ಪ್ಯಾರಿಸ್ (ಫ್ರಾನ್ಸ್): ಪ್ಯಾರಿಸ್ ಒಲಿಂಪಿಕ್ನಲ್ಲಿಂದು ಭಾರತ ಮತ್ತು ಗ್ರೇಟ್ ಬ್ರಿಟನ್ ನಡುವೆ ಹಾಕಿ ಕ್ವಾರ್ಟರ್‌ಫೈನಲ್ ಪಂದ್ಯ ನಡೆಯಿತು. ಈ ರೋಚಕ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ತಂಡವನ್ನು ಶೂಟೌಟ್‌ನಲ್ಲಿ ಮಣಿಸುವ ಮೂಲಕ ಭಾರತ ಸೆಮಿಫೈನಲ್ ಪ್ರವೇಶಿಸಿದೆ. ಪೂರ್ಣ ಸಮಯದವರೆಗೆ ಸ್ಕೋರ್ 1-1 ರಲ್ಲಿ ಸಮನಾಗಿತ್ತು. ಭಾರತದ ಪರ ಹರ್ಮನ್‌ಪ್ರೀತ್ ಸಿಂಗ್ (22ನೇ ನಿಮಿಷ) ಗೋಲು ಗಳಿಸಿದರು. ಅದೇ ಸಮಯದಲ್ಲಿ ಗ್ರೇಟ್ ಬ್ರಿಟನ್ ಪರ ಲೀ ಮಾರ್ಟನ್ (27ನೇ ನಿಮಿಷ) ಗೋಲು ಗಳಿಸಿದರು. ಇದಾದ ಬಳಿಕ ಪಂದ್ಯ ಶೂಟೌಟ್‌ಗೆ ಸಾಗಿತು.
ಶೂಟೌಟ್‌ನಲ್ಲಿ ಭಾರತ: ರೋಚಕ ಶೂಟೌಟ್‌ನಲ್ಲಿ ಭಾರತ 4-2 ಗೋಲುಗಳಿಂದ ಗ್ರೇಟ್ ಬ್ರಿಟನ್ ತಂಡವನ್ನು ಸೋಲಿಸಿತು. ಶೂಟೌಟ್‌ನಲ್ಲಿ ಹರ್ಮನ್‌ಪ್ರೀತ್ ಸಿಂಗ್ ಭಾರತದ ಪರ ಮೊದಲ ಗೋಲು ದಾಖಲಿಸಿದರೆ, ಸುಖಜಿತ್ ಸಿಂಗ್ ಎರಡನೇ ಗೋಲು, ಮೂರನೇ ಗೋಲು ಲಲಿತ್ ಕುಮಾರ್ ಉಪಾಧ್ಯಾಯ ದಾಖಲಿಸಿದರು.
ಈ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ಮೊದಲ ಕ್ವಾರ್ಟರ್ನಲ್ಲಿ ಪ್ರಾಬಲ್ಯ ಮೆರೆದಿತ್ತು. ಇದರ ಫಲವಾಗಿ 5ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಸಿಕ್ಕಿತು, ಅದನ್ನು ಭಾರತ ಉತ್ತಮವಾಗಿ ರಕ್ಷಿಸಿಕೊಂಡಿತು. 13ನೇ ನಿಮಿಷದಲ್ಲಿ ಭಾರತಕ್ಕೆ ಪೆನಾಲ್ಟಿ ಕಾರ್ನರ್ ಸಿಕ್ಕಿತು, ಅದರಲ್ಲಿ ಹರ್ಮನ್‌ಪ್ರೀತ್ ಸಿಂಗ್ ಗೋಲು ಗಳಿಸುವಲ್ಲಿ ವಿಫಲರಾದರು. ಮೊದಲ ಕ್ವಾರ್ಟರ್ 0-0 ಸ್ಕೋರ್‌ನೊಂದಿಗೆ ಕೊನೆಗೊಂಡಿತು.
ಇದೇ ವೇಳೆ 18ನೇ ನಿಮಿಷದಲ್ಲಿ, ಭಾರತದ ಸ್ಟಾರ್ ಡಿಫೆಂಡರ್ ಅಮಿತ್ ರೋಹಿದಾಸ್ ಅವರಿಗೆ ರೆಡ್ ಕಾರ್ಡ್ ತೋರಿಸಿ ಪಂದ್ಯದಿಂದ ಹೊರಹಾಕಲಾಯಿತು. ಇದರಿಂದ ಭಾರತ 11 ಆಟಗಾರರ ಬದಲಿಗೆ 10 ಆಟಗಾರರೊಂದಿಗೆ ಇಡೀ ಪಂದ್ಯವನ್ನು ಆಡಬೇಕಾಯಿತು. ಆದರೂ ಎದೆಗುಂದದ ಭಾರತ ತಂಡ 22ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶ ಸಿಕ್ಕಿತು. ಭಾರತದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಗೋಲು ಗಳಿಸಿದರು. ಇದರೊಂದಿಗೆ ಭಾರತ 1-0 ಮುನ್ನಡೆ ಸಾಧಿಸಿತು.
ಇದಾದ ಬಳಿಕ 27ನೇ ನಿಮಿಷದಲ್ಲಿ ಬ್ರಿಟನ್ನ ಲೀ ಮಾರ್ಟನ್ ಅದ್ಭುತ ಫೀಲ್ಡ್ ಗೋಲು ಬಾರಿಸಿ 1-1ರಿಂದ ಪಂದ್ಯವನ್ನು ಸಮಬಲ ಸಾಧಿಸಿದರು. ಪಂದ್ಯ ಅಂತ್ಯದವರೆಗೂ ಇದೇ ಸ್ಕೋರ ಮುಂದುವರೆದು ಕೊನೆಗೆ ಪಂದ್ಯ ಡ್ರಾನಲ್ಲಿ ಕೊನೆಗೊಂಡಿತು. ಇದರಿಂದ ಶೂಟೌಟ್ ಹಂತಕ್ಕೆ ತಲುಪಿತು. ಭಾರತ ಇದರಲ್ಲಿ 4-2 ಅಂತರದಿಂದ ಗೆಲುವು ಸಾಧಿಸಿ ಸೆಮಿ ಫೈನಲ್ಗೆ ತಲುಪಿತು.
ಇದನ್ನೂ ಓದಿ: ಒಲಿಂಪಿಕ್ಸ್ ಚಿನ್ನದ ಬೇಟೆಗೆ ನೀರಜ್ ಚೋಪ್ರಾ ರೆಡಿ: ಪಂದ್ಯ ಯಾವಾಗ? ವೀಕ್ಷಿಸುವುದು ಹೇಗೆ ಗೊತ್ತೇ? - Neeraj Chopra