ETV Bharat / sports

ಆಸ್ಟ್ರೇಲಿಯಾ vs ಇಂಡಿಯಾ: ಮಳೆ ನಿಂತ ಬಳಿಕ ಮತ್ತೆ ಮುಂದುವರಿದ ಆಟ - RAIN STOPS PLAY

ಟಾಸ್​ ಗೆದ್ದಿರುವ ಭಾರತ ತಂಡ ಮೂರನೇ ಟೆಸ್ಟ್​ನಲ್ಲಿ ಬೌಲಿಂಗ್​ ಆಯ್ಕೆ ಮಾಡಿಕೊಂಡಿದೆ.

SPO-CRI-BGT-IND-TOSS
ಆಸ್ಟ್ರೇಲಿಯಾ vs ಇಂಡಿಯಾ: 3ನೇ ಟೆಸ್ಟ್‌ನಲ್ಲಿ ಟಾಸ್​ ಗೆದ್ದ ಭಾರತ ಬೌಲಿಂಗ್ ಆಯ್ಕೆ (IANS)
author img

By PTI

Published : Dec 14, 2024, 6:14 AM IST

ಬ್ರಿಸ್ಬೇನ್, ಆಸ್ಟ್ರೇಲಿಯಾ: ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಎದುರಿಸುತ್ತಿದೆ. ಉಭಯ ತಂಡಗಳ ನಡುವಿನ ಮೂರನೇ ಟೆಸ್ಟ್ ಪಂದ್ಯ ಬ್ರಿಸ್ಬೇನ್‌ನ ಗಬ್ಬಾ ಮೈದಾನದಲ್ಲಿ ನಡೆಯುತ್ತಿದ್ದು, ಭಾರತ ತಂಡ ಟಾಸ್​ ಗೆದ್ದು ಬೌಲಿಂಗ್​ ಆಯ್ಕೆ ಮಾಡಿಕೊಂಡಿದೆ.

ಆದರೆ ಪಂದ್ಯ ಆರಂಭಗೊಂಡು ಕೆಲವೇ ಕ್ಷಣಗಳಲ್ಲಿ ವರುಣನ ಆರ್ಭಟ ಶುರುವಾಗಿತ್ತು. ಸದ್ಯ ಮಳೆ ನಿಂತಿದ್ದು, ಮತ್ತೆ ಆಟ ಆರಂಭಗೊಂಡಿದೆ. ಸದ್ಯ ಆಸ್ಟ್ರೇಲಿಯಾ 8 ಓವರ್​ಗಳಿಗೆ 24 ರನ್​ಗಳಿಸಿದೆ. ಆರಂಭಿಕರಾದ ಉಸ್ಮಾನ್ ಖವಾಜಾ (17) ಮತ್ತು ನಾಥನ್ ಮೆಕ್‌ಸ್ವೀನಿ (2) ಬ್ಯಾಟಿಂಗ್​ ಆರಂಭಿಸಿದ್ದಾರೆ. ಭಾರತ-ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಪ್ರಸ್ತುತ 1-1 ರಲ್ಲಿ ಸಮಬಲವಾಗಿದ್ದು, ಈ ಟೆಸ್ಟ್ ನಿರ್ಣಾಯಕವಾಗಲಿದೆ.

ಭಾರತವು ಒಂದೆರಡು ಬದಲಾವಣೆಗಳನ್ನು ಮಾಡಿದ್ದು, ಹರ್ಷಿತ್ ರಾಣಾ ಮತ್ತು ಆರ್ ಅಶ್ವಿನ್ ಬದಲಾಗಿ ಆಕಾಶ್ ದೀಪ್ ಮತ್ತು ರವೀಂದ್ರ ಜಡೇಜಾಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಆಸ್ಟ್ರೇಲಿಯ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಗಾಯದಿಂದ ಚೇತರಿಸಿಕೊಂಡಿರುವ ಜೋಶ್ ಹೇಜಲ್‌ವುಡ್ ತಂಡಕ್ಕೆ ಮರಳಿದ್ದಾರೆ. ಸ್ವಲ್ಪ ಮೋಡ ಕವಿದ ವಾತಾವರಣವಿದೆ. ಬರುಬರುತ್ತ ಬ್ಯಾಟಿಂಗ್​​​ಗೆ ಉತ್ತಮ ವಾತಾವರಣ ಇದೆ ಎಂದು ಟಾಸ್ ಗೆದ್ದ ರೋಹಿತ್​ ಶರ್ಮಾ ಹೇಳಿದ್ದಾರೆ. ಇಲ್ಲಿ ನಾವು ಉತ್ತಮ ಆಟ ಆಡುತ್ತೇವೆ. ಇಲ್ಲಿ ಹೇಗೆ ಆಡಬೇಕು ಎಂಬುದನ್ನು ನಾವು ಅರ್ಥಮಾಡಿಕೊಂಡಿದ್ದೇವೆ ಎಂದು ಅವರು ಇದೇ ವೇಳೆ ಹೇಳಿದ್ದಾರೆ.

ತಂಡಗಳು: ಆಸ್ಟ್ರೇಲಿಯಾ: ಉಸ್ಮಾನ್ ಖವಾಜಾ, ನಾಥನ್ ಮೆಕ್‌ಸ್ವೀನಿ, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಅಲೆಕ್ಸ್ ಕ್ಯಾರಿ (ವಿಕೆಟ್​ ಕೀಪರ್), ಪ್ಯಾಟ್ ಕಮಿನ್ಸ್ (ಕ್ಯಾಪ್ಟನ್​), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಜೋಶ್ ಹ್ಯಾಜಲ್‌ವುಡ್

ಭಾರತ: ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ರಿಷಭ್​ ಪಂತ್(ವಿಕೆಟ್​ ಕೀಪರ್​), ರೋಹಿತ್ ಶರ್ಮಾ(ನಾಯಕ), ರವೀಂದ್ರ ಜಡೇಜಾ, ನಿತೀಶ್ ಕುಮಾರ್ ರೆಡ್ಡಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್​.

ಇದನ್ನು ಓದಿ:ರೋಹಿತ್​, ಕೊಹ್ಲಿ, ಜೈಸ್ವಾಲ್​ ಅಲ್ಲ: ಈ ಇಬ್ಬರು ಆಟಗಾರರು ಸಿಡಿದೆದ್ದರೆ 3ನೇ ಟೆಸ್ಟ್​ನಲ್ಲಿ ಗೆಲುವು ಭಾರತದ್ದೇ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.