ETV Bharat / sports

ಭಾರತ vs ಆಸ್ಟ್ರೇಲಿಯಾ ಮೊದಲ ಏಕದಿನ ಪಂದ್ಯ: ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಟೀಂ ಇಂಡಿಯಾ - INDIA VS AUSTRALIA WOMENS ODI

ಇಂದಿನಿಂದ ಭಾರತ ಮತ್ತು ಆಸ್ಟ್ರೇಲಿಯಾ ಮಹಿಳಾ ತಂಡಗಳು ಮೂರು ಪಂದ್ಯಗಳ ಏಕದಿನ ಸರಣಿ ಆಡಲಿವೆ.

INDIA VS AUSTRALIA WOMENS ODI  INDIA AUSTRALIA ODI SERIES  INDIA VS AUSTRALIA 1ST ODI
ಭಾರತ ಮಹಿಳಾ ತಂಡ (IANS)
author img

By ETV Bharat Sports Team

Published : Dec 5, 2024, 9:45 AM IST

Ind vs Aus ODI: ಒಂದೆಡೆ ಬಾರ್ಡರ್​-ಗವಾಸ್ಕರ್​ ಟೆಸ್ಟ್​ ಸರಣಿ ನಡೆಯುತ್ತಿದ್ದರೇ ಮತ್ತೊಂದೆಡೆ ಮಹಿಳಾ ತಂಡವೂ ಇಂದಿನಿಂದ ಆಸ್ಟ್ರೇಲಿಯಾದಲ್ಲಿ ಏಕದಿನ ಸರಣಿ ಆಡಲಿದೆ.

ಭಾರತ ಮತ್ತು ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡಗಳ 2022–2025 ICC ಮಹಿಳಾ ಚಾಂಪಿಯನ್‌ಶಿಪ್‌ನ ಭಾಗವಾಗಿ ಇಂದಿನಿಂದ ಮೂರು ODI ಪಂದ್ಯಗಳ ಸರಣಿಯನ್ನು ಆಡಲಿವೆ. ಹರ್ಮನ್‌ಪ್ರೀತ್ ಕೌರ್ ನಾಯಕತ್ವದಲ್ಲಿ ಆಸ್ಟ್ರೇಲಿಯಾಗೆ ಪ್ರಯಾಣಿಸಿರುವ ಟೀಂ ಇಂಡಿಯಾದ ವನಿತೆಯರು ಮೊದಲ ಪಂದ್ಯವನ್ನು ಬ್ರಿಸ್ಬೆನ್​ ಮೈದಾನದಲ್ಲಿ ಆಡಲಿದ್ದಾರೆ. ಮತ್ತೊಂದೆಡೆ ಆಸ್ಟ್ರೇಲಿಯಾ ಗಾಯಕ್ಕೆ ತುತ್ತಾಗಿರುವ ನಾಯಕಿ ಅಲಿಸ್ಸಾ ಹೀಲಿ ಬದಲಿಗೆ ತಹ್ಲಿಯಾ ಮೆಕ್‌ಗ್ರಾತ್ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಭಾರತ vs ಆಸ್ಟ್ರೇಲಿಯಾ ಹೆಡ್​ ಟು ಹೆಡ್​: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಈ ವರೆಗೂ ನಡೆದಿರುವ ಒಟ್ಟಾರೆ ಮುಖಾಮುಖಿ ದಾಖಲೆ ನೋಡಿದರೆ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡ ಮೇಲುಗೈ ಸಾಧಿಸಿದೆ. ಉಭಯ ತಂಡಗಳು ಇದುವರೆಗೆ ಒಟ್ಟು 53 ಏಕದಿನ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಆಸ್ಟ್ರೇಲಿಯಾ 43 ಬಾರಿ ಗೆಲುವು ಸಾಧಿಸಿದ್ದರೆ, ಟೀಂ ಇಂಡಿಯಾ ಕೇವಲ 10 ಪಂದ್ಯಗಳಲ್ಲಿ ಗೆದ್ದಿದೆ. ಆದರೆ, ಪ್ರಸ್ತುತ ಭಾರತ ಮಹಿಳಾ ಕ್ರಿಕೆಟ್ ತಂಡ ಅತ್ಯುತ್ತಮ ಫಾರ್ಮ್‌ನಲ್ಲಿ ಕಳೆದ ತಿಂಗಳು, ಅದು ತನ್ನ ತವರು ನೆಲದಲ್ಲಿ ನಡೆದ ODI ಸರಣಿಯಲ್ಲಿ ಮಹಿಳಾ T20 ವಿಶ್ವಕಪ್ ವಿಜೇತ ನ್ಯೂಜಿಲೆಂಡ್ ಅನ್ನು 2-1 ಅಂತರದಲ್ಲಿ ಸೋಲಿಸಿತ್ತು.

ತಂಡಗಳು - ಭಾರತ ಮಹಿಳೆಯರು: ಪ್ರಿಯಾ ಪುನಿಯಾ, ಸ್ಮೃತಿ ಮಂಧಾನ, ಹರ್ಲೀನ್ ಡಿಯೋಲ್, ಹರ್ಮನ್‌ಪ್ರೀತ್ ಕೌರ್(ನಾ), ಜೆಮಿಮಾ ರಾಡ್ರಿಗಸ್, ರಿಚಾ ಘೋಷ್(ವಿ,ಕೀ), ದೀಪ್ತಿ ಶರ್ಮಾ, ಟಿಟಾಸ್ ಸಾಧು, ಪ್ರಿಯಾ ಮಿಶ್ರಾ, ಸೈಮಾ ಠಾಕೋರ್, ರೇಣುಕಾ ಠಾಕೂರ್ ಸಿಂಗ್.

ಆಸ್ಟ್ರೇಲಿಯಾ ಮಹಿಳೆಯರು: ಫೋಬೆ ಲಿಚ್‌ಫೀಲ್ಡ್, ಜಾರ್ಜಿಯಾ ವೋಲ್, ಎಲ್ಲಿಸ್ ಪೆರ್ರಿ, ಬೆತ್ ಮೂನಿ (ವಿ.ಕೀ), ಅನ್ನಾಬೆಲ್ ಸದರ್‌ಲ್ಯಾಂಡ್, ಆಶ್ಲೀ ಗಾರ್ಡ್ನರ್, ತಹ್ಲಿಯಾ ಮೆಕ್‌ಗ್ರಾತ್ (ನಾ), ಜಾರ್ಜಿಯಾ ವೇರ್‌ಹ್ಯಾಮ್, ಅಲಾನಾ ಕಿಂಗ್, ಕಿಮ್ ಗಾರ್ತ್, ಮೇಗನ್ ಶುಟ್.

ಇದನ್ನೂ ಓದಿ: ₹16 ಕೋಟಿಗೆ ರಿಟೇನ್​ ಆದ, IPL ಕಪ್​ ಗೆದ್ದಿದ್ದ ನಾಯಕ ಮೊದಲ ಪಂದ್ಯದಿಂದಲೇ BAN!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.