WTC Points Table: ಬೆಂಗಳೂರಿನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಅನೀರಿಕ್ಷಿತ ಸೋಲನ್ನು ಕಂಡಿದೆ. ಟೆಸ್ಟ್ನಲ್ಲಿ ಸತತ ಗೆಲುವಿನೊಂದಿಗೆ ಮುನ್ನುಗ್ಗುತ್ತಿದ್ದ ಭಾರತದ ಓಟಕ್ಕೆ ಕಿವೀಸ್ ಪಡೆ ಬ್ರೇಕ್ ಹಾಕಿದೆ. ಮೊದಲ ಟೆಸ್ಟ್ನಲ್ಲಿ ಕಿವೀಸ್ ಪಡೆ ರೋಹಿತ್ ಸೈನ್ಯವನ್ನು 8 ವಿಕೆಟ್ಗಳಿಂದ ಸೋಲಿಸಿತು. ಎರಡನೇ ಇನ್ನಿಂಗ್ಸ್ನಲ್ಲಿ ಭಾರತ ನೀಡಿದ್ದ 107 ರನ್ಗಳ ಸಾಧಾರಣ ಗುರಿಯನ್ನು ನ್ಯೂಜಿಲೆಂಡ್ ಕೇವಲ 2 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ನಂತರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 2023-25 ಋತುವಿನ ಅಂಕಪಟ್ಟಿಯಲ್ಲಿ ಕೆಲ ಬದಲಾವಣೆಗಳು ಕಂಡು ಬಂದಿವೆ. ಆದರೆ ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್ ಸೋತರೂ ಪಾಯಿಂಟ್ ಪಟ್ಟಿಯಲ್ಲಿ ಟೀಂ ಇಂಡಿಯಾ ಸ್ಥಾನದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಭಾರತ 98 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರೆದಿದೆ. ಆದರೆ ಶೇಕಡವಾರು ಅಂಕಗಳಲ್ಲಿ ಭಾರೀ ಕುಸಿತ ಕಂಡಿದೆ.
New Zealand's win in first #INDvNZ Test shakes up the #WTC25 standings 👀
— ICC (@ICC) October 20, 2024
More ➡️ https://t.co/aGNt1GAOJA pic.twitter.com/FmuwwDwTyZ
ಇದಕ್ಕೂ ಮೊದಲು ಶೇಕಡಾ ಅಂಕ 74.24 ಹೊಂದಿದ್ದ ಭಾರತ ಬೆಂಗಳೂರು ಟೆಸ್ಟ್ ಸೋಲಿನ ಬಳಿಕ 68.06ಕ್ಕೆ ಇಳಿದಿದೆ. ಮತ್ತೊಂದೆಡೆ ಈ ಐತಿಹಾಸಿಕ ಗೆಲುವಿನೊಂದಿಗೆ ನ್ಯೂಜಿಲೆಂಡ್ ತಂಡ ಪಟ್ಟಿಯಲ್ಲಿ ಆರನೇ ಸ್ಥಾನದಿಂದ 4ನೇ ಸ್ಥಾನಕ್ಕೆ ಏರಿಕೆ ಕಂಡಿದೆ. ಕಿವಿಸ್ ಶೇಕಡ ಅಂಕ 44.40 ರೊಂದಿಗೆ ಇಂಗ್ಲೆಂಡ್ (43.06) ಅನ್ನು ಹಿಂದಿಕ್ಕಿತು. ಆದಾಗ್ಯೂ, ಪಾಯಿಂಟ್‌ಗಳ ವಿಷಯದಲ್ಲಿ ಇಂಗ್ಲೆಂಡ್ (93), ಕಿವೀಸ್ (48) ಗಿಂತ ಉತ್ತಮವಾಗಿದೆ. ಈ ಪಟ್ಟಿಯಲ್ಲಿ ಭಾರತ ಅಗ್ರ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ (62.50) ಮತ್ತು ಶ್ರೀಲಂಕಾ (55.56) ನಂತರ ಸ್ಥಾನಗಳಲ್ಲಿವೆ.
ಹೇಗಿದೆ ಭಾರತ ಫೈನಲ್ ಹಾದಿ: ಅಂಗ್ರ ಎರಡು ತಂಡಗಳು WTC 2023-25ರ ಫೈನಲ್ ತಲುಪಲಿವೆ. ಈ ಪಂದ್ಯದ ಸೋಲಿನಿಂದ ಭಾರತಕ್ಕೆ ಹೆಚ್ಚು ಪರಿಣಾಮ ಬೀರುವುದಿಲ್ಲ. ಏಕೆಂದರೆ WTC 2023-25ರ ಋತುವಿನಲ್ಲಿ ಟೀಮ್ ಇಂಡಿಯಾ ಇನ್ನೂ ಏಳು ಪಂದ್ಯಗಳನ್ನು ಆಡಲಿದೆ. ಇವುಗಳಲ್ಲಿ ಕನಿಷ್ಠ ಮೂರು ಪಂದ್ಯಗಳಲ್ಲಿ ಗೆದ್ದರೆ ಫೈನಲ್ಗೆ ಪ್ರವೇಶ ಪಡೆಯಲಿದೆ. ಕಿವೀಸ್ ಸರಣಿ ನಂತರ ಭಾರತ ಬಾರ್ಡರ್ ಗವಾಸ್ಕರ್ ಟ್ರೋಫಿಗಾಗಿ ಆಸ್ಟ್ರೇಲಿಯಾಗೆ ಪ್ರವಾಸ ಬೆಳೆಸಲಿದೆ. ಈ ಸರಣಿಯಲ್ಲಿ ರೋಹಿತ್ ಪಡೆ ಆಸೀಸ್ ವಿರುದ್ಧ 5 ಪಂದ್ಯಗಳನ್ನು ಆಡಲಿದೆ.
ಆದರೆ ಆಸೀಸ್ ನೆಲದಲ್ಲಿ ಕಮಿನ್ಸ್ ಪಡೆಯನ್ನು ಸೋಲಿಸುವುದು ಸುಲಭದ ಮಾತಲ್ಲ. ಹೀಗಾಗಿ ಕಿವೀಸ್ ವಿರುದ್ಧದ ಮುಂದಿನ ಎರಡು ಟೆಸ್ಟ್ ಪಂದ್ಯಗಳು ಭಾರತಕ್ಕೆ ನಿರ್ಣಾಯಕವಾಗಿವೆ. ನ್ಯೂಜಿಲೆಂಡ್ ಮತ್ತು ಭಾರತ ನಡುವಿನ 2ನೇ ಟೆಸ್ಟ್ ಪಂದ್ಯ ಅ.24 ರಿಂದ ಪುಣೆಯಲ್ಲಿ ನಡೆಯಲಿದೆ.
ಇದನ್ನೂ ಓದಿ: ಭಾರತಕ್ಕೂ ಮೊದಲು ಪಾಕಿಸ್ತಾನ ಪರ ಕ್ರಿಕೆಟ್ ಪಂದ್ಯ ಆಡಿದ್ದ ಸಚಿನ್ ತೆಂಡೂಲ್ಕರ್!