ETV Bharat / sports

ಆಸ್ಟ್ರೇಲಿಯಾ U-19 ವಿರುದ್ಧದ ಸರಣಿಗೆ ಭಾರತ ತಂಡ ಪ್ರಕಟ; ಸಮಿತ್ ದ್ರಾವಿಡ್ ಸೇರಿ ನಾಲ್ವರು ಕನ್ನಡಿಗರಿಗೆ ಸ್ಥಾನ - India Squad Against Australia

ಆಸ್ಟ್ರೇಲಿಯಾ ವಿರುದ್ಧದ 19 ವರ್ಷದೊಳಗಿನ ಕ್ರಿಕೆಟ್​ ಸರಣಿಗಳಿಗೆ ಭಾರತ ತಂಡವನ್ನು ಆಯ್ಕೆ ಮಾಡಲಾಗಿದೆ. ಟೀಂ ಇಂಡಿಯಾದಲ್ಲಿ ಸಮಿತ್ ದ್ರಾವಿಡ್ ಸಹಿತ ಕರುನಾಡಿನ ನಾಲ್ವರಿಗೆ ಸ್ಥಾನ ಲಭಿಸಿದೆ.

india squad
ತಂಡಕ್ಕೆ ಆಯ್ಕೆಯಾದ ಕನ್ನಡಿಗರು (ಕೃಪೆ: KSCA/Maharaja Trophy)
author img

By ETV Bharat Sports Team

Published : Aug 31, 2024, 10:41 AM IST

ಬೆಂಗಳೂರು: ಆಸ್ಟ್ರೇಲಿಯಾ ಅಂಡರ್​-19 ಕ್ರಿಕೆಟ್​ ತಂಡದ ವಿರುದ್ಧದ ಏಕದಿನ ಹಾಗೂ 4 ದಿನಗಳ ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟಿಸಲಾಗಿದೆ. ಕರ್ನಾಟಕದ ನಾಲ್ವರು ಆಟಗಾರರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್ ಸೇರಿದಂತೆ ಕಾರ್ತಿಕೇಯ ಕೆ.ಪಿ, ಸಮರ್ಥ್ ಎನ್. ಏಕದಿನ ಹಾಗೂ ಟೆಸ್ಟ್ ಸರಣಿಗೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ವೇಗಿ ಹಾರ್ದಿಕ್ ರಾಜ್ ಏಕದಿನ ತಂಡಕ್ಕೆ ಮಾತ್ರ ಆಯ್ಕೆಯಾಗಿದ್ದಾರೆ.

ಸೆಪ್ಟೆಂಬರ್ 21ರಿಂದ ಆರಂಭವಾಗಲಿರುವ 3 ಪಂದ್ಯಗಳ ಏಕದಿನ ಸರಣಿಗೆ ಪುದುಚೇರಿ ಆತಿಥ್ಯ ವಹಿಸಲಿದೆ. ಬಳಿಕ 2 ಟೆಸ್ಟ್ ಪಂದ್ಯಗಳು ಚೆನ್ನೈನಲ್ಲಿ ನಡೆಯಲಿವೆ.

ಏಕದಿನ ತಂಡ: ರುದ್ರ ಪಟೇಲ್ (ಉಪ ನಾಯಕ), ಸಾಹಿಲ್ ಪಾರಕ್, ಕಾರ್ತಿಕೇಯ ಕೆ.ಪಿ, ಮೊಹಮ್ಮದ್ ಅಮಾನ್ (ನಾಯಕ), ಕಿರಣ್ ಚೋರ್ಮಲೆ,‌ ಅಭಿಗ್ಯಾನ್ ಕುಂದು (ವಿಕೆಟ್ ಕೀಪರ್), ಹರ್ವಂಶ್ ಸಿಂಗ್ ಪಂಗಾಲಿಯಾ (ವಿಕೆಟ್​ ಕೀಪರ್), ಸಮಿತ್ ದ್ರಾವಿಡ್, ಯುಧಜಿತ್ ಗುಹಾ, ಸಮರ್ಥ್ ಎನ್., ನಿಖಿಲ್ ಕುಮಾರ್, ಚೇತನ್ ಶರ್ಮಾ, ಹಾರ್ದಿಕ್ ರಾಜ್, ರೋಹಿತ್ ರಾಜಾವತ್ ಹಾಗೂ ಮೊಹಮ್ಮದ್ ಇನಾನ್.

ಟೆಸ್ಟ್ ತಂಡ: ವೈಭವ್ ಸೂರ್ಯವಂಶಿ, ನಿತ್ಯ ಪಾಂಡ್ಯ, ವಿಹಾನ್ ಮಲ್ಹೋತ್ರಾ (ಉಪ ನಾಯಕ), ಸೋಹಂ ಪಟವರ್ಧನ್ (ನಾಯಕ), ಕಾರ್ತಿಕೇಯ ಕೆ.ಪಿ., ಸಮಿತ್ ದ್ರಾವಿಡ್, ಅಭಿಗ್ಯಾನ್ ಕುಂದು (ವಿಕೆಟ್​ ಕೀಪರ್), ಹರ್ವಂಶ್ ಸಿಂಗ್ ಪಂಗಾಲಿಯಾ (ವಿಕೆಟ್​​ ಕೀಪರ್), ಚೇತನ್ ಶರ್ಮಾ, ಸಮರ್ಥ್ ಎನ್., ಆದಿತ್ಯ ರಾವತ್, ನಿಖಿಲ್ ಕುಮಾರ್, ಅನ್ಮೋಲ್ಜೀತ್ ಸಿಂಗ್, ಆದಿತ್ಯ ಸಿಂಗ್ ಹಾಗೂ ಮೊಹಮ್ಮದ್ ಇನಾನ್.

ಇದನ್ನೂ ಓದಿ: 10 ಮೀಟರ್ ಏರ್​ ಪಿಸ್ತೂಲ್ ಶೂಟಿಂಗ್​ನಲ್ಲಿ ಮನೀಶ್ ನರ್ವಾಲ್​​ಗೆ ಬೆಳ್ಳಿ​​​: ಒಂದೇ ದಿನ ಭಾರತದ ಖಾತೆಗೆ 4 ಪದಕ - Manish Narwal won silver

ETV Bharat Logo

Copyright © 2024 Ushodaya Enterprises Pvt. Ltd., All Rights Reserved.