ಬ್ಲೋಮ್‌ಫಾಂಟೈನ್ (ದಕ್ಷಿಣ ಆಫ್ರಿಕಾ): ಹಾಲಿ ಚಾಂಪಿಯನ್ ಭಾರತೀಯ ಅಂಡರ್-19 ಕ್ರಿಕೆಟ್ ತಂಡ ಶನಿವಾರ ದಕ್ಷಿಣ ಆಫ್ರಿಕಾದ ಬ್ಲೋಮ್‌ಫಾಂಟೈನ್‌ನಲ್ಲಿ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ. ಉದಯ್ ಸಹಾರನ್ ನೇತೃತ್ವದ ತಂಡ, ಗೆಲುವಿನ ಶುಭಾರಂಭ ಮಾಡುವ ನಿರೀಕ್ಷೆ ಇಟ್ಟುಕೊಂಡಿದೆ. ಆದರೆ, ಬಾಂಗ್ಲಾದೇಶ ಕೂಡ ಇದಕ್ಕೆ ದಿಟ್ಟ ಉತ್ತರ ನೀಡುವ ಹುಮ್ಮಸ್ಸಿನಲ್ಲಿದೆ.
ಭಾರತದ ಪುಟಾಣಿ ತಂಡ ಟೂರ್ನಿಯ ಎ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಇದೇ ತಂಡದಲ್ಲಿ ಐರ್ಲೆಂಡ್ ಮತ್ತು ಅಮೆರಿಕ ತಂಡಗಳಿವೆ. ಬಿ ಗುಂಪಿನಲ್ಲಿ ಇಂಗ್ಲೆಂಡ್, ಆತಿಥೇಯ ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ಮತ್ತು ಸ್ಕಾಟ್ಲೆಂಡ್ ತಂಡಗಳಿವೆ. ಆಸ್ಟ್ರೇಲಿಯಾ, ಶ್ರೀಲಂಕಾ, ಜಿಂಬಾಬ್ವೆ ಮತ್ತು ನಮೀಬಿಯಾ ಸಿ ಗುಂಪಿನಲ್ಲಿವೆ. ಇದೇ ವೇಳೆ ಡಿ ಗುಂಪಿನಲ್ಲಿ ಅಫ್ಘಾನಿಸ್ತಾನ, ಪಾಕಿಸ್ತಾನ, ನ್ಯೂಜಿಲೆಂಡ್ ಮತ್ತು ನೇಪಾಳ ತಂಡಗಳು ಸ್ಥಾನ ಪಡೆದಿವೆ. ಪ್ರತಿ ಗುಂಪಿನಿಂದ ಅಗ್ರ ಮೂರು ತಂಡಗಳು ಸೂಪರ್ ಸಿಕ್ಸ್ ಹಂತಕ್ಕೆ ಮುನ್ನಡೆಯಲಿವೆ. ಸೂಪರ್ ಸಿಕ್ಸ್ ಹಂತಕ್ಕೂ ಮುನ್ನ ಭಾರತೀಯ ಅಂಡರ್-19 ಕ್ರಿಕೆಟ್ ತಂಡ ಗೆಲುವಿನ ಶುಭಾರಂಭ ಮಾಡಬೇಕಿದೆ.
ಭಾರತ ಯುವ ತಂಡವು 2002ರಲ್ಲಿ ಮೊಹಮ್ಮದ್ ಕೈಫ್ ನೇತೃತ್ವದಲ್ಲಿ ಮೊದಲ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು. ಆ ಬಳಿಕ ಭಾರತೀಯ ತಂಡವು 2008, 2012, 2018 ಮತ್ತು 2022ರಲ್ಲಿ ಅಂಡರ್ 19 ವಿಶ್ವಕಪ್ ಗೆದ್ದು ದಾಖಲೆ ನಿರ್ಮಿಸಿದೆ.
ಈ ಬಾರಿಯ ವಿಶ್ವಕಪ್‌ನಲ್ಲಿ ಒಟ್ಟು 16 ತಂಡಗಳು ಭಾಗವಹಿಸುತ್ತಿದ್ದು, 4 ತಂಡಗಳನ್ನು 4 ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನಲ್ಲಿ ಅಗ್ರ ಮೂರು ತಂಡಗಳು ಸೂಪರ್ ಸಿಕ್ಸ್‌ಗೆ ಅರ್ಹತೆ ಪಡೆಯಲಿವೆ. ಫೆಬ್ರವರಿ 6 ಮತ್ತು 8 ರಂದು ಸೆಮಿಫೈನಲ್ ಪಂದ್ಯಗಳು ನಡೆಯಲಿದ್ದು, ಫೆಬ್ರವರಿ 11 ರಂದು ಬೆನೋನಿಯಲ್ಲಿ ಫೈನಲ್ ಪಂದ್ಯ ನಡೆಯಲಿದೆ. ದಕ್ಷಿಣ ಆಫ್ರಿಕಾದ 5 ಸ್ಥಳಗಳಲ್ಲಿ ಪಂದ್ಯಗಳು ನಡೆಯಲಿವೆ. ಎಲ್ಲ ಪಂದ್ಯಗಳು ಭಾರತೀಯ ಕಾಲಮಾನ ಮಧ್ಯಾಹ್ನ 1:30 ಕ್ಕೆ ಪ್ರಾರಂಭವಾಗುತ್ತವೆ.
ಭಾರತ ತಂಡವನ್ನು ಬಲಗೈ ಬ್ಯಾಟರ್ ಉದಯ್ ಸಹಾರನ್ ಮುನ್ನಡೆಸುತ್ತಿದ್ದಾರೆ. ಕಳೆದ ತಿಂಗಳು ಅಂಡರ್ 19 ಏಷ್ಯಾಕಪ್‌ನಲ್ಲಿ ಸಹರನ್ ಭಾರತ ತಂಡದ ನಾಯಕತ್ವ ವಹಿಸಿದ್ದರು. ಆ ಪಂದ್ಯಾವಳಿಯಲ್ಲಿ ಭಾರತವು ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಸೋತಿತ್ತು.
ಭಾರತ ಅಂಡರ್ 19 ತಂಡ: ಅರ್ಶಿನ್ ಕುಲಕರ್ಣಿ, ಆದರ್ಶ್ ಸಿಂಗ್, ರುದ್ರ ಮಯೂರ್ ಪಟೇಲ್, ಸಚಿನ್ ಧಾಸ್, ಪ್ರಿಯಾಂಶು ಮೊಲಿಯಾ, ಮುಶೀರ್ ಖಾನ್, ಉದಯ್ ಸಹರಾನ್ (ನಾಯಕ), ಅರವೆಲ್ಲಿ ಅವನೀಶ್ ರಾವ್ (ವಿಕೆಟ್ ಕೀಪರ್), ಸೌಮ್ಯ ಕುಮಾರ್ ಪಾಂಡೆ (ಉಪನಾಯಕ), ಮುರುಗನ್ ಅಭಿಷೇಕ್, ಇನೇಶ್ ಮಹಾಜನ್ (ವಿಕೆಟ್ ಕೀಪರ್) , ಧನುಷ್ ಗೌಡ, ಆರಾಧ್ಯ ಶುಕ್ಲಾ, ರಾಜ್ ಲಿಂಬಾನಿ, ನಮನ್ ತಿವಾರಿ.
ಬಾಂಗ್ಲಾದೇಶ ಅಂಡರ್ 19 ತಂಡ: ಮಹ್ಫುಜುರ್ ರಹಮಾನ್ ರಬ್ಬಿ (ನಾಯಕ), ಆಶಿಕುರ್ ರೆಹಮಾನ್ ಶಿಬ್ಲಿ (ವಿಕೆಟ್ ಕೀಪರ್), ಜಿಶಾನ್ ಆಲಂ, ಅರಿಫುಲ್ ಇಸ್ಲಾಂ, ಮೊಹಮ್ಮದ್ ಶಿಹಾಬ್ ಜೇಮ್ಸ್, ಅಹ್ರಾರ್ ಅಮೀನ್ (ಉಪನಾಯಕ), ಶೇಖ್ ಪರ್ವೇಜ್ ಜಿಬೋನ್, ವಾಸಿ ಸಿದ್ದಿಕಿ, ಮಾರುಫ್ ಮೃಧಾ, ಚೌಧುರಿ ಎಂಡಿ ರಿಜ್ವಾನ್, ಆದಿಲ್ ಬಿ, ಆದಿಲ್ ಬಿ ಮೊಹಮ್ಮದ್ ಅಶ್ರಫುಜ್ಜಮಾನ್, ಎಂಡಿ ರಫಿ ಉಜ್ಜಮಾನ್ ರಫಿ, ರೋಹನತ್ ದೌಲ್ಲಾ ಬೋರ್ಸನ್, ಇಕ್ಬಾಲ್ ಹೊಸೈನ್ ಎಮನ್.
ಇದನ್ನೂ ಓದಿ: ಟಿ20 ವಿಶ್ವಕಪ್‌ಗೆ ತಂಡ ಇನ್ನೂ ಅಂತಿಮಗೊಂಡಿಲ್ಲ: ರೋಹಿತ್ ಶರ್ಮಾ