚೆಂಡನ್ನು ಊಹಿಸುವಲ್ಲಿ ಎಡವಿದ ಪಂತ್​: ಆದರೆ, ಇನಿಂಗ್ಸ್ ನ 38ನೇ ಓವರ್​ನಲ್ಲಿ ಸೋಧಿ ಎಸೆದ ಚೆಂಡನ್ನು ಊಹಿಸುವಲ್ಲಿ ಪಂತ್ ಕೊಂಚ ಎಡವಿದರು. ಅಂಪೈರ್ ಎಲ್​ಬಿ ನೀಡಿದ ನಂತರ ಡಿಆರ್​ಎಸ್ ತೆಗೆದುಕೊಳ್ಳಲಾಗಿತ್ತಾದರೂ ಸಕಾರಾತ್ಮಕ ಫಲಿತಾಂಶ ಬರಲಿಲ್ಲ. ಹೀಗಾಗಿ ಪಂತ್​ ನಿರಾಸೆಯಿಂದ ಪೆವಿಲಿಯನ್ ತಲುಪಿದರು. ಭಾರತದ ಮುನ್ನಡೆ ಕನಿಷ್ಠ 150 ರನ್ ದಾಟಬೇಕಾದರೆ ಈ ಎರಡನೇ ಸೆಷನ್ ನಿರ್ಣಾಯಕವಾಗಲಿದೆ. ಹಾಗಾದಾಗ ಮಾತ್ರ ಟೀಂ ಇಂಡಿಯಾದ ಅವಕಾಶಗಳು ಉತ್ತಮವಾಗಿರುತ್ತವೆ.

ಮುಂಬೈ ಟೆಸ್ಟ್‌ನಲ್ಲಿ ಹಿಡಿತ ಸಾಧಿಸುವ ಅವಕಾಶವನ್ನು ಭಾರತೀಯ ಬ್ಯಾಟ್ಸ್‌ಮನ್‌ಗಳು ಕೈಚೆಲ್ಲುವಂತೆ ಕಾಣುತ್ತಿದೆ. ಒಂದು ಹಂತದಲ್ಲಿ 78/1 ಸ್ಕೋರ್‌ನಲ್ಲಿ ಟೀಮ್ ಇಂಡಿಯಾ ಬೃಹತ್ ಮೊತ್ತದತ್ತ ಸಾಗುತ್ತಿರುವಂತೆ ಕಂಡಿತು. ಆದರೆ ದಿನದಾಟದ ಅಂತ್ಯಕ್ಕೆ ನಾಲ್ಕು ವಿಕೆಟ್​ ಕಳೆದುಕೊಂಡು 86 ರನ್​ಗಳನ್ನು ಕಲೆ ಹಾಕಿತು.

ವಾಂಖೆಡೆಯಲ್ಲಿ ಉತ್ತಮ ಅವಕಾಶ ಕೈತಪ್ಪುವಂತೆ ಕಾಣುತ್ತಿದೆ. ಶುಕ್ರವಾರ ನಡೆದ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ನ್ಯೂಜಿಲೆಂಡ್ ತಂಡವನ್ನು ಕಡಿಮೆ ಸ್ಕೋರ್​ಗೆ ಆಲೌಟ್ ಮಾಡಿದ ಖುಷಿ ಭಾರತಕ್ಕೆ ಹೆಚ್ಚು ಹೊತ್ತು ಸಿಗಲಿಲ್ಲ. ಬ್ಯಾಟಿಂಗ್​ನಲ್ಲಿ ಉತ್ತಮ ಪ್ರದರ್ಶನ ತೋರಿದ ಟೀಂ ಇಂಡಿಯಾ ಕೊನೆಯ 15 ನಿಮಿಷಗಳಲ್ಲಿ 3 ವಿಕೆಟ್ ಕಳೆದುಕೊಂಡು ಸಂಕಷ್ಟ ಸಿಲುಕಿತು. ಮೊದಲ ದಿನ ಈ ಪಿಚ್‌ನಲ್ಲಿ ಸ್ಪಿನ್ನರ್‌ಗಳು ಭಾರತಕ್ಕೆ ಉತ್ತಮ ಆರಂಭ ನೀಡಿದರು. ಒಂದು ಕಡೆ ವಾಷಿಂಗ್ಟನ್ ಸುಂದರ್ ಹಾಗೂ ಇನ್ನೊಂದು ಕಡೆ ರವೀಂದ್ರ ಜಡೇಜಾ ಅಬ್ಬರದ ಬೌಲಿಂಗ್​ನಿಂದಾಗಿ ಕಿವೀಸ್ 235 ರನ್​ಗಳಿಗೆ ಆಲೌಟ್ ಆಯಿತು. ಕಿವೀಸ್​ ತಂಡದಲ್ಲಿ ಡ್ಯಾರಿಲ್ ಮಿಚೆಲ್ ಮತ್ತು ವಿಲ್ ಯಂಗ್ ಮಿಂಚಿದರು.

ಮೊದಲ ಇನಿಂಗ್ಸ್‌ನ ಅಂತ್ಯಕ್ಕೆ ಭಾರತ ನಾಲ್ಕು ವಿಕೆಟ್​ ಕಳೆದುಕೊಂಡು 86 ರನ್​ಗಳಿಸುವ ಮೂಲಕ ಸಂಕಷ್ಟಕ್ಕೆ ಸಿಲುಕಿತ್ತು. ಯಶಸ್ವಿ ಜೈಸ್ವಾಲ್ (30), ಸಿರಾಜ್ (0) ಮತ್ತು ಕೊಹ್ಲಿ (4) ಅಂತಿಮವಾಗಿ ಪೆವಿಲಿಯನ್ ಸೇರಿದರು ಭಾರತದ ಅವಕಾಶಗಳನ್ನು ನಿರಾಸೆಗೊಳಿಸಿದರು. ದಿನದಾಟದಂತ್ಯಕ್ಕೆ ಶುಭಮನ್ ಗಿಲ್ (31) ಮತ್ತು ರಿಷಬ್ ಪಂತ್ (1) ಕ್ರೀಸ್‌ನಲ್ಲಿದ್ದರು. ವೇಗಿ ಬುಮ್ರಾ ಅನಾರೋಗ್ಯದ ಕಾರಣದಿಂದ ದೂರವಿದ್ದ ಸಂದರ್ಭದಲ್ಲಿ ಸಿರಾಜ್ ಅಂತಿಮ ತಂಡಕ್ಕೆ ಸೇರ್ಪಡೆಗೊಂಡಿದ್ದರು. ಗಾಯಗೊಂಡಿರುವ ಸ್ಯಾಂಟ್ನರ್ ಮತ್ತು ಸೌಥಿ ಬದಲಿಗೆ, ಹೆನ್ರಿ ಮತ್ತು ಸೋಧಿ ನ್ಯೂಜಿಲೆಂಡ್ ತಂಡದಲ್ಲಿ ಆಡಿದರು.

ಓದಿ: ಮೂರನೇ ಟೆಸ್ಟ್: ಜಡೇಜಾ, ವಾಷಿಂಗ್ಟನ್ ಸುಂದರ್ ಮಾರಕ ಬೌಲಿಂಗ್ ದಾಳಿಗೆ ಕಿವೀಸ್ ತತ್ತರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.