ETV Bharat / sports

ರಾಂಚಿ ಟೆಸ್ಟ್: 353 ರನ್​ಗೆ ಇಂಗ್ಲೆಂಡ್​ ಆಲೌಟ್​: ರೋಹಿತ್​ ವಿಕೆಟ್​ ಕಳೆದುಕೊಂಡ ಭಾರತ - ಭಾರತ

ರಾಂಚಿಯಲ್ಲಿ ನಡೆಯುತ್ತಿರುವ ಇಂಗ್ಲೆಂಡ್​ ವಿರುದ್ಧದ ನಾಲ್ಕನೇ ಟೆಸ್ಟ್​ ಪಂದ್ಯದ ಭೋಜನ ವಿರಾಮದ ವೇಳೆ ಭಾರತ ಒಂದು ವಿಕೆಟ್​ ಕಳೆದುಕೊಂಡು 34 ರನ್ ಬಾರಿಸಿದೆ.

India lost rohit sharma before lunch in Ranchi Test against England
ರಾಂಚಿ ಟೆಸ್ಟ್: 353 ರನ್​ಗೆ ಇಂಗ್ಲೆಂಡ್​ ಆಲೌಟ್​: ರೋಹಿತ್​ ವಿಕೆಟ್​ ಕಳೆದುಕೊಂಡ ಭಾರತ
author img

By ETV Bharat Karnataka Team

Published : Feb 24, 2024, 12:07 PM IST

ರಾಂಚಿ: ಸ್ಟಾರ್ ಬ್ಯಾಟರ್​ ಜೋ ರೂಟ್ ಅಜೇಯ​ ಶತಕ (122) ಹಾಗೂ ಒಲಿ ರಾಬಿನ್ಸನ್​ ಉಪಯುಕ್ತ ಅರ್ಧಶತಕ (58)ದ ನೆರವಿನಿಂದ ಇಂಗ್ಲೆಂಡ್​ ತಂಡ ನಾಲ್ಕನೇ ಟೆಸ್ಟ್​ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ 353 ರನ್​ ಗಳಿಸಿದೆ. ಬಳಿಕ ಬ್ಯಾಟಿಂಗ್​ ನಡೆಸಿದ ಭಾರತ ಆರಂಭಿಕ ಆಘಾತ ಅನುಭವಿಸಿದ್ದು, ಭೋಜನ ವಿರಾಮದ ವೇಳೆಗೆ ಒಂದು ವಿಕೆಟ್​ ನಷ್ಟಕ್ಕೆ 34 ರನ್​ ಕಲೆ ಹಾಕಿದೆ.

ಇಲ್ಲಿನ ಜೆಎಸ್‌ಸಿಎ ಇಂಟರ್‌ನ್ಯಾಷನಲ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್​​ ಗೆದ್ದ ಆಂಗ್ಲರು ಮೊದಲು ಬ್ಯಾಟಿಂಗ್ ನಡೆಸಿದರು. ಪ್ರಥಮ ದಿನದಾಟದ ಅಂತ್ಯಕ್ಕೆ 7 ವಿಕೆಟ್​ ನಷ್ಟಕ್ಕೆ 302 ರನ್​ ಪೇರಿಸಿದ್ದ ಇಂಗ್ಲೆಂಡ್​ ಇಂದು ಇನ್ನೂ 51 ರನ್​ ಸೇರಿಸುವಷ್ಟರಲ್ಲಿ ಎಲ್ಲ ವಿಕೆಟ್​ ಕಳೆದುಕೊಂಡಿತು. ಜೋ ರೂಟ್​ ಅಜೇಯ 122 ರನ್​ ಬಾರಿಸಿದರು. ಇವರಿಗೆ ಉತ್ತಮ ಸಾಥ್​ ನೀಡಿದ ರಾಬಿನ್ಸನ್​ ವಿಕೆಟ್​ ಪತನದ ಬಳಿಕ ಆಂಗ್ಲರು ಕುಸಿತದ ಹಾದಿ ಹಿಡಿದರು. ಬಳಿಕ ಬಂದ ಶೋಯಬ್​ ಬಶೀರ್​ ಹಾಗೂ ಜೇಮ್ಸ್​ ಆಂಡರ್ಸನ್​ ಶೂನ್ಯಕ್ಕೆ ಔಟಾಗುವ ಮೂಲಕ 353 ರನ್​ಗೆ ಇಂಗ್ಲೆಂಡ್​ ಸರ್ವಪತನ ಕಂಡಿತು. ಭಾರತದ ಪರ ಜಡೇಜಾ 67 ರನ್​ಗೆ 4 ವಿಕೆಟ್​ ಕಬಳಿಸಿದರು.

ಒಂದು ಹಂತದಲ್ಲಿ ಮೊದಲ ದಿನದ ಭೋಜನ ವಿರಾಮದ ವೇಳೆಗೆ 112 ರನ್​ಗೆ ಪ್ರಮುಖ 5 ವಿಕೆಟ್​ ಕಳೆದುಕೊಂಡಿದ್ದ ಆಂಗ್ಲರಿಗೆ ರೂಟ್ ಬೆನ್ನೆಲುಬಾಗಿ ನಿಂತರು. ತಾಳ್ಮೆಯ ಬ್ಯಾಟಿಂಗ್​ ತೋರಿದ ಅನುಭವಿ ಬ್ಯಾಟರ್​ ತಮ್ಮ ವೃತ್ತಿ ಜೀವನದ 31ನೇ ಟೆಸ್ಟ್​​ ಶತಕ ದಾಖಲಿಸಿದರು. ಇವರೊಂದಿಗೆ ಬೆನ್​ ಫೋಕ್ಸ್​ (47) ಹಾಗೂ ರಾಬಿನ್ಸನ್​ (58) ಸಮಯೋಚಿತ ಜೊತೆಯಾಟ ಆಡಿದರು.

ಬಳಿಕ ಇನ್ನಿಂಗ್ಸ್​ ಆರಂಭಿಸಿರುವ ಭಾರತ ಭೋಜನದ ವೇಳೆಗೆ ನಾಯಕ ರೋಹಿತ್​ ಶರ್ಮಾ ವಿಕೆಟ್​ ಕಳೆದುಕೊಂಡು 34 ರನ್​ ಬಾರಿಸಿದೆ. ಯಶಸ್ವಿ ಜೈಸ್ವಾಲ್​ 27 ಹಾಗೂ ಗಿಲ್​ 4 ರನ್​ ಗಳಿಸಿ ಬ್ಯಾಟಿಂಗ್​ ಕಾಯ್ದುಕೊಂಡಿದ್ದಾರೆ. 9 ಎಸೆತಗಳಲ್ಲಿ 2 ರನ್​ ಮಾಡಿದ್ದ ರೋಹಿತ್​ ಅವರು ಆಂಡರ್ಸನ್​ ಬೌಲಿಂಗ್​ನಲ್ಲಿ ವಿಕೆಟ್​ ಕೀಪರ್​ ಫೋಕ್ಸ್​​ಗೆ ಕ್ಯಾಚ್​ ನೀಡಿ ನಿರ್ಗಮಿಸಿದರು. ವೇಗಿ ಆಂಡರ್ಸನ್​ಗೆ​ ಇದು 698ನೇ ಬಲಿಯಾಗಿದೆ. ಈಗಾಗಲೇ ಮೊದಲ ಟೆಸ್ಟ್ ಇಂಗ್ಲೆಂಡ್​ ಜಯಿಸಿದ್ದು, ಎರಡು ಹಾಗೂ ಮೂರನೇ ಟೆಸ್ಟ್​ ಗೆದ್ದಿರುವ ಭಾರತ ತಂಡ ಸರಣಿಯಲ್ಲಿ 2-1ರ ಮುನ್ನಡೆಯಲ್ಲಿದೆ. ಈ ಪಂದ್ಯ ಗೆದ್ದರೆ ಸರಣಿಯು ಟೀಂ ಇಂಡಿಯಾ ಪಾಲಾಗಲಿದೆ.

ಇದನ್ನೂ ಓದಿ: ಇಂಗ್ಲೆಂಡ್​ ವಿರುದ್ಧ 100 ಟೆಸ್ಟ್​ ವಿಕೆಟ್: ದಾಖಲೆ ಬರೆದ ಆರ್​ ಅಶ್ವಿನ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.